ಕ್ರೈಸ್ತಪ್ರೇಮವಲ್ಲ ಹಿಂದೂದ್ವೇಷ !

ಮಾನವತೆಯ ರಕ್ಷಕರೆಂದು ಹೇಳಿಕೊಳ್ಳುವ ಮದರ್ ತೆರೇಸಾ ಅವರ ‘ಮಿಶನರೀಸ್ ಆಫ್ ಚಾರಿಟಿ’ಗೆ ಸೇರಿದ ಎಲ್ಲಾ ಖಾತೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿದೆ, ಇದರಿಂದ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರಿಗೆ ತೀವ್ರವಾಗಿ ನೋವುಂಟಾಗಿದೆ. ಅದೂ ಕ್ರಿಸಮಸ್ ಸಮಯದಲ್ಲಿ ಸಂಭವಿಸಿದ್ದರಿಂದ ಇವರೆಲ್ಲರಿಗೂ ಅತೀವ ದುಃಖವಾಯಿತು. ಪ್ರತ್ಯಕ್ಷದಲ್ಲಿ ತೆರೇಸಾ ಅವರ ಮಿಶನರೀಸ್ ಆಫ್ ಚಾರಿಟಿ ಸಂಸ್ಥೆಯು ಸ್ವತಃ ಸ್ಟೇಟ್ ಬ್ಯಾಂಕ್‌ಗೆ ತಮ್ಮ ಎಲ್ಲಾ ಖಾತೆಗಳನ್ನು ನವೀಕರಿಸಲು ‘ಇಲ್ಲ’ ಎಂದು ಹೇಳಿದೆ; ಏಕೆಂದರೆ ‘ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್.ಸಿ.ಆರ್.ಎ) ೨೦೧೧’ ರ ಪ್ರಕಾರ ಅಗತ್ಯವಿರುವ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಲು ಸಂಸ್ಥೆಯು ವಿಫಲವಾಗಿದೆ. ಆದರೂ ಈ ಸಂಸ್ಥೆಗಳ ನೋಂದಣಿಯು ಅಕ್ಟೋಬರ್‌ವರೆಗೆ ಅಧಿಕೃತವಾಗಿದ್ದರೂ, ಅವುಗಳ ಸಿಂಧುತ್ವವನ್ನು ಡಿಸೆಂಬರ್‌ವರೆಗೆ ವಿಸ್ತರಿಸಲಾಯಿತು; ಆದರೆ ಈಗ ಅದು ಮುಗಿದಿದೆ.

ಜಾತ್ಯತೀತವಾದಿಗಳು ತೆರೇಸಾ ಇವರ ಸಂಸ್ಥೆಯ ರೋಗಿಗಳು ಮತ್ತು ಸಿಬ್ಬಂದಿಗಳ ಬಗ್ಗೆ ತುಂಬಾ ಸಹಾನುಭೂತಿ ಹೊಂದಿದ್ದರೆ, ಅವರೆಲ್ಲರೂ ಕೇರಳದ `ದ ಸೈರೋ ಮಲಬಾರ್ ಚರ್ಚ್’ ಈ ಜಗತ್ತಿನ ಅತಿದೊಡ್ಡ ಬಲಿಷ್ಠ ಕ್ರೈಸ್ತ ಸಂಸ್ಥೆಯ ಬಳಿ ಸಹಾಯ ಕೇಳಬಹುದು. ದೇಶದ ಎಲ್ಲಕ್ಕಿಂತ ಶ್ರೀಮಂತ ಉದ್ಯಮಿಗಳಾದ ಟಾಟಾ, ಅದಾನಿ, ಅಂಬಾನಿಗಿಂತಲೂ ಈ ಚರ್ಚ್ ೩ ಲಕ್ಷ ಕೋಟಿ ರೂಪಾಯಿಗಳ ಬೃಹತ್ ವಹಿವಾಟು ನಡೆಸುತ್ತಿದೆ. ಇನ್ನುಳಿಯಿತು ಕ್ರಿಸ್‌ಮಸ್ ಪ್ರಶ್ನೆ. ಶಂಕರಾಚಾರ್ಯರು ಸೇರಿದಂತೆ ಹಿಂದೂಗಳ ಸಾಧು-ಸಂತರನ್ನು ಹಿಂದೂ ಹಬ್ಬಗಳ ಸಂದರ್ಭದಲ್ಲಿ ಬಂಧಿಸಿದಾಗ, ಯಾರಿಗೂ ಈ ಪ್ರಶ್ನೆ ಎದುರಾಗಲಿಲ್ಲ. ‘ಕ್ರೈಸ್ತ ಸಂಸ್ಥೆಗಳು ಬ್ಯಾಂಕಿನ ನವೀಕರಣದ ನಿಯಮ ಸಹ ಪಾಲಿಸಲು ಸಿದ್ಧರಿಲ್ಲದಿದ್ದರೂ, ಅವರಿಗೆ ಕೆಲವು ವಿಶೇಷ ರಿಯಾಯಿತಿಗಳನ್ನು ನೀಡಬೇಕು’, ಎಂದು ಜಾತ್ಯತೀತರಿಗೆ ಅನಿಸುತ್ತದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಮಾನವತಾವಾದಿಗಳಲ್ಲ ಹಿಂದೂದ್ವೇಷಿಗಳು !

ಮತಾಂತರದ ಉದ್ದೇಶಕ್ಕಾಗಿ ಮಿಶನರಿಗಳನ್ನು ದೇಶವಿದೇಶಗಳಿಗೆ ಕಳುಹಿಸಲಾಗುತ್ತದೆ. ಮದರ್ ತೆರೇಸಾ ಕೂಡ ಈ ಉದ್ದೇಶಕ್ಕಾಗಿ ಶಿಕ್ಷಕಿಯಾಗಿ ಬಂದರು ಮತ್ತು ಅವರು ತಮ್ಮ ಅಭಿಯಾನವನ್ನು ಮೊದಲು ತಮ್ಮ ಶಾಲೆಯ ಸಮೀಪವಿರುವ ಕೊಳೆಗೇರಿಗಳಲ್ಲಿನ ಬಡವರತ್ತ ದೃಷ್ಟಿ ಇಟ್ಟರು ಮತ್ತು ಅವರ ಮತಾಂತರವನ್ನು ಪ್ರಾರಂಭಿಸಿದರು. ಹಾಗೆ ಮಾಡುವ ಮೂಲಕ ಅವರು ಪೋಪ್ ಅವರ ಅನುಮತಿಯಿಂದ ೧೯೫೦ ರಲ್ಲಿ ಕೋಲಕಾತಾದಲ್ಲಿ ‘ಮಿಶನರೀಸ್ ಆಫ್ ಚಾರಿಟಿಸ್’ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಿಸಲು ದೊಡ್ಡ ಅಧಿಕೃತ ‘ಕಾರ್ಖಾನೆ’ಯನ್ನೇ ತೆರೆದರು. ಅತ್ಯಂತ ಕೆಳಹಂತದ ಜೀವನವನ್ನು ಸಾಗಿಸುವ ದುರ್ಬಲರು, ರೋಗಿಗಳು ಮತ್ತು ಕೊಳಚೆಗಳಲ್ಲಿ ಉರುಳುವವರನ್ನು ಕಪಟ ಹೊಸಜೀವನವನ್ನು ನೀಡಿ ಹಾಗೂ ಅವರ ಮೇಲೆ ಪ್ರೀತಿಯನ್ನು ಸುರಿಸಿದರೆಂದು ಹೇಳುತ್ತಾ ಅವರಿಗೆ ‘ಮದರ್’ (ತಾಯಿ) ಎಂಬ ಹೆಸರಿನಿಂದ ಜನಪ್ರಿಯತೆ ಪ್ರಾಪ್ತವಾಗಲು ಆರಂಭವಾಯಿತು. ಕಾಲ ಕಳೆದಂತೆ ಅವರ ‘ಮತಾಂತರದ ಕಾರ್ಖಾನೆ’ಯ ಶಾಖೆಗಳು ಜಗತ್ತಿನಾದ್ಯಂತ ಹರಡತೊಡಗಿದವು. ೫೨ ದೇಶಗಳಲ್ಲಿ ೨೨೭ ಸ್ಥಳಗಳಲ್ಲಿ ಮತಾಂತರದ ಸಂಚಿನ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಭಾರತದಲ್ಲಿಯೂ ಅವರ ಮತಾಂತರ ಕಾರ್ಯಕ್ಕೆ ವಿದೇಶದಿಂದ ಹಣ ಸಹಜವಾಗಿ ಬರುತ್ತಿತ್ತು, ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಶಾಲೆಗಳು, ಸಂಚಾರಿ ಆಸ್ಪತ್ರೆಗಳು, ಕುಷ್ಠರೋಗ ಚಿಕಿತ್ಸಾ ಕೇಂದ್ರಗಳು, ಶಿಶುಚಿಕಿತ್ಸಾ ಕೇಂದ್ರಗಳು, ಅನಾಥಾಶ್ರಮಗಳು ಮತ್ತು ಆಶ್ರಮಗೃಹಗಳು ಹೀಗೆ ವ್ಯಾಪಕ ಸರಪಳಿಯನ್ನು ಸ್ಥಾಪಿಸುವ ಸೇವಾಕಾರ್ಯದ ಹೆಸರಿನಲ್ಲಿ ಅವರು ಮಕ್ಕಳ ಕಳ್ಳಸಾಗಾಣಿಕೆ, ಹೆಣ್ಣುಮಕ್ಕಳ ಲೈಂಗಿಕ ಶೋಷಣೆ, ಎಲ್ಲ ವಯಸ್ಸಿನ ಸ್ತ್ರೀ-ಪುರುಷರಿಗೆ ಆಮಿಷ ತೋರಿಸಿ ಅಥವಾ ಗುಣಪಡಿಸುವ ಹೆಸರಿನಲ್ಲಿ ಮತಾಂತರಿಸುವ ಬೃಹತ್ ಕಾರ್ಯವನ್ನು ಅವರು ‘ಅಚ್ಚುಕಟ್ಟಾಗಿ’ ನಡೆಸಿದರು. ಬೆಂಗಳೂರಿನ ‘ಯುಕ್ಯುಮೆಕ್ಸ್ ಕ್ರಿಶ್ಚಿಯನ್ ಸೆಂಟರ್’ನ ವ್ಯವಸ್ಥಾಪಕ ಎಂ.ಎ. ಥಾಮಸ್ ಇವರು, ‘ಭಾರತದಲ್ಲಿ ಇನ್ನು ಮುಂದೆ ವಿದೇಶಿ ಪಾದ್ರಿಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಭಾರತದ ಪಾದ್ರಿಗಳೇ ಈಶಸೇವೆಯ ಆದೇಶಗಳನ್ನು ಪಾಲಿಸಲು ಸಮರ್ಥರಾಗಿದ್ದಾರೆ’ ಎಂದು ನಾಲ್ಕು ದಶಕಗಳ ಹಿಂದೆ ಹೇಳಿದ್ದರು. ಇದರಿಂದ ಮಿಶನರಿಗಳ ಭಾರತದಲ್ಲಿನ ಮತಾಂತರದ ಸಂಚಿನ ಕಲ್ಪನೆ ಸಿಗಬಹುದು. ಇತ್ತೀಚಿಗೆ ೧೪ ಡಿಸೆಂಬರ್ ೨೦೨೧ ರಂದು ಬರೋಡಾದಲ್ಲಿರುವ ಮದರ್ ತೆರೇಸಾ ಅವರ ಆಶ್ರಮವು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಮತಾಂತರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಲವಂತವಾಗಿ ಬೈಬಲ್ ಓದಿಸುವುದು, ಕ್ರೈಸ್ತ ಕುಟುಂಬದೊಂದಿಗೆ ಬಲವಂತವಾಗಿ ಮದುವೆ ಮಾಡಿಸುವುದು, ಈ ರೀತಿಯಲ್ಲಿ ಹೆಣ್ಣುಮಕ್ಕಳ ವಿಷಯದಲ್ಲಿ ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಮತಾಂತರಕ್ಕಾಗಿ ಅನೇಕ ಪ್ರಶಸ್ತಿಗಳು ?

ಯಾವ ಪೋಪ್ ಭಾರತವನ್ನು ಕ್ರೈಸ್ತಮಯ ಮಾಡುವಂತೆ ಘೋಷಿಸಿದರೋ, ಅವರ ಕೆಲಸಕ್ಕೆ ಮದರ ತೆರೆಸಾ ಪ್ರಮುಖ ‘ಕೊಡುಗೆ’ ನೀಡಿದರು. ಆದ್ದರಿಂದ ಅದೇ ಪೋಪ್ ಅವರಿಗೆ ಕ್ರೈಸ್ತರಲ್ಲಿ ‘ಚಮತ್ಕಾರವನ್ನು ಸಿದ್ಧಪಡಿಸಿ ತೋರಿಸುವವರು’ ಎಂಬ ಸಂತಪದವಿಯನ್ನೂ ನಿರ್ಮಿಸಿದರು ಮತ್ತು ನೋಬಲ್ ಪ್ರಶಸ್ತಿಯನ್ನೂ ನೀಡಿದರು. ಭಾರತದ ಪ್ರತಿ ಜಿಲ್ಲೆಗಳಲ್ಲಿಯೂ ಮಧ್ಯವರ್ತಿ ಕ್ರೈಸ್ತ ಮಿಶನರಿ ಶಾಲೆಗಳನ್ನು ಸ್ಥಾಪಿಸಿದ ಬ್ರಿಟಿಷರ ದೇಶವಾದ ಬ್ರಿಟನ್ ಸಹ ತೆರೇಸಾ ಅವರಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿತು; ಏಕೆಂದರೆ ಸಹಜವಾಗಿಯೇ ಅವರು ಭಾರತವನ್ನು ಕ್ರೈಸ್ತ ರಾಷ್ಟ್ರವನ್ನಾಗಿ ಮಾಡುವ ತಮ್ಮ ಉಳಿದ ಕೆಲಸವನ್ನು ಪೂರ್ಣಗೊಳಿಸುತ್ತಿದ್ದರು. ಕ್ರೈಸ್ತ ರಾಷ್ಟ್ರಗಳು ಅವರನ್ನು ವೈಭವೀಕರಿಸುವುದು ಸ್ವಾಭಾವಿಕವಾಗಿತ್ತು; ಆದರೆ ಭಾರತದಲ್ಲಿಯೂ ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ಗೌರವಗಳನ್ನು ನೀಡಲಾಯಿತು. ‘ಮತಾಂತರವೇ ರಾಷ್ಟ್ರಾಂತರ’, ಎಂದು ಘೋಷಿಸಿದ ಸ್ವಾತಂತ್ರ್ಯವೀರ ಸಾವರಕರ ಇವರಿಗೆ ಭಾರತದಲ್ಲಿ ಕಾಂಗ್ರೆಸನಿಂದಾಗಿ ಯಾವುದೇ ಪ್ರಶಸ್ತಿ ಸಿಗಲಿಲ್ಲ, ಅವರ ಪಾಲಿಗೆ ತಿರಸ್ಕಾರ ಮಾತ್ರ ಸಿಕ್ಕಿತು. ಇಂದು ಪೂರ್ವಾಂಚಲ ಪ್ರದೇಶವನ್ನು ಕ್ರೈಸ್ತರು ನುಂಗಿ ಹಾಕುತ್ತಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿಗಳು ‘ಕ್ರೈಸ್ತ ರಾಷ್ಟ್ರ’ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ, ‘ಮತಾಂತರ ಹೇಗೆ ರಾಷ್ಟ್ರಾಂತರವಾಗಿದೆ ?’, ಎಂಬುದು ಸಾಬೀತಾಗುತ್ತಿದೆ. ಅಲ್ಲದೇ ಮತಾಂತರದ ಮೂಲಕ ಈ ರಾಷ್ಟ್ರಾಂತರವನ್ನಾಗಿಸುವಲ್ಲಿ ಸಿಂಹಪಾಲಿರುವ ತೆರೆಸಾ ಅವರಿಗೆ ಕ್ರೈಸ್ತ ಸೊಸೆಯಾಗಿರುವ ನೆಹರು ಮನೆತನದ ಕಾಂಗ್ರೆಸ್ ಭಾರತದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ನೀಡಿತು.

ಕಾಲಕಾಲಕ್ಕೆ, ಜಾತ್ಯತೀತರು ಮತ್ತು ಕ್ರೈಸ್ತ ಪ್ರೇಮಿಗಳು ಕ್ರೈಸ್ತ ಮಿಶನರಿಗಳ ಕೆಲಸವನ್ನು ಶ್ಲಾಘಿಸುತ್ತಿರುತ್ತಾರೆ. ‘ಕ್ರಿಸ್‌ಮಸ್‌ಅನ್ನು ರಾಷ್ಟ್ರೀಯ ಹಬ್ಬವೆಂದು ಏಕೆ ಘೋಷಿಸಲಾಗಿಲ್ಲ ?’ ಎಂದು ಕೇಳುತ್ತಾರೆ. ಮತಾಂತರ ಮಾಡುವ ಮಿಶನರಿಗಳ ಆರ್ಥಿಕ ನಾಡಿಮಿಡಿತವನ್ನು ಅಂದರೆ ಅವರಿಗೆ ವಿದೇಶದಿಂದ ಬರುತ್ತಿದ್ದ ಹಣವನ್ನು ಸರಕಾರ ನಿಲ್ಲಿಸಿದೆ. ಮತಾಂತರ ನಿಷೇಧ ಕಾನೂನಿಗಾಗಿ ಹಿಂದುತ್ವನಿಷ್ಠರೂ ಒತ್ತಾಯಿಸುತ್ತಿದ್ದಾರೆ. ‘ಘರವಾಪಸಿ’ಯ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಯಾರಿಗೆ ಕ್ರೈಸ್ತ ಪ್ರೇಮವು ಉಕ್ಕಿ ಹರಿಯತೊಡಗಿತೋ, ಇವರೆಲ್ಲರ ನಿಜಸ್ವರೂಪ ಈಗ ಜನಸಾಮಾನ್ಯರಿಗೆ ಗೊತ್ತಾಗಿದೆ, ಎಂಬುದು ಖಚಿತ !