ಭಾರತೀಯ ಶಿಕ್ಷಣವ್ಯವಸ್ಥೆ ಮತ್ತು ಶಬ್ದಪ್ರಮಾಣದ ಮಹತ್ವ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೧೦ ನೇ ಸಂಚಿಕೆಯಲ್ಲಿ ‘ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.   (ಭಾಗ ೧೬)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/55855.html

೬೨. ಪ್ರಮಾಣಗಳ (ಪುರಾವೆಗಳ) ಆಧಾರದಿಂದಾಗಿಯೇ ಭಾರತೀಯ ಸಂಸ್ಕೃತಿಯು ಸನಾತನ, ನಿಶ್ಚಯಾತ್ಮಕ ಬುದ್ಧಿಯ ಮೇಲಾಧಾರಿತ ಹಾಗೂ ಅದ್ವಿತೀಯ ಮತ್ತು ವಿಲಕ್ಷಣ ಗುಣಗಳಿಂದ ಕೂಡಿರುವುದು

ಆಪ್ತ ಪ್ರಮಾಣಗಳಿಗೆ ಸಂಬಂಧಿಸಿದ (ಶಬ್ದಪ್ರಮಾಣಗಳಿಗೆ ಸಂಬಂಧಿಸಿದ) ವಿಶೇಷ ವಿಚಾರಗಳು ಸಂಪೂರ್ಣ ಭಾರತೀಯ ಸಂಸ್ಕೃತಿಯ ಮೂಲಭೂತ (Fundamental) ಪ್ರಮಾಣ ಅಂದರೆ ವಿಶೇಷ ಪ್ರಮಾಣಗಳಾಗಿವೆ. ಪುರಾವೆಗಳ (ಪ್ರಮಾಣಗಳ) ಆಧಾರವಿರುವುದರಿಂದಲೇ ಭಾರತೀಯ ಸಂಸ್ಕೃತಿಯು ಸನಾತನ, ನಿಶ್ಚಯಾತ್ಮಕ ಬುದ್ಧಿಯ ಮೇಲಾಧಾರಿತ, ಹಾಗೆಯೇ ಅದ್ವಿತೀಯ ಮತ್ತು ವಿಲಕ್ಷಣ ಗುಣಗಳಿಂದ ಕೂಡಿದೆ. ಭಾರತೀಯ ಸಂಸ್ಕೃತಿ ಮತ್ತು ಅದರ ಮೂಲಕ ಸಿದ್ಧವಾದ ಶಿಕ್ಷಣದಲ್ಲಿ ಆಪ್ತ-ಪ್ರಮಾಣದ (ಶಬ್ದಪ್ರಮಾಣದ) ಮಹತ್ವವು ಬಹಳವಿದೆ.

೬೩. ಆಪ್ತ ಪ್ರಮಾಣವಿರುವ (ಶಬ್ದ ಪ್ರಮಾಣವಿರುವ) ವಿಚಾರಗಳು ಸ್ವಯಂಸ್ಫೂರ್ತಿಯಿಂದ ಋಷಿಗಳ ಬುದ್ಧಿಯಲ್ಲಿ ತನ್ನಿಂದತಾನೇ ಪ್ರಕಟವಾಗಿರುವುದು

ಆಪ್ತ ಪ್ರಮಾಣಗಳಿಗೆ (ಶಬ್ದ ಪ್ರಮಾಣಗಳಿಗೆ) ‘ಅಪೌರುಷೇಯ’ ಎನ್ನಲಾಗಿದೆ. ಮನುಷ್ಯನು ತಾನಾಗಿಯೇ ಆ ವಿಚಾರಗಳನ್ನು ನಿರ್ಮಿಸಿಲ್ಲ, ಆದರೆ ಅವು ಸ್ವಯಂಸ್ಫೂರ್ತಿಯಿಂದ ಋಷಿಗಳ ಬುದ್ಧಿಯಲ್ಲಿ ತಾವಾಗಿಯೇ ಪ್ರಕಟವಾಗಿವೆ; ಆದರೆ ಜನಸಾಮಾನ್ಯರಿಗೆ ಇದನ್ನು ಸತ್ಯವೆಂದು ನಂಬಲು ಕಠಿಣವಾಗುತ್ತದೆ, ಆ ಬಗ್ಗೆ ವಿಶ್ವಾಸವೆನಿಸುವುದಿಲ್ಲ ಮತ್ತು ಅವರು ಅದನ್ನು ನಿರಾಕರಿಸುತ್ತಾರೆ. ವ್ಯಾವಹಾರಿಕ ಮನುಷ್ಯನ ಮನಸ್ಸಿನಲ್ಲಿ ಸಹ ಬಹಳ ವಿಚಾರಗಳು ತಾವಾಗಿಯೇ ಬರುತ್ತಿರುತ್ತವೆ. ಅವು ಮನುಷ್ಯನ ಪ್ರಯತ್ನಗಳಿಂದಾಗಿ ಬರುತ್ತಿರುವುದಿಲ್ಲ.

೬೪. ಮನಸ್ಸಿನ ವಿಚಾರಗಳ ಕಡೆಗೆ ಗಮನವಿಡುವುದು ಮತ್ತು ಅವುಗಳ ಮೂಲಸ್ಥಾನವನ್ನು ಕಂಡು ಹಿಡಿಯುವುದು ಕಠಿಣವಾಗಿರುವುದು

ನಾವು ಮೊದಲು ಮನಸ್ಸಿನಲ್ಲಿ ಬಂದ ವಿಚಾರಗಳ ಬಗ್ಗೆಯೇ ಸ್ವಲ್ಪ ಸಮಯ ನಿರೀಕ್ಷಣೆಯನ್ನು ಮಾಡೋಣ. ಮನಸ್ಸು ಅಥವಾ ಬುದ್ಧಿಯಲ್ಲಿ ಬರುವ ವಿಚಾರಗಳ ಕಡೆಗೆ ಗಮನ ನೀಡಿ, ಯಾವ ರೀತಿಯ ವಿಚಾರಗಳು ಅಥವಾ ಸಂಕಲ್ಪ-ವಿಕಲ್ಪಗಳು ನಮ್ಮ ಮನಸ್ಸಿನಲ್ಲಿ ಬರುತ್ತಿವೆ ? ಎಂದು ವಿಚಾರ ಮಾಡಬೇಕು. ಈ ವಿಚಾರಗಳನ್ನು ತಡೆಗಟ್ಟುವ, ಮನಸ್ಸನ್ನು ಸ್ಥಿರಗೊಳಿಸುವ ಅಥವಾ ಧ್ಯಾನಧಾರಣೆ ಮಾಡಲು ಪ್ರಯತ್ನಿಸಿ. ಈ ಧ್ಯಾನವು ಯಾವುದೇ ಮೂರ್ತಿ, ಚಿತ್ರ, ಸ್ಥಾನ ಅಥವಾ ವಿಚಾರಗಳದ್ದಾಗಿರಬಹುದು. ಆಗ ಧ್ಯಾನಧಾರಣೆ ಮಾಡುವುದು ಬಹಳ ಕಠಿಣವಾಗುತ್ತಿದೆ, ಎಂದು ಗಮನಕ್ಕೆ ಬರುತ್ತದೆ. ಮನಸ್ಸು ಸಹ ಸ್ಥಿರವಾಗುವುದಿಲ್ಲ ಅಥವಾ ಕೆಲವು ಕ್ಷಣಗಳ ಮಟ್ಟಿಗೆ ಸ್ಥಿರವಾಗಿರುತ್ತದೆ; ಆದರೆ ಪುನಃ ಕೂಡಲೇ ಅದು ಬೇರೆ ವಿಚಾರಗಳನ್ನು ಗ್ರಹಣ ಮಾಡುತ್ತದೆ. ಯಾವ ವಿಚಾರ ಯಾವಾಗ ಬರುವುದೆಂದು ನಮಗೆ ಗೊತ್ತಿರುವುದಿಲ್ಲ. ಆ ವಿಚಾರಗಳು ಯಾವುದೇ ಮುನ್ಸೂಚನೆಯಿಲ್ಲದೇ ಬರುತ್ತವೆ. ಈ ಎಲ್ಲ ವಿಚಾರಗಳು ಮನಸ್ಸಿನಲ್ಲಿ ಎಲ್ಲಿಂದ ಬರುತ್ತವೆ ಮತ್ತು ಎಲ್ಲಿಗೆ ಹೋಗುತ್ತವೆ, ಎಂದು ಅರಿವು ಸಹ ಆಗುವುದಿಲ್ಲ.

ಕೆಲವೊಮ್ಮೆ ಹೀಗೂ ಆಗುತ್ತದೆ, ನಾವು ಯಾವುದೋ ಕಾರ್ಯದಲ್ಲಿ ಮಗ್ನರಾಗಿರುತ್ತೇವೆ ಮತ್ತು ನಮ್ಮ ಗಮನ ಆ ಕಾರ್ಯದಲ್ಲಿಯೇ ಇರುತ್ತದೆ; ಆದರೂ ಬೇರೆ ಯಾವುದೋ ವಿಚಾರ ಮನಸ್ಸಿನಲ್ಲಿ ಅಕಸ್ಮಾತ್ತಾಗಿ ಅನಾಯಾಸವಾಗಿ ಬರುತ್ತದೆ.

೬೪ ಅ. ಕನಸುಗಳ ಬಗ್ಗೆಯೂ ಮನುಷ್ಯನು ಅಜ್ಞಾನಿಯಾಗಿರುತ್ತಾನೆ : ಮನುಷ್ಯನ ಪ್ರತಿಭೆಯು (Intution) ಸಹ ಯಾವಾಗ ಬೆಳಗುತ್ತದೆ ಅಥವಾ ‘ಅದು ಯಾವಾಗ ಜಾಗೃತವಾಗುತ್ತದೆ’, ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಮನುಷ್ಯನು ರಾತ್ರಿ ನಿದ್ದೆಯಲ್ಲಿ ನೋಡಿದ ಕನಸುಗಳ ಮೇಲೆ ಮನುಷ್ಯನಿಗೆ ಯಾವುದೇ ರೀತಿಯ ಅಧಿಕಾರವೂ ಇರುವುದಿಲ್ಲ, ಕನಸು ಯಾವಾಗ ಬೀಳುತ್ತದೆ ಮತ್ತು ಯಾವಾಗ ಮುಗಿಯುತ್ತದೆ ಮತ್ತು ಆ ಕನಸು ಹೇಗೆ ಇರುವುದು, ಎಂಬುದು ಮೊದಲೇ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ.

೬೫. ಮನುಷ್ಯನು ಈ ವಿಚಾರಗಳ ಅಥವಾ ದೃಶ್ಯಗಳ ರಚನಾಕಾರನಲ್ಲ ಮತ್ತು ದೋಷರಹಿತ ಅಂತಃಕರಣವಿರುವ ಮನುಷ್ಯನ ನುಡಿಗಳ ಮೇಲೆಯೇ ವಿಶ್ವಾಸವಿಡಲಾಗುತ್ತದೆ

ಈ ವಿವಿಧ ಉದಾಹರಣೆಗಳಿಂದ, ‘ಮನುಷ್ಯನು ಮನಸ್ಸು ಅಥವಾ ಬುದ್ಧಿ ಇವುಗಳಲ್ಲಿ ಬಂದ ವಿಚಾರ ಅಥವಾ ದೃಶ್ಯ ಇವುಗಳ ಕೇವಲ ದ್ರಷ್ಟಾ(ವೀಕ್ಷಕ) ಇರುತ್ತಾನೆ’ ಆದರೆ ಅವನು ರಚನಾಕಾರನಾಗಿರುವುದಿಲ್ಲ’, ಎಂಬುದು ಸ್ಪಷ್ಟವಾಗುತ್ತದೆ. ಮನುಷ್ಯನ ಮನಸ್ಸಿನಲ್ಲಿ ವ್ಯಾವಹಾರಿಕ ವಿಚಾರಗಳೇ ಬರುತ್ತವೆ ಮತ್ತು ತಾವಾಗಿ ಬಂದ ವಿಚಾರಗಳೂ ವ್ಯಾವಹಾರಿಕವಾಗಿರುತ್ತವೆ. ಸಂಸಾರಿಕ ಮನುಷ್ಯನ ವಿಚಾರಗಳಲ್ಲಿನ ದೋಷಗಳೆಂದರೆ ಅವು ಅಂತಃಕರಣದಲ್ಲಿನ (ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ) ದೋಷಗಳಿಂದ ಮಲೀನವಾಗಿರುತ್ತವೆ, ಉದಾ. ಅಜ್ಞಾನ, ಅಸ್ಮಿತೆ (ಅಭಿಮಾನ), ಸಿಟ್ಟು, ದ್ವೇಷ, ಲೋಭ, ಮೋಹ, ಭಯ, ಹಂಬಲ (ಆಸೆ), ಮತ್ಸರ ಇತ್ಯಾದಿ. ಯಾರ ಅಂತಃಕರಣವು ದೋಷರಹಿತವಾಗಿರುತ್ತದೋ, ಆ ಮನುಷ್ಯನ ನುಡಿಗಳ ಮೇಲೆ ಸಂಪೂರ್ಣ ವಿಶ್ವಾಸವಿಡಬಹುದು.

೬೬. ಮನುಷ್ಯನು ದೈವಿ ಪ್ರಭುತ್ವದೊಂದಿಗೆ ಯಾವಾಗ ಜೋಡಿಸಲ್ಪಡುತ್ತಾನೆ ?

ಒಂದು ವೇಳೆ ಮನುಷ್ಯನು ಬುದ್ಧಿಯ ದೋಷಗಳನ್ನು (ಮಲ, ವಿಕ್ಷೇಪ ಮತ್ತು ಆವರಣ) ದೂರ ಮಾಡಿದರೆ, ವಾಸನೆಗಳನ್ನು ನಾಶ ಮಾಡಿದರೆ, ಚಿತ್ತದಲ್ಲಿ ಸಂಗ್ರಹಗೊಂಡ ಕರ್ಮಗಳನ್ನು ಸಂಸ್ಕಾರಗಳಿಂದ ರಕ್ಷಣೆ ಮಾಡಿದರೆ ಮತ್ತು ಅವನಲ್ಲಿ ಅಹಂಭಾವದ ಲವಲೇಶವೂ ಇಲ್ಲವೆಂದಾದರೆ ಆ ಮನುಷ್ಯನ ಸಂಬಂಧ ಯಾವುದೇ ರೀತಿಯ ಬಾಧೆಯನ್ನುಂಟು ಮಾಡದೇ ದೈವಿ ಪ್ರಭುತ್ವದೊಂದಿಗೆ ಜೋಡಿಸಲ್ಪಡುತ್ತದೆ.

೬೭. ದೈವಿ ಪ್ರಭುತ್ವದೊಂದಿಗೆ ಸಂಬಂಧ ಸ್ಥಾಪಿತವಾದ ನಂತರದ ಪರಿಣಾಮ

ದೈವಿ ಪ್ರಭುತ್ವದೊಂದಿಗೆ ಸಂಬಂಧವು ಸ್ಥಾಪಿತವಾದರೆ ವಿಚಾರಗಳ ಪ್ರವಾಹವು ತಾನಾಗಿಯೇ ಪ್ರವಹಿಸುತ್ತದೆ ಮತ್ತು ಆ ವಿಚಾರವು ಸತ್ಯ, ಸಾತ್ವಿಕ, ನಿಶ್ಚಯಾತ್ಮಕ, ದೈವಿ ಸ್ಪಂದನಗಳಿಂದ (ಸದ್ಗುಣ)ಯುಕ್ತ, ಅದ್ಭುತ (ವಿಲಕ್ಷಣ) ಮತ್ತು ಇಂದ್ರಿಯಾತೀತವಾಗಿರುತ್ತವೆ. ಇಂತಹ ಪುರುಷನಿಗೆ (ಮನುಷ್ಯನಿಗೆ) ‘ಆಪ್ತ ಪುರುಷ’ನೆಂದು ಹೇಳುತ್ತಾರೆ ಮತ್ತು ಅವರ ನುಡಿಗೆ ‘ಆಪ್ತ-ಪ್ರಮಾಣ’ (ಅಥವಾ ‘ಶಬ್ದ-ಪ್ರಮಾಣ’)ವೆಂದು ಹೇಳುತ್ತಾರೆ. ಈ ವಿಚಾರಗಳಿಗೆ ‘ಅಪೌರುಷೇಯ’ (ಅಂದರೆ ಯಾವುದೇ ಸಾಂಸಾರಿಕ ಪುರುಷನ ಮೂಲಕ ಸಿದ್ಧವಾಗದ) ಎಂದು ಹೇಳಲಾಗಿದೆ; ಏಕೆಂದರೆ ಈ ವಿಚಾರವು ತನ್ನಿಂದತಾನೇ (ಸ್ವಯಂಸ್ಫೂರ್ತಿಯಿಂದ) ಋಷಿಗಳ ಅಂತಃಕರಣದಲ್ಲಿ ಪ್ರಕಟವಾಗಿರುತ್ತದೆ. ಅವರ ಪರಿಶ್ರಮದಿಂದ ಆಗಿರುವುದಿಲ್ಲ, ಈ ಸತ್ಯವನ್ನು ಸ್ವತಃ ಋಷಿಗಳೂ ಸ್ವೀಕರಿಸಿದ್ದಾರೆ. ಆದುದರಿಂದ ಋಷಿಗಳಿಗೆ ‘ಮಂತ್ರದ್ರಷ್ಟಾ’ ಎಂದು ಹೇಳಲಾಗುತ್ತದೆ. ಮಂತ್ರವನ್ನು ರಚಿಸಿದವರು ಎಂದು ಹೇಳುವುದಿಲ್ಲ.

೬೮. ವೇದಗ್ರಂಥಗಳು ಮತ್ತು ಭಾರತೀಯ ಶಿಕ್ಷಣವ್ಯವಸ್ಥೆ

ಸಮಸ್ತ ವೇದಗ್ರಂಥಗಳು ಅಪೌರುಷೇಯ ಮತ್ತು ಆಪ್ತಪ್ರಮಾಣವಾಗಿವೆ. ಅವುಗಳ ಆಧಾರದಿಂದ ಭಾರತೀಯ ಸಂಸ್ಕೃತಿ ಮತ್ತು ಅವುಗಳ ಮೂಲಕ ನಿರೂಪಿಸಲಾದ ಶಿಕ್ಷಣವ್ಯವಸ್ಥೆ ಮತ್ತು ಅದರ ಸ್ವರೂಪವು ನಿರ್ಮಾಣವಾಗಿದೆ. ಅದು ವಿವಿಧ ರೀತಿಯ ಶ್ರೇಷ್ಠ ಗುಣಗಳಿಂದ ಸಮೃದ್ಧವಾಗಿದೆ. ಇಂತಹ ಸಂಸ್ಕೃತಿಯು ಶಿಕ್ಷಣದ ಉದ್ದೇಶ ಮತ್ತು ಆ ಉದ್ದೇಶಗಳ ಪೂರೈಕೆಯ ಮಾರ್ಗವನ್ನು ಹೇಳುತ್ತದೆ.’

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : `ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)

ಸತ್ಯಕ್ಕೆ ದೂರವಾದ ಭಾರತದ ಇತಿಹಾಸ ಬರೆದ ಭಾರತದ ಶತ್ರುಗಳು ಮತ್ತು ಇಂದಿಗೂ ಅದನ್ನೇ ಕಲಿಸುತ್ತಿರುವ ಮೆಕಾಲೆಯ ಮಾನಸಪುತ್ರರು

‘ಜಗತ್ತಿನ ಬಹಳಷ್ಟು ದೇಶಗಳು ಯಾವತ್ತಾದರೊಂದು ಸಲ ಪಾರತಂತ್ರ್ಯದಲ್ಲಿದ್ದವು. ಆದರೆ ಸ್ವಾತಂತ್ರ್ಯದ ನಂತರ ಅವರು ಅವರ ಇತಿಹಾಸವನ್ನು ಅವರ ದೃಷ್ಟಿಯಲ್ಲಿ ಬರೆದರು. ಇದಕ್ಕೆ ಅಪವಾದ ಭಾರತ ದೇಶ. ಇಂದು ದೇಶದ ಶತ್ರುಗಳು ಬರೆದಂತಹ ದೇಶದ ಶತ್ರುಗಳ ಇತಿಹಾಸವನ್ನು ನಮಗೆ ಕಲಿಸಲಾಗುತ್ತಿದೆ. ಜರ್ಮನಿಯ ಓರ್ವ ವಿದ್ವಾಂಸ ಪಾಕ್ ಕೈಮರನು ಭಾರತದ ಇಂದಿನ ಇತಿಹಾಸ ಓದಿ ಭಾರತದ ಮೇಲೆ ಬರೆದಂತಹ ‘ಇಂಡಿಯಾ : ರೋಡ್ ಟೂ ನೆಶನಹುಡ್’ ಈ ಪುಸ್ತಕದ ಪ್ರಸ್ತಾವನೆಯಲ್ಲಿ ಬರೆದಿದ್ದಾನೆ ‘ಯಾವಾಗ ಭಾರತದ ಇತಿಹಾಸವನ್ನು ಓದುತ್ತೇನೆಯೂ ಆಗ ಇದು ಭಾರತದ ಇತಿಹಾಸವೇ ? ಇದು ಭಾರತವನ್ನು ದೋಚಿದವರ ಹಾಗೂ ಹತ್ಯಾಕಾಂಡ ಮಾಡಿದ ಆಕ್ರಮಣಕಾರರ ಇತಿಹಾಸವಾಗಿದೆ ಎಂದು ಅನಿಸುತ್ತದೆ. ಯಾವತ್ತು ಭಾರತೀಯರು ಸತ್ಯ ಇತಿಹಾಸ ತಿಳಿಯುವರೋ, ಆ ದಿನ ಅವರು ತಾವು  ಯಾರೆಂದು ಜಗತ್ತಿಗೆ ತೋರಿಸಿಕೊಡುವರು. ಅನೇಕ ದಶಕಗಳ ಶ್ರಮದ ನಂತರ ವಿದೇಶಿ ಶಕ್ತಿಗಳು ಭಾರತದ ಸುಳ್ಳು ಇತಿಹಾಸವನ್ನು ಬರೆಸಿಕೊಂಡು ಅದನ್ನು ಆಂಗ್ಲರ ಮಾನಸಪುತ್ರರ ಸಹಾಯದಿಂದ ಇಂದು ಭಾರತದಲ್ಲಿ ಕಲಿಸಲಾಗುತ್ತಿದೆ’.

– ಶ್ರೀ. ಸತೀಶ ತ್ರಿಪಾಠಿ (ಎಪ್ರಿಲ್ ೨೦೧೨)