ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪ್ರಶ್ನೆ
ನವದೆಹಲಿ – ರಾಜೀವ್ ಗಾಂಧಿ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿದ್ದರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ಎರಡು ಬಾರಿ ಅನುತ್ತೀರ್ಣರಾದರು. ಕೇಂಬ್ರಿಡ್ಜ್‌ನಲ್ಲಿ ಅನುತ್ತೀರ್ಣರಾಗುವುದು ತುಂಬಾ ಕಷ್ಟ. ಏಕೆಂದರೆ ವಿಶ್ವವಿದ್ಯಾಲಯವು ಎಲ್ಲರನ್ನು ಉತ್ತೀರ್ಣಗೊಳಿಸಲು ಪ್ರಯತ್ನಿಸುತ್ತದೆ. ವಿದ್ಯಾರ್ಥಿಯು ತನ್ನ ನಡವಳಿಕೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೂ, ರಾಜೀವ್ ಗಾಂಧಿ ವಿಫಲರಾದರು. ಅಷ್ಟೇ ಅಲ್ಲ, ರಾಜೀವ್ ಗಾಂಧಿ ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿಯೂ ಅನುತ್ತೀರ್ಣರಾಗಿದ್ದರು. ಇಂತಹ ವ್ಯಕ್ತಿ ದೇಶದ ಪ್ರಧಾನ ಮಂತ್ರಿಯಾಗಲು ಹೇಗೆ ಸಾಧ್ಯ? ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ. ಭಾಜಪ ನಾಯಕ ಅಮಿತ್ ಮಾಳವೀಯ ಅವರು ಈ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಅಯ್ಯರ್ ಅವರಿಗೆ ಈ ಪ್ರಶ್ನೆ 40 ವರ್ಷಗಳ ನಂತರ ಏಕೆ ಬಂತು ? ಈ ಹಿಂದೆ ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ ಅಥವಾ ಮಾತನಾಡಲು ಧೈರ್ಯವಿರಲಿಲ್ಲವೇ? |