
ನವದೆಹಲಿ – ಪ್ರಸ್ತುತ ತಂತ್ರಜ್ಞಾನವು ಶಿಕ್ಷಣದ ಅಗತ್ಯ ಭಾಗವಾಗಿದೆ. ಮೊಬೈಲ್ ಮೂಲಕ ಮಕ್ಕಳು ತಮ್ಮ ಪೋಷಕರೊಂದಿಗೆ ಸಂಪರ್ಕದಲ್ಲಿರುತ್ತಾರೆ, ಇದು ಅವರ ಸುರಕ್ಷತೆಯನ್ನು ಸಹ ಖಚಿತಪಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತರುವುದನ್ನು ನಿಷೇಧಿಸಲು ಸಾಧ್ಯವಿಲ್ಲ; ಆದರೆ ಶಾಲೆಗಳು ಈ ಬಗ್ಗೆ ನೀತಿ ರೂಪಿಸಿ ನಿಗಾ ವಹಿಸಬೇಕು, ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಕೇಂದ್ರೀಯ ಶಾಲೆಯ ವಿದ್ಯಾರ್ಥಿಯೊಬ್ಬರು ಶಾಲೆಯಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು, ಅದನ್ನು ನ್ಯಾಯಾಲಯ ವಜಾಗೊಳಿಸಿದೆ.
ಶಾಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆಯ ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷೆ ಇರಬೇಕು; ಆದರೆ ಅದು ತುಂಬಾ ಕಠಿಣವಾಗಿರಬಾರದು ಎಂದು ಹೈಕೋರ್ಟ್ ಹೇಳಿದೆ. ಅಗತ್ಯವಿದ್ದರೆ ಶಾಲೆಗಳು ಶಿಕ್ಷೆಯಾಗಿ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಬಹುದು ಎಂದು ನ್ಯಾಯಾಲಯ ಸಲಹೆ ನೀಡಿದೆ.
ಮಕ್ಕಳು ಪ್ರತಿದಿನ ಸರಾಸರಿ 7 ಗಂಟೆಗಳ ಕಾಲ ಮೊಬೈಲ್ ಬಳಸುತ್ತಾರೆ!
‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆನ್ ಡ್ರಗ್ ಅಬ್ಯೂಸ್’ ವರದಿಯ ಪ್ರಕಾರ, ಹದಿಹರೆಯದ ಮಕ್ಕಳು ಪ್ರತಿದಿನ 7 ಗಂಟೆ 22 ನಿಮಿಷಗಳನ್ನು ಮೊಬೈಲ್ ಬಳಸುವುದರಲ್ಲಿ ಕಾಲ ಕಳೆಯುತ್ತಾರೆ. ಮಕ್ಕಳು ಇದರ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ಅವರ ಸಾಮಾಜಿಕ ಬೆಳವಣಿಗೆ ನಿಲ್ಲಬಹುದು. ಈ ವಯಸ್ಸಿನಲ್ಲಿ ಮೊಬೈಲ್‌ನ ಅತಿಯಾದ ಬಳಕೆ ಮಕ್ಕಳ ದೈಹಿಕ ಬೆಳವಣಿಗೆಯೊಂದಿಗೆ ಮೆದುಳಿನ ಬೆಳವಣಿಗೆಗೂ ಅಡ್ಡಿಯುಂಟು ಮಾಡಬಹುದು.
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ