ಶಿಕ್ಷಣ ವ್ಯವಸ್ಥೆಗೆ ಪುರಾವೆಗಳ ಆಧಾರವಿರುವುದು ಆವಶ್ಯಕ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೧೦ ನೇ ಸಂಚಿಕೆಯಲ್ಲಿ ‘ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.     

(ಭಾಗ ೧೫)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/55464.html

೫೯. ಆಧುನಿಕ ಪ್ರಚಲಿತ ಶಿಕ್ಷಣವು ನೈಸರ್ಗಿಕ ಮಾನವಿ ಇಚ್ಛೆಗಳು ಮತ್ತು ವಾಸನೆಗಳ ಮೇಲೆ ಆಧರಿಸಿರುವುದರಿಂದ ಅವು ಅನೇಕ ದೋಷಗಳಿಂದ ಕೂಡಿರುವುದು

ಮಾನವನ ಇಚ್ಛೆಗನುಸಾರ ಶಿಕ್ಷಣವ್ಯವಸ್ಥೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲಿ ಪ್ರತ್ಯಕ್ಷ ಪುರಾವೆಗಳ ಅವಶ್ಯಕತೆ ಇರುತ್ತದೆ. ಆಧುನಿಕ ಪ್ರಚಲಿತ ಶಿಕ್ಷಣವು ಮನುಷ್ಯನ ನೈಸರ್ಗಿಕ ಇಚ್ಛೆ ಮತ್ತು ವಾಸನೆಗಳನ್ನು ಆಧರಿಸಿದ್ದರಿಂದ ಅದು ವಿಭಿನ್ನ ದೋಷಗಳಿಂದ ಕೂಡಿದೆ. ಮನುಷ್ಯನಿಗೆ ಭೌತಿಕ ಸಂಪನ್ನತೆಯನ್ನು ಪ್ರದಾನಿಸುವುದರೊಂದಿಗೆ ದೈವೀ ಸಂಪತ್ತು (ಚಾರಿತ್ರ್ಯ ನಿರ್ಮಿತಿ) ಪ್ರಾಪ್ತ ಮಾಡಿಕೊಡಬಹುದಾದ, ಮನುಷ್ಯನ ಆಂತರ್ಯದಲ್ಲಿರುವ ಶಕ್ತಿಗಳನ್ನು ಜಾಗೃತ ಮಾಡುವ, ಹಾಗೆಯೇ ಯಾವುದರಲ್ಲಿ ಕಲ್ಯಾಣಕರ ಧ್ಯೇಯದ ವರೆಗೆ ತಲುಪಿಸುವ ಸಾಮರ್ಥ್ಯವಿರುವುದೋ, ಅಂತಹ ಶಿಕ್ಷಣವು ಇಂದು ಬೇಕಾಗಿದೆ.

೬೦. ದೈನಂದಿನ ಜೀವನದಲ್ಲಿ ನಿಶ್ಚಯಾತ್ಮಕ ಬುದ್ಧಿಯು ಅನಿವಾರ್ಯವಾಗಿದೆ

ದೈನಂದಿನ ಜೀವನವನ್ನು ಜೀವಿಸುವುದು, ಧ್ಯೇಯಪ್ರಾಪ್ತಿಯನ್ನು ಮಾಡಿಕೊಳ್ಳುವುದು ಮತ್ತು ಶಿಕ್ಷಣವನ್ನು ಪಡೆಯುವುದು ಇವುಗಳಿಗಾಗಿ ನಿಶ್ಚಯಾತ್ಮಕ ಬುದ್ಧಿಯು ಅನಿವಾರ್ಯವಾಗಿದೆ. ಮನುಷ್ಯನ ಬುದ್ಧಿಯ ಮಿತಿಯನ್ನು ನೋಡಿದರೆ ನಮಗೆ ನಿಶ್ಚಯಾತ್ಮಕ ಬುದ್ಧಿಯ ಆಧಾರದ ಆವಶ್ಯಕತೆ ಇದೆ. ಈ ಆಧಾರವೇ ಪ್ರಮಾಣವಾಗಬಹುದು. ಪ್ರಮಾಣಗಳ ಆವಶ್ಯಕತೆಯನ್ನು ನೋಡಿದರೆ ಭಾರತೀಯ ಸಂಸ್ಕೃತಿಯು ಪುರಾವೆಗಳ (ಪ್ರಮಾಣಗಳು) ಸಂಶೋಧನೆಯನ್ನು ಮಾಡಿ ಮಹರ್ಷಿ ಗೌತಮರು ರಚಿಸಿದ ‘ನ್ಯಾಯ-ದರ್ಶನ’ ಹೆಸರಿನ ಗ್ರಂಥವನ್ನು ಪ್ರಸ್ತುತ ಪಡಿಸಿದೆ.

೬೧. ‘ಪ್ರಮಾಣ’ ಎಂದರೇನು ಮತ್ತು ಅದರ ವ್ಯಾಪ್ತಿ

‘ಪ್ರಮಾಣ’ ಈ ಶಬ್ದದ ಅರ್ಥ, ಪ್ರಮಾ (ಯೋಗ್ಯ ಜ್ಞಾನ) ಇದರ ಕರಣ (ಸಾಧನ) ಅಂದರೆ ಜ್ಞಾನಕ್ಕಾಗಿ ಯಾವ ಸಾಧನದ ಆವಶ್ಯಕತೆ ಇದೆಯೋ, ಆ ಸಾಧನವೆಂದರೆ ಪ್ರಮಾಣ. ಪ್ರಮಾಣವು ಎಂತಹ ಶಕ್ತಿಯಾಗಿದೆ ಎಂದರೆ ಅದರ ಮೂಲಕ ಅಯೋಗ್ಯ ಅಥವಾ ಸಂದೇಹಾತ್ಮಕ ಜ್ಞಾನವು ಸತ್ಯ ಜ್ಞಾನದಲ್ಲಿ ಪರಿವರ್ತನೆಯಾಗುತ್ತದೆ. ‘ಪ್ರಮಾಣ’ ಈ ಶಬ್ದಕ್ಕೆ ಗೂಢ ಭಾವವೂ ಇದೆ. ಪರಮಾತ್ಮನು ಸ್ವತಃ ಪ್ರಮಾಣ (ಜ್ಞಾನದ ಸಾಧನ) ವಾಗಿದ್ದಾನೆ; ಏಕೆಂದರೆ ಸಮಸ್ತ ಜ್ಞಾನವು ಪರಮಾತ್ಮನಿಂದಲೇ ಪ್ರಾಪ್ತವಾಗುತ್ತಿರುತ್ತದೆ. ಪರಮಾತ್ಮನು ಜ್ಞಾನದ ಸ್ರೋತನಾಗಿದ್ದಾನೆ. ಅಲ್ಲಿಂದಲೇ ಸಮಸ್ತ ಜ್ಞಾನವು ಪ್ರವಹಿಸುತ್ತದೆ.

೬೧ ಅ. ಪ್ರಮಾಣಗಳ ವಿಧಗಳು : ನ್ಯಾಯದರ್ಶನದಿಂದ ಪ್ರಮಾಣಗಳ ವರ್ಗೀಕರಣವನ್ನು ಮಾಡಿ ಅದರ ನಾಲ್ಕು ವಿಧಗಳನ್ನು ಹೇಳಲಾಗಿದೆ. ಅವು ಮುಂದಿನಂತಿವೆ.

೧. ಪ್ರತ್ಯಕ್ಷ ಪ್ರಮಾಣ : ಜ್ಞಾನೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನವು ಪ್ರತ್ಯಕ್ಷ ಪ್ರಮಾಣವಾಗಿದೆ.

೨. ಅನುಮಾನ (Inference) ಪ್ರಮಾಣ : ಇಲ್ಲಿ ‘ಅನುಮಾನ’ ಈ ಶಬ್ದದ ಅರ್ಥ ಮಾನಸಿಕ ಕಲ್ಪನೆ (Guess) ಆಗಿರದೇ ಅದು ಪ್ರತ್ಯಕ್ಷ ಅನುಭವಗಳ ಮೇಲೆ ಆಧರಿಸಿದ ದೃಢ ಸತ್ಯವಾಗಿದೆ, ಉದಾ. ದೂರದಿಂದ ಹೊಗೆಯನ್ನು ನೋಡಿ ಅಲ್ಲಿ ಅಗ್ನಿ ಇರುವುದೆಂಬ ಅನುಮಾನವು ಸತ್ಯವಾಗಿರುತ್ತದೆ.

೩. ಉಪಮಾನ ಪ್ರಮಾಣ : ಒಂದು ವೇಳೆ ಯಾವುದೇ ಅದೃಶ್ಯ (ಇಲ್ಲಿಯವರೆಗೆ ಎಂದಿಗೂ ನೋಡದಿರುವ) ವಸ್ತುವಿನ ಗುಣವನ್ನು ಇತರ ಮನುಷ್ಯನ ಮೂಲಕ ನೋಡಲಾಗಿರುತ್ತದೆ ಮತ್ತು ಹೇಳಲಾಗಿರುತ್ತದೆ. ಆ ವಸ್ತು ಎದುರಿಗೆ ಬಂದಾಗ ಅದರ ಹೆಸರಿನ ಯಾವ ಜ್ಞಾನವಾಗುತ್ತದೋ, ಅದರ ಸಾಧನ ಉಪಮಾನ ಪ್ರಮಾಣವಾಗಿದೆ.

೪. ಆಪ್ತ ಪ್ರಮಾಣ (ಶಬ್ದ-ಪ್ರಮಾಣ) : ಆಪ್ತ-ಪುರುಷಾ (ಸಾಕ್ಷಾತಕೃತ ಧರ್ಮಾ) ದ ಉಪದೇಶ (ಕಥನ, ಶಬ್ದ) ಆಪ್ತ-ಪ್ರಮಾಣ ಅಥವಾ ಶಬ್ದ-ಪ್ರಮಾಣವಾಗಿದೆ. ‘ಆಪ್ತ’ ಪುರುಷನು ಯಾವುದೇ ಪದಾರ್ಥವನ್ನು ಸಾಕ್ಷಾತ್ ಅಥವಾ ನೇರವಾಗಿ ಅನುಭವಿಸಿರಬಹುದು. ವೇದವು ಆಪ್ತಪ್ರಮಾಣವಾಗಿದೆ.’

(ಮುಂದುವರಿಯುವುದು)

_ (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು (ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)