|
(ಯುನೆಸ್ಕೋ ಎಂದರೆ ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಷನ್ – ಸಂಯುಕ್ತ ರಾಷ್ಟ್ರ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ)
ಪ್ಯಾರಿಸ (ಫ್ರಾನ್ಸ್) – ಮಕ್ಕಳು ಮನೆಯಲ್ಲಿ ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಅದೇ ಭಾಷೆಯಲ್ಲಿ ಅವರಿಗೆ ಶಿಕ್ಷಣ ನೀಡಿದರೆ, ಅವರು ಚೆನ್ನಾಗಿ ಕಲಿಯುತ್ತಾರೆ. ಒಂದು ವೇಳೆ ಮಕ್ಕಳಿಗೆ ಬೇರೆ ಭಾಷೆಯಲ್ಲಿ ಕಲಿಸಿದರೆ, ಅವರಲ್ಲಿ ಕೀಳರಿಮೆ ನಿರ್ಮಾಣವಾಗಬಹುದು ಮತ್ತು ಇದರಿಂದ ಕಲಿಯುವ ಸಾಮರ್ಥ್ಯದಲ್ಲಿ ವ್ಯತ್ಯಾಸ ಹೆಚ್ಚಾಗುತ್ತದೆ, ಎಂದು ‘ಯುನೆಸ್ಕೋ’ದ ಇತ್ತೀಚೆಗೆ ಪ್ರಕಟಿಸಿರುವ ‘ಭಾಷೆಗಳಿಗೆ ಸಂಬಂಧಿಸಿದ: ಬಹುಭಾಷಾ ಶಿಕ್ಷಣದ ಮೇಲಿನ ಜಾಗತಿಕ ಮಾರ್ಗದರ್ಶನ’ ವರದಿಯಲ್ಲಿ ದಾಖಲಿಸಲಾಗಿದೆ.
ವರದಿಯಲ್ಲಿ ನೀಡಲಾದ ತೀರ್ಮಾನಗಳ ಮಾಹಿತಿ
1. ಜಗತ್ತಿನಾದ್ಯಂತ ಶೇ. 40 ಮಕ್ಕಳು ಮತ್ತು ಯುವಕರಿಗೆ ಅವರ ಮಾತೃಭಾಷೆಯಲ್ಲಿ ಓದುವ ಸೌಲಭ್ಯವಿಲ್ಲ. ಪರಿಣಾಮವಾಗಿ ಮಕ್ಕಳು ಶಾಲೆಗೆ ಹೋಗುತ್ತಾರೆ; ಆದರೆ ಅವರಿಗೆ ಸರಳವಾದ ವಿಷಯವನ್ನು ಓದಲು ಸಾಧ್ಯವಾಗುವುದಿಲ್ಲ ಮತ್ತು ಸರಳ ಗಣಿತವನ್ನು ಸಹ ಬಿಡಿಸಲು ಸಾಧ್ಯವಾಗುವುದಿಲ್ಲ.
2. 2016ರಲ್ಲಿ 61 ಕೋಟಿ 70 ಲಕ್ಷ ಮಕ್ಕಳು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಕಲಿಯುತ್ತಿರಲಿಲ್ಲ. ಇವರಲ್ಲಿ ಮೂರನೇ ಎರಡರಷ್ಟು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗದ ಮೊದಲು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ 10 ವರ್ಷ ವಯಸ್ಸಿನ ಶೇ.57 ರಷ್ಟು ಮಕ್ಕಳಿಗೆ ಸರಳ ವಿಷಯಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಕೊರೊನಾ ಸಾಂಕ್ರಾಮಿಕ ರೋಗದ ನಂತರ ಈ ಸಂಖ್ಯೆ ಶೇ. 70 ವರೆಗೆ ಹೆಚ್ಚಾಗಿದೆ.
3. ಗುಜರಾತ್‌ನಲ್ಲಿ ಮಾತನಾಡುವ ವಾಗಡಿ ಭಾಷೆಯನ್ನು ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾತನಾಡಲಾಗುತ್ತದೆ. 2019ರಲ್ಲಿ ಇಲ್ಲಿನ ಶಿಕ್ಷಕರು ಮಕ್ಕಳಿಗೆ ಕೇವಲ ವಾಗಡಿ ಭಾಷೆಯಲ್ಲಿ ಕಲಿಸಲು ಪ್ರಾರಂಭಿಸಿದರು. ಕೆಲವು ದಿನಗಳ ನಂತರ ಮಕ್ಕಳ ಮೌಲ್ಯಮಾಪನ ಮಾಡಿದಾಗ, ಅವರ ಓದುವ ಕೌಶಲ್ಯವು ಮೊದಲಿನಗಿಂತ ತುಂಬಾ ಉತ್ತಮವಾಗಿದೆ ಎಂದು ಕಂಡುಬಂದಿತು. ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲೂ ಇದೇ ರೀತಿಯ ಫಲಿತಾಂಶಗಳು ಕಂಡುಬಂದಿವೆ. ಒಂದು ವೇಳೆ ಮಗುವಿಗೆ ಅದರ ಮಾತೃಭಾಷೆಯಲ್ಲಿ ಮೂಲಭೂತ ಶಿಕ್ಷಣ ನೀಡಿದರೆ, ಇತರ ಭಾಷೆಗಳನ್ನು ಕಲಿಯುವುದು ಸುಲಭವಾಗುತ್ತದೆ. ಇದರೊಂದಿಗೆ 6 ರಿಂದ 8 ವರ್ಷ ವಯಸ್ಸಿನ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಅಧಿಕೃತ ಭಾಷೆಯಲ್ಲಿ ಕಲಿಯುವ ಮಕ್ಕಳಿಗಿಂತ ಉತ್ತಮ ಸಾಧನೆ ಮಾಡುತ್ತಾರೆ.
ಭಾರತದ ‘ರಾಷ್ಟ್ರೀಯ ಶಿಕ್ಷಣ ನೀತಿ!’
ದೇಶದ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅಡಿಯಲ್ಲಿ ವಿದ್ಯಾರ್ಥಿಗಳು 3 ಭಾಷೆಗಳನ್ನು ಕಲಿಯಬೇಕಾಗುತ್ತದೆ; ಆದರೆ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸಲಾಗಿಲ್ಲ. ರಾಜ್ಯಗಳು ಮತ್ತು ಶಾಲೆಗಳಿಗೆ ‘ಯಾವ 3 ಭಾಷೆಗಳನ್ನು ಕಲಿಸಬೇಕು?’ ಎಂದು ನಿರ್ಧರಿಸುವ ಸ್ವಾತಂತ್ರ್ಯವಿದೆ.
ಪ್ರಾಥಮಿಕ ತರಗತಿಗಳಲ್ಲಿ (ಇಯತ್ತೆ 1 ರಿಂದ 5) ಶಿಕ್ಷಣವನ್ನು ಮಾತೃಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಅದೇ ಸಮಯದಲ್ಲಿ ಮಧ್ಯಮ ತರಗತಿಗಳಲ್ಲಿ (6 ರಿಂದ 10ನೇ ತರಗತಿ) 3 ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿದೆ. ಹಿಂದಿ ಇಲ್ಲದ ರಾಜ್ಯಗಳಲ್ಲಿ ಇಂಗ್ಲಿಷ್ ಅಥವಾ ಆಧುನಿಕ ಭಾರತೀಯ ಭಾಷೆ ಇರುತ್ತದೆ. ಶಾಲೆಯ ಇಚ್ಛೆಯಿದ್ದರೆ ಮಾಧ್ಯಮಿಕ ವಿಭಾಗದಲ್ಲಿ ಅಂದರೆ 11 ಮತ್ತು 12ನೇ ತರಗತಿಗಳಲ್ಲಿ ವಿದೇಶಿ ಭಾಷೆಯ ಆಯ್ಕೆಯನ್ನು ಸಹ ನೀಡಬಹುದಾಗಿದೆ.
ಸಂಪಾದಕೀಯ ನಿಲುವುಭಾರತದ ಹಿಂದೂಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳುವ ದಿನವೇ ಸುದಿನ! ಹಿಂದೂಗಳು ಆಂಗ್ಲರ ಗುಲಾಮಗಿರಿಯನ್ನು ಬಿಟ್ಟುಕೊಟ್ಟರೆ ಭಾರತದಲ್ಲಿ ಪುನಃ ನಾಲಂದಾ ಮತ್ತು ತಕ್ಷಶಿಲೆಯಂತಹ ಗುಣಮಟ್ಟದ ವಿಶ್ವವಿದ್ಯಾಲಯಗಳು ನಿರ್ಮಾಣವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ! |