ಮೃತ್ಯುವಿನ ನಂತರ ಕೆಲವರ ಮುಖ ಅಥವಾ ಶರೀರ ತಿಳಿಹಳದಿ ಬಣ್ಣದ್ದಾಗಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಮೃತ್ಯುವಿನ ನಂತರ ಕೆಲವರ ಮುಖ ಅಥವಾ ಶರೀರ ತಿಳಿಹಳದಿ ಬಣ್ಣದ್ದಾಗಿ ಕಾಣಿಸುವುದರ ಹಿಂದಿನ ಕಾರ್ಯಕಾರಣಭಾವ

ಕು. ಮಧುರಾ ಭೋಸಲೆ

‘ಮನುಷ್ಯನು ಜೀವನದಲ್ಲಿ ತನ್ನ ಪ್ರಾರಬ್ಧ ಭೋಗಗಳನ್ನು ಭೋಗಿಸುತ್ತಿರುತ್ತಾನೆ. ಯಾವಾಗ ಅವನ ಪ್ರಾರಬ್ಧ ಭೋಗಗಳು ಮುಗಿಯುತ್ತವೆಯೋ, ಆಗ ಅವನಿಗೆ ಮೃತ್ಯು ಬರುತ್ತದೆ. ಪ್ರಾರಬ್ಧದ ಭೋಗಗಳನ್ನು ಭೋಗಿಸಲು ವ್ಯಕ್ತಿಗೆ ಊರ್ಜೆಯ ಆವಶ್ಯಕತೆ ಇರುತ್ತದೆ. ಒಂದು ವೇಳೆ ಅವನು ಸಾತ್ವಿಕ ಜೀವವಾಗಿದ್ದು ಸಾಧನೆಯನ್ನು ಮಾಡುತ್ತಿದ್ದರೆ, ಪ್ರಾರಬ್ಧ ಭೋಗಗಳನ್ನು ಭೋಗಿಸಲು ಅವನ ಸಾಧನೆ ಖರ್ಚಾಗುತ್ತಿರುತ್ತದೆ. ಯಾವಾಗ ಸಾತ್ವಿಕ ಜೀವಗಳ ಮೃತ್ಯುವಾಗುತ್ತದೆಯೋ, ಆಗ ಪ್ರಾರಬ್ಧ ಭೋಗಗಳನ್ನು ಭೋಗಿಸಲು ಖರ್ಚಾಗುವ ಅವರಲ್ಲಿನ ಚೈತನ್ಯ ಉಳಿಯುತ್ತದೆ. ಹಳದಿ ಬಣ್ಣವು ಚೈತನ್ಯದ ಪ್ರತೀಕವಾಗಿದೆ. ಸಾತ್ವಿಕ ಜೀವಗಳ ಮೃತ್ಯುವಿನ ನಂತರ ವಾತಾವರಣದಲ್ಲಿನ ಕೆಲವು ಅಘೋರಿ ಕೆಟ್ಟ ಶಕ್ತಿಗಳು ತಂತ್ರವಿದ್ಯೆಯ ಸಹಾಯದಿಂದ ಸಾತ್ವಿಕ ಜೀವಗಳ ಸ್ಥೂಲದೇಹ ಮತ್ತು ಲಿಂಗದೇಹದ ಮೇಲೆ ನಿಯಂತ್ರಣವನ್ನು ಸಾಧಿಸಲು ಪ್ರಯತ್ನಿಸುತ್ತವೆ. ಸಾತ್ವಿಕ ಜೀವದ ಪಾರ್ಥಿವ ದೇಹವನ್ನು ಮತ್ತು ಅದರ ಲಿಂಗದೇಹವನ್ನು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಲು ಸಾತ್ವಿಕ ಜೀವದಲ್ಲಿನ ಚೈತನ್ಯವು ತೇಜತತ್ವದ ಸ್ತರದಲ್ಲಿ ಅದರ ಪಾರ್ಥಿವ ದೇಹದ ಮೇಲೆ ಅಥವಾ ಮುಖದ ಮೇಲೆ ಹರಡಿ ದೇಹದ ಸುತ್ತಲೂ ಚೈತನ್ಯದಾಯಕ ಸಂರಕ್ಷಣ ಕವಚವನ್ನು ನಿರ್ಮಾಣ ಮಾಡುತ್ತದೆ. ಆದುದರಿಂದ ಮೃತ್ಯುವಿನ ನಂತರ ಕೆಲವು ಜನರ ಮುಖ ಅಥವಾ ಶರೀರ ತಿಳಿಹಳದಿ ಬಣ್ಣದ್ದಾಗಿ ಕಾಣಿಸುತ್ತದೆ. ಈ ಚೈತನ್ಯವು ಸಗುಣ-ನಿರ್ಗುಣ ಸ್ತರದಲ್ಲಿನದಾಗಿರುವುದರಿಂದ ಅದು ದೃಶ್ಯ ಸ್ವರೂಪದಲ್ಲಿ ತಿಳಿಹಳದಿ ಬಣ್ಣದ ರೂಪದಲ್ಲಿ ಕಾಣಿಸುತ್ತದೆ. ಯಾವಾಗ ಸಾಧಾರಣ ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದ ವ್ಯಕ್ತಿಗಳ ಮೃತ್ಯುವಾಗುತ್ತದೆಯೋ, ಆಗ ಅವರ ಮುಖ ಅಥವಾ ಸಂಪೂರ್ಣ ಪಾರ್ಥಿವ ದೇಹವು ತಿಳಿಹಳದಿ ಬಣ್ಣದ್ದಾಗಿ ಕಾಣಿಸುತ್ತದೆ.’

ಮೃತ್ಯುವಿನ ನಂತರ ಕೆಲವು ಜನರ ಮುಖದ ಮೇಲೆ ಮಂದಹಾಸ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ

‘ಜನ್ಮ ಮತ್ತು ಮೃತ್ಯು ಇವು ಸ್ಥೂಲದೇಹಕ್ಕೆ ಸಂಬಂಧಿಸಿದ್ದು ಈ ಎರಡೂ ಅವಸ್ಥೆಗಳು ಚಿರಕಾಲ ಉಳಿಯುವುದಿಲ್ಲ. ‘ಯಾವನ ಜನ್ಮವಾಗುತ್ತದೆಯೋ, ಅವನ ಮೃತ್ಯು ಒಂದಿಲ್ಲೊಂದು ದಿನ ನಿಶ್ಚಿತವಾಗಿ ಆಗಿಯೇ ಆಗುತ್ತದೆ’, ಈ ಸತ್ಯವು ಸಾಧನೆಯನ್ನು ಮಾಡುವ ಜೀವಗಳ ಅಂತರ್ಮನಸ್ಸಿನಲ್ಲಿ ಮೂಡಿರುತ್ತದೆ. ಕೇವಲ ಸಾಧನೆ ಮತ್ತು ಭಗವಂತನ ಕೃಪೆ ಇವು ನಮ್ಮೊಂದಿಗೆ ಮೃತ್ಯುವಿನ ನಂತರವೂ ಬರುತ್ತವೆ. ಆದುದರಿಂದ ಸಾಧಕನು ಮೃತ್ಯುವಿನ ಭಯವನ್ನಿಟ್ಟುಕೊಳ್ಳದೇ ಭಗವಂತನ ಮೇಲೆ ಶ್ರದ್ಧೆಯನ್ನಿಟ್ಟು ಸಾಧನೆಯನ್ನು ಮಾಡುತ್ತಿರುತ್ತಾನೆ. ಇದರಿಂದ ಸಾಧಕನ ಮೃತ್ಯು ಬಂದಾಗ, ಅವನು ಭಗವಂತನ ಮೇಲೆ ಶ್ರದ್ಧೆಯನ್ನಿಟ್ಟು ನಗುಮುಖದಿಂದ ಮೃತ್ಯುವನ್ನು ಎದುರಿಸುತ್ತಾನೆ. ಜೀವನವಿಡಿ ಮಾಡಿದ ಸಾಧನೆಯಿಂದ ಸಾಧಕನ ಚಿತ್ತದಲ್ಲಿ ಸಾಧನೆಯ ದೃಢ ಸಂಸ್ಕಾರವಾಗಿರುತ್ತದೆ. ಅವನ ಆಂತರಿಕ ಸಾಧನೆಯಿಂದ ಅವನು ಮೃತ್ಯುವನ್ನೂ ಈಶ್ವರೇಚ್ಛೆಯೆಂದು ತಿಳಿದು ಸಹಜವಾಗಿ ಸ್ವೀಕರಿಸುತ್ತಾನೆ. ಸಾಧಕನು ತನ್ನ ಮೃತ್ಯುವಿನ ಸಮಯದಲ್ಲಿಯೂ ಭಗವಂತನ ಅಖಂಡ ಅನುಸಂಧಾನದಲ್ಲಿರುವುದರಿಂದ ಅವನು ತನ್ನ ಮೃತ್ಯು ಸಮಯದಲ್ಲಿಯೂ ಆನಂದವನ್ನೇ ಅನುಭವಿಸುತ್ತಿರುತ್ತಾನೆ. ಆದುದರಿಂದ ಯಾವಾಗ ಕೆಲವರು ಆನಂದದಿಂದ ಮೃತ್ಯುವನ್ನು ಎದುರಿಸುತ್ತಿರುತ್ತಾರೆಯೋ, ಆಗ ಅವರ ಮನಸ್ಸಿನಲ್ಲಿನ ಆನಂದವು ಅವರ ಮುಖದ ಮೇಲೆ ಮಂದಹಾಸದ ರೂಪದಲ್ಲಿ ವ್ಯಕ್ತವಾಗುತ್ತದೆ. ಆದುದರಿಂದ ಮೃತ್ಯುವಿನ ನಂತರ ಕೆಲವು ಜನರ ಮುಖದ ಮೇಲೆ ಮಂದಹಾಸವು ಕಾಣಿಸುತ್ತದೆ. ಆದುದರಿಂದ ಸಾಧಕನ ಪಾರ್ಥಿವ ದೇಹದ ಅಂತಿಮ ದರ್ಶನ ಪಡೆಯುವ ಸಾಧಕರಿಗೂ ಪಾರ್ಥಿವ ದೇಹವನ್ನು ನೋಡಿ ಆನಂದದ ಅನುಭೂತಿ ಬರುತ್ತದೆ. ಈ ರೀತಿ ಮೃತ್ಯುವಿನ ನಂತರ ಕೆಲವರ ಮುಖ ಅಥವಾ ಶರೀರ ತಿಳಿಹಳದಿ ಬಣ್ಣದ್ದಾಗಿ ಕಾಣಿಸುವುದು ಮತ್ತು ಕೆಲವರ ಮುಖದ ಮೇಲೆ ಮಂದಹಾಸ ಕಾಣಿಸುವುದು, ಈ ಎರಡೂ ಘಟನೆಗಳಿಂದ ಮೃತ ವ್ಯಕ್ತಿಯ ಲಿಂಗದೇಹ ಸಾತ್ವಿಕ ಮತ್ತು ಚೈತನ್ಯಮಯವಾಗಿರುವ ದೈವೀ ಅನುಭವ ಬರುತ್ತದೆ.’

ಮೃತ್ಯುವಿನ ನಂತರ ಪಾರ್ಥಿವ ಶರೀರದ ಮೇಲೆ ತಿಳಿಹಳದಿ ಬಣ್ಣ ಬರುವುದು ಮತ್ತು ಮುಖದ ಮೇಲೆ ಮಂದಹಾಸ ಕಾಣಿಸುವುದು ಇವುಗಳಲ್ಲಿನ ವ್ಯತ್ಯಾಸ !

ತಾತ್ಪರ್ಯ : ಇದರಿಂದ ‘ಜೀವನವಿಡಿ ಸಾಧನೆಯನ್ನು ಮಾಡಿದುದರಿಂದ ಜೀವನದ ಕೊನೆಯಲ್ಲಿ ಮೃತ್ಯುವಿನಂತಹ ಘಟನೆಯೂ ಎಷ್ಟು ಆನಂದದಾಯಕವಾಗುತ್ತದೆ ಮತ್ತು ವರ್ತಮಾನಕಾಲದಲ್ಲಿದ್ದು ಮನಃಪೂರ್ವಕ ಮತ್ತು ಭಾವಪೂರ್ಣ ಸಾಧನೆಯನ್ನು ಮಾಡುವುದು ಎಷ್ಟು ಮಹತ್ವದ್ದಾಗಿದೆ’, ಎಂಬುದು ನಮ್ಮ ಗಮನಕ್ಕೆ ಬರುತ್ತದೆ.

ಕೃತಜ್ಞತೆಗಳು : ಭಗವಂತನ ಕೃಪೆಯಿಂದ ‘ಮೃತ್ಯುವಿನ ಸಮಯದಲ್ಲಿ ದೇಹಕ್ಕೆ ಸಂಬಂಧಿಸಿದ ದೈವೀ ಅನುಭವ ದೊರಕುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವವು ಗಮನಕ್ಕೆ ಬಂದಿತು’, ಇದಕ್ಕಾಗಿ ಭಗವಂತನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಕು. ಮಧುರಾ ಭೋಸಲೆ (ಸೂಕ್ಷದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೬.೨೦೨೧)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ: ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.