ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು’. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ.

ದೈವೀ ಬಾಲಕರನ್ನು ಆಂಗ್ಲ ಮಾಧ್ಯಮ ಅಥವಾ ‘ಕಾನ್ವೆಂಟ್’ ಶಾಲೆಗೆ ಸೇರಿಸದೇ ಅವರನ್ನು ಸಂತರು ನಡೆಸುತ್ತಿರುವ ಗುರುಕುಲಕ್ಕೆ ಕಳುಹಿಸಿದರೆ ಅವರಲ್ಲಿನ ದಿವ್ಯತ್ವವು ಹೆಚ್ಚುವುದು !

ಪೂ. ತನುಜಾ ಠಾಕೂರ

೧. ಓರ್ವ ಸಾಧಕನ ಮನೆಯಲ್ಲಿ ದೈವೀ ಬಾಲಕನಿರುವುದು ತಿಳಿಯುವುದು, ಅವನಿಗೆ ‘ದತ್ತ ಮತ್ತು ಶ್ರೀಕೃಷ್ಣ’ ಇವರ ನಾಮಜಪವನ್ನು ಮಾಡಲು ಹೇಳಿದ ನಂತರ ಅವನು ನಿಯಮಿತವಾಗಿ ನಾಮಜಪವನ್ನು ಮಾಡುವುದು

‘೨೦೦೮ ರಲ್ಲಿ ನಾನು ನಮ್ಮ ಊರಿನಲ್ಲಿದ್ದಾಗ ‘ಓರ್ವ ಸಾಧಕನ ಮನೆಯಲ್ಲಿ ದೈವೀ ಬಾಲಕನಿದ್ದಾನೆ’, ಎಂದು ನನಗೆ ತಿಳಿಯಿತು. ಅವನು ಉಚ್ಚ ಸ್ವರ್ಗಲೋಕದಲ್ಲಿನ ದೈವೀ ಬಾಲಕನಾಗಿದ್ದು ನಿಯಮಿತವಾಗಿ ನಾಮಜಪವನ್ನೂ ಮಾಡುತ್ತಿದ್ದನು. ಅವನ ಮೂರನೇ ವರ್ಷದಲ್ಲಿ ಅವನು ‘ಅ, ಆ, ಇ ಯಿಂದ ವಿದ್ಯಾಭ್ಯಾಸವನ್ನು ಮಾಡದೇ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ |’ ಹೀಗೆ ಬರೆಯಲು ಆರಂಭಿಸಿದ್ದನು. ಅವನು ೪ ವರ್ಷದವನಿದ್ದಾಗ ನಾನು ಅವನಿಗೆ ಒಂದು ಗಂಟೆ ಗುರುದೇವ ದತ್ತ ನಾಮಜಪ ಮತ್ತು ಉಳಿದ ಸಮಯದಲ್ಲಿ `ಓಂ ಓಂ ನಮೋ ಭಗವತೆ ವಾಸುದೇವಾಯ ಓಂ ಓಂ |’ ಈ ನಾಮಜಪವನ್ನು ಮಾಡಲು ಹೇಳಿದ್ದೆನು. ಆ ಸಮಯದಲ್ಲಿ ನಾನು ಅವನಿಗೆ, “ನಿನಗೆ ಯಾವ ನಾಮಜಪವನ್ನು ಮಾಡಲು ಹೇಳಿದ್ದೇನೆ, ಅದು ತಿಳಿಯಿತೇ ?’’ ಎಂದು ಕೇಳಿದೆನು. ಆಗ ಅವನು ತಕ್ಷಣ ಈ ಎರಡು ನಾಮಜಪಗಳನ್ನು ಹೇಳಿದನು. ಅದನ್ನು ಕೇಳಿ ಅಲ್ಲಿನ ಎಲ್ಲ ಜನರಿಗೆ ಆಶ್ಚರ್ಯವಾಯಿತು.

೨. ಬಾಲಕನ ತಂದೆಗೆ ಅವನನ್ನು ಆಂಗ್ಲ ಶಾಲೆಗೆ ಸೇರಿಸಬೇಡಿ ಹಿಂದಿ ಶಾಲೆಗೆ ಸೇರಿಸಿ ಎಂದು ಹೇಳುವುದು; ಆದರೆ ಅವನ ತಂದೆ ಅವನನ್ನು ಆಂಗ್ಲ ಮಾಧ್ಯಮದ ಶಾಲೆಗೆ ಸೇರಿಸಿದುದರಿಂದ ಈಗ ಅವನ ಮೇಲೆ ತುಂಬಾ ತೊಂದರೆದಾಯಕ ಶಕ್ತಿಯ ಆವರಣ ಬರುವುದು

ನಾನು ಅವನ ತಂದೆಗೆ, “ಇವನಿಗೆ ಕ್ರೈಸ್ತರು ನಡೆಸುತ್ತಿರುವ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಬದಲು ಹಿಂದಿ ಭಾಷೆಯ ಶಾಲೆಯಲ್ಲಿ ಕಲಿಸಲು ಕಳುಹಿಸಿರಿ,’’ ಎಂದು ಹೇಳಿದೆನು. ಅವನ ತಂದೆಗೆ ಈ ಮಾತು ಇಷ್ಟವಾಗಲಿಲ್ಲ. ಅವರು ಆ ಬಾಲಕನನ್ನು ಅಲ್ಲಿನ ಪ್ರಸಿದ್ಧ ಕ್ರೈಸ್ತ ಮಿಶನರಿಗಳ ‘ಕಾನ್ವೆಂಟ್’ ಶಾಲೆಗೆ ಸೇರಿಸಿದರು. ಮುಂದೆ ಆ ಬಾಲಕನು ‘ಆನ್‌ಲೈನ್’ ನಾಮಜಪ ಸತ್ಸಂಗದಲ್ಲಿಯೂ ಪಾಲ್ಗೊಳ್ಳುವುದನ್ನು ನಿಲ್ಲಿಸಿದನು. ಈಗ ಆ ಬಾಲಕನು ೧೬ ವರ್ಷದವನಾಗಿದ್ದಾನೆ; ಆದರೆ ಅವನ ಮೇಲೆ ತುಂಬಾ ತೊಂದರೆದಾಯಕ ಆವರಣವು ಬಂದಿದೆ. ಕೆಲವು ತಿಂಗಳ ಹಿಂದೆ ನಾನು ಅವರ ಮನೆಗೆ ಹೋಗಿದ್ದೆನು. ಕೆಟ್ಟ ಶಕ್ತಿಗಳಿಂದ ಅವನ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ನೋಡಿ ನನಗೆ ತುಂಬಾ ಹಾಳೆನಿಸಿತು.

೩. ತಮೋಗುಣಗಳಿಂದ ತುಂಬಿದ ಮೆಕಾಲೆಯ ಶಿಕ್ಷಣಪದ್ಧತಿಯಿಂದ ಮಕ್ಕಳ ಮೇಲೆ ಆವರಣ ಬರುವುದರಿಂದ, ಅವರನ್ನು ಗುರುಕುಲಕ್ಕೆ ಕಳುಹಿಸಿದರೆ ಅವರಲ್ಲಿನ ದಿವ್ಯತ್ವವು ಹೆಚ್ಚಾಗಿ ಹೆತ್ತವರ ಕಲ್ಯಾಣವಾಗುವುದು !

‘ತಮೋಗುಣಗಳಿಂದ ತುಂಬಿದ ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಮಕ್ಕಳ ಮೇಲೆ ಆವರಣ ಬರುತ್ತದೆ. ಇಂತಹ ದೈವೀ ಬಾಲಕರನ್ನು ನಾವು ಕ್ರೈಸ್ತ ಮಿಶನರಿಗಳ ಶಾಲೆಗೆ ಸೇರಿಸಿದರೆ, ಅವರ ಮೇಲೆ ಹೆಚ್ಚು ಪ್ರಮಾಣದಲ್ಲಿ ತಮೋಗುಣದ ಆವರಣ ಬರುವುದು. ತಮ್ಮ ಮನೆಯಲ್ಲಿ ದೈವೀ ಬಾಲಕರಿದ್ದರೆ, ಅವರನ್ನು ಸಂತರು ನಡೆಸುತ್ತಿರುವ ಯಾವುದಾದರೊಂದು ಗುರುಕುಲಕ್ಕೆ ಕಳುಹಿಸಿರಿ. ಅದರಿಂದ ಅವರಲ್ಲಿನ ದಿವ್ಯತ್ವವು ಹೆಚ್ಚಾಗುವುದು ಮತ್ತು ಪಾಲಕರಿಗೂ ಒಳ್ಳೆಯದಾಗುವುದು !’

– ಪೂ. ತನುಜಾ ಠಾಕೂರ, ಸಂಸ್ಥಾಪಕರು, ವೈದಿಕ ಉಪಾಸನಾಪೀಠ. (೩೦.೧೦.೨೦೨೧)

ಪ್ರೇಮಭಾವ, ಆಧ್ಯಾತ್ಮಿಕ ಪ್ರೌಢಿಮೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಭಾವವಿರುವ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಶ್ರೀನಿವಾಸ ರವೀಂದ್ರ ದೇಶಪಾಂಡೆ (೧೦ ವರ್ಷ) !

ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿನ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಶ್ರೀನಿವಾಸ ರವೀಂದ್ರ ದೇಶಪಾಂಡೆ (ವಯಸ್ಸು ೧೦ ವರ್ಷ) ಇವನ ಕುರಿತು ಅವನ ಅಜ್ಜಿ ಶ್ರೀಮತಿ ಮೇಘನಾ ವಾಘಮಾರೆ (ಶ್ರೀನಿವಾಸನ ತಾಯಿಯ ತಾಯಿ) ಇವರಿಗೆ ಶ್ರೀನಿವಾಸನೊಂದಿಗೆ ಮಾತನಾಡುವಾಗ ಗಮನಕ್ಕೆ ಬಂದ ಅವನ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡಿದ್ದೇವೆ.

ಶ್ರೀನಿವಾಸನು ‘ಯವತಮಾಳದಲ್ಲಿನ ನನ್ನ ಮನೆಯು ನಿನ್ನದೇ ಮನೆ’, ಎಂದು ಅಜ್ಜಿಗೆ ಹೇಳುವುದು

‘ಶ್ರೀನಿವಾಸನು ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯಕ್ಕೆ ಬಂದನಂತರ ಸುಮಾರು ಒಂದು ತಿಂಗಳ ನಂತರ ನನ್ನ ಕೋಣೆಯಲ್ಲಿರಲು ಬಂದನು. ಅವನು ಕೋಣೆಯಲ್ಲಿದ್ದಾಗ ಕಾರಣಾಂತರದಿಂದ ನಾನು ನನ್ನ ಸಾಹಿತ್ಯಗಳಿರುವ ಕಪಾಟನ್ನು ತೆರೆದೆನು. ಅದರಲ್ಲಿನ ಸಾಹಿತ್ಯಗಳನ್ನು ನೋಡಿ ಅವನ ಮತ್ತು ನನ್ನ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

ಕು. ಶ್ರೀನಿವಾಸ : ಅಜ್ಜಿ, ನಿನ್ನ ಬಳಿ ಇಷ್ಟೊಂದು ಸಾಹಿತ್ಯವಿದೆಯೇ ?

ಶ್ರೀಮತಿ ಮೇಘನಾ ವಾಘಮಾರೆ (ಅಜ್ಜಿ)(ನಾನು ಅವನಿಗೆ ತಮಾಷೆ ಯಿಂದ) : ಅರೆ, ಇಷ್ಟೇ ಇದೆ ಮತ್ತು ಎಲ್ಲ ವಸ್ತುಗಳೂ ಇಲ್ಲಿಯೇ ಇವೆ. ಅಜ್ಜಿಗೆ ಏಲ್ಲಿದೆ ಮನೆ ? ಗುರುಗಳ ಮನೆಯೇ ಅಜ್ಜಿಯ ಮನೆಯಾಗಿದೆ, ಎಂದು ಹೇಳಿದೆನು.

ಕು. ಶ್ರೀನಿವಾಸ (ಸಹಜವಾಗಿ) : ಅಜ್ಜಿ, ಯವತಮಾಳದಲ್ಲಿ ನಮ್ಮ ಮನೆಯಿದೆ ಅಲ್ಲವೇ ! ನನ್ನ ಮನೆಯು ನಿನ್ನದೇ ಆಗಿದೆ.

(ಆಗ ನನಗೆ ಶ್ರೀನಿವಾಸನಲ್ಲಿನ ಪ್ರೇಮಭಾವದ ಅರಿವಾಯಿತು.)

ಶ್ರೀನಿವಾಸನು ಅಜ್ಜಿಗೆ ‘ನಮಗೆ ಇಷ್ಟೊಂದು ಶ್ರೇಷ್ಠರಾದ ಪರಾತ್ಪರ ಗುರುಗಳು (ಪರಾತ್ಪರ ಗುರು ಡಾ. ಆಠವಲೆ) ಸಿಕ್ಕಿದ್ದಾರೆ, ಅಂದರೆ ನಾವು ಬಡವರಲ್ಲ ಶ್ರೀಮಂತರೇ ಆಗಿದ್ದೇವೆ’, ಎಂದು ಹೇಳುವುದು

ಒಮ್ಮೆ ನಾನು ಕೋಣೆಯಲ್ಲಿ ನನ್ನ ಸೀರೆಗಳನ್ನು ಇಸ್ತ್ರಿಮಾಡುತ್ತಿದ್ದೆನು. ಆ ಸಮಯದಲ್ಲಿ ನಮ್ಮಲ್ಲಾದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

ಕು. ಶ್ರೀನಿವಾಸ : ಅಜ್ಜಿ, ನಿನ್ನ ಹತ್ತಿರ ಇಸ್ತ್ರಿನು ಇದೆಯಾ ? ನಿನ್ನದೇ ಅಲ್ಲವೇ ?

ಶ್ರೀಮತಿ ಮೇಘನಾ ವಾಘಮಾರೆ (ಅಜ್ಜಿ) : ಇಲ್ಲ ಮಗು, ಇದು ಆಶ್ರಮದ ಇಸ್ತ್ರಿ ಇದೆ. ನಿನ್ನ ಅಜ್ಜಿಯದ್ದು ಎಂದು ಏನೂ ಇಲ್ಲ. (ಅದಕ್ಕೆ ಅವನು ಸುಮ್ಮನೆ ಕುಳಿತುಕೊಂಡನು.) (ನಾನು ಅವನಿಗೆ ತಮಾಷೆಯಿಂದ) ಅರೆ, ನಿನ್ನ ಅಜ್ಜಿಯು ಬಡವಳಿದ್ದಾಳೆ.

ಕು. ಶ್ರೀನಿವಾಸ (ಎರಡು ನಿಮಿಷ ಸುಮ್ಮನಿದ್ದು) : ಅಜ್ಜಿ, ಸಮಾಜದಲ್ಲಿನ ಜನರು ಬಡವರಿದ್ದಾರೆ. ನಾವು ಹೇಗೆ ಬಡವರು ? ನಾವು ತುಂಬಾ ಶ್ರೀಮಂತರಿದ್ದೇವೆ.

ಶ್ರೀಮತಿ ಮೇಘನಾ ವಾಘಮಾರೆ (ಅಜ್ಜಿ) : ಅದು ಹೇಗೆ ?

ಕು. ಶ್ರೀನಿವಾಸ : ನಮಗೆ ಇಷ್ಟೊಂದು ಶ್ರೇಷ್ಠರಾದ ಪರಾತ್ಪರ ಗುರು ಡಾಕ್ಟರರು ಸಿಕ್ಕಿದ್ದಾಗ, ನಾವು ಶ್ರೀಮಂತರೇ ಆಗಿದ್ದೇವಲ್ಲವೇ ?

ಆಗ ಶ್ರೀನಿವಾಸನಲ್ಲಿನ ‘ಆಧ್ಯಾತ್ಮಿಕ ಪ್ರೌಢಿಮೆ ಮತ್ತು ಪರಾತ್ಪರ ಗುರುದೇವರ ಬಗ್ಗೆ ಇರುವ ಭಾವ’ ಈ ಗುಣಗಳ ಬಗ್ಗೆ ನನಗೆ ವಿಸ್ಮಯವೆನಿಸಿತು.

– ಶ್ರೀಮತಿ ಮೇಘನಾ ವಾಘಮಾರೆ (ಶ್ರೀನಿವಾಸನ ತಾಯಿಯ ತಾಯಿ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೧೦.೨೦೨೧)