ಧನತ್ಯಾಗದ ಮೂಲಕ ತಮ್ಮನ್ನು ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಧಕರ ಬಗ್ಗೆ ಪ್ರೇಮಭಾವವಿರುವ ದೆಹಲಿಯ ಸಾಧಕ ದಂಪತಿ ಶ್ರೀ. ಸಂಜೀವ ಕುಮಾರ (೭೦ ವರ್ಷ) ಮತ್ತು ಸೌ. ಮಾಲಾ ಕುಮಾರ (೬೭ ವರ್ಷ) ಸನಾತನದ ೧೧೫ ಮತ್ತು ೧೧೬ ನೆಯ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಆನಂದದಾಯಕ ಘೋಷಣೆ !

ದೆಹಲಿ –  ತ್ಯಾಗ ವೃತ್ತಿ ಮತ್ತು ಸತತ ಕೃತಜ್ಞತಾಭಾವದಲ್ಲಿರುವ ದೆಹಲಿಯ ಶ್ರೀ. ಸಂಜೀವ ಕುಮಾರ (೭೦ ವರ್ಷ) ಇವರು ಸನಾತನದ ೧೧೫ ನೇ ಸಮಷ್ಟಿ ಸಂತಪದವಿಯಲ್ಲಿ ಮತ್ತು ಸೇವಾಭಾವ ವೃತ್ತಿ ಹಾಗೂ ಸತತವಾಗಿ ಆನಂದಾವಸ್ಥೆಯಲ್ಲಿರುವ ಅವರ ಪತ್ನಿ ಸೌ. ಮಾಲಾ ಕುಮಾರ (೬೭ ವರ್ಷ) ಇವರು ಸನಾತನದ ೧೧೬ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರೆಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ೨೩ ಡಿಸೆಂಬರ್ ೨೦೨೧ ರಂದು ಇಲ್ಲಿ ಆಯೋಜಿಸಲಾದ ಒಂದು ಸತ್ಸಂಗದಲ್ಲಿ ಘೋಷಣೆ ಮಾಡಿದರು.

ಸದ್ಗುರು ಡಾ. ಪಿಂಗಳೆ ಇವರು ಪೂ. ಸಂಜೀವ ಕುಮಾರ ಇವರಿಗೆ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಮಂಜುಲಾ ಹರಿಶ ಕಪೂರ ಇವರು ಪೂ. (ಸೌ.) ಮಾಲಾ ಕುಮಾರ ಇವರಿಗೆ ಪುಷ್ಪಹಾರವನ್ನು ಹಾಕಿ ಸನ್ಮಾನಿಸಿದರು.

ಸದ್ಗುರು ಡಾ. ಪಿಂಗಳೆ ಇವರು ಈ ಸಂತದಂಪತಿಗಳಿಗೆ ಉಡುಗೊರೆಯನ್ನು ನೀಡಿದರು. ಈ ಮಂಗಲಪ್ರಸಂಗದಲ್ಲಿ ಪೂ. (ಸೌ.) ಮಾಲಾ ಮತ್ತು ಪೂ. ಸಂಜೀವ ಕುಮಾರ ಇವರ ಹಿರಿಯ ಮಗಳಾದ ಅನನ್ಯಾ ಕುಮಾರ ಇವರು ಉಪಸ್ಥಿತರಿದ್ದರು. ಅವರ ಕಿರಿಯ ಮಗಳು ಸೌ. ಆನಂದಿತಾ ದಾಸಗುಪ್ತಾ ಇವರು ಗಣಕೀಯ ತಂತ್ರಾಂಶದ ಮಾಧ್ಯಮದಿಂದ ಉಪಸ್ಥಿತರಿದ್ದರು.