ಸಹಜಭಾವದಲ್ಲಿರುವ ಇತರರಿಗೆ ಸಹಾಯ ಮಾಡುವ ಮತ್ತು ಸಂತರು ಹಾಗೂ ಗುರುಗಳ ಬಗ್ಗೆ ವಾತ್ಸಲ್ಯವನ್ನು ಹೊಂದಿರುವ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ)

ಪೂ. ಭಾರ್ಗವರಾಮ ಪ್ರಭು

೧. ತನಗಿಂತ ಹಿರಿಯ ಬಾಲ ಸಾಧಕರೊಂದಿಗೆ ಸ್ಪರ್ಧಿಸಿದಾಗ, ಅವರು ಅದರಲ್ಲಿ ಸೋಲುವುದು ಮತ್ತು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ !

‘ಒಮ್ಮೆ ಪೂ. ಭಾರ್ಗವರಾಮ ಮತ್ತು ಮಂಗಳೂರಿನ ಕು. ಚರಣದಾಸ ಗೌಡ (೮ ವರ್ಷ, ಶೇ. ೫೬ ರಷ್ಟು ಆಧ್ಯಾತ್ಮಿಕ ಮಟ್ಟ) ಇಬ್ಬರೂ ಸೈಕಲ್ ನಡೆಸುವ  ಸ್ಪರ್ಧೆ ನಡೆಸಿದರು. ಆ ಸಮಯದಲ್ಲಿ ಪೂ. ಭಾರ್ಗವರಾಮ ಹಿಂದೆ ಉಳಿದರು. ಆಗ ಪೂ. ಭಾರ್ಗವರಾಮ ಅವರು ಚರಣದಾಸನಿಗೆ ಹೇಳಿದರು, “ನಾನು ದೊಡ್ಡವನಾದ ನಂತರ, ನಾನು ಹೆಚ್ಚು ವೇಗದಲ್ಲಿ ಸೈಕಲ್ ಓಡಿಸುವುದನ್ನು ಕಲಿಯುತ್ತೇನೆ. ಈಗ ನಾನು ಚಿಕ್ಕವನಾಗಿರುವುದರಿಂದ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ. ನೀನು ನನಗಿಂತ ದೊಡ್ಡವನು, ಅಲ್ಲವೇ ?’’ ಎಂದು ಅವರು ತನ್ನ ಸೋಲನ್ನು ಸರಳವಾಗಿ ಒಪ್ಪಿಕೊಂಡರು. ಅವರು ಇಬ್ಬರೂ ಹಲವು ಬಾರಿ ಸ್ಪರ್ಧಿಸಿದರೂ ಪೂ. ಭಾರ್ಗವರಾಮ ಪ್ರತಿ ಬಾರಿಯೂ ಹಿಂದೆ ಉಳಿಯುತ್ತಾರೆ; ಆದರೆ ಅವರ ನಡವಳಿಕೆ ಸಹಜವಾಗಿರುತ್ತದೆ.

ಸೌ. ಭವಾನಿ ಭರತ ಪ್ರಭು

೨. ಸಾಧಕರನ್ನು ಅವರ ಸೇವೆಯಲ್ಲಿ ಸಹಾಯ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸುವುದು !

ಒಮ್ಮೆ ಕೆಲವು ಸಾಧಕರು ಭಾರವಾದ ಕಲ್ಲುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುತ್ತಿದ್ದರು. ಆಗ ಪೂ. ಭಾರ್ಗವರಾಮ ಇವರು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರು; ಆದರೆ ಕಲ್ಲು ಎತ್ತಲು ಸಾಧ್ಯವಾಗಲಿಲ್ಲ. ನಂತರ ಪೂ. ಭಾರ್ಗವರಾಮ ಇವರು ಸಾಧಕರಿಗೆ ನೀರನ್ನು ಕೊಟ್ಟರು ಮತ್ತು “ಗುರುದೇವರು ನಿಮಗೆ ಬಹಳಷ್ಟು ಶಕ್ತಿಯನ್ನು ನೀಡುತ್ತಾರೆ. ನೀವು ಎಲ್ಲಾ ಕಲ್ಲುಗಳನ್ನು ಎತ್ತಬಹುದು. ಯಾರಿಗೂ ತೊಂದರೆ ಆಗುವುದಿಲ್ಲ” ಎಂದು ಪುನಃ ಪುನಃ ಹೇಳಿ ಪ್ರೋತ್ಸಾಹಿಸಿ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು.

೩. ಸಂಬಂಧಿಕರ ಮರಣದ ಸಂದರ್ಭದಲ್ಲಿ ತಾಯಿಗೆ ಸಕಾರಾತ್ಮಕ ದೃಷ್ಟಿಕೋನವನ್ನು ನೀಡುವುದು

ನನ್ನ ದೊಡ್ಡಪ್ಪ ತೀರಿಕೊಂಡಾಗ ಅವರ ನೆನಪಾಗಿ ಅಳು ಬರುತ್ತಿತ್ತು. ನಾನು ಅಳುತ್ತಿರುವುದನ್ನು ನೋಡಿದ ಪೂ. ಭಾರ್ಗವರಾಮ ಅವರು ನನಗೆ,  “ಅಳಬೇಡ, ಅವರು ದೇವರ ಬಳಿ ಹೋಗಿದ್ದಾರೆ. ಪರಮ ಪೂಜ್ಯರು ಅವರನ್ನು ಕರೆದಿದ್ದಾರೆ.  ಗುರುದೇವರು ನಮಗೆ ಅಜ್ಜಿ, ಮುತ್ತಜ್ಜಿ, ತಂದೆ ಮತ್ತು ಇತರ ಎಲ್ಲರನ್ನೂ ಕೊಟ್ಟಿದ್ದಾರೆ. ಆದ್ದರಿಂದ ಅಳಬೇಡ’’, ಎಂದರು. ಪೂ. ಭಾರ್ಗವರಾಮ ಅವರು ನೀಡಿದ ಈ ಸಕಾರಾತ್ಮಕ ದೃಷ್ಟಿಕೋನದಿಂದಾಗಿ ನನ್ನ ಮನಸ್ಸಿನಲ್ಲಿ ಮೂಡಿದ್ದ ತೊಂದರೆದಾಯಕ ಶಕ್ತಿಯ ಆವರಣ ದೂರವಾಯಿತು ಮತ್ತು ನನ್ನ ದುಃಖವು ಕಡಿಮೆಯಾಯಿತು.

೪. ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ ಭಾವ

ಒಮ್ಮೆ ಪೂ. ಭಾರ್ಗವರಾಮ ಸೈಕಲ್‌ನಿಂದ ಬಿದ್ದು ಅವರ ಕಾಲಿಗೆ ಪೆಟ್ಟಾಯಿತು. ಆ ಸಮಯದಲ್ಲಿ ಅವರು ನೋವಿನಿಂದ ಬಳಲುತ್ತಿದ್ದರು. ಹಾಗಾಗಿ ನಾನು ಅವರ ಬಳಿಗೆ ಓಡಿದೆ. ಆ ಸಮಯದಲ್ಲಿ ಅವರು ನನಗೆ, “ಅಮ್ಮಾ, ಭಯ ಪಡಬೇಡ. ನನಗೇನೂ ಆಗಲಿಲ್ಲ. ಗುರುದೇವರು ನನ್ನನ್ನು ರಕ್ಷಿಸಿದ್ದಾರೆ’’, ಎಂದರು.

– ಸೌ. ಭವಾನಿ ಭಾರತ ಪ್ರಭು (ಪೂ. ಭಾರ್ಗವರಾಮ ಅವರ ತಾಯಿ), ಮಂಗಳೂರು. (೨೫.೧೦.೨೦೨೧)

ಪೂ. ಭಾರ್ಗವರಾಮ ಪ್ರಭು ಅವರಿಗೆ ಅವರ ಮುತ್ತಜ್ಜಿ, ಸನಾತನದ ೪೪ ನೇ ಸಂತರಾದ (ಶ್ರೀಮತಿ) ರಾಧಾ ಪ್ರಭು (೮೪ ವರ್ಷ) ಇವರ ಬಗೆಗಿನ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುವ ಕೆಲವು ಉದಾಹರಣೆಗಳು !

ಪೂ. (ಶ್ರೀಮತಿ) ರಾಧಾ ಪ್ರಭು

‘ಪೂ. (ಶ್ರೀಮತಿ) ರಾಧಾ ಪ್ರಭು ಅಜ್ಜಿ (ಸನಾತನ ೪೪ ನೇ ಸಂತರು, ವಯಸ್ಸು ೮೪ ವರ್ಷ) ಪೂ. ಭಾರ್ಗವರಾಮ ಅವರ ಮುತ್ತಜ್ಜಿ (ಪೂ. ಭಾರ್ಗವರಾಮ ಪ್ರಭು ಅವರ ತಂದೆ ಶ್ರೀ. ಭರತ ಪ್ರಭು ಅವರ ತಂದೆಯ ತಾಯಿ). `ಪೂ. ಭಾರ್ಗವರಾಮ ಅವರ ಜೀವನದಲ್ಲಿ ಪೂ. ಅಜ್ಜಿಗೆ ಮೊದಲ ಸ್ಥಾನವಿದೆ, ಎಂದು ನನಗೆ ಅನಿಸುತ್ತದೆ.

೧. ಪೂ. ರಾಧಾ ಪ್ರಭು ಅಜ್ಜಿಯವರು ಸಾಧಕರ ಜೊತೆಗೆ ಜಪ ಮಾಡಲು ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಪೂ. ಭಾರ್ಗವರಾಮ ನಾಮಜಪಕ್ಕಾಗಿ ಕುಳಿತುಕೊಳ್ಳುತ್ತಾರೆ. ನಾಮಜಪವಾದ ಕೂಡಲೇ ಪೂ. ಭಾರ್ಗವರಾಮ ಪೂ. ಅಜ್ಜಿಯ ಚರಣಗಳ ಕೆಳಗಿಟ್ಟಿರುವ ಫುಟ್‌ರೆಸ್ಟ್ ಮತ್ತು ಆಸನ (ಮ್ಯಾಟ)ವನ್ನು ತಕ್ಷಣವೇ ತೆಗೆದು ಇಡುತ್ತಾರೆ.

೨. ಒಮ್ಮೆ ಪೂ. ಅಜ್ಜಿ ತನ್ನ ಹುಟ್ಟುಹಬ್ಬದಂದು ಹೊರಗೆ ಹೋಗುತ್ತಿದ್ದರು. ಆಗ ಪೂ. ಭಾರ್ಗವರಾಮ ಅವರು ಸ್ವತಃ ಅವರ ಸೀರೆ ನೆರಿಗೆಗಳನ್ನು ಸರಿಪಡಿಸಿದರು. ಅದನ್ನು ನೋಡಿ ನಮ್ಮ ಭಾವಜಾಗೃತಿಯಾಯಿತು. `ಇಷ್ಟು ಚಿಕ್ಕ ಮಗುವಿಗೆ ಇದೆಲ್ಲ ಹೇಗೆ ಅರ್ಥವಾಗುತ್ತದೆ ?’ ಎಂದು ಪೂ. ಅಜ್ಜಿಗೆ ಮೆಚ್ಚುಗೆ ಮತ್ತು ಆಶ್ಚರ್ಯವಾಯಿತು.

೩. ಮನೆಯಲ್ಲಿ ಏನಾದರೂ ತಿಂಡಿ ಮಾಡಿದಾಗ ರುಚಿಯಾಗಿದ್ದರೆ, `ಮುತ್ತಜ್ಜಿ ತಿಂಡಿ ತಿಂದಿದ್ದಾಳೆ ಅಲ್ವಾ ?’ ಎಂದು ಪೂ. ಭಾರ್ಗವರಾಮ ಕೇಳುತ್ತಾರೆ ಮತ್ತು ತಿನ್ನದಿದ್ದರೆ ತಕ್ಷಣ ಆ ತಿಂಡಿಯನ್ನು ಮುತ್ತಜ್ಜಿಗೆ ಕೊಡುತ್ತಾರೆ.

೪. ಪೂ. ಅಜ್ಜಿ ಕೆಮ್ಮಿದರೆ, ಪೂ. ಭಾರ್ಗವರಾಮ ಅವರಿಗೆ ನೀರು ತರಲು ಓಡುತ್ತಾರೆ ಮತ್ತು ನೀರು ತಂದು ಕೊಡುತ್ತಾರೆ. ಅವರ ಬೆನ್ನಿನ ಮೇಲೆ ತನ್ನ ಕೈಗಳನ್ನು ಆಡಿಸುತ್ತಾರೆ.

೫. ಕೆಲವೊಮ್ಮೆ ಪೂ. ಭಾರ್ಗವರಾಮ ಆಡುವಾಗ ಆಟಿಕೆಗಳನ್ನು ಹರಡುತ್ತಾರೆ. ಅವರಿಗೆ `ಆಟಿಕೆಗಳನ್ನು ತೆಗೆದಿಡಲು’ ಹೇಳುತ್ತೇವೆ. ಆದರೆ ಅವರು ಹಾಗೆ ಮಾಡುವುದಿಲ್ಲ; ಆದರೆ `ಪೂ. ಅಜ್ಜಿಯ ಪಾದಗಳಿಗೆ ಆಟಿಕೆಗಳು ತಗಲಬಾರದು, ಅದನ್ನು ತೆಗೆದಿಡಿ’ ಎಂದು ಹೇಳಿದಾಗ. ಪೂ. ಅಜ್ಜಿಗೆ ತೊಂದರೆಯಾಗಬಾರದು ಎಂದು ಅವರು ಆಟಿಕೆಗಳನ್ನೆಲ್ಲ ತೆಗೆದಿಡುತ್ತಾರೆ.

೬. ಯಾವಾಗ ಪೂ. ಭಾರ್ಗವರಾಮ ಇವರಿಗೆ ನಾಮಜಪದ ಉಪಾಯಗಳ ಅಗತ್ಯವಿದೆಯೆಂದು ಅನಿಸುತ್ತದೆಯೋ ಆಗ, ಅವರು ಪೂ. ಅಜ್ಜಿಯವರೊಂದಿಗೆ ಇರುತ್ತಾರೆ. `ಪೂ. ಅಜ್ಜಿಯ ಸಹವಾಸದಲ್ಲಿ ಚೈತನ್ಯ ಬರುತ್ತಿದೆ ಎಂದು ಪೂ. ಭಾರ್ಗವರಾಮ ಅವರಿಗೆ ಅರಿವಾಗುತ್ತದೆ, ಎಂದು ನನಗೆ ಅನಿಸುತ್ತದೆ.

ಪೂ. ಅಜ್ಜಿಯಿಂದಾಗಿ, ಪೂ. ಭಾರ್ಗವರಾಮ ಅವರಿಗೆ ಉತ್ತಮ ಸಂಸ್ಕಾರಗಳಾಗುತ್ತಿವೆ. `ಪೂ. ಅಜ್ಜಿಯವರ ಸೇವೆ ಮತ್ತು ಅವರ ಆಶೀರ್ವಾದದಿಂದಾಗಿ, ಪೂ. ಭಾರ್ಗವರಾಮ ಮತ್ತು ನನ್ನ ಆಧ್ಯಾತ್ಮಿಕ ಪ್ರಗತಿಯಾಗಲಿದೆ’ ಎಂದು ನನಗೆ ಅನಿಸುತ್ತದೆ. ಪೂ. ಅಜ್ಜಿಯವರ ಚರಣಗಳಲ್ಲಿ ಕೃತಜ್ಞತೆಗಳು ! – ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಅವರ ತಾಯಿ), ಮಂಗಳೂರು. (೨೦.೪.೨೦೨೦)

ಭಕ್ತಿ ಸತ್ಸಂಗವನ್ನು ಕೇಳುವಾಗ ಕಲಿಯುವ ಸ್ಥಿಯಲ್ಲಿದ್ದು ಭಾವಜಾಗೃತಿಯ ಅನುಭೂತಿ ಪಡೆಯುವ ಪೂ. ಭಾರ್ಗವರಾಮ !

೧. `ಪೂ. ಭಾರ್ಗವರಾಮ ಅವರು ರಾಷ್ಟೀಯ ಭಕ್ತಿ ಸತ್ಸಂಗದ ಸಮಯದಲ್ಲಿ ಜಾಗರೂಕತೆಯಿಂದ ಇದ್ದು ಅದರಲ್ಲಿನ ಕಥೆಗಳು ಮತ್ತು ಪ್ರಯೋಗಗಳನ್ನು ಕೇಳುತ್ತಾರೆ. ಅವರಿಗೆ ಕೆಲವು ಅಂಶಗಳು ಅರ್ಥವಾಗದಿದ್ದರೆ, ಅವರು ತಕ್ಷಣ ನನ್ನಲ್ಲಿ ಕೇಳುತ್ತಾರೆ.

೨. ಪೂ. ಭಾರ್ಗವರಾಮ ಅವರು ರಾಷ್ಟೀಯ ಭಕ್ತಿ ಸತ್ಸಂಗದಲ್ಲಿ ಹೇಳಿದ ಭಾವಜಾಗೃತಿಯ ಪ್ರಯೋಗವನ್ನು ಮಾಡುತ್ತಾರೆ. ಆಗ ಅವರು ತಮಗೆ ಬಂದ ಅನುಭೂತಿಗಳನ್ನು ಹೇಳುತ್ತಾರೆ, ಉದಾ. ದೇವಿಯ ದರ್ಶನವಾಗುವುದು, ಪರಿಮಳ ಬರುವುದು, ಶಾಂತಿಯ ಭಾವನೆ ಇತ್ಯಾದಿಗಳನ್ನು ಹೇಳುತ್ತಾರೆ.

೩. ಭಕ್ತಿ ಸತ್ಸಂಗದ ನಂತರ ಪೂ. ಭಾರ್ಗವರಾಮ ಇವರು, “ಭಕ್ತಿ ಸತ್ಸಂಗ ಏಕೆ ಕೊನೆಗೊಂಡಿತು ? ನಾನು ಇನ್ನೂ ಕೇಳಲಿಕ್ಕಿತ್ತು’’, ಎನ್ನುತ್ತಾರೆ.

೪. ಪೂ. ಭಾರ್ಗವರಾಮ ಅವರು ಹಿಂದಿನ ದಿನದ ಭಕ್ತಿ ಸತ್ಸಂಗದ ಕಥೆಯನ್ನು ಮರುದಿನ ಊಟದ ಸಮಯದಲ್ಲಿ ಪುನಃ ಹೇಳುವಂತೆ ಹೇಳುತ್ತಾರೆ.

`ಪೂ. ಭಾರ್ಗವರಾಮ ಅವರು ಇಷ್ಟು ಸಣ್ಣ ವಯಸ್ಸಿನಲ್ಲೂ ಕಲಿಯುವ ಸ್ಥಿತಿಯಲ್ಲಿರುತ್ತಾರೆ, ಸತ್ಸಂಗದ ಮೂಲಕ ಭಾವಜಾಗೃತಿಯನ್ನು ಅನುಭವಿಸುತ್ತಾರೆ. ಇದು ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಅವರ ಕೃಪೆಯಿಂದ ಆಗುತ್ತಿದೆ. ಅವರು ನಮ್ಮನ್ನು ಈ ದೈವೀ ಘಟನೆಗೆ ಸಾಕ್ಷಿಗಳನ್ನಾಗಿ ಮಾಡಿದ್ದಾರೆ. ಪರಾತ್ಪರ ಗುರು ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಚರಣಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’

– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಅವರ ತಾಯಿ), ಮಂಗಳೂರು. (೨೫.೧೦.೨೦೨೧)

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು