ಗಾಂಧಿ-ನೆಹರೂ ಕುಟುಂಬದ ಅಕ್ಷಮ್ಯ ತಪ್ಪುಗಳ ಬಗ್ಗೆ ವರುಣ ಗಾಂಧಿ ಏಕೆ ಮೌನವಾಗಿದ್ದಾರೆ ?

೧. ಗಾಂಧಿ-ನೆಹರೂ ಕುಟುಂಬದ ಅಕ್ಷಮ್ಯ ತಪ್ಪುಗಳ ಬಗ್ಗೆ ವರುಣ ಗಾಂಧಿ ಏಕೆ ಮೌನವಾಗಿದ್ದಾರೆ ?

ಮ. ಗಾಂಧಿಯವರ ಜನ್ಮದಿನದಂದು ‘ಗೋಡ್ಸೆ ಜಿಂದಾಬಾದ್’ ಘೋಷಣೆ ಕೂಗುವವರನ್ನು ಗಲ್ಲಿಗೇರಿಸಬೇಕು’ ಎಂದು ಭಾಜಪದ ಸಂಸದ ವರುಣ ಗಾಂಧಿ ಹೇಳಿದ್ದಾರೆ.

೨. ಹಿಂದೂಗಳಿಗೂ ಗುರುವಾರ ರಜೆ ನೀಡಿ !

ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಲಕ್ಷದ್ವೀಪದಲ್ಲಿ ಸರಕಾರವು ಅಲ್ಲಿನ ಶಾಲೆಗಳಿಗೆ ಶುಕ್ರವಾರದ ಬದಲು ಇತರ ರಾಜ್ಯಗಳಂತೆ ಭಾನುವಾರದಂದು ವಾರದ ರಜೆ ನೀಡಲು ಸರಕಾರ ನಿರ್ಧರಿಸಿದೆ; ಆದರೆ ಇದರಿಂದ ಇಲ್ಲಿ ಮುಸಲ್ಮಾನರಿಂದ ವಿರೋಧ ವ್ಯಕ್ತವಾಗಿದೆ.

೩. ಭಾರತದಲ್ಲಿ ಹೀಗಾಗುವುದು ಯಾವಾಗ ?

ಫ್ರಾನ್ಸ್ನ  ಗೃಹ ಸಚಿವರು ದೇಶದ ಒಂದು ಮಸೀದಿಯನ್ನು ಆರು ತಿಂಗಳ ಕಾಲ ಮುಚ್ಚುವುದಾಗಿ ಘೋಷಿಸಿದ್ದಾರೆ. ಮಸೀದಿಯ ಇಮಾಮ್‌ರ ಮತೀಯ ಭಾಷಣಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

೪. ಭ್ರಷ್ಟಾಚಾರಿ ಕಾಂಗ್ರೆಸ್‌ನ್ನು ನಿಷೇಧಿಸಿ !

ಪಂಜಾಬಿನ ಎಲ್ಲಾ ಕಾಂಗ್ರೆಸ್ ಶಾಸಕರು ಮರಳಿನ ಅಕ್ರಮ ವ್ಯಾಪಾರ ದಲ್ಲಿ ತೊಡಗಿದ್ದಾರೆ; ಆದರೆ ನಾನು ಯಾರ ಹೆಸರನ್ನೂ ಬಹಿರಂಗಗೊಳಿಸುವುದಿಲ್ಲ ಎಂದು ಪಂಜಾಬನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ.

೫. ಸಚಿವರಿಂದ ಸರಕಾರದ ಹಣ ವಸೂಲಿ ಮಾಡಿರಿ !

ಕೇರಳ ರಾಜ್ಯದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ನೇತೃತ್ವದ ಸರಕಾರದಲ್ಲಿ ಕ್ರೀಡೆ, ವಕ್ಫ್ ಮತ್ತು ಹಜ್ ಯಾತ್ರೆ ಇವುಗಳ ಸಚಿವರಾದ ವಿ. ಅಬ್ದುರಹಿಮನ ಅವರು ಸರಕಾರಿ ವೆಚ್ಚದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ೨೦ ದಿನಗಳ ಕಾಲ ಅಮೇರಿಕಾಗೆ ತೆರಳಲಿದ್ದಾರೆ.

೬. ಇಂತಹ ಕಾನೂನನ್ನು ಇಡೀ ದೇಶದಲ್ಲಿ ರೂಪಿಸಬೇಕು !

ಅಸ್ಸಾಂನಲ್ಲಿ ಇನ್ನು ಗೋಕಳ್ಳರು ಕಳೆದ ೬ ವರ್ಷಗಳಲ್ಲಿ ಅಕ್ರಮ ಪಶು ವ್ಯಾಪಾರದಿಂದ ಪಡೆದ ಸಂಪತ್ತನ್ನು ಜಪ್ತಿ ಮಾಡುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಅದೇ ರೀತಿ ಗೋಕಳ್ಳರಿಂದ ವಶಪಡಿಸಿಕೊಂಡ ವಾಹನಗಳನ್ನು ಇನ್ನು ಹರಾಜು ಹಾಕಬಹುದಾಗಿದೆ.

೭. ಢೋಂಗಿ ಜಾತ್ಯತೀತದ ಹೆಸರಿನ ಇತರ ಪಕ್ಷಗಳು ಇದನ್ನು ಜ್ಯಾರಿಗೊಳಿಸುವುದೇ ?

ದೇಶದ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆಯನ್ನು ಕಲಿಸಬಹುದಾಗಿದೆ ಎಂದು ಕೇಂದ್ರ ಸರಕಾರವು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದೆ.