ಸಾಧಕರ ಸೇವೆಯ ಜವಾಬ್ದಾರಿ ಇರುವವರು ಸಾಧಕರ ವ್ಯಷ್ಟಿ ಸಾಧನೆಯ ಕಡೆಗೂ ಗಾಂಭೀರ್ಯದಿಂದ ಗಮನ ನೀಡುವುದು ಆವಶ್ಯಕ !

(ಪೂ.) ಸಂದೀಪ ಆಳಶಿ

‘ಸದ್ಯ ಸಂಸ್ಥೆಯ ಕಾರ್ಯವು ತುಂಬಾ ವೇಗದಿಂದ ನಡೆಯುತ್ತಿದೆ. ಆದುದರಿಂದ ಸಾಧಕರ ಬಳಿ ಅನೇಕ ಸೇವೆಗಳಿರುತ್ತವೆ. ‘ಸಾಧಕರ ಸೇವೆಗಳ ಜವಾಬ್ದಾರಿ ಇರುವ ಸಾಧಕರು ಸಾಧಕರಿಂದ ಕಾರ್ಯವನ್ನು ಪೂರ್ಣಗೊಳಿಸುವುದರ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ’, ಎಂಬುದು ಕಂಡುಬಂದಿದೆ. ಇದರಿಂದ ‘ಸಾಧಕರ ಸೇವೆ ಮತ್ತು ವ್ಯಷ್ಟಿ ಸಾಧನೆಗಳಲ್ಲಿ ಯಾವ ಅಡಚಣೆಗಳು ಬರುತ್ತವೆ ? ಅವರ ವ್ಯಷ್ಟಿ ಪ್ರಯತ್ನಗಳು ಯೋಗ್ಯವಾಗಿ ನಡೆದಿದೆಯೇ ? ಅವರ ಸ್ವಭಾವದೋಷಗಳು ಏಕೆ ಕಡಿಮೆಯಾಗುವುದಿಲ್ಲ ?’ ಇಂತಹ ವಿಷಯಗಳಿಗೆ ಜವಾಬ್ದಾರ ಸಾಧಕರು ಸಮಯವನ್ನು ಕೊಡುವುದಿಲ್ಲ. ಇದರಿಂದಾಗಿ ಸಾಧಕರಿಗೆ ವ್ಯಷ್ಟಿ ಸಾಧನೆಯ ಕುರಿತು ಯೋಗ್ಯ ಮಾರ್ಗವು ಸಿಗುವುದಿಲ್ಲ ಮತ್ತು ಅವರ ವ್ಯಷ್ಟಿ ಸಾಧನೆಯು ವ್ಯವಸ್ಥಿತವಾಗುವುದಿಲ್ಲ. ಈ ಕುರಿತು ಜವಾಬ್ದಾರ ಸಾಧಕರು ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು.

೧. ಸಾಧಕರ ವ್ಯಷ್ಟಿ ಸಾಧನೆಯು ವ್ಯವಸ್ಥಿತವಾಗಿ ಆಗದಿರುವುದರಿಂದ ಅವರಿಗೆ ಸಾಧನೆಯಿಂದ ಆನಂದವು ಸಿಗುವುದಿಲ್ಲ, ಹಾಗೆಯೇ ಅವರ ಸಮಷ್ಟಿ ಸೇವೆಯ ಫಲನಿಷ್ಪತ್ತಿಯೂ ಕಡಿಮೆಯಾಗುತ್ತದೆ.

೨. ‘ಗುರುಕಾರ್ಯವನ್ನು ಹೆಚ್ಚಿಸುವುದು’, ಸಮಷ್ಟಿ ಸಾಧನೆಯ ಒಂದು ಅಂಗವಾಗಿದ್ದರೆ, ‘ಸಾಧಕರ ಸಾಧನೆಯು ಉತ್ತಮವಾಗಲು ಪ್ರಯತ್ನಿಸುವುದು’, ಇದು ಸಮಷ್ಟಿ ಸಾಧನೆಯ ಎರಡನೇ ಅಂಗವಾಗಿದೆ. ಜವಾಬ್ದಾರ ಸಾಧಕರು ಎರಡೂ ಅಂಗಗಳಿಂದ ಸೇವೆಯನ್ನು ಮಾಡಿದರೆ, ಅವರ ಸೇವೆಯು ಪರಿಪೂರ್ಣವಾಗುವುದು.

೩. ಸನಾತನದ ಸಮಷ್ಟಿ ಸಂತರು ಮೇಲಿನ ಎರಡೂ ಅಂಗಗಳಿಂದ ಸೇವೆಯನ್ನು ಮಾಡುತ್ತಾರೆ; ಆದುದರಿಂದಲೇ ಅವರು ‘ಸಂತ’ರಾಗಿದ್ದಾರೆ. ಅವರಂತೆಯೇ ಜವಾಬ್ದಾರ ಸಾಧಕರೂ ಪ್ರಯತ್ನಿಸಿದರೆ, ಅವರೂ ಬೇಗನೇ ಸಂತರಾಗುವರು.

೪. ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಯಾವಾಗಲೂ, ‘ಕಾರ್ಯವು ಮೋಕ್ಷಕ್ಕೆ ಒಯ್ಯುವುದಿಲ್ಲ, ಸಾಧನೆಯೇ ಮೋಕ್ಷಕ್ಕೆ ಒಯ್ಯುತ್ತದೆ !’ ಎಂದು ಹೇಳುತ್ತಾರೆ.

೫. ಜವಾಬ್ದಾರಿ ಇರುವ ಸಾಧಕರು ‘ಗುರುಕಾರ್ಯವನ್ನು ನಿಭಾಯಿಸಿ ಸಾಧಕರ ಸಾಧನೆಯ ಕಡೆಗೂ ಹೇಗೆ ಗಮನ ಕೊಡಬಹುದು ?’, ಎಂಬುದನ್ನು ಅವರಿಗಿಂತ ಹೆಚ್ಚು ಜವಾಬ್ದಾರಿ ಇರುವ ಅಥವಾ ಆಯಾ ಸೇವೆಗೆ ಸಂಬಂಧಿಸಿದ ಸಂತರಲ್ಲಿ ಕೇಳಬೇಕು. ಇದರಿಂದಾಗಿ ಜವಾಬ್ದಾರಿ ಇರುವ ಸಾಧಕರಲ್ಲಿ ‘ಕೇಳುವ ವೃತ್ತಿ’, ಈ ಗುಣವು ಹೆಚ್ಚಾಗುವುದು ಮತ್ತು ಅವರ ಸಾಧನೆಯ ಹಾನಿಯೂ ಆಗುವುದಿಲ್ಲ.’

– ಪೂ. ಸಂದೀಪ ಆಳಶಿ (೨೭.೧೧.೨೦೨೧)