ಸಾಧಕರೇ, ಸಾಧಕರ ಹೆಸರ ಹೇಳಿ ಹಣ ಕೇಳುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಿ !

‘ಒಂದು ನಗರದಲ್ಲಿ ಸಾಧಕಿಯೊಬ್ಬಳ ಮನೆಗೆ ಅಪರಿಚಿತ ಮಹಿಳೆಯೊಬ್ಬಳು ದ್ವಿಚಕ್ರ ವಾಹನದಿಂದ ಬಂದಿದ್ದಳು. ಆಗ ಆ ಸಾಧಕಿಯು ಪರವೂರಿಗೆ ಹೋಗಿದ್ದಳು. ಆಕೆಯ ಪತಿ ಮನೆಯಲ್ಲಿದ್ದರು. ಈ ಮಹಿಳೆಯು ಸಾಧಕಿಯ ಪತಿಗೆ, “ನಿಮ್ಮ ಪತ್ನಿಯ ಬಳಿ ಸನಾತನದ ಗ್ರಂಥ ಮತ್ತು ಸನಾತನದ ಪಂಚಾಂಗ ವಿತರಣೆಯ ೪-೫ ಸಾವಿರ ರೂಪಾಯಿ ಹಣವಿದೆ. ಅದನ್ನು ನನಗೆ ಕೊಡಿ’, ಎಂದು ಹೇಳಿದಳು. ಆಗ ಸಾಧಕಿಯ ಪತಿಯು ಸಾಧಕಿಗೆ ಈ ಬಗ್ಗೆ ದೂರವಾಣಿಯ ಮೂಲಕ ಕೇಳಿದಾಗ, ‘ನಾನು ಯಾರಿಗೂ ಹಣ ಕೊಡಲು ಬಾಕಿ ಇಲ್ಲ, ಅಲ್ಲದೇ ಇದಕ್ಕಾಗಿ ಹಣವನ್ನು ತೆಗೆದುಕೊಳ್ಳಲು ಯಾರೂ ನನ್ನ ಬಳಿಗೆ ಬರಲಿಕ್ಕಿರಲಿಲ್ಲ’ ಎಂದು ಸಾಧಕಿ ಹೇಳಿದರು. ಆಗ ಸಾಧಕಿಯ ಪತಿಯು ಸಂಬಂಧಪಟ್ಟ ಮಹಿಳೆಗೆ ಹಣ ನೀಡುವುದಿಲ್ಲ ಎಂದು ಹೇಳಿದರು. ಅದಕ್ಕೆ ಆ ಮಹಿಳೆಯು, ‘ನಾನು ಸಾಧಕಿಯನ್ನು ನಂತರ ಸಂಪರ್ಕಿಸುತ್ತೇನೆ’, ಎಂದು ಉತ್ತರಿಸಿ ಹೊರಟುಹೋದಳು.

ಈ ರೀತಿಯಾಗಿ ಅಪರಿಚಿತರು ಮನೆಗೆ ಬಂದು ಅಥವಾ ಇತರ ಎಲ್ಲಿಯೂದರೂ ಭೇಟಿಯಾಗಿ ಅಥವಾ ಸಂಚಾರವಾಣಿ ಕರೆ ಮಾಡಿ ಗ್ರಂಥ ಮತ್ತು ಪಂಚಾಂಗಗಳ ವಿತರಣೆಯ ಅಥವಾ ಇತರ ಯಾವುದೇ ಕಾರಣಕ್ಕಾಗಿ ಹಣವನ್ನು ಕೇಳಿದರೆ, ಸಾಧಕರು ಅದನ್ನು ನೀಡಬಾರದು. ಸಾಧಕರು ತಾವು ಅಥವಾ ತಮ್ಮ ಕುಟುಂಬದವರು ಮೋಸ ಹೋಗದಂತೆ ಜಾಗೃತರಾಗಿರಬೇಕು. ಇಂತಹ ಘಟನೆಗಳು ಎಲ್ಲಿಯಾದರೂ ಘಟಿಸಿದರೆ ಕೂಡಲೇ ಸಾಧಕರು ಜವಾಬ್ದಾರ ಸಾಧಕರಿಗೆ ಮಾಹಿತಿ ನೀಡಿ ಮುಂದಿನ ಪ್ರಕ್ರಿಯೆ ಮಾಡಬೇಕು’.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೫.೧೧.೨೦೨೧)