ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ತಾವು ಸ್ವತಃ ಭಗವಂತಸ್ವರೂಪರಾಗಿದ್ದರೂ ಕೃತಜ್ಞತಾಭಾವದಿಂದ, ಪರಿಪೂರ್ಣತೆಯಿಂದ ಮತ್ತು ಸಹಜಭಾವದಿಂದ ತಾಯಿ-ತಂದೆಯವರ ಸೇವೆಯನ್ನು ಮಾಡಿ ಸಮಾಜದೆದುರು ಉತ್ತಮ ಸೇವೆಯ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

(ಪರಾತ್ಪರ ಗುರು) ಡಾ. ಆಠವಲೆ

‘೧೯೯೦ ರಿಂದ ಸನಾತನ ಸಂಸ್ಥೆಯ ಕಾರ್ಯ ಮುಂಬಯಿಯಲ್ಲಿ ಆರಂಭವಾಯಿತು. ಅಂದಿನಿಂದ ನಾವು ಕೆಲವು ಸಾಧಕರು ಸೇವೆಯ ನಿಮಿತ್ತದಲ್ಲಿ ಪ.ಪೂ. ಡಾಕ್ಟರರ ಮನೆಗೆ ಹೋಗಿ ಬರಲು ಆರಂಭಿಸಿದೆವು. ಆಗ ಪ.ಪೂ. ಡಾಕ್ಟರರ ತಾಯಿ-ತಂದೆ ಅವರ ಜೊತೆಗೆ ವಾಸಿಸುತ್ತಿದ್ದರು. ನಾವೆಲ್ಲ ಸಾಧಕರು ಪ.ಪೂ. ಡಾಕ್ಟರ್ ಇವರಂತೆಯೇ ಅವರನ್ನು ‘ತಾಯಿ’ ಮತ್ತು ‘ದಾದಾ’ ಎಂದು ಸಂಬೋಧಿಸುತ್ತಿದ್ದೆವು. ಅವರಿಬ್ಬರೂ ನಮ್ಮೆಲ್ಲ ಸಾಧಕರನ್ನು ಮನಃಪೂರ್ವಕ ಪ್ರೀತಿಸುತ್ತಿದ್ದರು. ಅವರು ನಮ್ಮನ್ನು ತಮ್ಮ ಕುಟುಂಬದ ಒಬ್ಬ ಸದಸ್ಯನೆಂದು ತಿಳಿಯುತ್ತಿದ್ದರು. ಸದ್ಯ ಸಮಾಜದಲ್ಲಿ ತಾಯಿ-ತಂದೆ ವೃದ್ಧರಾದಾಗ ಮಕ್ಕಳಿಗೆ ಬೇಡವಾಗುತ್ತಾರೆ. ಕೆಲವರು ‘ಅವರ ಅಡಚಣೆ ಬೇಡ’ವೆಂದು ಬೇರೆಯೇ ಮನೆ ಮಾಡಿಕೊಂಡಿರುತ್ತಾರೆ ಮತ್ತು ಕೆಲವರು ಅವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಿಡುತ್ತಾರೆ. ನಮ್ಮ ಪಾಲನೆ ಪೋಷಣೆ ಮಾಡಿ, ಒಳ್ಳೆಯ ಸಂಸ್ಕಾರ ಮಾಡಿ ಸಮಾಜದಲ್ಲಿ ನಾವು ಹೆಸರು ಗಳಿಸುವಂತೆ ಮಾಡಿರುವ ನಮ್ಮ ತಾಯಿ-ತಂದೆಯರ ಬಗ್ಗೆ ಇದೆಷ್ಟು ಕೃತಘ್ನತೆ ? ‘ಇಂತಹ ಸಮಾಜಕ್ಕೆ ಯೋಗ್ಯ ದೃಷ್ಟಿಕೋನ ಸಿಗಬೇಕೆಂದು’, ಪ್ರತ್ಯಕ್ಷ ಭಗವಂತನೆ (ಪರಾತ್ಪರ ಗುರು ಡಾಕ್ಟರ್ ಆಠವಲೆಯವರು) ತನ್ನ ತಾಯಿ-ತಂದೆಯರ ಸೇವೆ ಹೇಗೆ ಮಾಡಿದರು ?’, ಎಂಬುದು ಇಲ್ಲಿ ಕೊಟ್ಟಿರುವ ಉದಾಹರಣೆಯಿಂದ ಅರಿವಾಗಬಹುದು.

ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ ಆಠವಲೆ ಮತ್ತು ತಾಯಿ ಪೂ. (ಸೌ.) ನಲಿನಿ ಆಠವಲೆ

‘ಸೇವೆ ಮಾಡುವಾಗ ಪ್ರತಿಯೊಂದು ಕೃತಿಗೂ ಭಕ್ತಿಮಾರ್ಗಕ್ಕನುಸಾರ ಭಾವದ ಮತ್ತು ಕರ್ಮಯೋಗಕ್ಕನುಸಾರ ಪರಿಪೂರ್ಣತ್ವವನ್ನು ಜೋಡಿಸಿ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಸೇವೆ ಮಾಡಬೇಕು ? ಎಂಬುದು ಪ.ಪೂ. ಡಾ. ಆಠವಲೆಯವರು ಮಾಡಿರುವ ಅವರ ತಾಯಿ-ತಂದೆಯರ ಸೇವೆಯಿಂದ ಕಲಿಯಲು ಸಿಗುತ್ತದೆ. ಕಳೆದ ಸಂಚಿಕೆಯಲ್ಲಿ (೨೩/೧೪) ರಲ್ಲಿ ನಾವು ಅಧ್ಯಾತ್ಮಪ್ರಸಾರ ಮಾಡಲು ಪ್ರವಾಸಕ್ಕೆ ಹೋಗುವಾಗ ಪರಾತ್ಪರ ಗುರು ಡಾ. ಆಠವಲೆಯವರು ತಾಯಿ-ತಂದೆಯರ ಸೇವೆಯು ಪರಿಪೂರ್ಣವಾಗಿ ಆಗಲು ಮಾಡಿದ ಸಿದ್ಧತೆ ! ಈ ಭಾಗವನ್ನು ನೋಡಿದೆವು. ಇಂದು ಈ ಲೇಖನಮಾಲೆಯ ಕೊನೆಯ ಭಾಗವನ್ನು ನೋಡೋಣ.

(ಭಾಗ ೫)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/55270.html
ಶ್ರೀ. ದಿನೇಶ ಶಿಂದೆ

೧೩. ತಾಯಿ-ತಂದೆಯರನ್ನು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗುವುದು

೧೩ ಅ. ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿ ಇವರನ್ನು ಸಂತರ ದರ್ಶನಕ್ಕೆ ಅಥವಾ ಅವರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವುದು : ‘ಪ.ಪೂ. ಡಾಕ್ಟರರು ವಾಸಿಸುತ್ತಿದ್ದ ಕಟ್ಟಡದಲ್ಲಿ ಇತರ ಸಂಪ್ರದಾಯಕ್ಕನುಸಾರ ಸಾಧನೆ ಮಾಡುವ ಜನರು ಕೂಡ ವಾಸಿಸುತ್ತಿದ್ದರು. ಅವರ ಮನೆಗೆ ಅವರ ಗುರು ಅಥವಾ ಸಂತರು ಬಂದರೆ ಪ.ಪೂ. ಡಾಕ್ಟರರು ‘ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾ ಇವರಿಗೆ ಸಂತರ ದರ್ಶನದ ಲಾಭವಾಗಬೇಕು’, ಎಂಬುದಕ್ಕಾಗಿ ಅವರನ್ನು ಸಂತರ ದರ್ಶನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪ.ಪೂ. ಭಕ್ತರಾಜ ಮಹಾರಾಜರ ಕಾರ್ಯಕ್ರಮದ ಅಥವಾ ಸನಾತನದ ಸಾರ್ವಜನಿಕ ಸಭೆಯು ಮನೆಯಿಂದ ಸಮೀಪವಿದ್ದರೆ ಅವರನ್ನು ಅಲ್ಲಿಗೂ  ಕರೆದುಕೊಂಡು ಹೋಗುತ್ತಿದ್ದರು.

೧೩ ಆ. ಸದ್ಗುರು ಡಾ. ಅಪ್ಪಾಕಾಕಾ (ದಿ.) (ಸದ್ಗುರು ಡಾ. ವಸಂತ ಆಠವಲೆ) ಇವರಲ್ಲಿಗೆ ಪ್ರತಿ ವರ್ಷ ಶ್ರೀ ಗಣೇಶ ಚತುರ್ಥಿಯಂದು ಕರೆದುಕೊಂಡು ಹೋಗುವುದು : ಪ.ಪೂ. ಡಾಕ್ಟರರ ಎಲ್ಲ ಸಂಬಂಧಿಕರು ನೌಕರಿ ಮತ್ತು ವ್ಯವಸಾಯದಲ್ಲಿ ತೊಡಗಿಕೊಂಡಿದ್ದರಿಂದ ಅವರು ‘ಪರಸ್ಪರರು ಒಟ್ಟಾಗಿ ಸೇರುವುದು’, ಬಹಳ ಅಪರೂಪವಾಗಿತ್ತು. ಪ.ಪೂ. ಡಾಕ್ಟರರ ಹಿರಿಯ ಸಹೋದರ ಸದ್ಗುರು ಅಪ್ಪಾಕಾಕಾರವರ ಮನೆಯಲ್ಲಿ ಪ್ರತಿವರ್ಷ ಶ್ರೀ ಗಣೇಶ ಚತುರ್ಥಿಯಂದು ಒಂದೂವರೆ ದಿನದ ಅವಧಿಗಾಗಿ ಗಣಪತಿಯನ್ನು ಕೂರಿಸುತ್ತಿದ್ದರು. ಆ ನಿಮಿತ್ತ ಅವರಲ್ಲಿ ಎಲ್ಲ ಸಂಬಂಧಿಕರು ಒಟ್ಟಾಗುತ್ತಿದ್ದರು. ಈ ಸಮಯದಲ್ಲಿ ‘ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾ ಇವರಿಗೆ ಎಲ್ಲರಿಗೂ ಭೇಟಿಯಾಗಲು ಆಗಬೇಕೆಂದು ಪ.ಪೂ. ಡಾಕ್ಟರರು ಅವರನ್ನು ಸದ್ಗುರು ಅಪ್ಪಾಕಾಕಾರವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅದರಿಂದ ಅವರಿಗೂ ಎಲ್ಲ ಸಂಬಂಧಿಕರನ್ನು ಭೇಟಿಯಾದ ಆನಂದವು ಸಿಗುತ್ತಿತ್ತು. ಪ.ಪೂ. ಡಾಕ್ಟರರು ಶ್ರೀ ಗಣೇಶಚತುರ್ಥಿಯ ಕಾಲದಲ್ಲಿ ಪ್ರವಾಸದಲ್ಲಿದ್ದರೆ ಅವರು ಸೇವಾಕೇಂದ್ರದಲ್ಲಿರುವ ಸಾಧಕರಿಗೆ ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರನ್ನು ಸದ್ಗುರು ಅಪ್ಪಾಕಾಕಾರವರ ಮನೆಗೆ ಕರೆದುಕೊಂಡು ಹೋಗಲು ಹೇಳುತ್ತಿದ್ದರು.

೧೩ ಇ. ‘ತಾಯಿ-ತಂದೆಯರ ದೈನಂದಿನ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆಯಾಗಬೇಕು’, ಎಂಬುದಕ್ಕಾಗಿ ಪ.ಪೂ. ಡಾಕ್ಟರರು ಅವರನ್ನು ಪ್ರತಿ ೩-೪ ತಿಂಗಳಿಗೊಮ್ಮೆ ಅಲೀಬಾಗ್‌ನ ಕೊರ್ಲಯಿ ಊರಿನಲ್ಲಿ ಸಮುದ್ರದಡದಲ್ಲಿರುವ ವಿಲಾಸಕಾಕಾರವರ ಬಂಗಲೆಯಲ್ಲಿರಲು ಕರೆದುಕೊಂಡು ಹೋಗುವುದು : ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರಿಗೆ ಎಲ್ಲಿಯೂ ಹೊರಗೆ ಹೋಗಬೇಕೆಂದು ಅನಿಸುತ್ತಿರಲಿಲ್ಲ. ಅವರಿಗೆ ದಿನನಿತ್ಯದ ಜೀವನವು ಬೇಸರವಾಗಬಾರದೆಂದು, ಪ.ಪೂ ಡಾಕ್ಟರರು ಅಲಿಬಾಗ ಜಿಲ್ಲೆಯ ಕೊರ್ಲಯಿ ಊರಿನ ಸಮುದ್ರದಡದಲ್ಲಿರುವ ವಿಲಾಸಕಾಕಾರವರ ಬಂಗಲೆಗೆ ಸ್ವಲ್ಪ ದಿನ ಬದಲಾವಣೆಗೆಂದು ಕರೆದುಕೊಂಡು ಹೋಗುತ್ತಿದ್ದರು ಮತ್ತು ತಾವೂ ೩-೪ ದಿನಗಳು ಅವರೊಂದಿಗಿದ್ದು ಅವರ ಕಾಳಜಿ ತೆಗೆದುಕೊಳ್ಳುತ್ತಿದ್ದರು. ಕೊರ್ಲಯಿ ಊರಿನಲ್ಲಿ ಆಸ್ಪತ್ರೆ ಇಲ್ಲದ ಕಾರಣ ಪ.ಪೂ ಡಾಕ್ಟರರು ಪೂ. (ಸೌ.) ತಾಯಿ ಮತ್ತು ಪ.ಪೂ ದಾದಾರವರಿಗೆ ಬೇಕಾಗುವ ‘ಆಕ್ಸಿಜನ್ ಸಿಲಿಂಡರ್’ ಸಹಿತ ‘ಅವರಿಗೆ ನಿಯಮಿತವಾಗಿ ಬೇಕಾಗುವ ಎಲ್ಲ ಔಷಧಗಳು, ಇಂಜೆಕ್ಶನ್‌ಗಳು ಇತ್ಯಾದಿ ಎಲ್ಲ ವಿಷಯಗಳ ಪಟ್ಟಿಯನ್ನು ತಯಾರಿಸಿ ಅದಕ್ಕನುಸಾರ ಎಲ್ಲ ಸಿದ್ಧತೆಯನ್ನು ತಾವೇ ಮಾಡುತ್ತಿದ್ದರು ಮತ್ತು ಅವರು ಎಲ್ಲ ಸಾಹಿತ್ಯಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಇದೆಲ್ಲವನ್ನೂ ಮಾಡುವಾಗ ಅವರ ಗ್ರಂಥ ಬರವಣಿಗೆಯ ಸೇವೆಯೂ ನಡೆಯುತ್ತಿತ್ತು. ಕೆಲವೊಮ್ಮೆ ಪ.ಪೂ. ಡಾಕ್ಟರರು ಪ.ಪೂ. ದಾದಾರವರಿಗೆ ಗ್ರಂಥದಲ್ಲಿನ ವ್ಯಾಕರಣವನ್ನು ತಪಾಸಣೆ ಮಾಡಲು ಕೊಡುತ್ತಿದ್ದರು. ಪ.ಪೂ. ದಾದಾರವರು ಆ ಸೇವೆಯನ್ನೂ ಆನಂದದಿಂದ ಮಾಡುತ್ತಿದ್ದರು.

೧೪. ಪರಾತ್ಪರ ಗುರು ಡಾ. ಆಠವಲೆಯವರು ‘ತಾಯಿ-ತಂದೆಯರ ಸೇವೆಯನ್ನು ಸಂತರ ಸೇವೆ’, ಎಂಬ ಭಾವವನ್ನಿಟ್ಟು ಮಾಡುವುದು ಹಾಗೂ ಸಾಧಕರಿಗೂ ಅದೇ ರೀತಿ ಭಾವವಿಡಲು ಹೇಳುವುದು

ಪ.ಪೂ. ಭಕ್ತರಾಜ ಮಹಾರಾಜರು ಯಾವಾಗಲೂ, “ದಾದಾರವರ ಅಧಿಕಾರ ದೊಡ್ಡದಿದೆ” ಎಂದು ಹೇಳುತ್ತಿದ್ದರು ಅವರು ಮುಂಬಯಿಗೆ ಪ.ಪೂ. ಡಾಕ್ಟರರ ಬಳಿ ವಾಸ್ತವ್ಯಕ್ಕಾಗಿ ಬಂದಾಗ ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾ ಅವರ ದರ್ಶನಕ್ಕಾಗಿ ಹೊರಗೆ ಬಂದು ಕುಳಿತುಕೊಳ್ಳುತ್ತಿದ್ದರು. ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ. ದಾದಾರವರನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಪ.ಪೂ. ದಾದಾರವರಿಗೆ ಆರೋಗ್ಯ ಸರಿಯಿಲ್ಲದಾಗ, ಪ.ಪೂ. ಭಕ್ತರಾಜ ಮಹಾರಾಜರ ದರ್ಶನಕ್ಕೆ ಬರಲು ಆಗುತ್ತಿರಲಿಲ್ಲ. ಆಗ ಪ.ಪೂ. ಭಕ್ತರಾಜ ಮಹಾರಾಜರು ಸ್ವತಃ ಪ.ಪೂ. ದಾದಾರವರನ್ನು ಭೇಟಿಯಾಗಲು ಅವರ ಕೋಣೆಗೆ ಹೋಗುತ್ತಿದ್ದರು ಹಾಗೂ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಸೇವಾಕೇಂದ್ರಕ್ಕೆ ಬರುವ ಎಲ್ಲ ಸಂತರು ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರನ್ನು ತಪ್ಪದೇ ಭೇಟಿಯಾಗುತ್ತಿದ್ದರು. ಪ.ಪೂ. ಡಾಕ್ಟರರೂ ‘ಪ.ಪೂ. ದಾದಾರವರು ಸಂತರಾಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡೇ ಅವರ ಸೇವೆ ಮಾಡುತ್ತಿದ್ದರು ಹಾಗೂ ನಮಗೂ ಅದೇ ಭಾವವನ್ನಿಟ್ಟು ಸೇವೆಯನ್ನು ಮಾಡಲು ಹೇಳುತ್ತಿದ್ದರು.

೧೫. ಪರಾತ್ಪರ ಗುರು ಡಾ. ಆಠವಲೆಯವರು ಪ.ಪೂ. ದಾದಾರವರು ಮಾಡಿದ ಲೇಖನ ಮತ್ತು ಅವರ ವೈಶಿಷ್ಟ್ಯಪೂರ್ಣ ಕವಿತೆಗಳ ಹಸ್ತಲಿಖಿತಗಳನ್ನು ಜೋಪಾನ ಮಾಡಿ ಅದನ್ನು ಸಂಗ್ರಹಿಸಿಡುವುದು ಹಾಗೂ ಅವುಗಳನ್ನು ಗ್ರಂಥರೂಪದಲ್ಲಿ ಪ್ರಕಾಶಿಸುವುದು

ಪ.ಪೂ. ದಾದಾರವರು ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅಂದಿನಿಂದ ಅವರು ವಿವಿಧ ವಿಷಯಗಳ ಲೇಖನಗಳನ್ನು ಬರೆಯುತ್ತಿದ್ದರು. ಬೇರೆಯವರ ಹೆಸರಿನಲ್ಲಿ ಅವರು ಸುಂದರವಾದ ಕವಿತೆಗಳನ್ನೂ ಬರೆಯುತ್ತಿದ್ದರು. ಆ ಕವಿತೆಗಳ ವೈಶಿಷ್ಟ್ಯವೆಂದರೆ ‘ಕವಿತೆಯ ಪ್ರತಿಯೊಂದು ಸಾಲಿನ ಆರಂಭದ ಶಬ್ದ ಮತ್ತು ಅದೇ ಸಾಲಿನ ಕೊನೆಯ ಶಬ್ದ, ಹೀಗೆ ಮೊದಲ ಸಾಲಿನಿಂದ ಅದು ಕೊನೆಯ ಸಾಲಿನ ಪ್ರತಿಯೊಂದು ಶಬ್ದ ಒಟ್ಟಾಗಿ ಆ ಸಾಧಕನ ಹೆಸರು ತಯಾರಾಗುತ್ತಿತ್ತು ಅಥವಾ ಅದರಲ್ಲಿ ಆ ಸಾಧಕನ ಆಧ್ಯಾತ್ಮಿಕ ವೈಶಿಷ್ಟ್ಯವನ್ನು ವಿವರಿಸಲಾಗುತ್ತಿತ್ತು.

ಪ.ಪೂ. ದಾದಾರವರು ಬರೆದಿರುವ ಎಲ್ಲ ಕವಿತೆಗಳು ಮತ್ತು ಎಲ್ಲ ಲೇಖನಗಳು ಆಧ್ಯಾತ್ಮಿಕ ಸ್ತರದ್ದಾಗಿರುತ್ತಿದ್ದವು. ಪ.ಪೂ. ಡಾಕ್ಟರರು ಈ ವಿಷಯದ ಅವರ ಎಲ್ಲ ಹಸ್ತಲೇಖನಗಳನ್ನು ವ್ಯವಸ್ಥಿತವಾಗಿ ಜೋಪಾನ ಮಾಡಿ ಸಂಗ್ರಹಿಸಿಟ್ಟಿದ್ದರು. ಅವರು ಆ ಎಲ್ಲ ಲೇಖನಗಳನ್ನು ೪ ಗ್ರಂಥಗಳ ರೂಪದಲ್ಲಿ (ಸುಗಮ ಸಾತ್ತ್ವಿಕ ಜೀವನ, ಸುಗಮ ಭಕ್ತಿಯೋಗ, ಸುಗಮ ಅಧ್ಯಾತ್ಮ ಹಾಗೂ ಹೆಸರಿನಿಂದಾಗುವ ಕವಿತೆಗಳು) ಪ್ರಕಾಶನವನ್ನೂ ಮಾಡಿದ್ದಾರೆ.

೧೬. ಪರಾತ್ಪರ ಗುರು ಡಾಕ್ಟರರು ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರು ಉಪಯೋಗಿಸಿದ ಎಲ್ಲ ವಸ್ತುಗಳನ್ನು ಜೋಪಾನ ಮಾಡಿ ಇಡುವುದು

ಪ.ಪೂ. ದಾದಾರವರು ಸಂತರೇ ಆಗಿದ್ದರು ಹಾಗೂ ಪೂ. ತಾಯಿಯವರ ಆಧ್ಯಾತ್ಮಿಕ ಮಟ್ಟವೂ ಚೆನ್ನಾಗಿತ್ತು. (೨೦೦೨ ರಲ್ಲಿ ಪ.ಪೂ. ಡಾಕ್ಟರರು ‘ಪೂ. ತಾಯಿಯವರ ಆಧ್ಯಾತ್ಮಿಕ ಮಟ್ಟ ಶೇ. ೬೫ ಇದೆ’, ಎಂದು ಹೇಳಿದ್ದರು) ಸಾಮಾನ್ಯವಾಗಿ ಸಮಾಜದಲ್ಲಿ ಯಾವುದೇ ವ್ಯಕ್ತಿಯ ತಾಯಿ-ತಂದೆಗಳ ಮೃತ್ಯುವಾದ ನಂತರ ಅವರ ಮಕ್ಕಳು, ‘ಅವರ ಸಂಪತ್ತು ಎಷ್ಟಿದೆ ? ಅವರ ಹೆಸರಿನಲ್ಲಿ ಏನೇನಿದೆ ?’ ಇತ್ಯಾದಿ ನೋಡುತ್ತಾರೆ. ಪೂ. ತಾಯಿ ಮತ್ತು ಪ.ಪೂ. ದಾದಾರವರು ದೇಹತ್ಯಾಗ ಮಾಡಿದ ಮರುದಿನವೇ ಪ.ಪೂ. ಡಾಕ್ಟರರು ಅವರು ಉಪಯೋಗಿಸಿದ ಎಲ್ಲ ವಸ್ತುಗಳನ್ನು ಜೋಪಾನ ಮಾಡುವ ಉದ್ದೇಶದಿಂದ ಅವುಗಳನ್ನು ವ್ಯವಸ್ಥಿತವಾಗಿ ಕಟ್ಟಿ ಅವುಗಳ ಮೇಲೆ ಎಲ್ಲ ಮಾಹಿತಿಯನ್ನು ಬರೆದು ಆಶ್ರಮಕ್ಕೆ ಕಳುಹಿಸಿಕೊಟ್ಟರು. ಆಗ ಪ.ಪೂ. ಡಾಕ್ಟರರು “ಮುಂದೆ ಸನಾತನ ಸಂಸ್ಥೆಯ ಸಂಗ್ರಹಾಲಯವಾಗುವುದು. ಅದರಲ್ಲಿ ಸಂತರ ವಸ್ತುಗಳ ಪ್ರದರ್ಶನ ಇರುವುದು. ಅಲ್ಲಿ ಈ ವಸ್ತುಗಳನ್ನು ಇಡಬಹುದು ಹಾಗೂ ಮುಂದಿನ ಪೀಳಿಗೆಯ ಸಾಧಕರಿಗೆ ಅದರ ಲಾಭವಾಗುವುದು”, ಎಂದು ಹೇಳಿದರು. ಇದರಿಂದ ‘ಪ.ಪೂ. ಡಾಕ್ಟರರು ಪ್ರತಿ ಕ್ಷಣ ಸಮಷ್ಟಿಯ ಬಗ್ಗೆ ಎಷ್ಟು ವಿಚಾರ ಮಾಡುತ್ತಿದ್ದರು ?’, ಎಂಬುದು ಅರಿವಾಗುತ್ತದೆ.

೧೭. ಪ.ಪೂ. ಡಾಕ್ಟರರು ಭಾವನೆಯಲ್ಲಿ ಸಿಲುಕದೇ ಪ್ರಸಾರಸೇವೆಗಾಗಿ ಗೋವಾಗೆ ವಾಸ್ತವ್ಯಕ್ಕಾಗಿ ಹೋಗುವುದು ಹಾಗೂ ಮುಂಬಯಿಗೆ ಬಂದ ನಂತರ ‘ಪೂ. ತಾಯಿಯವರಿಗೆ ಒಬ್ಬಂಟಿ ಅನಿಸಬಾರದು’, ಎಂದು ಅವರಿಗೆ ಅನಾರೋಗ್ಯವಿದ್ದಾಗ ಅವರ ಕೋಣೆಯಲ್ಲಿ ಮಲಗಲು ಹೋಗುವುದು

ಪ.ಪೂ. ಡಾಕ್ಟರರು ೧೯೯೯ ರಿಂದ ಪ್ರಸಾರಕಾರ್ಯದ ದೃಷ್ಟಿಯಿಂದ ಮುಂಬಯಿಯನ್ನು ಬಿಟ್ಟು ಗೋವಾದಲ್ಲಿ ನೆಲೆಸಿದರು. ನಾನು ಗೋವಾಗೆ ಹೋದರೆ, ‘ಪೂ. ತಾಯಿಯವರ ವ್ಯವಸ್ಥೆ ಹೇಗಾಗುವುದು ?’, ಎನ್ನುವ ಭಾವನೆಯ ವಿಚಾರ ಮಾಡದೆ ಪ.ಪೂ. ಡಾಕ್ಟರರು ಪೂ. ತಾಯಿಯವರ ಸೇವೆ ಮಾಡಲು ಸಾಧಕರನ್ನು ಸಿದ್ಧಪಡಿಸಿದರು ಹಾಗೂ ಪೂ. ತಾಯಿಯವರಿಗೆ,  “ಪ್ರಸಾರಕಾರ್ಯಕ್ಕಾಗಿ ನಾನು ಗೋವಾಗೆ ಹೋಗಲಿದ್ದೇನೆ. ಇಲ್ಲಿ ಅಪ್ಪಾ, ವಿಲಾಸ, ಸುಹಾಸ ಇದ್ದಾರೆ ಹಾಗೂ ಸಾಧಕರೂ ಇದ್ದಾರೆ. ನಾನು ಪ್ರತಿ ವಾರ ದೂರವಾಣಿ ಕರೆ ಮಾಡುವೆನು. ನಡುನಡುವೆ ನಾನು ಮುಂಬಯಿಗೆ ಬಂದಾಗ ಭೇಟಿಯಾಗುತ್ತದೆ”, ಎಂದರು. ಪೂ. ತಾಯಿಯವರು ಕೂಡ ಅವರಿಗೆ ಹಾಗೆ ಮಾಡಲು ಅನುಮತಿ ನೀಡಿದರು ಹಾಗೂ ‘ಇಲ್ಲಿ ನನ್ನನ್ನು ನೋಡಿಕೊಳ್ಳಲು ಸಾಧಕರಿದ್ದಾರೆ. ನೀನು ಆನಂದದಿಂದ ಹೋಗು”, ಎಂದು ಹೇಳಿದರು. ಪ.ಪೂ. ಡಾಕ್ಟರರು ಮುಂಬಯಿಯಲ್ಲಿ ಇರುವಷ್ಟು ದಿನ ಅವರು ರಾತ್ರಿ ಪೂ. ತಾಯಿಯವರ ಕೋಣೆಯಲ್ಲಿ ಮಲಗುತ್ತಿದ್ದರು. ಹಾಗೂ ದಿನವಿಡೀ ಅಲ್ಲಿಯೇ ಕೋಣೆಯಲ್ಲಿ ಕುಳಿತು ಗ್ರಂಥಗಳ ಸೇವೆಯನ್ನು ಮಾಡುತ್ತಿದ್ದರು.

೧೮. ಕೃತಜ್ಞತೆಗಳು

ಪುಂಡಲೀಕನು ತಾಯಿ-ತಂದೆಯರ ಸೇವೆಯನ್ನು ಮಾಡಿದ್ದನ್ನು ನೋಡಿ ಅವನ ಮೇಲೆ ಪ್ರಸನ್ನರಾಗಿ ಅವನಿಗೆ ದರ್ಶನ ನೀಡಲು ಆತುರಗೊಂಡ ಭಗವಂತನ ಬಗ್ಗೆ ನಾವು ಕೇಳಿದ್ದೇವೆ; ಆದರೆ ಅದೇ ಭಗವಂತನು ಪ.ಪೂ ಡಾಕ್ಟರರ ಮೂಲಕ ‘ತಾಯಿ-ತಂದೆಯರ ಸೇವೆಯನ್ನು ಹೇಗೆ ಮಾಡುವುದು ?’, ಎಂಬುದನ್ನು ನಮಗೆ ಸ್ವತಃ ಕೃತಿ ಮಾಡಿ ಕಲಿಸಿದರು. ಇದಕ್ಕಾಗಿ ನಾವು ನಮ್ಮನ್ನು ಭಾಗ್ಯಶಾಲಿಗಳೆಂದು ತಿಳಿಯುತ್ತೇವೆ. ತಾಯಿ-ತಂದೆಯರ ಋಣದಿಂದ ಮುಕ್ತರಾಗಲು ಅವರು ಅತ್ಯಂತ ಅಮೂಲ್ಯ ಮಾರ್ಗದರ್ಶನವನ್ನು ನಮಗೆ ಕೃತಿಯಿಂದ ಮಾಡಿ ತೋರಿಸಿದರು. ನಮಗೆ ಅವರಲ್ಲಿನ ಸಹಜಭಾವ, ಪ್ರೀತಿ, ಪರಿಪೂರ್ಣತೆ ಹಾಗೂ ಸಮಷ್ಟಿಯ ವಿಚಾರ ಮಾಡುವುದು, ಇತ್ಯಾದಿ ದೈವೀ ಗುಣಗಳನ್ನು ನೋಡಲು ಮತ್ತು ಕಲಿಯಲೂ ಸಿಕ್ಕಿತು. ಇದಕ್ಕಾಗಿ ಭಗವಂತಸ್ವರೂಪಿ ಪರಾತ್ಪರ ಗುರು ಡಾಕ್ಟರರ ಕೋಮಲ ಚರಣಗಳಲ್ಲಿ ನಾವೆಲ್ಲ ಸಾಧಕರು ಕೃತಜ್ಞತೆ ವ್ಯಕ್ತಪಡಿಸುತ್ತೇವೆ.’

– ಶ್ರೀ. ದಿನೇಶ ಶಿಂದೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೩೦.೮.೨೦೨೦) (ಮುಕ್ತಾಯ)

ಪರಾತ್ಪರ ಗುರು ಡಾ. ಆಠವಲೆಯವರು ತಾಯಿ-ತಂದೆಯರ ಋಣದಿಂದ ಮುಕ್ತರಾಗಲು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಶ್ರೀ. ದಿನೇಶ ಶಿಂದೆ

೧. ‘ತಾಯಿಯವರ ಸೇವೆಯನ್ನು ಭಾವಪೂರ್ಣವಾಗಿ ಮಾಡಿದರೆ ಪ್ರಗತಿಯಾಗುವುದು’, ಎಂದು ಓರ್ವ ಸಾಧಕನಿಗೆ ಹೇಳುವುದು

‘ಓರ್ವ ಸಾಧಕನು ೪-೫ ವರ್ಷಗಳಿಂದ ತನ್ನ ವೃದ್ಧ ತಾಯಿಯ ಸೇವೆ ಮಾಡುತ್ತಿದ್ದನು. ‘ನಾನು ತಾಯಿಯ ಸೇವೆ ಮಾಡುತ್ತೇನೆ; ಆದರೆ ಅದರಿಂದ ನನ್ನ ಸಾಧನೆಯಾಗುತ್ತದೋ ಇಲ್ಲವೋ ?’, ಎಂದು ಅವನ ಮನಸ್ಸಿನಲ್ಲಿ ಗೊಂದಲವು ಪ್ರಾರಂಭವಾಯಿತು. ಅವನು ಆ ವಿಚಾರವನ್ನು ಪ.ಪೂ. ಡಾಕ್ಟರರಿಗೆ ಹೇಳಿದನು. ಆಗ ಪ.ಪೂ. ಡಾಕ್ಟರರು ಅವನಿಗೆ,  “ಪುಂಡಲೀಕನು ತಾಯಿ-ತಂದೆಯರ ಸೇವೆಯನ್ನು ಮಾಡಿ ಭಗವಂತನನ್ನು ಪ್ರಾಪ್ತ ಮಾಡಿಕೊಂಡನು. ನಾನು ಕೂಡ ಅನೇಕ ವರ್ಷಗಳ ಕಾಲ ನನ್ನ ತಾಯಿ-ತಂದೆಯರ ಸೇವೆಯನ್ನು ಮಾಡಿದ್ದೇನೆ. ನೀನು ತಾಯಿಯ ಸೇವೆಯನ್ನು ಭಾವಪೂರ್ಣವಾಗಿ ಮಾಡಿದರೆ ಅದರಿಂದಲೇ ನಿನ್ನ ಸಾಧನೆಯಾಗುತ್ತದೆ”, ಎಂದು ಹೇಳಿದರು. ಅನಂತರ ಆ ಸಾಧಕನು ಭಾವಪೂರ್ಣವಾಗಿ ತಾಯಿಯ ಸೇವೆಯನ್ನು ಮಾಡಿದನು ಹಾಗೂ ಆ ಸೇವೆಯಿಂದಲೇ ಅವನ ಆಧ್ಯಾತ್ಮಿಕ ಪ್ರಗತಿಯು ಸಹ ಆಯಿತು.

೨. ಸಾಧಕರು ಪೂರ್ಣವೇಳೆ ಸಾಧನೆ ಮಾಡುತ್ತಿರುವಾಗ ಮನೆಗೆ ಹೋಗಿ ತಾಯಿ-ತಂದೆಯರ ಸೇವೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಸಾಧಕರು ‘ತಾಯಿ-ತಂದೆಯರ ಋಣದಿಂದ ಹೇಗೆ ಮುಕ್ತರಾಗಬೇಕು ?’, ಎಂಬ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನ

ಪ.ಪೂ. ಡಾಕ್ಟರರು ತಮ್ಮ ತಾಯಿ-ತಂದೆಯರ ಸೇವೆಯನ್ನು ಮಾಡುವುದನ್ನು ನೋಡಿ ಓರ್ವ ಸಾಧಕನ ಮನಸ್ಸಿನಲ್ಲಿ, ‘ಪ.ಪೂ. ಡಾಕ್ಟರರು ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರ ಸೇವೆಯನ್ನು ಮಾಡಿ ತಾಯಿ-ತಂದೆಯರ ಋಣದಿಂದ ಮುಕ್ತರಾಗುತ್ತಿದ್ದಾರೆ. ನಾನು ಪೂರ್ಣವೇಳೆ ಸಾಧಕನಿದ್ದೇನೆ. ನಾನು ಮನೆಗೆ ಹೋಗುವುದೇ ಇಲ್ಲ ಹಾಗೂ ತಾಯಿ-ತಂದೆಯರ ಸೇವೆಯನ್ನೂ ಮಾಡುವುದಿಲ್ಲ, ಹಾಗಾದರೆ ನಾನು ತಾಯಿ-ತಂದೆಯರ ಋಣದಿಂದ ಹೇಗೆ ಮುಕ್ತನಾಗಬಲ್ಲೆನು ?’ ಎಂಬ ವಿಚಾರ ಬಂದಿತು. ಈ ವಿಚಾರವನ್ನು ಅವನು ಪ.ಪೂ. ಡಾಕ್ಟರರಿಗೆ ಹೇಳಿದಾಗ ಅವರು, “ಪೂರ್ಣವೇಳೆ ಸಾಧನೆ ಮಾಡುವ ಸಾಧಕನು ಆಶ್ರಮದಲ್ಲಿನ ವಯಸ್ಸಾದವರ ಹಾಗೂ ಅನಾರೋಗ್ಯವಿರುವ ಸಾಧಕರ ಮತ್ತು ಸಂತರ ಸೇವೆಯನ್ನು ಭಾವಪೂರ್ಣವಾಗಿ ಮತ್ತು ಪ್ರೀತಿಯಿಂದ ಮಾಡಿದರೆ ಅವನು ತಾಯಿ-ತಂದೆಯರ ಋಣದಿಂದ ಮುಕ್ತರಾದಂತೆಯೇ ಇದೆ. ಆದ್ದರಿಂದ ಸಾಧಕರು ಅದರ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯಿಲ್ಲ’ ಎಂದು ಹೇಳಿದರು.

– ಶ್ರೀ. ದಿನೇಶ ಶಿಂದೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೩೦.೮.೨೦೨೦)