ರಾಮನಾಥಿ ಆಶ್ರಮದಲ್ಲಿ ಗರುಡ ಪಕ್ಷಿ ಯಾಗವು ನಡೆಯುತ್ತಿರುವಾಗ ಮಂಗಳೂರಿನಲ್ಲಿ ಪೂ. ಭಾರ್ಗವರಾಮ ಪ್ರಭು ಇವರಿಗೆ ಅರಿವಾದ ಅಂಶಗಳು

ಉಚ್ಚಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದ ದೈವಿ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಪೂ. ಭಾರ್ಗವರಾಮ ಭರತ ಪ್ರಭು ಈ ಪೀಳಿಗೆಯವರೇ ಆಗಿದ್ದಾರೆ  

ಪೂ. ಭಾರ್ಗವರಾಮ ಪ್ರಭು

‘ಈ ಹಿಂದೆ ರಾಮನಾಥಿ (ಗೋವಾ)ದಲ್ಲಿನ ಸನಾತನದ ಆಶ್ರಮದಲ್ಲಿ ಗರುಡ ಪಕ್ಷಿ ಯಾಗವಾಯಿತು. ಗಣಕೀಯ ತಂತ್ರಾಂಶದ ಮೂಲಕ ಈ ಯಾಗವನ್ನು ನೋಡುತ್ತಿರುವಾಗ ಮಂಗಳೂರಿನಲ್ಲಿ ಸನಾತನದ ಬಾಲಸಂತರಾದ ಪೂ. ಭಾರ್ಗವರಾಮ ಭರತ ಪ್ರಭು (ವಯಸ್ಸು ೪ ವರ್ಷಗಳು) ಇವರಿಗೆ ಅರಿವಾದ ಅಂಶಗಳನ್ನು ಮತ್ತು ಯಾಗವು ಮುಗಿದ ನಂತರ ರಾಮನಾಥಿ ಆಶ್ರಮದಲ್ಲಿನ ಸೂಕ್ಷ್ಮ ಜ್ಞಾನಪ್ರಾಪ್ತಿಯನ್ನು ಮಾಡಿಕೊಳ್ಳುವ ಸಾಧಕರು ಮಾಡಿದ ಸೂಕ್ಷ್ಮ ಪರೀಕ್ಷಣೆಯಲ್ಲಿ ಹೋಲಿಕೆ ಇರುವುದು ಪೂ. ಭಾರ್ಗವರಾಮ ಇವರ ತಾಯಿ ಸೌ. ಭವಾನಿ ಪ್ರಭು ಇವರಿಗೆ ಗಮನಕ್ಕೆ ಬಂದಿತು. ಆ ಕುರಿತು ಬರವಣಿಗೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

೧. ರಾಮನಾಥಿ ಆಶ್ರಮದಲ್ಲಿ ಗರುಡ ಪಕ್ಷಿ ಯಾಗವು ನಡೆಯುತ್ತಿರುವಾಗ ಪೂ. ಭಾರ್ಗವರಾಮ ಇವರು ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹಿಂದೆ ಗರುಡವು ನಿಂತಿದೆ’, ಎಂಬ ಚಿತ್ರವನ್ನು ಬಿಡಿಸಿದರು.

೨. ಪೂ. ಭಾರ್ಗವರಾಮ ಇವರು, “ಇಲ್ಲಿ (ಮಂಗಳೂರಿನಲ್ಲಿ) ಗರುಡವು ಹಾರುತ್ತಿದೆ ಮತ್ತು ಅದು ಹಾರುತ್ತ ಮೇಲೆ ಹೋಗುತ್ತಿದೆ. ಗರುಡವು ದೊಡ್ಡ ಧ್ವನಿ ಮಾಡಿತು”, ಎಂದರು. ಯಾಗ ಮುಗಿದ ನಂತರ ನಾವು ಹೊರಗೆ ಹೋಗಿ ನೋಡಿದೆವು, ಅದೇ ಸಮಯದಲ್ಲಿ ಗರುಡವು ಆಕಾಶದಲ್ಲಿ ಸುತ್ತುತ್ತಿರುವುದು ಕಂಡಿತು. ಹಾಗೆಯೇ ಅದೇ ಸಮಯದಲ್ಲಿ ಹೊರಗೆ ಮಳೆ ಬಂದಿತು.

ಸೌ. ಭವಾನಿ ಭರತ ಪ್ರಭು

೩. ಗರುಡವು ಹಾರುವಾಗ ರೆಕ್ಕೆಯನ್ನು ಬೀಸುವಾಗ ಬರುವಂತಹ ಶಬ್ದದ ಹಾಗೆ ಪೂ. ಭಾರ್ಗವರಾಮ ಇವರು ಮಾಡಿ ತೋರಿಸುತ್ತಿದ್ದರು. ಆ ಸಮಯದಲ್ಲಿ, ‘ಆ ಧ್ವನಿಯಿಂದ ನನಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತಿದೆ,’ ಎಂದೆನಿಸಿತು.

೪. ಪೂ. ಭಾರ್ಗವರಾಮ ಇವರು, “ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಮೇಲೆ ತೇಜದ(ಅಗ್ನಿಯ) ಸುರಿಮಳೆಯಾಗುತ್ತಿದೆ,” ಎಂದು ಹೇಳಿದರು.

೫. ಗರುಡನ ಮೂರ್ತಿಯನ್ನು ನೋಡಿ ಅವರು, “ಗರುಡ ದೇವತೆಯು ಹೇಗೆ ನಮಸ್ಕಾರ ಮಾಡಿದ್ದಾನೆಯೋ, ನಾನೂ ಕೂಡ ಹಾಗೆಯೇ ಮಾಡುವವನಿದ್ದೇನೆ,” ಎಂದು ಹೇಳಿದರು.

೬. ಕೆಲವು ದಿನಗಳ ಹಿಂದೆ ‘ಒಂದು ಗರುಡವು ತುಂಬಾ ಸಮಯ ಪೂ. ಭಾರ್ಗವರಾಮ ಇವರನ್ನು ನೋಡುತ್ತಿದೆ’, ಎಂದು ಪೂ. ಭಾರ್ಗವರಾಮ ಇವರ ಗಮನಕ್ಕೆ ಬಂದ ನಂತರ ಅವರು ಗರುಡಕ್ಕೆ ಹತ್ತಿರ ಕರೆದರು. ಆಗ ಗರುಡವು ಹಾರಿ ಹತ್ತಿರ ಬಂದ ನಂತರ ಪೂ. ಭಾರ್ಗವರಾಮ ಇವರು, “ಗರುಡನ ಕಣ್ಣಿನಿಂದ ಅಗ್ನಿಯು ಹೊರಗೆ ಬೀಳುತ್ತಿದೆ,” ಎಂದು ಹೇಳಿದರು.

ಯಾಗವು ಮುಗಿದ ನಂತರ ರಾಮನಾಥಿ ಆಶ್ರಮದಲ್ಲಿನ ಸೂಕ್ಷ್ಮ-ಜ್ಞಾನಪ್ರಾಪ್ತಿಯನ್ನು ಮಾಡಿಕೊಳ್ಳುವ ಸಾಧಕರು ಯಾಗದ ಬಗೆಗಿನ ಸೂಕ್ಷ್ಮ ಪರೀಕ್ಷಣೆಯನ್ನು ಹೇಳಿದರು. ಈ ಸೂಕ್ಷ್ಮ ಪರೀಕ್ಷಣೆಯಲ್ಲಿನ ಅಂಶಗಳು ಮತ್ತು ಪೂ. ಭಾರ್ಗವರಾಮ ಇವರು ಯಾಗವನ್ನು ನೋಡುತ್ತಿರುವಾಗ ಹೇಳಿದ ಅಂಶಗಳಲ್ಲಿ ಹೋಲಿಕೆ ಇರುವುದು ನನ್ನ ಗಮನಕ್ಕೆ ಬಂದಿತು. ‘ಪೂ. ಭಾರ್ಗವರಾಮ ಇವರಿಗೆ ತೇಜತತ್ತ್ವದ ಅನುಭೂತಿಯು ಬಂದಿತು’, ಇದು ರಾಮನಾಥಿ ಆಶ್ರಮದಲ್ಲಿನ ಸೂಕ್ಷ್ಮ-ಜ್ಞಾನಪ್ರಾಪ್ತಿಯನ್ನು ಮಾಡಿ ಕೊಳ್ಳುವ ಸಾಧಕರು ಮಾಡಿದ ಸೂಕ್ಷ್ಮ ಪರೀಕ್ಷಣೆಯನ್ನು ಕೇಳಿ ನನ್ನ ಗಮನಕ್ಕೆ ಬಂದಿತು.’

– ಸೌ. ಭವಾನಿ ಭರತ ಪ್ರಭು, ಮಂಗಳೂರು, ಕರ್ನಾಟಕ (೯.೯.೨೦೨೦)