ಕಾಶಿ ವಿಶ್ವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಯಾವಾಗ ?

ಸಂಪಾದಕೀಯ

ಹಿಂದೂಗಳಿಗೆ ತಮ್ಮ ಪ್ರತಿಯೊಂದು ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡಬೇಕಾಗಿರುವುದು ಖೇದಕರ ಸಂಗತಿಯಾಗಿದೆ !

ಭಗವಾನ ಶಿವನು ಶ್ರೀವಿಷ್ಣುವಿನಿಂದ ಶಾಶ್ವತ ವಾಸ್ತವ್ಯಕ್ಕಾಗಿ ಕೇಳಿ ಪಡೆದ ಜಗತ್ತಿನ ಎಲ್ಲಕ್ಕಿಂತ ಪ್ರಾಚೀನ, ಅಂದರೆ ವೈದಿಕ ಕಾಲದ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ನಗರವೆಂದರೆ ಕಾಶಿ ! ೫ ನದಿಗಳಿರುವ, ಆದಿ ಶಂಕರಾಚಾರ್ಯರು ಪುನರ್ಸ್ಥಾಪಿಸಿದ ಕಾಶಿಯು ೧ ಸಾವಿರದ ೬೪೧ ಕ್ಕಿಂತ ಹೆಚ್ಚು ದೇವಸ್ಥಾನಗಳಿರುವ ನಗರವಾಗಿದೆ. ಇಲ್ಲಿನ ಚೈತನ್ಯಶಕ್ತಿಯಿಂದ ‘ಪರಮೇಶ್ವರನ ಬಗ್ಗೆ ಉತ್ಕಟ ಭಾವವಿರುವವರಿಗೆ ಮೋಕ್ಷದವರೆಗೆ ಕರೆದೊಯ್ಯುವ ಮೋಕ್ಷನಗರ’ ವೆಂಬುದು ಅದರ ಮಹಾತ್ಮೆಯಾಗಿದೆ. ಆದುದರಿಂದಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದಕ್ಷಿಣ ಮತ್ತು ಉತ್ತರ ಇವೆರಡೂ ಭಾರತೀಯರ ಶ್ರದ್ಧಾಕ್ಷೇತ್ರವಾದ ಕಾಶಿಯನ್ನು ತಮ್ಮ ಚುನಾವಣಾಕ್ಷೇತ್ರವೆಂದು ಆಯ್ದುಕೊಂಡಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ಎಲ್ಲ ವಿಷಯಗಳು ವಿಶೇಷವಾಗಿರುವುದರಿಂದ ಕೇವಲ ಅವರ ಚುನಾವಣಾಕ್ಷೇತ್ರವೆಂದಷ್ಟೇ ಅಲ್ಲ, ಆದರೆ ಭಾರತದ ಈ ಸರ್ವೋಚ್ಚ ತೀರ್ಥಸ್ಥಳದ ವಿಕಾಸವೂ ಇದೇ ರೀತಿ ಆಗುವುದು, ಇದು ಮೋದಿಯವರ ಸಾಮರ್ಥ್ಯಕ್ಕೆ ಒಪ್ಪುವಂತಿದೆ. ಮೋದಿಯವರು ಪ್ರಧಾನಮಂತ್ರಿಗಳಾಗಿ ೮ ವರ್ಷಗಳು ಪೂರ್ಣ ಗೊಳ್ಳುತ್ತಿರುವಾಗ ಈಗ ಸಮಸ್ತ ದೇಶದಲ್ಲಿನ ಧರ್ಮಾಭಿಮಾನಿ ಹಿಂದೂಗಳಿಗೆ ‘ರಾಮಮಂದಿರದಂತೆಯೇ ಮುಸಲ್ಮಾನ ಆಕ್ರಮಣಕಾರರು ಅತಿಕ್ರಮಿಸಿದ ಹಿಂದೂಗಳ ಧಾರ್ಮಿಕ ಸ್ಥಳಗಳು ಪುನಃ ದೊರಕಬೇಕು’, ಎಂಬ ಅಪೇಕ್ಷೆ ಇದೆ.

ಅನಾದಿ ಕಾಶಿ ವಿಶ್ವೇಶ್ವರನನ್ನು ಮುಕ್ತಗೊಳಿಸಿ !

ಸ್ಕಂದ ಪುರಾಣದಲ್ಲಿ ಕಾಶಿಯ ಈ ಶಿವದೇವಸ್ಥಾನದ ವರ್ಣನೆ ಇದೆ. ೧೨೦೬ ನೇ ಇಸವಿಯ ನಂತರದ ಕಾಲದಲ್ಲಿ ವಿಶ್ವನಾಥ ದೇವಸ್ಥಾನವನ್ನು ಕ್ರೂರ ಆಕ್ರಮಣಕಾರ ಕುತ್ಬುದ್ದಿನ ಐಬಕನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿದನು. ಅಕಬರನ ಕಾಲದಲ್ಲಿ ತೊಡರಮಲ್ ರಾಜನು ಈ ದೇವಸ್ಥಾನವನ್ನು ಪುನಃ ಕಟ್ಟಿದನು. ಔರಂಗಜೇಬನು ದೇವಸ್ಥಾನವನ್ನು ಕೆಡವಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿದನು. ಅನಂತರ ಅಹಿಲ್ಯಾಬಾಯಿ ಹೋಳಕರ ಇವರು ಈ ಮಸೀದಿಯ ಪಕ್ಕದಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಕಟ್ಟಿದರು, ಅದು ಸದ್ಯ ಅಸ್ತಿತ್ವದಲ್ಲಿದೆ. ಅನಂತರ ರಾಜಾ ರಣಜಿತಸಿಂಹ ಇವರು ಅದರ ಕಳಸದ ಮೇಲೆ ಬಂಗಾರದ ಲೇಪನವನ್ನು ಹಾಕಿಸಿದ್ದರು. ರಾಜಾ ಸುಹೆದೇವರು ವಿಶ್ವೇಶ್ವರನ ಮೇಲೆ ಆಕ್ರಮಣ ಮಾಡಿದ ಸೋಲಾರ ಮಸುದನನ್ನು ಸೋಲಿಸಿದರು. ೧೭೮೧ ನೇ ಇಸವಿಯಲ್ಲಿ ಆಂಗ್ಲ ಅಧಿಕಾರಿ ವಾರನ್ ಹೆಸ್ಟಿಂಗ್‌ನನ್ನು ಕಾಶಿನಿವಾಸಿಗಳು ಕಾಲ್ಕೀಳುವಂತೆ ಮಾಡಿ ವಿಶ್ವೇಶ್ವರನ ಚರಣಗಳಲ್ಲಿ ಭಕ್ತಿಯನ್ನು ತೋರಿದರು. ಈಗ ೨೦೨೧ ನೇ ಇಸವಿಯಲ್ಲಿ ಅನಾದಿ ಕಾಶಿವಿಶ್ವೇಶ್ವರನ ಪರಿಸರದ ಜೀರ್ಣೋದ್ಧಾರವು ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿದೆ. ಇದು ಒಳ್ಳೆಯ ವಿಷಯವಾಗಿದೆ; ಆದರೆ ಹಿಂದೂಗಳಿಗೆ ಮೂಲ ದೇವಸ್ಥಾನವು ಪುನಃ ಬೇಕಾಗಿದೆ. ಒಂದು ವೇಳೆ ಮೋದಿ ಸರಕಾರವು ರಾಮಮಂದಿರದ ಮೇಲಿನ ಆಕ್ರಮಣವನ್ನು ನ್ಯಾಯಾಂಗ ಹೋರಾಟದ ಮೂಲಕ ಅಲ್ಲಿ ದೇವಸ್ಥಾನವನ್ನು ನಿರ್ಮಿಸುವ ಕಾರ್ಯವನ್ನು ಅರಂಭಿಸಬಹುದಾದರೆ, ಭಾರತದ ಹೃದಯಸ್ಥಾನವಾಗಿರುವ ಕಾಶಿಯಲ್ಲಿಯೂ ಅವರು ಮನಸ್ಸು ಮಾಡಿದರೆ ಅವರಿಗೆ ಇದು ಸಹಜ ಸಾಧ್ಯವಿದೆ. ಭಾಜಪದ ಮಾತೃಸಂಘಟನೆ ರಾ.ಸ್ವ. ಸಂಘದ ಶಾಖೆಯಾಗಿರುವ ವಿಶ್ವ ಹಿಂದೂ ಪರಿಷದ್‌ನ ಹಳೆಯ ಬೇಡಿಕೆಯಾಗಿದೆ. ಹಾಗೆಯೇ ದೇಶದಾದ್ಯಂತದ ಸಮಸ್ತ ಧರ್ಮಾಭಿಮಾನಿ ಹಿಂದೂಗಳ ಸಹಜ ವಾದ ಇಚ್ಛೆಯಾಗಿದೆ. ರಾಮಮಂದಿರವನ್ನು ನಿರ್ಮಿಸಲು ವೇಗವು ದೊರಕಿದಾಗಿನಿಂದ ಈ ಇಚ್ಛೆಯು ಈಗ ಧ್ಯೇಯದಲ್ಲಿ ರೂಪಾಂತರ ವಾಗುತ್ತಾ ಸಾಗುತ್ತಿದೆ. ಪ್ರಾಯಶಃ ಮೋದಿ ಸರಕಾರವೂ ಇದರ ಕಡೆಗೆ ಗಮನವಿಟ್ಟಿರಬಹುದು; ಆದರೆ ಸದ್ಯ ಮಾತ್ರ ಪರಿಸರ ವಿಕಾಸದ ಕಾರ್ಯದ ನಿಮಿತ್ತ ಅದು ಹಿಂದೂಗಳ ಗಮನಕ್ಕೆ ಬಂದಿಲ್ಲ.

ಕಾಶಿ ವಿಶ್ವೇಶ್ವರ ದೇವಸ್ಥಾನ

ಹಿಂದೂ ದೇವಸ್ಥಾನಗಳು ಹಿಂದೂಗಳದ್ದಾಗುವುದು ಯಾವಾಗ ?

ಭಾರತದ ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕತೆ ಇವುಗಳ ಸಂಗಮವನ್ನು ಸಾಧಿಸುತ್ತಾ ಪರಿಸರದಲ್ಲಿನ ಎಲ್ಲ ಚಿಕ್ಕ-ದೊಡ್ಡ ದೇವಸ್ಥಾನಗಳಿಗೆ ಯೋಗ್ಯವಾದ ಸ್ಥಾನವನ್ನು ನೀಡಿ, ತೀರ್ಥಕ್ಷೇತ್ರಕ್ಕೆ ಬರುವ ಭಕ್ತರು ಮತ್ತು ಜಿಜ್ಞಾಸುಗಳ ಆವಶ್ಯಕತೆಯನ್ನು ಗಮನದಲ್ಲಿಟ್ಟು, ಸೌಂದರ್ಯ ಮತ್ತು ಭವ್ಯತೆಯ ಸಂಯೋಗವನ್ನು ಸಾಧಿಸಿ ಕಾಶಿ ವಿಶ್ವೇಶ್ವರ ದೇವಸ್ಥಾನದ ಪರಿಸರವನ್ನು ಸರಕಾರವು ಪುನರ್ನಿಮಾಣ ಮಾಡಿತು. ಇದು ಒಂದು ಆದರ್ಶ ತೀರ್ಥಕ್ಷೇತ್ರ ವಿಕಾಸದ ಉದಾಹರಣೆಯೆಂದು ಹೇಳಬಹುದು. ಇತ್ತೀಚೆಗಿನ ಕಾಲದಲ್ಲಿ ವಾರಣಾಸಿಯ ವಿಶ್ವೇಶ್ವರನ ಈ ಸರ್ವೋಚ್ಚ ದೇವಸ್ಥಾನದ ಪರಿಸರದಲ್ಲಿ ಕಡಿದಾದ ರಸ್ತೆಗಳು ಮತ್ತು ಕಟ್ಟಡಕಾಮಗಾರಿಗಳಿಂದ ತುಂಬಿಕೊಂಡಿರುವುದು ಗಮನಕ್ಕೆ ಬಂದಿತ್ತು. ಈ ದೇವಸ್ಥಾನದ ಪರಿಸರದ ವಿಕಸನ ಮಾಡುವುದು ಆವಶ್ಯಕವಿತ್ತು; ಆದರೆ ಅದರೊಂದಿಗೆ ಮೂಲ ದೇವಸ್ಥಾನದ ಸ್ಥಳದಲ್ಲಿ ದೇವಸ್ಥಾನದ ಜೀರ್ಣೋದ್ಧಾರವಾಗಿದ್ದರೆ, ಹಿಂದೂಗಳ ಹರ್ಷ ಮುಗಿಲು ಮುಟ್ಟುತ್ತಿತ್ತು. ಮೋದಿಯವರಿಗೆ, ಪರಿಸರದ ಈ ಉದ್ಘಾಟನೆಯ ಕಾರ್ಯಕ್ರಮಕ್ಕೆ ಬಂದ ನೂರಾರು ಸಾಧು-ಸಂತರ ಆಶೀರ್ವಾದವಿದ್ದೇ ಇದೆ; ಆದರೆ ಒಂದು ವೇಳೆ ಮೂಲ ದೇವಸ್ಥಾನವಿದ್ದ ಸ್ಥಳದಲ್ಲಿ ದೇವಸ್ಥಾನವು ನಿರ್ಮಾಣಗೊಂಡಿದ್ದು ಅವರಿಗೆ ನೋಡಲು ಸಿಕ್ಕಿದ್ದರೆ, ಅವರ ಆನಂದವು ದ್ವಿಗುಣವಾಗಿ ಈಶ್ವರನ ಕೃಪೆಯ ಸುರಿಮಳೆಯನ್ನೇ ಅನುಭವಿಸಲು ಸಿಗುತ್ತಿತು. ಭಾರತದಲ್ಲಿನ ಸಾವಿರಾರು ದೇವಸ್ಥಾನಗಳನ್ನು ಕೆಡವಿ ಆ ಜಾಗದಲ್ಲಿ ಅಥವಾ ಅವುಗಳಿಗೆ ತಾಗಿದಂತೆ ಮಸೀದಿಯನ್ನು ಕಟ್ಟಿದುದರ ಕಟು ಇತಿಹಾಸದೊಂದಿಗೆ ಇಂದು ಹಿಂದೂಗಳು ವರ್ತಮಾನದಲ್ಲಿ ಬದುಕುತ್ತಿದ್ದಾರೆ. ಹಿಂದೂಗಳ ಪೀಳಿಗೆಗಳು ಮುಂದೆ ಉರುಳುತ್ತಾ ಹೋಗುತ್ತಿದ್ದರೂ ಅವರ ಮನಸ್ಸಿನಲ್ಲಿನ ಈ ಉರಿಯುವ ಗಾಯವು ಇಂದಿಗೂ ಹಾಗೆಯೇ ಇದೆ. ಮೋದಿ ಸರಕಾರವು ಬಂದ ನಂತರ ಹಿಂದೂಗಳಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ದೊರಕಿದೆ. ರಾಮಮಂದಿರವನ್ನು ನಿರ್ಮಿಸುವ ಕಾರ್ಯವು ಹಿಂದೂಗಳ ಆಸೆಗೆ ಚಿಗುರೊಡೆದಿದೆ. ಆ ಕನಸು ಇಂದು ಅಥವಾ ನಾಳೆ ನನಸಾಗುವುದು, ಇದಕ್ಕಾಗಿ ಹಿಂದೂಗಳು ಮೋದಿಯವರಂತಹ ಸಕ್ಷಮ ನಾಯಕರ ಕಡೆಗೆ ಆಸೆಯಿಂದ ನೋಡುತ್ತಿದ್ದಾರೆ. ಸರ್ವಸಾಮಾನ್ಯ ಹಿಂದೂಗಳ ಮನಸ್ಸಿನಲ್ಲಿ ಈ ಭಾವನೆ ಇದೆ. ಇತ್ತೀಚೆಗಷ್ಟೆ ಹಿಂದೂ ಧರ್ಮಕ್ಕೆ ಹಿಂದಿರುಗಿದ ವಸೀಮ ರಿಝವಿ, ಅಂದರೆ ಜಿತೇಂದ್ರ ತ್ಯಾಗಿ ಇವರು, ‘ಮುಖ್ಯ ೧೧ ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಬೇಕು’, ಎಂದು ಹೇಳಿದ್ದರು. ತ್ಯಾಗಿ ಇವರು ಕೇವಲ ೧೧ ಸ್ಥಳಗಳ ಬಗ್ಗೆ ಹೇಳಿದ್ದಾರೆ; ಆದರೆ ಭಾರತದಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕೆಡವಿದುದರ ಇತಿಹಾಸವನ್ನು ನೋಡಿದರೆ ಇವು ಸಾವಿರಾರು ಸಂಖ್ಯೆಯಲ್ಲಿವೆ. ಛತ್ರಪತಿ ಶಿವಾಜಿ ಮಹಾರಾಜರು ಐದು ಬಾದಶಾಹರ ಆಕ್ರಮಣವನ್ನು ತಡೆಗಟ್ಟಿದರು, ಅದು ಕ್ಷಾತ್ರತೇಜ ಮತ್ತು ಭವಾನಿದೇವಿಯ ಕೃಪೆಯಿಂದ. ಇಂದು ಮೋದಿಯವರ ಬಳಿ ಸಹ ಈ ಎರಡೂ ಶಕ್ತಿಗಳಿವೆ. ಆದುದರಿಂದಲೇ ಹಿಂದೂಗಳು, ಮೋದಿಯವರು ಹಿಂದೂ ದೇವಸ್ಥಾನಗಳನ್ನು ಹಿಂದಿರುಗಿ ಪಡೆಯಬೇಕು, ಎಂಬ ಪ್ರಾಮಾಣಿಕ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಹಿಂದೂದ್ವೇಷಿಗಳಿಂದ ಕೂಡಿರುವ ಕಾಂಗ್ರೆಸ್‌ನಿಂದ ಹಿಂದೂಗಳು ಎಂದಿಗೂ ಇಂತಹ ಅಪೇಕ್ಷೆಯನ್ನು ಇಟ್ಟುಕೊಂಡಿಲ್ಲ; ಆದರೆ ಮೋದಿಯವರು ಕಾಶಿ ವಿಶ್ವೇಶ್ವರನ ಮೂಲ ದೇವಸ್ಥಾನವನ್ನು ಹಿಂದಿರುಗಿ ಪಡೆಯಬೇಕೆಂಬ ಅಪೇಕ್ಷೆ ಇದೆ; ಏಕೆಂದರೆ ವಿಶ್ವೇಶ್ವರನ ಕೃಪೆಯ ಮೇಲೆ ಅವರ ವಿಶ್ವಾಸವಿದೆ ಮತ್ತು ಅವರ ಕೃಪೆಯಿಂದಲೇ ಅವರು ಆ ಚುನಾವಣಾಕ್ಷೇತ್ರದಿಂದ ಆಯ್ಕೆಯಾಗಿ ದೇಶದ ಸರ್ವೋಚ್ಚ ಪದದಲ್ಲಿ ವಿರಾಜಮಾನರಾಗಿದ್ದಾರೆ. ಕಾಶಿ ವಿಶ್ವೇಶ್ವರ ದೇವಸ್ಥಾನವನ್ನು ಹಿಂದಿರುಗಿ ಪಡೆಯಲು ಹಿಂದೂಗಳು ದೀರ್ಘ ನ್ಯಾಯಾಂಗ ಹೋರಾಟವನ್ನು ಮಾಡಬೇಕಾಗುತ್ತದೆ. ‘ಪ್ಲೆಸಸ್ ಆಫ್ ವರ್ಶಿಪ್ ಕಾನೂನು ಸಹ ಈ ದೇವಸ್ಥಾನವನ್ನು ಹಿಂದಿರುಗಿ ಪಡೆಯಲು ಅಡ್ಡ ಬರುತ್ತಿದೆ. ಈ ಕಾನೂನನ್ನೇ ರದ್ದುಗೊಳಿಸಿ ಈ ದೇವಸ್ಥಾನವನ್ನು ಹಿಂದೂಗಳಿಗೆ ಪುನಃ ಪ್ರಾಪ್ತಮಾಡಿಕೊಡಲು ಮೋದಿ ಸರಕಾರವು ಪ್ರಯತ್ನಿಸಬೇಕು, ಎಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ !