ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ದತ್ತ ತತ್ತ್ವದ ರಂಗೋಲಿ – ೬ ರಿಂದ ೬ ಚುಕ್ಕೆ

ರಂಗೋಲಿಯನ್ನು ಸುಂದರ ಹಾಗೂ ಸಾತ್ತ್ವಿಕ ಮಾಡಲು ಅದರಲ್ಲಿ ವಿವಿಧ ಬಣ್ಣಗಳೊಂದಿಗೆ ಭಾವದ ಬಣ್ಣ ಹಾಕುವುದು ಅಪೇಕ್ಷಿತವಿದೆ.

ಕೆಲವು ರಂಗೋಲಿಗಳಿಂದ ದತ್ತತತ್ತ್ವ ಆಕರ್ಷಿತವಾಗಲು ಸಹಾಯವಾಗುತ್ತದೆ. ದತ್ತನ ಪೂಜೆಯ ಮೊದಲು ಹಾಗೆಯೇ ದತ್ತ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಹಾಕಬೇಕು. ಇಂತಹ ರಂಗೋಲಿಗಳಿಂದಾಗಿ  ದತ್ತತತ್ತ್ವ್ವ ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ವಾತಾವರಣವು ದತ್ತತತ್ತ್ವ ಭರಿತವಾಗಿ ಭಕ್ತರಿಗೆ ಅದರ ಲಾಭವಾಗುತ್ತದೆ. (ಆಧಾರ : ಸನಾತನ ನಿರ್ಮಿತ ಕಿರುಗ್ರಂಥ ‘ಸಾತ್ತ್ವಿಕ ರಂಗೋಲಿಗಳು’)