ಸಿಂಧ ಹಾಗೂ ಬಲುಚಿಸ್ತಾನವನ್ನು ಪಾಕನಿಂದ ಸ್ವಾತಂತ್ರ‍್ಯಗೊಳಿಸಿ !

ಸಂಯುಕ್ತ ರಾಷ್ಟ್ರದಲ್ಲಿ ಪಾಕನ ರಾಜಕೀಯ ಪಕ್ಷ ‘ಮುತ್ತಾಹಿದಾ ಕೌಮೀ ಮೂವಮೆಂಟ’ನ ಅಧ್ಯಕ್ಷರಾದ ಅಲ್ತಾಫ ಹುಸೇನರ ಬೇಡಿಕೆ

ಅಲ್ತಾಫ ಹುಸೇನ

ಲಂಡನ (ಬ್ರಿಟನ) – ಪಾಕಿಸ್ತಾನದ ವಶದಲ್ಲಿರುವ ಸಿಂಧ ಮತ್ತು ಬಲುಚಿಸ್ತಾನವನ್ನು ಸ್ವತಂತ್ರಗೊಳಿಸಿ ಎಂದು ಪಾಕನಲ್ಲಿನ ರಾಜಕೀಯ ಪಕ್ಷ ಮುತ್ತಾಹಿದಾ ಕೌಮೀ ಮೂವಮೆಂಟನ (ಎಮ್.ಕ್ಯೂ.ಎಮ್.ನ) ಅಧ್ಯಕ್ಷರಾದ ಅಲ್ತಾಫ ಹುಸೇನರವರು ಸಂಯುಕ್ತ ರಾಷ್ಟ್ರ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಸಾಂಸದರು ಮತ್ತು ಬ್ರಿಟನ್‌ನ ಪ್ರಧಾನಮಂತ್ರಿಗಳಾದ ಬೊರಿಸ ಜಾನಸನ್‌ರವರಿಗೆ ಪತ್ರ ಬರೆದು ಬೇಡಿಕೆ ಸಲ್ಲಿಸಿದ್ದಾರೆ. ಅಲ್ತಾಫರವರ ಮೇಲೆ ಪಾಕನಲ್ಲಿ ನೂರಾರು ಅಪರಾಧಗಳನ್ನು ನೋಂದಾಯಿಸಿರುವುದರಿಂದ ಅನೇಕ ವರ್ಷಗಳಿಂದ ಅವರು ಲಂಡನನಲ್ಲಿ ವಾಸವಾಗಿದ್ದಾರೆ.

ಅಲ್ತಾಫ ಹುಸೇನರು ನುಡಿದರು,

೧. ಪಾಕನ ಹತೋಟಿಯಲ್ಲಿರುವ ಎರಡೂ ಪ್ರದೇಶಗಳ ಜನರ ಸ್ಥಿತಿ ಅತ್ಯಂತ ದಯನೀಯವಾಗಿದೆ. ಅವರು ಸಹಾಯಕ್ಕಾಗಿ ಸಂಯುಕ್ತ ರಾಷ್ಟ್ರ, ಬ್ರಿಟನ ಹಾಗೂ ಭಾರತದ ಕಡೆ ನೋಡುತ್ತಿದ್ದಾರೆ. ಭಾರತವೂ ಸೇರಿದಂತೆ ಇತರ ನೆರೆಯ ದೇಶಗಳಿಗೆ ಉಗ್ರವಾದಿಗಳನ್ನು ಕಳುಹಿಸುವ ಪಾಕನ ಎರಡೂ ಪ್ರಾಂತ್ಯಗಳಿಗೆ ತಾಲಿಬಾನ, ಇಸ್ಲಾಮಿಕ ಸ್ಟೇಟ, ಲಷ್ಕರ-ಎ-ಝಂಗವೀ, ಲಷ್ಕರ-ಎ-ತೊಯಬಾ ಇತ್ಯಾದಿ ಉಗ್ರಗಾಮೀ ಸಂಘಟನೆಗಳಿಗಾಗಿ ಸುರಕ್ಷಿತ ಆಶ್ರಯಸ್ಥಾನವನ್ನು ನಿರ್ಮಿಸಿದೆ. ಬಲುಚಿಸ್ತಾನವನ್ನು ಚೀನಾಗೆ ಮಾರಾಟ ಮಾಡಲಾಗಿದೆ.

೨. ಭಾರತದ ವಿಭಜನೆಯು ಜಗತ್ತಿನಲ್ಲಿನ ಮಾನವ ಇತಿಹಾಸದಲ್ಲಿ ಎಲ್ಲದ್ದಕ್ಕಿಂತ ದೊಡ್ಡ ತಪ್ಪಾಗಿತ್ತು. ಇದರಿಂದ ಕೇವಲ ಭೂಗೋಳವಷ್ಟೇ ಬದಲಾಗುವುದೊಂದಿಗೆ, ಲಕ್ಷಗಟ್ಟಲೆ ಜನರ ಸ್ಥಳಾಂತರ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರಗಳಾದವು.

೩. ಒಂದು ವೇಳೆ ಸಿಂಧ ಮತ್ತು ಬಲುಚಿಸ್ತಾನ ಸ್ವತಂತ್ರವಾದರೆ, ಆಗ ನಾವು ಯುರೋಪಿಯನ್ ಸಂಘದಂತೆ ಭಾರತದೊಂದಿಗೆ ಏಕಸಂಘವಾಗಿರುವೆವು.