ವಿವಿಧ ರೋಗಗಳಿಗಾಗಿ ಭಾರತೀಯ ಸಂಗೀತ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ! – ಶಾನ್‌ ಕ್ಲಾರ್ಕ್

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಆರೋಗ್ಯಕ್ಕಾಗಿ ಸಂಗೀತ ಚಿಕಿತ್ಸೆ’ ಈ ಕುರಿತು ಸಂಶೋಧನೆ ಮಂಡನೆ !

ಶ್ರೀ. ಶಾನ್‌ ಕ್ಲಾರ್ಕ್

‘ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧವಿರುವ ಸಂಗೀತವು ವ್ಯಕ್ತಿಯ ರೋಗವನ್ನು ಗುಣಪಡಿಸಲು ಮತ್ತು ಔಷಧಿಗಳ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಲು ಸಹಾಯ ಮಾಡುಬಹುದೇ ?’, ಎಂದು ತಿಳಿಯಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್) ಇರುವ ವ್ಯಕ್ತಿಗಳ ಮೇಲೆ ಕೆಲವು ಪರೀಕ್ಷಣೆಗಳ ಮೂಲಕ ಸಂಶೋಧನೆಯನ್ನು ಮಾಡಿತು. ಈ ಸಂಶೋಧನೆಯಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಕಾರಾತ್ಮಕನಾದ ಅಥವಾ ಸಂಗೀತವು ವ್ಯಕ್ತಿಗಿರುವ ವಿವಿಧ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ವಿದೇಶಿ ಸಂಗೀತ ಚಿಕಿತ್ಸೆಗಿಂತ ಭಾರತೀಯ ಸಂಗೀತ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ ಇರುವುದಾಗಿ ಸಂಶೋಧನೆಯಲ್ಲಿ ಕಂಡು ಬಂದಿತು, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್‌ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು www.hinduscriptures.com’ ಈ ಜಾಲತಾಣವು ಆಯೋಜಿಸಿದ ‘ಆರೋಗ್ಯಕ್ಕಾಗಿ ಸಂಗೀತ ಚಿಕಿತ್ಸೆ’ ಈ ವಿಷಯಕ್ಕೆ ಸಂಬಂಧಿಸಿದ ಫೆಸ್‌ಬುಕ್‌ ‘ವೆಬಿನಾರ್‌’ನಲ್ಲಿ ಮಾತನಾಡುತ್ತಿದ್ದರು. ಈ ವೆಬಿನಾರ್‌ನ ಆಯೋಜನೆಯನ್ನು ಜಾಲತಾಣದ ಸಂಸ್ಥಾಪಕಿ ಮತ್ತು ‘ದಿ ಹಿಂದೂ ಕಲ್ಚರ್‌ ಯಾಂಡ್‌ ಲೈಫ್‌ಸ್ಟೈಲ್‌/ದಿ ವೆಜ್‌ ಸಫಾರಿ’ ಈ ಗ್ರಂಥದ ಲೇಖಕಿ ಶ್ರೀಮತಿ ವೈಶಾಲಿ ಶಹಾ ಇವರು ಮಾಡಿದ್ದರು. ಈ ಸಮಯದಲ್ಲಿ ಶ್ರೀ. ಕ್ಲಾರ್ಕ್ ಇವರು ‘ಸಂಗೀತದಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮ’ ಈ ಬಗ್ಗೆ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ಮಾಡಿದ ಸಂಶೋಧನೆಯನ್ನು ಮಂಡಿಸಿದರು.

ಸಂಗೀತದಿಂದ ವ್ಯಕ್ತಿಗಳ ಮೇಲೆ ಆಗುತ್ತಿರುವ ಪರಿಣಾಮಗಳ ಅಧ್ಯಯನಕ್ಕಾಗಿ ಅಧಿಕ ರಕ್ತದೊತ್ತಡವಿರುವ 5 ವ್ಯಕ್ತಿಗಳನ್ನು ಶಾಸ್ತ್ರೀಯ ಸಂಗೀತದಲ್ಲಿನ ರಾಗ ‘ಗೋರಖಕಲ್ಯಾಣ’ನ ನೇರ ಪ್ರಸ್ತುತಿಕರಣವನ್ನು ಒಂದು ಗಂಟೆಯ ಕಾಲ ಕೇಳಿಸಲು ಕುಳ್ಳಿರಿಸಲಾಯಿತು. ಕೆಲವು ಸಂಗೀತಕಾರರ ಅಭಿಪ್ರಾಯಕ್ಕನುಸಾರ ಗೋರಖಕಲ್ಯಾಣ ರಾಗವು ರಕ್ತದೊತ್ತಡವನ್ನು ಕಡಿಮೆ ಮಾಡಲು ಉಪಯುಕ್ತವಿದೆ. ರಾಗವನ್ನು ಪ್ರಸ್ತುತ ಪಡಿಸುವ ಕಲಾವಿದ ಶ್ರೀ. ಪ್ರದೀಪ ಚಿಟಣಿಸ್‌ ಇವರು ಉಚ್ಚ ಆಧ್ಯಾತ್ಮಿಕ ಮಟ್ಟದ ಮತ್ತು ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಕಾರಾತ್ಮಕವಾಗಿದ್ದರು. ಈ ಪ್ರಯೋಗದ 48 ಗಂಟೆ ಮೊದಲು ವೈದ್ಯಕೀಯ ತಜ್ಞರ ಮಾರ್ಗದರ್ಶನದಲ್ಲಿ ಯೋಗ್ಯವಾದ ಕಾಳಜಿಯನ್ನು ತೆಗೆದುಕೊಂಡು ಈ ಪರೀಕ್ಷಣೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ಅಧಿಕ-ರಕ್ತದೊತ್ತಡದ ಔಷಧಿಗಳನ್ನು ನಿಲ್ಲಿಸಲಾಗಿತ್ತು. ‘ರಾಗ ಗೋರಖಕಲ್ಯಾಣ’ಅನ್ನು ಕೇಳುವ ಮೊದಲು ಮತ್ತು ನಂತರ ಪಾಲ್ಗೊಂಡ ವ್ಯಕ್ತಿಗಳ ರಕ್ತದೊತ್ತಡವನ್ನು ಅಳೆಯಲಾಯಿತು, ಹಾಗೆಯೇ ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ (ಯು.ಎ.ಎಸ್‌.) ಯಂತ್ರದ ಮೂಲಕ ಅವರ ಸಕಾರಾತ್ಮಕ ಅಥವಾ ನಕಾರಾತ್ಮಕ ಊರ್ಜೆಯ ಮೇಲೆ ಸಂಗೀತದಿಂದಾದ ಪರಿಣಾಮವನ್ನು ಅಧ್ಯಯನ ಮಾಡಲಾಯಿತು. ‘ರಾಗ ಗೋರಖಕಲ್ಯಾಣ’ವನ್ನು ಕೇಳಿದ ನಂತರ ಮರುದಿನ ಬೆಳಗ್ಗೆ ಎಲ್ಲರ ರಕ್ತದೊತ್ತಡವನ್ನು ಅಳೆಯಲಾಯಿತು. ಆ ಸಮಯದಲ್ಲಿ 5 ಜನರ ಪೈಕಿ 4 ಜನರ ರಕ್ತದೊತ್ತಡವು ಸಂಗೀತವನ್ನು ಕೇಳುವ ಮೊದಲಿನ ಅವರ ರಕ್ತದೊತ್ತಡದ ತುಲನೆಯಲ್ಲಿ ಕಡಿಮೆಯಾಗಿತ್ತು. ಒಬ್ಬರ ರಕ್ತದೊತ್ತಡವು ಸಾಮನ್ಯವಾಗಿತ್ತು. ‘ಹೆಚ್ಚಳವಾದ ರಕ್ತದೊತ್ತಡವು ಕಡಿಮೆಯಾಯಿತು ಮತ್ತು 72 ಗಂಟೆಗಳ ಕಾಲ ಔಷಧೋಪಚಾರ ಮಾಡದಿದ್ದರೂ ಅದು ಹಾಗೆ ಉಳಿಯಿತು’, ಇದು ವೈಶಿಷ್ಟ್ಯಪೂರ್ಣವಾಗಿದೆ. ಸಂಗೀತವನ್ನು ಕೇಳಿದ ನಂತರ ವ್ಯಕ್ತಿಗಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಸರಾಸರಿ ಶೇ. 60 ರಷ್ಟು ಕಡಿಮೆಯಾಯಿತು ಮತ್ತು ಅವರ ಸಕಾರಾತ್ಮಕ ಊರ್ಜೆಯಲ್ಲಿ ಸರಾಸರಿ ಶೇ. 155 ರಷ್ಟು ಹೆಚ್ಚಳವಾಯಿತು. ಈ ರೀತಿ ಸಂಗೀತದ ಪರಿಣಾಮವನ್ನು ತೋರಿಸುವ ಇತರ ಪರೀಕ್ಷಣೆಗಳ ಬಗ್ಗೆ ವಿವರವಾದ ಮಾಹಿತಿಯನ್ನೂ ಶ್ರೀ. ಕ್ಲಾರ್ಕ್ ಇವರು ಆ ಸಮಯದಲ್ಲಿ ನೀಡಿದರು.

ಈ ಸಂಶೋಧನೆಯಲ್ಲಿ ಬ್ರಿಟಿಶ ಬ್ಯಾಂಡ್‌ ‘ಮಾರ್ಕೋನಿ ಯುನಿಯನ್‌’ನ ‘ವೆಟಲೆಸ್’ ಇರುವ ರಿಲ್ಯಾಕ್ಸ್ ಮ್ಯುಸಿಕ್ನ್ನೂ ಕೇಳಿಸಲಾಯಿತು. ಈ ಪ್ರಯೋಗದ ನಂತರವೂ ಇಬ್ಬರ ರಕ್ತದೊತ್ತಡವು ಕಡಿಮೆಯಾಯಿತು, ಆದರೆ ಇಬ್ಬರ ನಾಡಿಯ ಬಡಿತವು ಹೆಚ್ಚಾಯಿತು. ಹಾಗೆಯೇ ಯು.ಎ.ಎಸ್. ಯಂತ್ರದ ಮೂಲಕ ಮಾಡಿದ ಪರೀಕ್ಷಣೆಯಲ್ಲಿ ಅವರ ನಕಾರಾತ್ಮಕತೆಯಲ್ಲಿ ಸರಾಸರಿ ಶೇ. 53 ರಷ್ಟು ಹೆಚ್ಚಳವಾಯಿತು ಮತ್ತು ಒಬ್ಬರ ಸಕಾರಾತ್ಮಕ ಪ್ರಭಾವಲಯವು ಶೇ. 53 ರಷ್ಟು ಕಡಿಮೆಯಾಯಿತು ಮತ್ತು ಎರಡನೇಯವರ ಸಕಾರಾತ್ಮಕ ಪ್ರಭಾವಲಯವು ಪೂರ್ತಿಯಾಗಿ ಕಡಿಮೆಯಾಯಿತು. ಇದರಿಂದ, ಭಾರತೀಯ ಸಂಗೀತ ಮತ್ತು ನಾದ ಚಿಕಿತ್ಸೆಯಿಂದ ರೋಗಗಳು ಕಡಿಮೆಯಾಗುತ್ತವೆ ಎಂದು ಗಮನಕ್ಕೆ ಬಂದಿತು ಮತ್ತು ಇದರೊಂದಿಗೆ ವ್ಯಕ್ತಿಯ ಸಕಾರಾತ್ಮಕ ಪ್ರಭಾವಲಯವೂ ಹೆಚ್ಚಾಗುತ್ತದೆ ಮತ್ತು ವಿದೇಶಿ ಸಂಗೀತದಿಂದ ರೋಗಗಳು ಕಡಿಮೆಯಾದರೂ, ಸಕಾರಾತ್ಮಕತೆಯು ಕಡಿಮೆಯಾಗಿ ನಕಾರಾತ್ಮಕತೆಯಲ್ಲಿ ಹೆಚ್ಚಳವಾಗುತ್ತದೆ, ಎಂದು ಕಂಡು ಬಂದಿತು. ಈ ಸಂಶೋಧನೆಯಿಂದ ಸಂಗೀತದಿಂದ ವ್ಯಕ್ತಿಯ ಮೇಲೆ ಕೇವಲ ಮಾನಸಿಕ ಸ್ತರದಲ್ಲಷ್ಟೇ ಅಲ್ಲ, ಆದರೆ ಆಧ್ಯಾತ್ಮಿಕ ಸ್ತರದಲ್ಲಿಯೂ ಪರಿಣಾಮವಾಗುತ್ತದೆ. ಸಂಗೀತದ ನಿಜವಾದ ಲಾಭ ಪಡೆಯಲು ವ್ಯಕ್ತಿಯು ಆಧ್ಯಾತ್ಮಿಕ ದೃಷ್ಟಿಯಲ್ಲಿ ಶುದ್ಧ ಸಂಗೀತವನ್ನು ಕೇಳುವುದು ಮಹತ್ವದ್ದಾಗಿದೆ. ಸಂಗೀತ ಚಿಕಿತ್ಸೆಯನ್ನು (ಮ್ಯುಸಿಕ್‌ ಥೆರೆಪಿ)ಯನ್ನು ವೈದ್ಯಕೀಯ ಶಾಸ್ತ್ರಗಳು ಪರಿಗಣಿಸಬೇಕು; ಏಕೆಂದರೆ ಅದಕ್ಕಾಗಿ ಯಾವುದೇ ಖರ್ಚು ಬರುವುದಿಲ್ಲ; ಆದರೆ ಅದರ ಬಹಳಷ್ಟು ಲಾಭವಿದೆ ಎಂದು ಸಹ ಶ್ರೀ. ಕ್ಲಾರ್ಕ್ ಇವರು ಹೇಳಿದರು. ಈ ಸಂಶೋಧನೆಯ ಪ್ರಸ್ತುತಿಕರಣವನ್ನು ‘www.hinduscriptures.com’ ಈ ಜಾಲತಾಣದ ಫೆಸ್‌ಬುಕ್‌ ಪುಟದಲ್ಲಿದೆ.