‘ನಾವು ಭಾರತದ ಹಾಗೆ ಹಿಂಸಾತ್ಮಕ ಘಟನೆಗಳನ್ನು ನಿರ್ಲಕ್ಷಿಸುವುದಿಲ್ಲ !’ (ವಂತೆ)

* ಭಾರತದಲ್ಲಿ ಹಿಂಸಾಚಾರ ನಡೆಸುತ್ತಿರುವ ಹಫೀಸ್ ಸಯಿದ್‍ನಂತಹ ಅಸಂಖ್ಯಾತ ಜಿಹಾದಿ ಉಗ್ರರನ್ನೂ ಪೋಷಿಸುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ ಚೌಧರಿ ಇವರ ಹಾಸ್ಯಾಸ್ಪದ ಹೇಳಿಕೆ !

* ಭಾರತದಲ್ಲಿ ಪಾಕಿಸ್ತಾನದಂತೆ ಇತರ ದೇಶದ ಜನರನ್ನು ಧರ್ಮನಿಂದನೆಯ ಹೆಸರಿನಲ್ಲಿ ಗುಂಪಿನಿಂದ ಬರ್ಬರವಾಗಿ ಹತ್ಯೆಯಾಗುವುದಿಲ್ಲ, ಇದನ್ನು ಫವಾದ ಚೌಧರಿ ಏಕೆ ಹೇಳುವುದಿಲ್ಲ ?

ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ ಚೌಧರಿ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಶ್ರೀಲಂಕಾದ ನಾಗರಿಕನ ಧರ್ಮನಿಂದನೆಯ ಹೆಸರಿನಲ್ಲಿ ಬರ್ಬರವಾಗಿ ಹತ್ಯೆಯ ಮಾಡಿರುವ ಪ್ರಕರಣದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ ಚೌಧರಿಯವರು ‘ಈ ಘಟನೆಯಿಂದ ಪಾಕಿಸ್ತಾನಿ ಸಮಾಜ ಮತ್ತು ಸರಕಾರ ಇವರ ಪ್ರತಿಕ್ರಿಯೆ ಇದೇ ಸ್ಪಷ್ಟ ಮಾಡುತ್ತದೆ. ಅದೆಂದರೆ, ನಾವು ಭಾರತವಲ್ಲ’, ಎಂದು ಹೇಳಿದರು. ಫವಾದ ಚೌಧರಿಯವರ ಈ ಹೇಳಿಕೆಯ ಅರ್ಥ ಏನೆಂದರೆ, ಭಾರತದಲ್ಲಿನ ಮುಸಲ್ಮಾನರ ವಿರುದ್ಧ ನಿರಂತರ ಹಿಂಸೆ ನಡೆಯುತ್ತಿದ್ದು ಭಾರತದ ಈ ಬಗ್ಗೆ ಗಮನ ನೀಡುತ್ತಿಲ್ಲ; ಆದರೆ ಪಾಕಿಸ್ತಾನವು ಶ್ರೀಲಂಕಾದ ನಾಗರಿಕರ ಘಟನೆಯ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ‘ಪಾಕಿಸ್ತಾನದ ಸರಕಾರ ಪ್ರತಿಯೊಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸಂರಕ್ಷಣೆಯ ನೀಡಲು ಕಟಿಬದ್ಧವಾಗಿದೆ’, ಎಂದು ಸಹ ಫವಾದ ಚೌಧರಿ ಹೇಳಿದರು. (ಪಾಕಿಸ್ತಾನ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂರಕ್ಷಣೆ ನೀಡುತ್ತಿದ್ದರೆ, ಅಲ್ಲಿಯ ಹಿಂದೂಗಳ ನರಮೇಧ ನಡೆಯುತ್ತಿರಲಿಲ್ಲ ಮತ್ತು ಹಿಂದೂ ಯುವತಿಯರನ್ನು ಅಪಹರಿಸಿ ಅವರ ಬಲವಂತವಾಗಿ ಮತಾಂತರ ಆಗುತ್ತಿರಲಿಲ್ಲ ! – ಸಂಪಾದಕರು)