1. ಬಹುಸಂಖ್ಯಾತ ಹಿಂದೂ ಆಟಗಾರರಿಗೆ ಹಲಾಲ್ ಮಾಂಸ ಏಕೆ ?
ಭಾರತೀಯ ಕ್ರಿಕೆಟ್ ತಂಡಕ್ಕೆ ಪಂದ್ಯಾವಳಿಯ ಸಮಯದಲ್ಲಿ ಗೋಮಾಂಸ ಅಥವಾ ಹಂದಿಮಾಂಸವನ್ನು ನೀಡುವುದಿಲ್ಲ; ಆದರೆ ಇತರ ಸಮಯದಲ್ಲಿ ನೀಡುವ ಎಲ್ಲ ರೀತಿಯ ಮಾಂಸವು `ಹಲಾಲ್’ ಮಾಂಸವಾಗಿರಲಿದೆ, ಎಂದು `ಸ್ಪೋಟ್ರ್ಸ್ ತಕ್’ ಈ ವಾರ್ತಾವಾಹಿನಿಯು ವರದಿ ಮಾಡಿದೆ.
2. ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !
ದೇಶಾದ್ಯಂತ ಅಂದಾಜು 4 ಲಕ್ಷ ದೇವಾಲಯಗಳನ್ನು ಸರಕಾರ ನಡೆಸುತ್ತಿದೆ. ಇವುಗಳಲ್ಲಿ ಶ್ರೀ ತಿರುಪತಿ ಬಾಲಾಜಿ, ಶ್ರೀ ಜಗನ್ನಾಥ ಪುರಿ, ಶ್ರೀವೈಷ್ಣೋದೇವಿ ಮುಂತಾದ ದೇವಾಲಯಗಳು ಸೇರಿವೆ. ಮಹಾರಾಷ್ಟ್ರದಲ್ಲಿಯೂ ಅಂದಾಜು 4,000 ದೇವಾಲಯಗಳು ಸರಕಾರದಿಂದ ನಡೆಸಲ್ಪಡುತ್ತವೆ.
3. ಪಾಕ್ ಅಧ್ಯಕ್ಷರ ಕೂಗಾಟ !
ಇತ್ತೀಚೆಗಿನ ಹಿಂದಿ ಚಲನಚಿತ್ರ ‘ಸೂರ್ಯವಂಶಿ’ಯಲ್ಲಿ ಖಳನಾಯಕನಿಗೆ ಇಸ್ಲಾಮಿ ಹೆಸರಿದೆ ಎಂಬುದಕ್ಕೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಇವರು, ಈ ಚಲನಚಿತ್ರವು ಭಾರತದಲ್ಲಿ ಇಸ್ಲಾಮ ದ್ವೇಷವನ್ನು ಇನ್ನಷ್ಟು ಬಲಪಡಿಸುವುದು ಎಂದು ಹೇಳಿದ್ದಾರೆ.
4. ಮತಾಂಧರ ಅಕ್ರಮ ನಿರ್ಮಾಣಗಳ ಬಗ್ಗೆ ಆಡಳಿತ ನಿಷ್ಕ್ರಿಯವಾಗಿದೆಯೇ ?
ಫರಿದಾಬಾದ್ (ಹರಿಯಾಣಾ) ಇಲ್ಲಿಯ ಬಲ್ಲಭಗಡದಲ್ಲಿ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಗೋರಿಯನ್ನು ಹಿಂದುತ್ವನಿಷ್ಠ ಕಾರ್ಯಕರ್ತರು ರಾತ್ರಿಯಲ್ಲಿ ಕೆಡವಿದ್ದಾರೆ. ಇಲ್ಲಿ ಲೈಂಗಿಕತೆಗೆ ಸಂಬಂಧಿಸಿದ ವಸ್ತುಗಳು, ಅಲ್ಲದೇ ಮಹಿಳೆಯರನ್ನು ವಶೀಕರಣ ಮಾಡುವಂತಹ ಔಷಧಿಗಳು ಸಿಕ್ಕಿವೆ.
5. ಮೊದಲು ಮದರಸಾಗಳಿಗೆ ನೀಡುವ ಅನುದಾನ ನಿಲ್ಲಿಸಿ !
ಭಯೋತ್ಪಾದಕರೆಲ್ಲ ಮದರಸಾಗಳಿಂದ ಕಲಿತು ಹೊರ ಬರುತ್ತಿದ್ದಾರೆ. ದೇವರು ನನಗೆ ಅವಕಾಶ ನೀಡಿದರೆ ದೇಶದ ಎಲ್ಲ ಮದರಸಾಗಳನ್ನು ಮುಚ್ಚಲಾಗುವುದು ಎಂದು ಉತ್ತರ ಪ್ರದೇಶ ಸರಕಾರದ ರಾಜ್ಯ ಸಚಿವ ಠಾಕೂರ್ ರಘುರಾಜ ಸಿಂಗ್ ಹೇಳಿದ್ದಾರೆ.
6. ಸ್ವಾತಂತ್ರ್ಯ ದೊರಕಿದ 74 ವರ್ಷಗಳ ನಂತರದ ದಯನೀಯ ಪರಿಸ್ಥಿತಿ ತಿಳಿಯಿರಿ !
ನೀತಿ ಆಯೋಗದ ಬಡತನ ಸೂಚ್ಯಂಕ ವರದಿಯ ಪ್ರಕಾರ ಬಿಹಾರದಲ್ಲಿ ಶೇ.51.91 ರಷ್ಟು ಜನರು ಬಡವರಿದ್ದಾರೆ. ಅದೇ ಜಾರ್ಖಂಡ್‍ನಲ್ಲಿ ಶೇ.42.16, ಉತ್ತರಪ್ರದೇಶದಲ್ಲಿ ಶೇ. 37.79 ಮತ್ತು ಕರ್ನಾಟಕದಲ್ಲಿ ಶೇ. 13.16 ರಷ್ಟಿದ್ದಾರೆ.
7. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯವನ್ನು ತಡೆಗಟ್ಟುವವರ್ಯಾರು ?
ಪಾಕಿಸ್ತಾನದ ಕರಕ ಎಂಬಲ್ಲಿ ಡಿಸೆಂಬರ್ 2020 ರಲ್ಲಿ ಮತಾಂಧರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಕ್ಕೆ ನ್ಯಾಯಾಲಯವು ದಾಳಿ ಮಾಡುವವರ ಪೈಕಿ 11 ಮೌಲ್ವಿಗಳಿಗೆ ದಂಡ ವಿಧಿಸಿತ್ತು. ಮೌಲ್ವಿಗಳು ನೀಡಿದ ಒತ್ತಡದಿಂದ ಈ ದಂಡವನ್ನು ಇಲ್ಲಿಯ ಹಿಂದೂ ಕೌನ್ಸಿಲ್ ತುಂಬಿಸಬೇಕಾಯಿತು,