ಸಮಾಜವಾದಿ ಪಕ್ಷದ ಆಡಳಿತದಲ್ಲಿ ಕಟುಕರನ್ನು ಕಂಡರೆ ಹಸುಗಳು ಗಡಗಡ ನಡುಗುತ್ತವೆ ಎಂಬ ಹೇಳಿಕೆ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಇತ್ತೀಚೆಗೆ ಬಜೆಟ್ ಕುರಿತು ಚರ್ಚೆ ನಡೆಯಿತು. ಇದರಲ್ಲಿ ಪಶುಸಂಗೋಪನಾ ಸಚಿವ ಧರಮಪಾಲ ಸಿಂಗ ಮಾತನಾಡಿ, ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಗೋವುಗಳು ಕಟುಕರನ್ನು ಕಂಡರೆ ಗಡಗಡ ನಡುಗುತ್ತಿತ್ತು, ಆದರೆ ಭಾಜಪ ಅಧಿಕಾರದ ಅವಧಿಯಲ್ಲಿ ಕಟುಕರು ಗೋವುಗಳನ್ನು ಕಂಡರೆ ಗಡಗಡ ನಡುಗುತ್ತಿದ್ದಾರೆ. ರೈತರ ಬೆಳೆಗಳನ್ನು ದಾರಿ ತಪ್ಪಿದ ಪ್ರಾಣಿಗಳಿಂದ ರಕ್ಷಿಸುವ ಯೋಜನೆ ಕುರಿತು ಸಮಾಜವಾದಿ ಪಕ್ಷದ ಸದಸ್ಯರಾದ ಮಹೇಂದ್ರನಾಥ ಯಾದವ ಮತ್ತು ಸಂಗ್ರಾಮ ಸಿಂಗ ಅವರು ಕೇಳಿದ ಪ್ರಶ್ನೆಗಳಿಗೆ ಪಶು ಸಂಗೋಪನ ಸಚಿವರು ಉತ್ತರಿಸುತ್ತಿದ್ದರು. ಗೋಶಾಲೆಗಳ ನಿರ್ವಹಣೆಗಾಗಿ ಸೂಕ್ಷ್ಮ ನಿರ್ವಹಣಾ ಮಾರ್ಗಸೂಚಿಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಿಂಗ ಮಾಹಿತಿ ನೀಡಿದರು. (ಗೋವು ಸಾಕಣೆ ಮತ್ತು ಗೋಸಂರಕ್ಷಣೆಗಾಗಿ ಬಜೆಟ್‌ನಲ್ಲಿ ವಿಶೇಷ ಅವಕಾಶ ಕಲ್ಪಿಸಿರುವ ಉತ್ತರ ಪ್ರದೇಶದ ಸರಕಾರಕ್ಕೆ ಅಭಿನಂದನೆಗಳು! ಇದರಿಂದ ದೇಶದ ಇತರ ರಾಜ್ಯಗಳು ಪಾಠ ಕಲಿಯುತ್ತವೆಯೇ? – ಸಂಪಾದಕರು)
ರಾಜ್ಯ ಸರಕಾರ ಗೋವುಗಳ ಸಂರಕ್ಷಣೆಗಾಗಿ ದಿನಕ್ಕೆ 7 ಕೋಟಿ 50 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ . ಇದನ್ನು ರಾಜ್ಯ ಸರ್ಕಾರದ ಆದ್ಯತೆಗಳಲ್ಲಿ (ಪ್ರಧಾನ ಕ್ರಮಾಂಕದಲ್ಲಿ )ಸೇರಿಸಲಾಗಿದೆ ಎಂದು ಪಶುಸಂಗೋಪನಾ ಸಚಿವರು ತಿಳಿಸಿದ್ದಾರೆ.