ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಕೊಲೆಯಾದ ಆರ್.ಎಸ್.ಎಸ್. ಕಾರ್ಯಕರ್ತ ಸಂಜೀತ

೧. ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ತಿರುವನಂತಪುರಂ (ಕೇರಳ) ನಲ್ಲಿ ೧೫ ನವೆಂಬರ್ ೨೦೨೧ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ೨೭ ವರ್ಷದ ಸಂಜೀತ ಅವರನ್ನು ನಾಲ್ವರು ಅಜ್ಞಾತರು ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಈ ರಾಜಕೀಯ ಪಕ್ಷವೇ ಹೊಣೆ ಎಂದು ಭಾಜಪವು ಆರೋಪಿಸಿದೆ.

೨. ಕಾಂಗ್ರೆಸ್ಸಿಗರ ‘ಅಹಿಂಸೆ’ಯನ್ನು ತಿಳಿಯಿರಿ !

ಜಾಮನಗರದಲ್ಲಿ (ಗುಜರಾತ್) ಕಾಂಗ್ರೆಸ್ ಅಧ್ಯಕ್ಷ ದಿಭುಗಾ ಜಡೇಜಾ ಮತ್ತು ಅವರ ಕಾರ್ಯಕರ್ತರು ಹಿಂದೂ ಸೇನೆಯು ಸ್ಥಾಪಿಸಿದ್ದ ಪಂಡಿತ ನಥೂರಾಮ ಗೋಡಸೆ ಅವರ ಪುತ್ಥಳಿಯನ್ನು ಧ್ವಂಸಗೊಳಿಸಿದರು.

೩. ಕಾಂಗ್ರೆಸ್ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ತಿಳಿಯಿರಿ !

‘ರಾಜಸ್ಥಾನದಲ್ಲಿ ಶಿಕ್ಷಕರು ಸ್ಥಳಾಂತರಗೊಳ್ಳಲು ಲಂಚ ನೀಡಬೇಕಾಗುತ್ತದೆ’, ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ಮುಂದೆ ಶಿಕ್ಷಕರು ಹೇಳಿಕೊಂಡಿದ್ದಾರೆ.

೪. ಪಾಕಿಸ್ತಾನ ತನ್ನ ದೇಶದಲ್ಲಿನ ಅಲ್ಲಸಂಖ್ಯಾತರ ಮೇಲಾಗುವ ದೌರ್ಜನ್ಯದ ಬಗ್ಗೆ ಚಿಂತಿಸಲಿ  !

ಭಾರತದಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ಮುಸಲ್ಮಾನರ ಮೇಲಿನ ದೌರ್ಜನ್ಯವನ್ನು ತಡೆಯಬೇಕು. ಮುಸಲ್ಮಾನರು ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ.

೫. ಇಂತಹವರ ಮೇಲೆ ದೂರನ್ನು ದಾಖಲಿಸಿ ಜೈಲಿಗಟ್ಟಬೇಕು !

ಒಂದು ಬಣ್ಣದ ‘ಚಿಲಿಮಜೀವಿ’ (ಹುಕ್ಕಾ ಸೇದುವವರು)ಗಳು ಜನರ ಜೀವನದಲ್ಲಿ ಸಂತೋಷವನ್ನು ತರಲು ಸಾಧ್ಯವಿಲ್ಲ. ನಾವು ಸಮಾಜವಾದಿಗಳು ಎಲ್ಲಾ ಬಣ್ಣಗಳಿಂದ ಪರಿಪೂರ್ಣರಿದ್ದೇವೆ’, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಟೀಕಿಸುವಾಗ ಹೇಳಿದ್ದಾರೆ.

೬. ಕ್ರೈಸ್ತ ಪಾದ್ರಿಗಳ ಕುಂಟುನೆಪವನ್ನು ತಿಳಿಯಿರಿ !

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನನ್ನು ರೂಪಿಸುವುದಾಗಿ ಘೋಷಿಸಿದ್ದರು. ಇದನ್ನು ವಿರೋಧಿಸಿದ ಬೆಂಗಳೂರಿನ ಆರ್ಚ್‌ಬಿಷಪ್ ರೇವರೆಂಡ ಪೀಟರ್ ಮಚಾಡೊ ಇವರು, ‘ಇದು ರಾಜ್ಯದಲ್ಲಿ ಅರಾಜಕತೆಗೆ ಕಾರಣವಾಗಬಹುದು’, ಎಂದು ಹೇಳಿದ್ದಾರೆ.

೭. ಮತಾಂಧರ ದೊಂಬಿ ನಡೆಸುವ ಸಂಚನ್ನು ಅರಿತುಕೊಳ್ಳಿ

ಸಿಲಹಟ್ (ಬಾಂಗ್ಲಾದೇಶ) ಇಲ್ಲಿಯ ಹಿಂದೂಗಳ ದೇವಸ್ಥಾನಗಳಲ್ಲಿ ಕದ್ದುಮುಚ್ಚಿ ಕುರಾನ್ ಇಡಲು ಪ್ರಯತ್ನಿಸುವ ಮೀಜಾನ್ ಎಂಬ ಮತಾಂಧ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ದೇವಸ್ಥಾನಕ್ಕೆ ಕುರಾನ್ ಏಕೆ ತೆಗೆದುಕೊಂಡು ಹೋಗಿದ್ದ ಎಂಬುದರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.