ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನವನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೦೯ ನೇ ಸಂಚಿಕೆಯಲ್ಲಿ ‘ಬುದ್ಧಿ, ಅದರ ಆಧಾರ ಮತ್ತು ಉತ್ಪತ್ತಿಯ ಮಿತಿ !’ ಈ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡೆವು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.   

 (ಭಾಗ ೧೧)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/53317.html

೩೮. ಮನುಷ್ಯನಿಗೆ ಪ್ರಾಪ್ತವಾಗುವ ಜನ್ಮ, ಜಾತಿ ಮತ್ತು ಭೋಗ ಇವೆಲ್ಲ ಅವನ ಬುದ್ಧಿಯ ಆಚೆಗಿನದ್ದಾಗಿದೆ

‘ಮನುಷ್ಯನಿಗೆ ಜನ್ಮ, ಜಾತಿ ಮತ್ತು ಭೋಗ ಪ್ರಾಪ್ತಿ ಈ ಮೂರೂ ವಿಷಯಗಳು ಜೀವನದಲ್ಲಿ ಯಾವ ಕಾರಣಗಳಿಂದ ಬರುತ್ತವೆ ಎಂಬುದನ್ನು ಬುದ್ಧಿಯಿಂದ ತಿಳಿದುಕೊಳ್ಳಲು ಆಗುವುದಿಲ್ಲ ಏಕೆಂದರೆ ಅದು ಮನುಷ್ಯನ ಬುದ್ಧಿಯ ಆಚೆಗಿನದ್ದಾಗಿದೆ’.

೩೯. ಶಾರೀರಿಕ ಕ್ರಿಯೆಗಳ ಬಗ್ಗೆ ಬುದ್ಧಿಯು ಅಜ್ಞಾನಿ

ಶ್ವಾಸ ತೆಗೆದುಕೊಳ್ಳುವುದು-ಬಿಡುವುದು, ಹೃದಯಬಡಿತ, ಆಹಾರ ಜೀರ್ಣವಾಗುವುದು, ರಕ್ತ ಉತ್ಪತ್ತಿಯಾಗುವುದು ಇತ್ಯಾದಿ ಅನೇಕ ಮಹತ್ವಪೂರ್ಣ ಕ್ರಿಯೆಗಳು ಶರೀರದಲ್ಲಿ ಸತತವಾಗಿ ನಡೆದಿರುತ್ತವೆ; ಆದರೆ ಮನುಷ್ಯನ ಬುದ್ಧಿಗೆ ಅದರ ಬಗ್ಗೆ ಏನೂ ಗೊತ್ತಾಗುವುದಿಲ್ಲ. ಗಾಢ ನಿದ್ದೆಯಲ್ಲಿಯೂ ಈ ಕ್ರಿಯೆಗಳು ನಡೆಯುತ್ತಿರುತ್ತವೆ; ಆದರೆ ಬುದ್ಧಿಗೆ ಅದು ತಿಳಿಯುವುದೇ ಇಲ್ಲ.

೪೦. ಬುದ್ಧಿಯ ಮೂರು ದೋಷಗಳು ಮತ್ತು ಅವುಗಳ ವ್ಯಾಪ್ತಿ

ಬುದ್ಧಿಯಲ್ಲಿ ಮಲ, ವಿಕ್ಷೇಪ ಮತ್ತು ಆವರಣ ಎಂಬ ಹೆಸರಿನ ಮೂರು ಪ್ರಕಾರದ ದೋಷ (ವಿಕಾರ) ಗಳಿರುತ್ತವೆ. ಸಿಟ್ಟು, ದ್ವೇಷ, ಅಪೇಕ್ಷೆ, ಮತ್ಸರ, ಈರ್ಷ್ಯೇ ಇತ್ಯಾದಿಗಳು ಬುದ್ಧಿಯ ‘ಮಲ ಅಥವಾ ಮಾಲಿನ್ಯ; ಮನಸ್ಸಿನ ಚಂಚಲತೆ ಅಥವಾ ಅಸ್ಥಿರತೆ ಮತ್ತು ಮನಸ್ಸು ಅತ್ತಿತ್ತ ಅಲೆದಾಡುವುದು ಎಂದರೆ ‘ವಿಕ್ಷೇಪ’ ದೋಷವಾಗಿದೆ ಮತ್ತು ವಸ್ತುವಿನ ಯೋಗ್ಯ ಅರ್ಥವನ್ನು ಮುಚ್ಚಿಟ್ಟು ಅದನ್ನು ಅಯೋಗ್ಯವಾಗಿ ಅರ್ಥೈಸಿಕೊಳ್ಳುವುದೆಂದರೆ ಬುದ್ಧಿಯ ‘ಆವರಣ’ ದೋಷವಾಗಿದೆ. ಆವರಣ ದೋಷದಿಂದ ಮನಸ್ಸಿನಲ್ಲಿ ಗೊಂದಲ ಉತ್ಪನ್ನವಾಗುತ್ತದೆ ಮತ್ತು ಯಾವುದಾದರೊಂದು ವಿಷಯದ ಬಗ್ಗೆ ಅಯೋಗ್ಯ ರೀತಿಯಲ್ಲಿ ಅಥವಾ ಹೊಂದಿಕೆ ಇಲ್ಲದ ಅಸಂಬದ್ಧ ಜ್ಞಾನವಾಗುತ್ತದೆ.

೪೧. ಬುದ್ಧಿಯ ದೌರ್ಬಲ್ಯವನ್ನು ತೋರ್ಪಡಿಸುವ ಲಕ್ಷಣಗಳು

ಕೆಲವು ವ್ಯಕ್ತಿಗಳ ಎಲ್ಲ ವಿಷಯಗಳು ಯೋಗ್ಯವಾಗಿರುತ್ತವೆ; ಆದರೆ ಅವರಿಗೆ ಯಾವುದಾದರೊಂದು ಬೇರೆ ಹವ್ಯಾಸ(ಚಟ) ಇರುವುದು ಕಂಡು ಬರುತ್ತದೆ, ಉದಾ. ಮೇಲಿಂದ ಮೇಲೆ ಕಣ್ಣುಗಳನ್ನು ಮಿಟುಕಿಸುವುದು, ಕುತ್ತಿಗೆಯನ್ನು ಅಲುಗಾಡಿಸುವುದು ಅಥವಾ ಏನೋ ಅಸಂಬದ್ಧ ಮಾತನಾಡುವುದು ಇತ್ಯಾದಿ. ಹೀಗಾಗುವುದು ಎಂದರೆ ಬುದ್ಧಿಯ ಯಾವುದಾದರೊಂದು ಭಾಗವು ಸಡಿಲವಾಗಿರುವುದರ ಲಕ್ಷಣವಾಗಿದೆ. ಸ್ವಲ್ಪದರಲ್ಲಿ ಇದು ಬುದ್ಧಿಯ ದೌರ್ಬಲ್ಯದ ಲಕ್ಷಣವಾಗಿದೆ. ಒಂದು ಮನೋವೈಜ್ಞಾನಿಕ ಸಮೀಕ್ಷೆಗನುಸಾರ, ಇಂತಹ ಬುದ್ಧಿಜೀವಿ ಅಥವಾ ಶ್ರಮಜೀವಿ ಜನರ ಸಂಖ್ಯೆಯು ಬಹಳಷ್ಟಿದೆ. ಅವರು ಒಂದಲ್ಲೊಂದು ರೀತಿಯ ಮಾನಸಿಕ ರೋಗಗಳಿಂದ ಪೀಡಿತರಾಗಿದ್ದಾರೆ.

೪೨. ಆಶ್ಚರ್ಯಕರ ಘಟನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಬುದ್ಧಿಗಿರುವ ಕಾಠಿಣ್ಯ

ಜಗತ್ತಿನಲ್ಲಿನ ಆಶ್ಚರ್ಯಜನಕ ಸತ್ಯ (ವಸ್ತುಸ್ಥಿತಿ)ಗಳು ಮತ್ತು ನಿಷ್ಕರ್ಷಗಳನ್ನು ಅರ್ಥೈಸಿಕೊಳ್ಳಲು ಮನುಷ್ಯನ ಬುದ್ಧಿಗೆ ಸಾಧ್ಯವಿಲ್ಲ, ಉದಾ. ಶಕ್ತಿಪಾತವಾಗುವುದು, ಚಮತ್ಕಾರ ಕಾಣಿಸುವುದು, ಸಿದ್ಧಿ ಪ್ರಾಪ್ತವಾಗುವುದು ಇತ್ಯಾದಿ.

೪೩. ಬೀಜರೂಪವನ್ನು ತಿಳಿದುಕೊಳ್ಳಲು ಅಸಮರ್ಥವಾಗಿರುವ ಬುದ್ಧಿ

ಪದಾರ್ಥಗಳ ಬೀಜರೂಪದಿಂದ (ಅಂದರೆ ಅತ್ಯಂತ ಪ್ರಾರಂಭಿಕ ಅವಸ್ಥೆಯಿಂದ) ಉತ್ಪನ್ನವಾಗುವ ನಂತರದ ಸಾಧ್ಯತೆಗಳನ್ನು ತಿಳಿದುಕೊಳ್ಳುವುದು ಮನುಷ್ಯನಿಗೆ ಸಾಧ್ಯವಿರುವುದಿಲ್ಲ, ಉದಾ. ಆಲದ ಮರ ಅತಿವಿಶಾಲವಾಗಿರುತ್ತದೆ; ಆದರೆ ಅದರ ಬೀಜವು ಅತ್ಯಂತ ಚಿಕ್ಕದಾಗಿರುತ್ತದೆ. ಈ ಚಿಕ್ಕ ಬೀಜದಲ್ಲಿ ಸಂಪೂರ್ಣ ವೃಕ್ಷವನ್ನು ವಿಕಸನಗೊಳಿಸುವ ಸಾಮರ್ಥ್ಯವಿರುತ್ತದೆ; ಆದರೆ ಅದರ ಸೂಕ್ಷ್ಮತೆಯನ್ನು ಇಲ್ಲಿಯವರೆಗೆ ಯಾರಿಗೂ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

೪೪. ಭೂತಕಾಲ ಅಥವಾ ಭವಿಷ್ಯಕಾಲವನ್ನು ಅರಿತುಕೊಳ್ಳಲು ಅಸಾಧ್ಯ

೪೪ ಅ. ಭೂತಕಾಲದ ಘಟನೆಗಳು : ಮನುಷ್ಯನ ಬುದ್ಧಿಗೆ ಭೂತಕಾಲದಲ್ಲಿನ ಘಟನೆಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ, ಉದಾ. ಪೃಥ್ವಿಯು ಹೇಗೆ ಉತ್ಪತ್ತಿಯಾಯಿತು ? ಪ್ರಾಣಿಗಳ ಜಗತ್ತು ಹೇಗೆ ವಿಸ್ತಾರಗೊಂಡಿತು ? ಇತ್ಯಾದಿ.

೪೪ ಆ. ಭವಿಷ್ಯಕಾಲದ ಘಟನೆಗಳು : ಜಗತ್ತಿನಲ್ಲಿ ವಿವಿಧ ಘಟನೆಗಳ ಮತ್ತು ಕ್ರಿಯೆಗಳ ಬಗ್ಗೆ ಭವಿಷ್ಯದಲ್ಲಿ ಏನಾಗಲಿದೆ ? ಎಂಬುದರ ಮಾಹಿತಿಯನ್ನು ಮನುಷ್ಯನ ಬುದ್ಧಿಗೆ ತಿಳಿದುಕೊಳ್ಳಲು ಆಗುವುದಿಲ್ಲ.

೪೫. ಬುದ್ಧಿಗೆ ದೈನಂದಿನ ಜೀವನದಲ್ಲಿನ ವಿಷಯಗಳೂ ಬಹಳಷ್ಟು ಸಲ ತಿಳಿಯುವುದಿಲ್ಲ

೪೫ ಅ. ಕಾರ್ಯದ ಪರಿಣಾಮವೂ ತಿಳಿಯುವುದಿಲ್ಲ : ನಾವು ಯಾವುದಾದರೊಬ್ಬ ವ್ಯಕ್ತಿಯನ್ನು ನಮ್ಮ ಆತ್ಮೀಯ ಮಿತ್ರನನ್ನಾಗಿ ಮಾಡಿಕೊಳ್ಳುತ್ತೇವೆ; ಆದರೆ ಕೆಲವೊಮ್ಮೆ ಆ ಮಿತ್ರನು ನಮ್ಮ ವಿಶ್ವಾಸಘಾತ (ದ್ರೋಹ) ಮಾಡುತ್ತಾನೆ.

೪೫ ಆ. ಬುದ್ಧಿಗೆ ಎಲ್ಲ ಪರಿಣಾಮಗಳ ಪೂರ್ವಜ್ಞಾನ ಇರುವುದಿಲ್ಲ : ಆಧುನಿಕ ಯುಗದಲ್ಲಿ ಕೆಲವು ಅನುಕೂಲಕರ ವೈಜ್ಞಾನಿಕ ಉಪಕರಣಗಳು ಸಹ ಹಾನಿಕರವಾಗಿವೆ ಎಂಬುದು ದೃಢಪಟ್ಟಿದೆ, ಉದಾ. ವಿಮಾನ ತಯಾರಿಸಿದವರು ವಿಮಾನ ತಯಾರಿಸುವಾಗ, ‘ಸಂಪೂರ್ಣ ವಿಮಾನವನ್ನು ಮುಂದೊಂದು ದಿನ ಬಾಂಬ್‌ನಂತೆ ಉಪಯೋಗಿಸಲಾಗುವುದು ಅಥವಾ ಒಂದು ದೊಡ್ಡ ಕಟ್ಟಡವನ್ನು ಕೆಡವಲು (೧೧ ಸೆಪ್ಟೆಂಬರ್ ೨೦೦೧ ಈ ದಿನ ಅಮೇರಿಕಾದಲ್ಲಾದ ಆಕ್ರಮಣದಂತೆ) ವಿಮಾನವನ್ನು ಉಪಯೋಗಿಸಲಾಗುವುದು,  ಎಂಬಂತಹ ವಿಚಾರವನ್ನಾದರೂ ಮಾಡಿದ್ದರೇ ? ಇದರ ಜೊತೆಗೆ ಬಹಳಷ್ಟು ಆಧುನಿಕ ಔಷಧಿಗಳನ್ನು ಮನುಷ್ಯನ ಲಾಭಕ್ಕಾಗಿ ತಯಾರಿಸಲಾಯಿತು; ಆದರೆ ನಂತರ ಅವು ಹಾನಿಕರವಾಗಿವೆ ಎಂದು ಗಮನಕ್ಕೆ ಬಂದಿತು. ಇಂತಹ ಅನೇಕ ಉದಾಹರಣೆಗಳನ್ನು ಹೇಳಬಹುದು.

೪೫ ಇ. ಗಣಿತದ ನಿಷ್ಕರ್ಷಗಳ ಅನುಭವ ಇರುವುದಿಲ್ಲ : ಬುದ್ಧಿಯೇ ಗಣಿತವನ್ನು ರಚಿಸಿದೆ; ಆದರೆ ಗಣಿತದ (Mathematics) ಮೂಲಕ ತೆಗೆಯಲಾದ ಕೆಲವು ನಿಷ್ಕರ್ಷಗಳನ್ನು ಮನುಷ್ಯನಿಗೆ ತಿಳಿದುಕೊಳ್ಳಲು ಆಗುವುದಿಲ್ಲ (ಅಂದರೆ ಅವನಿಗೆ ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ), ಉದಾ. ಗಣಿತದಲ್ಲಿನ ಪ್ರಕ್ರಿಯೆಗಳು. ಉತ್ತರೋತ್ತರ ಭಿನ್ನತೆ (Successive differentiation), ಉತ್ತರೋತ್ತರ ಏಕತ್ರೀಕರಣ (Successive integration) ಅಥವಾ ಅವುಗಳ ಸಮಿಶ್ರ ರೂಪವನ್ನೂ ಅನುಭವಿಸಲೂ ಮನುಷ್ಯನಿಗೆ ಸಾಧ್ಯವಾಗುವುದಿಲ್ಲ.

೪೫ ಈ. ಕರ್ಮಗಳಿಂದ ಸೃಷ್ಟಿಯ ಮೇಲಾಗುವ ಪ್ರಭಾವವೂ ಬುದ್ಧಿಗೆ ಗೊತ್ತಿರುವುದಿಲ್ಲ : ನಮ್ಮ ಯಾವುದೇ ಕರ್ಮದಿಂದ ಸೃಷ್ಟಿಯ ಮೇಲೆ ಅನುಕೂಲ ಅಥವಾ ಪ್ರತಿಕೂಲ ಪ್ರಭಾವವಾಗಲಿದೆ ಎಂಬುದನ್ನು ದೃಢ ನಿಶ್ಚಯದಿಂದ ನಿರ್ಣಯವನ್ನು ತೆಗೆದುಕೊಳ್ಳುವುದು ಮನುಷ್ಯನ ಬುದ್ಧಿಯ ಆಚೆಗಿನದ್ದಾಗಿದೆ. ಮನುಷ್ಯನು ಅಲ್ಪಜ್ಞಾನಿಯಾಗಿದ್ದಾನೆ. ಅವನಿಗೆ ಸಂಪೂರ್ಣ ಸೃಷ್ಟಿಯ ಪರಿಚಯವಿರುವುದಿಲ್ಲ. ಆದ್ದರಿಂದ ಯಾವ ಪ್ರಾಣಿಯ ಯಾವ ಕರ್ಮದಿಂದ ಸೃಷ್ಟಿಯ ಯಾವ ಸ್ತರದ ಮೇಲೆ ಹೇಗೆ ಪ್ರಭಾವವು ಬೀಳುತ್ತದೆ, ಎಂಬುದರ ನಿರ್ಣಯವನ್ನು ತೆಗೆದುಕೊಳ್ಳುವುದು ಮನುಷ್ಯನ ಸಾಮರ್ಥ್ಯದ ಆಚೆಗಿನದ್ದಾಗಿದೆ; ವೇದಗಳು ಯಾವ ಕರ್ಮಗಳನ್ನು ಶುಭ ಅಥವಾ ಉಪಯುಕ್ತವೆಂದು ಹೇಳುತ್ತವೆಯೋ, ಅವುಗಳ ಪ್ರಭಾವವು ಸಂಪೂರ್ಣ ಸೃಷ್ಟಿಯ ಮೇಲೆ ಪೋಷಕ, ಮಂಗಲಮಯ ಮತ್ತು ಕಲ್ಯಾಣಕಾರಿಯಾಗುತ್ತದೆ. ಯಾವ ಕರ್ಮಗಳ ನಿರ್ದೇಶಗಳು ವೇದಗಳು ಅಶುಭ ಅಥವಾ ನಿಂದನೀಯ ಎಂದು ಹೇಳುತ್ತವೆಯೋ, ಅವುಗಳ ಪ್ರಭಾವ ಸೃಷ್ಟಿಗಾಗಿ ಖಂಡಿತವಾಗಿಯೂ ಅಮಂಗಲಕಾರಿಯಾಗುತ್ತವೆ.

(ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು (ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?)

ಭಾರತೀಯರಿಗೆ ಸ್ವಪರಾಕ್ರಮವು ಯಾವಾಗ ಗೌರವಾಸ್ಪದವೆನಿಸುವುದು ?

ಅಮೇರಿಕವು ೧೯೭೭ ನೇ ಇಸವಿಯಲ್ಲಿ ೨೦೦ ವರ್ಷಗಳ ಜೀವನವನ್ನು ಪೂರ್ತಿಗೊಳಿಸಿತು ಇದನ್ನು ಜಗತ್ತಿಗೆ ಗೌರವದಿಂದ ಹೇಳಿತು. ೧೯೭೫ ರಲ್ಲಿ ಹಾಲೆಂಡ್‌ನ ಅಮಸ್ಟರಡ್ಯಾಮ ನಗರವು ಅದರ ೭೦೦ ನೇ ಹುಟ್ಟುಹಬ್ಬವನ್ನು ಆಚರಿಸಿತು. ೭ ಶತಮಾನದ ಹಿಂದೆ ೪ ಗುಡಿಸಲುಗಳನ್ನು ಕಟ್ಟಿ ಅಮಸ್ಟರಡಮನ ನಿರ್ಮಿತಿ ಮಾಡಲಾಯಿತು, ಇದರ ಬಗ್ಗೆ ವರ್ತಮಾನದಲ್ಲಿ ಡಚ್ ನಾಗರಿಕರಿಗೆ ಅಭಿಮಾನವೆನಿಸುತ್ತದೆ.

– ಡಾ. ಅಶೋಕ ಮೊಡಕ (ಆಧಾರ : ಮಾಸಿಕ ಧರ್ಮಭಾಸ್ಕರ ದೀಪಾವಳಿ ವಿಶೇಷಾಂಕ, ನವೆಂಬರ್-ಡಿಸೆಂಬರ್ ೨೦೧೧)