ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

‘ನಾಮಜಪಾದಿ ಉಪಾಯಗಳನ್ನು ಮಾಡುವುದರಿಂದ ಸಾಧಕರಿಗಾಗುವ ತೊಂದರೆಗಳು ಹೇಗೆ ದೂರವಾಗುತ್ತವೆ, ಈ ವಿಷಯದ ಹೊಸ ಲೇಖನಮಾಲೆ !’

(ಸದ್ಗುರು) ಡಾ. ಮುಕುಲ ಗಾಡಗೀಳ

‘ಮನುಷ್ಯನ ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಸಾಧನೆಯ ಜೊತೆಗೆ ಸಮಸ್ಯೆಗಳ ಆಯಾ ಪ್ರಸಂಗಗಳಲ್ಲಿ ಆಯಾ ಸಮಸ್ಯೆಗಳಿಗೆ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕಿ ಅವುಗಳನ್ನು ಮಾಡುವುದೂ ಆವಶ್ಯಕವಾಗಿದೆ. ಸದ್ಯ ಧರ್ಮಾಚರಣೆಯು ಲುಪ್ತವಾದುದರಿಂದ ಉದ್ಭವಿಸಿರುವ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಕೋಪವುಂಟಾಗಿದೆ. ಆದ್ದರಿಂದ ಅವು ಸತ್ಕಾರ್ಯದಲ್ಲಿ ವಿಘ್ನಗಳನ್ನು ತಂದು ತೊಂದರೆಗಳನ್ನು ನೀಡುವ ಪ್ರಮಾಣದಲ್ಲಿಯೂ ಬಹಳ ಹೆಚ್ಚಳವಾಗಿದೆ. ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಸಮಾಜಾಭಿಮುಖ ಸತ್ಕಾರ್ಯವನ್ನು ಮಾಡುವ, ಅಂದರೆ ಸಮಷ್ಟಿ ಸಾಧನೆಯನ್ನು ಮಾಡುವ ಸನಾತನದ ಸಾಧಕರಿಗೆ ಸದ್ಯ ಮೇಲಿಂದ ಮೇಲೆ ಇಂತಹ ತೊಂದರೆಗಳ ಅನುಭವವಾಗುತ್ತಿದೆ. ಆದ್ದರಿಂದ ಯಾವುದೇ ಸತ್ಕಾರ್ಯವು ನಿರ್ವಿಘ್ನವಾಗಲು ಮೊದಲೇ ನಾಮಜಪಾದಿ ಉಪಾಯಗಳನ್ನು ಕಂಡುಹಿಡಿದು ಅವುಗಳನ್ನು ಮಾಡಬೇಕಾಗುತ್ತದೆ. ಹಾಗೆಯೇ ಸಾಧಕರಿಗೂ ಆಧ್ಯಾತ್ಮಿಕ ಉನ್ನತಿಗಾಗಿ ಪ್ರತಿದಿನ ಮಾಡುತ್ತಿರುವ ವ್ಯಷ್ಟಿ ಸಾಧನೆಯಲ್ಲಿಯೂ ಕೆಟ್ಟ ಶಕ್ತಿಗಳು ಮೇಲಿಂದ ಮೇಲೆ ತೊಂದರೆಗಳನ್ನು ಕೊಡುತ್ತಿವೆ. ಅದಕ್ಕಾಗಿಯೂ ಸಾಧಕರು ನಾಮಜಪಾದಿ ಉಪಾಯಗಳನ್ನು ಕಂಡುಹಿಡಿದು ಅವುಗಳನ್ನು ಮಾಡಬೇಕಾಗುತ್ತದೆ.

ಯಾವುದಾದರೊಂದು ಆಧ್ಯಾತ್ಮಿಕ ತೊಂದರೆಯ ನಿವಾರಣೆಗಾಗಿ ವಿಶಿಷ್ಟ ದೇವತೆಯ ನಾಮಜಪವನ್ನು ಕಂಡು ಹಿಡಿಯುವುದು, ಮುದ್ರೆಯನ್ನು ಕಂಡು ಹಿಡಿಯುವುದು ಮತ್ತು ಆ ಮುದ್ರೆಯಿಂದ ನ್ಯಾಸ ಮಾಡುವ ಶರೀರದ ಮೇಲಿನ ಸ್ಥಾನವನ್ನು ಕಂಡು ಹಿಡಿಯುವುದು; ಎಂದರೆ ನಾಮಜಪಕ್ಕೆ ಸಂಬಂಧಿಸಿದ ಉಪಾಯಗಳನ್ನು ಕಂಡು ಹಿಡಿಯುವುದು ಎಂದಾಗಿದೆ. ಇದು ಸೂಕ್ಷ್ಮದ ವಿಷಯವಾಗಿದೆ; ಹಾಗಾಗಿ ಅದು ನಮ್ಮ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿದೆ. ಸೂಕ್ಷ್ಮದಲ್ಲಿನ ವಿಷಯಗಳು ಅರಿವಾಗಬೇಕಾದರೆ ಸೂಕ್ಷ್ಮ ಪಂಚಜ್ಞಾನೇಂದ್ರಿಯಗಳು ಕಾರ್ಯನಿರತರಾಗಿರುವುದು ಆವಶ್ಯಕವಾಗಿದೆ. ಅವು ಸಾಧನೆಯಿಂದ ಕಾರ್ಯನಿರತವಾಗುತ್ತವೆ. ಕೆಟ್ಟ ಶಕ್ತಿಗಳು ಸೂಕ್ಷ್ಮದಲ್ಲಿರುತ್ತವೆ, ಆದುದರಿಂದ ಅವು ಮಾಡುತ್ತಿರುವ ಆಕ್ರಮಣಗಳನ್ನು ಗುರುತಿಸುವುದು, ಅವುಗಳ ಆಕ್ರಮಣಗಳ ಪದ್ಧತಿಯನ್ನು ಗುರುತಿಸುವುದು ಮತ್ತು ಆಕ್ರಮಣಗಳ ಪರಿಣಾಮವನ್ನು ಗುರುತಿಸುವುದು, ಇವುಗಳನ್ನು ಸೂಕ್ಷ್ಮದಿಂದ ತಿಳಿದುಕೊಂಡು ನಾವು ನಾಮಜಪಾದಿ ಉಪಾಯಗಳನ್ನು ಕಂಡು ಹಿಡಿಯಬಹುದು. ನಾಮಜಪಾದಿ ಉಪಾಯಗಳ ಮೂಲಕ ನಾವು ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ನಿವಾರಿಸಬಹುದು ಮತ್ತು ನಮಗಾಗುವ ತೊಂದರೆಗಳನ್ನು ದೂರಗೊಳಿಸಬಹುದು. ಹಾಗೆಯೇ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಂಡು ಭವಿಷ್ಯದಲ್ಲಾಗಬಹುದಾದ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ತಡೆಗಟ್ಟಬಹುದು.

ಪರಾತ್ಪರ ಗುರು ಡಾ. ಆಠವಲೆಯವರಿಂದ ಲಭಿಸಿದ ಮಾರ್ಗದರ್ಶನ ಮತ್ತು ಅವರ ಕೃಪೆಯಿಂದ ನಾನು ಸಾಧಕರಿಗಾಗುತ್ತಿರುವ ಮತ್ತು ಅವರ ಸೇವೆಯಲ್ಲಿ ಬರುತ್ತಿರುವ ಆಧ್ಯಾತ್ಮಿಕ ತೊಂದರೆಗಳಿಗೆ ನಾಮಜಪಾದಿ ಉಪಾಯಗಳನ್ನು ಕಂಡುಹಿಡಿಯುವ ಮತ್ತು ಕೆಲವು ಪ್ರಸಂಗಗಳಲ್ಲಿ ಉಪಾಯಗಳನ್ನು ಮಾಡುವ ಸೇವೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದೇನೆ. ಹಾಗೆಯೇ ಸಾಧಕರ ವಸ್ತು, ವಾಸಿಸುವ ವಾಸ್ತು, ದೇವತೆಗಳ ಚಿತ್ರ ಮುಂತಾದವುಗಳ ಮೇಲಾಗುತ್ತಿರುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಮೇಲೆಯೂ ನಾಮಜಪಾದಿ ಉಪಾಯಗಳನ್ನು ಮಾಡಲು ನನಗೆ ಸಾಧ್ಯವಾಗುತ್ತಿದೆ. ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯ ಮಾಡುವುದೆಂದರೆ ಒಂದು ರೀತಿಯಲ್ಲಿ ಅವುಗಳೊಂದಿಗಿನ ಹೋರಾಟವೇ ಆಗಿರುತ್ತದೆ. ಐದನೇಯ, ಆರನೇಯ ಪಾತಾಳದಲ್ಲಿನ ಕೆಟ್ಟ ಶಕ್ತಿಗಳಲ್ಲಿ ಅಪಾರ ಶಕ್ತಿಯಿರುವುದರಿಂದ ಅವುಗಳೊಂದಿಗೆ ಹೋರಾಡುವುದೆಂದರೆ ನಮ್ಮ ಜೀವವನ್ನೇ ಪಣಕ್ಕಿಟ್ಟಷ್ಟು ಅಪಾಯಕಾರಿಯಾಗಿರುತ್ತದೆ, ಆದರೂ ಗುರುಗಳ ಸಂರಕ್ಷಣಾಕವಚ ಮತ್ತು ದೇವರ ಕೃಪೆಯಿಂದಲೇ ನಾನು ಈ ಸೇವೆಯನ್ನು ಮಾಡುತ್ತಿದ್ದೇನೆ. ಈ ಸೇವೆಯಲ್ಲಿನ ನನ್ನ ವಿವಿಧ ಅನುಭವಗಳು, ನನಗೆ ಕಲಿಯಲು ಸಿಕ್ಕಿದ ಅಂಶಗಳು, ನಾನು ಉಪಾಯ ಮಾಡಿದ ಸಾಧಕರ ಅನುಭೂತಿಗಳು ಇತ್ಯಾದಿ ಬರವಣಿಗೆಯನ್ನು ಈ ಲೇಖನಮಾಲೆಯಲ್ಲಿ ನೀಡುತ್ತಿದ್ದೇನೆ. ‘ಈ ಲೇಖನವನ್ನು ಓದಿ ಜೀವನದಲ್ಲಿ ಸಾಧನೆ, ನಾಮಜಪಾದಿ ಉಪಾಯಗಳು ಮತ್ತು ಗುರುಕೃಪೆಯು ಮಹತ್ವವು ಎಲ್ಲರ ಮನಸ್ಸಿನ ಮೇಲೆ ಮೂಡಲಿ, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ. – (ಸದ್ಗುರು) ಡಾ. ಮುಕುಲ ಗಾಡಗೀಳ. ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೮.೨೦೨೧)

೯ ನೇಯ ಆನ್‌ಲೈನ್ ‘ಅಖಿಲ ಭಾರತೀಯ ಹಿಂದೂ-ರಾಷ್ಟ್ರ ಅಧಿವೇಶನ’ದ ಕಾಲಾವಧಿಯಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳರು ಹೇಳಿದ ಮತ್ತು ಅಡಚಣೆಗಳನ್ನು ದೂರಗೊಳಿಸಲು ವಿವಿಧ ಸಂತರು ಮಾಡಿದ ಉಪಾಯಗಳು ಮತ್ತು ಅದರಿಂದಾದ ಪರಿಣಾಮಗಳು

ಶ್ರೀ. ಅರುಣ ಕುಲಕರ್ಣಿ

‘ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ವತಿಯಿಂದ ೩೦.೭.೨೦೨೦ ರಿಂದ ೨.೮.೨೦೨೦ ಮತ್ತು ೬ ರಿಂದ ೧೦.೮.೨೦೨೦ ಈ ಕಾಲಾವಧಿಯಲ್ಲಿ ಆನ್‌ಲೈನ್ ‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಆಯೋಜನೆಯನ್ನು ಮಾಡಲಾಗಿತ್ತು. ಆಯೋಜನೆಯ ಸೇವೆಯಲ್ಲಿ ವಿವಿಧ ಸ್ತರಗಳಲ್ಲಿ ಅಡಚಣೆಗಳು ಬರುತ್ತಿರುವುದು ಗಮನಕ್ಕೆ ಬಂದಿತು. ಈ ಅಡಚಣೆಗಳಲ್ಲಿ ನೇರಪ್ರಸಾರದಲ್ಲಿನ ತಾಂತ್ರಿಕ ಸಮಸ್ಯೆಗಳು, ವಕ್ತಾರರನ್ನು ‘ಆನ್‌ಲೈನ್’ನಲ್ಲಿ ಜೋಡಿಸಲು ಅಡಚಣೆಗಳು ಬರುವುದು, ಅಧಿವೇಶನಕ್ಕಾಗಿ ಆವಶ್ಯಕವಿರುವ ಧ್ವನಿಚಿತ್ರಮುದ್ರಿಕೆ (ಸಿ.ಡಿ)ಗಳು ‘ಅಪ್‌ಲೋಡ್’ ಆಗದಿರುವುದು, ಉಪಸ್ಥಿತಿ ಕಡಿಮೆ ಇರುವುದು ಮುಂತಾದವುಗಳ ಸಮಾವೇಶವಿತ್ತು. ಇದರ ಹಿಂದೆ ಆಧ್ಯಾತ್ಮಿಕ ಕಾರಣಗಳಿದ್ದರೆ, ಅವುಗಳ ನಿವಾರಣೆಗಾಗಿ ಸದ್ಗುರು ಡಾ. ಮುಕುಲ ಗಾಡಗೀಳಕಾಕಾರವರಲ್ಲಿ ನಾಮಜಪಾದಿ ಉಪಾಯಗಳನ್ನು ಕೇಳಿದೆವು. ಅವರು ಹೇಳಿದ ನಾಮಜಪಾದಿ ಉಪಾಯಗಳು ಪರಿಣಾಮಕಾರಿಯಾದುದರಿಂದ ಅಧಿವೇಶನದಲ್ಲಿ ಬರುವ ವಿವಿಧ ಅಡಚಣೆಗಳನ್ನು ನಿವಾರಿಸಲು ಸಾಧ್ಯವಾಯಿತು. ಈ ನಾಮಜಪಾದಿ ಉಪಾಯಗಳನ್ನು ಸನಾತನದ ಸಂತರಾದ ಪೂ. ಉಮೇಶ ಶೆಣೈ, ಪೂ. ಶಿವಾಜಿ ವಟಕರ, ಪೂ. ಗುರುನಾಥ ದಾಭೋಲಕರ ಮತ್ತು ಪೂ. ಸದಾಶಿವ ಸಾಮಂತ ಇವರೆಲ್ಲರೂ ಮಾಡಿದರು. ೩೦.೭.೨೦೨೦ ರಿಂದ ಅಧಿವೇಶನವು ಆರಂಭವಾಯಿತು. ಆ ದಿನ ಯಾವುದೇ ಅಡಚಣೆಗಳು ಬರಬಾರದೆಂದು ೨೯.೭.೨೦೨೦ ಈ ದಿನ ನಾಮಜಪಾದಿ ಉಪಾಯಗಳನ್ನು ಮಾಡಲಾಯಿತು. ಅದರ ವೃತ್ತಾಂತವನ್ನು ಇಲ್ಲಿ ನೀಡುತ್ತಿದ್ದೇವೆ.

೧. ೨೯.೭.೨೦೨೦

೧ ಅ. ತೊಂದರೆ : ‘ಅಧಿವೇಶನದ ಆಯೋಜನೆಯಲ್ಲಿ ಪಾಲ್ಗೊಂಡಿದ್ದ ಸಾಧಕರ ಹಣೆಯಿಂದ ಗದ್ದದವರೆಗೆ ೧ ಇಂಚಿನಷ್ಟು ದಪ್ಪ ಆವರಣದ ಉದ್ದ ಪಟ್ಟಿಯಿದೆ’, ಎಂದು ಸದ್ಗುರು ಡಾ. ಮುಕುಲ ಗಾಡಗೀಳ ಕಾಕಾ ಇವರು ಹೇಳಿದರು.

‘ನಿರ್ಗುಣ’ ಜಪವನ್ನು ಆರಂಭಿಸುವ ಮೊದಲು ಶರೀರದ ಮೇಲಿನ ಆವರಣವನ್ನು ತೆಗೆಯುವಾಗ ಕೈಗಳಿಂದ ಮಾಡಬೇಕಾದ ಮುದ್ರೆ
‘ನಿರ್ಗುಣ’ ಜಪವನ್ನು ಆರಂಭಿಸುವ ಮೊದಲು ತಲೆಯಿಂದ ಆವರಣವನ್ನು ತೆಗೆಯಲು ಆರಂಭಿಸುವಾಗಿನ ಸ್ಥಿತಿ
ತಲೆಯಿಂದ ಹೊಟ್ಟೆಯ ವರೆಗಿನ ಆವರಣವನ್ನು ತೆಗೆಯುವಾಗ ಆಗುವ ಕೈಗಳ ಮುದ್ರೆ ಮತ್ತು ಕೈಗಳ ದಿಶೆ (ದಿಕ್ಕು)

೧ ಆ. ಉಪಾಯ

೧ ಆ ೧. ಜಪ : ನಿರ್ಗುಣ (ಈ ಜಪವನ್ನು ಆರಂಭಿಸುವ ಮೊದಲು ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಜೋಡಿಸಿ ಉಳಿದ ನಾಲ್ಕೂ ಬೆರಳುಗಳನ್ನು ನೇರವಾಗಿಟ್ಟು ಕಣ್ಣುಗಳನ್ನು ಮುಚ್ಚಿ ಕೈಗಳನ್ನು ತಲೆಯಿಂದ ಹೊಟ್ಟೆಯವರೆಗೆ ೭-೮ ಬಾರಿ ಮೇಲೆ ಕೆಳಗೆ ಆವರಣವನ್ನು ತೆಗೆಯಬೇಕು. (೧ ರಿಂದ ೩ ಕ್ರಮಾಂಕಗಳ ಛಾಯಾಚಿತ್ರಗಳನ್ನು ನೋಡಿರಿ.) ಆವರಣವನ್ನು ತೆಗೆಯುವ ಸಮಯದಲ್ಲಿ ‘ನಿರ್ಗುಣ’ ಜಪವನ್ನು ಮಾಡಬೇಕು.

ಒಂದು ಅಂಗೈಯನ್ನು ಆಜ್ಞಾಚಕ್ರದ ಎದುರು ಮತ್ತು ಎರಡನೇಯ ಅಂಗೈಯನ್ನು ಬಾಯಿಯ ಎದುರು ಹಿಡಿದು ಮಾಡಿದ ಮುದ್ರೆ

೧ ಆ ೨. ಮುದ್ರೆ : ಆವರಣವನ್ನು ತೆಗೆದ ಬಳಿಕ ನಾಮಜಪಾದಿ ಉಪಾಯಗಳನ್ನು ಮಾಡುವ ಸಾಧಕರು (ಸಂತರು) ತಮ್ಮ ಒಂದು ಅಂಗೈಯನ್ನು ಆಜ್ಞಾಚಕ್ರದ ಎದುರು ೧-೨ ಸೆಂ.ಮೀ. ಅಂತರದಲ್ಲಿ ಮತ್ತು ಎರಡನೇಯ ಅಂಗೈಯನ್ನು ಬಾಯಿಯ ಎದುರು ೧-೨ ಸೆಂ.ಮೀ. ಅಂತರದಲ್ಲಿ ಹಿಡಿಯಬೇಕು ಮತ್ತು ಆ ಸಮಯದಲ್ಲಿ ‘ನಿರ್ಗುಣ’ ಜಪವನ್ನು ಮಾಡಬೇಕು. (ಛಾಯಾಚಿತ್ರ ಕ್ರಮಾಂಕ ೪ ನೋಡಿರಿ.)

೧ ಆ ೩. ಕಾಲಾವಧಿ : ೨ ಗಂಟೆ

– ಶ್ರೀ. ಅರುಣ ಕುಲಕರ್ಣಿ ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೮.೨೦೨೦)

ಸದ್ಯದ ಕೊರೊನಾ ಮಹಾಮಾರಿಯ ಕಾಲದಲ್ಲಿ ಹಿಂದೂ ಜನಜಾಗೃತಿ ಸಮಿತಿ ಅಥವಾ ಸನಾತನ ಸಂಸ್ಥೆಯ ವತಿಯಿಂದ ಪ್ರತ್ಯಕ್ಷ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ; ಹಾಗಾಗಿ ಎಲ್ಲ ಕಾರ್ಯಕ್ರಮಗಳನ್ನು ‘ಆನ್‌ಲೈನ್’ನ ಮಾಧ್ಯಮದಿಂದ ತೆಗೆದುಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಕೆಲವೊಮ್ಮೆ, ಗಣಕಯಂತ್ರಗಳು ಕೆಲಸ ಮಾಡದಿರುವುದು, ಇಂಟರ್‌ನೆಟ್‌ನ ವೇಗ ಕಡಿಮೆಯಾಗುವುದು, ಇಂತಹ ಅನೇಕ ತಾಂತ್ರಿಕ ಅಡಚಣೆಗಳು ಬರುತ್ತವೆ. ಈ ಅಡಚಣೆಗಳನ್ನು ದೂರಗೊಳಿಸಲು ಅನೇಕ ರೀತಿಯಲ್ಲಿ ಪ್ರಯತ್ನಿಸಿದರೂ, ಅಡಚಣೆಗಳು ದೂರವಾಗುವುದಿಲ್ಲ. ಆಗ ಈ ಅಡಚಣೆಗಳ ಹಿಂದೆ ಆಧ್ಯಾತ್ಮಿಕ ಕಾರಣಗಳು ಇರಬಹುದೇ ? ಎಂಬುದಕ್ಕಾಗಿ ಸದ್ಗುರು ಡಾ. ಮುಕುಲ ಗಾಡಗೀಳ ಕಾಕಾರವರಲ್ಲಿ ನಾಮಜಪಾದಿ ಉಪಾಯಗಳನ್ನು ಕೇಳಲಾಗುತ್ತದೆ.

ಈ ಉಪಾಯಗಳ ಅಂತರ್ಗತ ನಾಮಜಪವನ್ನು ಮಾಡುವಾಗ ಬೇರೆ ಬೇರೆ ಮುದ್ರೆಗಳನ್ನು ಮತ್ತು ನ್ಯಾಸಗಳನ್ನು ಮಾಡಲಾಗುತ್ತದೆ. ನಾಮಜಪಾದಿ ಉಪಾಯಗಳನ್ನು ಮಾಡುವುದರಿಂದ ಎಲ್ಲ ರೀತಿಯ ಅಡಚಣೆಗಳು ದೂರವಾಗುತ್ತವೆ, ಎಂಬುದು ಗಮನಕ್ಕೆ ಬಂದಿದೆ. ಇದರಿಂದ ಸಾಧನೆಯಲ್ಲಿ ಬರುವ ಅಡಚಣೆಗಳಿಗೆ ನಾಮಜಪಾದಿ ಉಪಾಯಗಳ ಮಹತ್ವವು ಅಸಾಧಾರಣವಾಗಿದೆ ಎಂಬುದು ಗಮನಕ್ಕೆ ಬಂದಿದೆ. ಪರಾತ್ಪರ ಗುರದೇವರ ಕೃಪೆಯಿಂದ ನಮ್ಮೆಲ್ಲ ಸಾಧಕರಿಗೆ ನಾಮಜಪಾದಿ ಉಪಾಯಗಳ ಮಹತ್ವ ಕಲಿಯಲು ಸಿಗುತ್ತಿದೆ, ಇದಕ್ಕಾಗಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.