ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಅರಿತುಕೊಳ್ಳಿ

೧. ಭಯೋತ್ಪಾದಕರಿಗೆ ಧರ್ಮ ಇರುತ್ತದೆ !

ಕಾಂಸ(ಫ್ರಾನ್ಸ್) ಇಲ್ಲಿ ಮೊಹಮ್ಮದ ಪೈಗಂಬರ ಇವರ ಹೆಸರನ್ನು ಹೇಳುತ್ತಾ ‘ಅಲ್ಲಾ ಹೂ ಅಕಬರ’ ನ ಘೋಷಣೆಗಳನ್ನು ಕೂಗುತ್ತ ಒಬ್ಬ ಉಗ್ರನು ಪೊಲೀಸರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದರಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ಮಾಡಿದ ಗುಂಡು ಹಾರಾಟದಲ್ಲಿ ಆ ಉಗ್ರನು ಗಾಯಗೊಂಡನು.

೨. ಇದಕ್ಕೆ ಇದುವರೆಗಿನ ಎಲ್ಲ ಪಕ್ಷಗಳ ರಾಜಕಾರಣಿಗಳೇ ಹೊಣೆ !

ದೇಶದಲ್ಲಿ ೩೩ ಲಕ್ಷಕ್ಕಿಂತ ಹೆಚ್ಚು ಬಾಲಕರು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಬಾಲಕರು ಪೌಷ್ಠಿಕಾಂಶದ ತೀವ್ರ ಕೊರತೆ ಇರುವ ಗುಂಪಿಗೆ ಸೇರಿದ್ದಾರೆ, ಎಂಬ ಮಾಹಿತಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ವಿಕಾಸ ಸಚಿವಾಲಯವು ಮಾಹಿತಿ ಹಕ್ಕು ಅಧಿಕಾರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ನೀಡಿತು.

೩. ಇದನ್ನು ಕೇಂದ್ರ ಸರಕಾರವು ನಿಷೇಧಿಸಬೇಕು !

ಮುಂಜಾನೆಯ ಅಜಾನ್‌ದಿಂದಾಗಿ ಜನರ ನಿದ್ದೆಗೆ ಅಡ್ಡಿಯಾಗುತ್ತದೆ. ನಸುಕಿನಲ್ಲಿ ಸಾಧೂ-ಸಂತರು ಮಾಡುವ ಪೂಜಾ-ವಿಧಿಗಳಿಗೆ ಅಥವಾ ಧ್ಯಾನ ಸಾಧನೆಗೆ ಅಡಚಣೆಯಾಗುತ್ತದೆ, ಎಂದು ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಇವರು ಹೇಳಿದ್ದಾರೆ.

೪. ಹಾಗಿದ್ದರೆ ಇಸ್ಲಾಮ್‌ನ ಹೆಸರಿನಲ್ಲಿ ನಡೆಯುವ ಉಗ್ರವಾದ ಏನಿದು ?

ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕುಂಟು ಮಾಡುವುದು, ಗಲಭೆ ಮಾಡುವುದು ಮತ್ತು ದಲಿತರ ಮೇಲೆ ದೌರ್ಜನ್ಯವೆಸಗುವುದು, ಇದು ಹಿಂದುತ್ವವಲ್ಲ. ಹಿಂದುತ್ವದ ಹೆಸರಿನಲ್ಲಿ ಏನೆಲ್ಲಾ ನಡೆಯುತ್ತಿದೆಯೋ ಅದು ಹಿಂದುತ್ವವಲ್ಲ, ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಹೇಳಿದ್ದಾರೆ.

೫. ‘ಅಲ್ಲಾ ಹೂ ಅಕಬರ’ನ ಘೋಷಣೆ ಕೂಗುತ್ತ ಹತ್ಯೆ ಮಾಡುವವರು ಯಾರಾಗಿರುತ್ತಾರೆ ?

‘ಜಯ ಶ್ರೀ ರಾಮ’ನ ಘೋಷಣೆ ಕೂಗುವವರೆಲ್ಲರೂ ‘ಮುನಿಗಳಾಗಿರಲು ಸಾಧ್ಯವಿಲ್ಲ. ಇತ್ತೀಚೆಗೆ ‘ಜಯ ಶ್ರೀ ರಾಮ’ನ ಘೋಷಣೆಯನ್ನು ನೀಡುವವರು ಕೆಲವರು ಸಂತರಲ್ಲ ರಾಕ್ಷಸರಿದ್ದಾರೆ’, ಎಂದು ಕಾಂಗ್ರೆಸ್ ಮುಖಂಡ ರಶೀದ ಅಲ್ವಿ ಇವರು ಹೇಳಿದ್ದಾರೆ.

೬. ರಾಹುಲ್ ಗಾಂಧಿಯವರೇ ಜಿಹಾದಿ ಭಯೋತ್ಪಾದನೆ ಎಂದರೇನು ?

ಹಿಂದುತ್ವ ಎಂದರೆ ಸಿಕ್ಖ್ ಅಥವಾ ಮುಸಲ್ಮಾನರನ್ನು ಸೈನ್ಯದಲ್ಲಿ ನೇಮಿಸಿಕೊಳ್ಳುವುದು. ಅಖಾಲಕ್ ಹತ್ಯೆಯೂ ಹಿಂದುತ್ವವೇ ? ಎಂದು ರಾಹುಲ್ ಗಾಂಧಿಯವರು ಪಕ್ಷದ ಪರವಾಗಿ ಪ್ರಶ್ನಿಸಿದ್ದಾರೆ.

೭. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಅರಿತುಕೊಳ್ಳಿ

ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಮ್’ ಈ ಸಾಂಪ್ರದಾಯಿಕ ಸಿಹಿ ಪದಾರ್ಥ ತಯಾರಿಕೆಯ ಗುತ್ತಿಗೆಯನ್ನು ಮುಸಲ್ಮಾನ ವ್ಯಕ್ತಿಗೆ ನೀಡಿದ್ದು ಅದಕ್ಕೆ ‘ಅಲ್ ಝಾಹಾ’ ಎಂದು ಅರಬ್ಬಿ ಹೆಸರು ನೀಡಿ ‘ಹಲಾಲ್ ಪ್ರಮಾಣಿತ’ ಎಂದು ಉಲ್ಲೇಖಿಸಲಾಗಿದೆ