‘ಸರದಾರ ಉಧಮ’ರ ಅವಮಾನ !

ಸಾವರಕರರನ್ನು ದ್ವೇಷಿಸುವ ಕಾಂಗ್ರೆಸ್ಸಿಗೆ ಸರದಾರ ಉಧಮಸಿಂಹ ಬಗ್ಗೆ ಎಲ್ಲಿಲ್ಲದ ಅಕ್ಕರೆ ಮೂಡಿರುವುದು ದ್ವಿಮುಖನೀತಿಯೇ !

೧೯೦೬ ರಿಂದ ೧೯೧೦ ಈ ೪ ವರ್ಷಗಳ ಕಾಲಾವಧಿಯಲ್ಲಿ ಸ್ವಾತಂತ್ರ್ಯವೀರ ಸಾವರಕರರು ಬ್ರಿಟಿಷರ ಆಡಳಿತದ ಭದ್ರಕೋಟೆಯಾಗಿದ್ದ ಲಂಡನ್‌ಗೆ ಹೋಗಿ ಭಾರತೀಯ ಸಂಘಟನೆಯ ಅಮೂಲ್ಯ ಕಾರ್ಯವನ್ನು ಮಾಡಿದರು. ಕ್ರೂರಕರ್ಮಿ ಬ್ರಿಟಿಷರ ಕೃತ್ಯಗಳನ್ನು ಜಾಗತಿಕ ವೇದಿಕೆಯ ಮೇಲೆ ಮಂಡಿಸುವವರಲ್ಲಿ ಸಾವರಕರರದ್ದು ಸಿಂಹಪಾಲಿತ್ತು. ತನ್ಮೂಲಕ ಮದನಲಾಲ ಧಿಂಗ್ರಾ, ವಿ.ವಿ.ಎಸ್. ಅಯ್ಯರ ಇವರಂತಹ ಅನೇಕ ಪ್ರತಿಭಾವಂತ ಭಾರತೀಯರಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದವರೂ ಸಾವರಕರರೇ ಆಗಿದ್ದರು. ಅವರ ಈ ಕಾರ್ಯದ ಕುರಿತು ಭಾರತೀಯರಲ್ಲಿ ಇರುವಷ್ಟು ಅರಿವು ಕ್ರಾಂತಿಕಾರಿ ಸರದಾರ ಉಧಮಸಿಂಹರ ಬಗ್ಗೆ ಇರುವುದು ವಿರಳವೆಂದೇ ಹೇಳಬೇಕಾಗುವುದು. ಸಾವರಕರರ ಬಳಿಕ ಇಂಗ್ಲೆಂಡ್‌ನ ಭೂಮಿಯಲ್ಲಿ ಸುಮಾರು ೨೫ ವರ್ಷಗಳ ಬಳಿಕ ತಮ್ಮ ಕ್ರಾಂತಿಕಾರ್ಯಗಳಿಂದ ಜಗತ್ತಿನ ಗಮನವನ್ನು ಸೆಳೆದ ಮಹಾನ ಕ್ರಾಂತಿಕಾರಿಯೆಂದರೆ ಸರದಾರ ಉಧಮಸಿಂಹ ! ಶತ್ರುವಿನ ಪಾಪಗಳ ಸೇಡಾಗ್ನಿಯನ್ನು ಸುಮಾರು ೨೦ ವರ್ಷಕ್ಕೂ ಹೆಚ್ಚು ಕಾಲ ಮನಸ್ಸಿನಲ್ಲಿಯೇ ಧಗಧಗಿಸುತ್ತ ಇಟ್ಟುಕೊಂಡು ಅದರ ಸೇಡು ತೀರಿಸಿಕೊಳ್ಳುವ ಆಧುನಿಕ ಇತಿಹಾಸದ ಏಕಮೇವಾದ್ವಿತೀಯ ಉದಾಹರಣೆಯೆಂದು ಸರದಾರ ಉಧಮಸಿಂಹ ಇವರನ್ನು ಉಲ್ಲೇಖಿಸಬಹುದಾಗಿದೆ. ೨೩ ಮಾರ್ಚ ೧೯೧೯ ರಂದು ಬ್ರಿಟಿಷ ಅಧಿಕಾರಿ ಮೈಕಲ್ ಎಡ್ವಾಯರ್‌ನ ಆದೇಶದಂತೆ ಬ್ರಿಟಿಷ ಪೊಲೀಸರು ಜಲಿಯನವಾಲಾಬಾಗ್‌ನಲ್ಲಿ ೧ ಸಾವಿರಕ್ಕಿಂತ ಅಧಿಕ ಭಾರತೀಯರ ಹತ್ಯೆ ಮಾಡಿದ್ದರು. ಈ ಹತ್ಯಾಕಾಂಡದಲ್ಲಿ ೧ ಸಾವಿರದ ೫೦೦ ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದರು. ಪಂಜಾಬ ಪ್ರಾಂತವು ಹೊತ್ತಿ ಉರಿಯುತ್ತಿತ್ತು.  ೨೦ ವರ್ಷದ ಉಧಮ ಇದನ್ನು ಪ್ರತ್ಯಕ್ಷ ನೋಡಿದ್ದನು. ಇದರ ಸಿಟ್ಟು ಮನಸ್ಸಿನಲ್ಲಿ ಇಟ್ಟುಕೊಂಡು ಅವನು ೧೯೩೩ ನೇ ಇಸವಿಯಲ್ಲಿ ಇಂಗ್ಲೆಂಡಿಗೆ ತಲುಪಿದನು. ಮೈಕಲ್ ಎಡ್ವಾಯರ್‌ನನ್ನು ಹತ್ಯೆ ಮಾಡಲು ೬ ವರ್ಷಗಳ ವರೆಗೆ ಸೂಕ್ತ ಅವಕಾಶಕ್ಕಾಗಿ ಕಾದುಕುಳಿತ್ತಿದ್ದನು ಮತ್ತು  ಸೂಕ್ತ ಸಮಯದಲ್ಲಿ ಒಂದು ಬಹಿರಂಗ ಕಾರ್ಯಕ್ರಮದಲ್ಲಿ ಅವನನ್ನು ಯಮಪುರಿಗೆ ಅಟ್ಟಿದನು. ಅವನ ಈ ಸಾಹಸ ಮತ್ತು ರಾಷ್ಟ್ರಪ್ರೇಮ ಕೃತಿಯನ್ನು ಕೆಲವರಷ್ಟೇ ಪರಿಗಣಿಸಿದರು. ಇತ್ತೀಚೆಗಷ್ಟೇ ನಿರ್ಮಿಸಲಾಗಿರುವ ‘ಸರದಾರ ಉಧಮ’ ಈ ಚಲನಚಿತ್ರದಲ್ಲಿ ಈ ವಿಷಯವನ್ನು ಸವಿಸ್ತಾರವಾಗಿ ಮತ್ತು ಸಂಪೂರ್ಣ ಅಧ್ಯಯನದೊಂದಿಗೆ ಚಿತ್ರೀಕರಣಗೊಳಿಸಲಾಗಿದೆ. ಈ ಚಲನಚಿತ್ರ ಬ್ರಿಟಿಷರ ಸಾಮ್ರಾಜ್ಯವಾದವನ್ನು ಟೀಕಿಸಿದೆ. ಅಲ್ಲದೇ ಬ್ರಿಟಿಷರು ಭಾರತದ ಮೇಲೆ ಮಾಡಿರುವ ಅನ್ಯಾಯವನ್ನು ಈ ಚಲನಚಿತ್ರದಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಲಾಗಿದೆ. ಜಾಗತೀಕರಣದ ಕಾಲದಲ್ಲಿ ಈ ರೀತಿ ಇನ್ನೊಂದು ದೇಶವನ್ನು ಟೀಕಿಸುವುದು ಸೂಕ್ತವಲ್ಲ, ಎನ್ನುವಂತಹ  ಏನೋ ಒಂದು ಕಾರಣವನ್ನು ನೀಡುತ್ತಾ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ ಈ ಸರಕಾರಿ ಸಂಸ್ಥೆಯು ಈ ಚಲನಚಿತ್ರವನ್ನು ‘ಆಸ್ಕರ್’ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲಿಲ್ಲ.

ಕಾಂಗ್ರೆಸ್‌ನ ದ್ವಿಮುಖ ನೀತಿ ! 

ಇದರಿಂದ ಕಾಂಗ್ರೆಸ್ಸಿನ ಪಿತ್ತ ನೆತ್ತಿಗೇರಿತು. ಅದು ಆಡಳಿತ ಪಕ್ಷ ಭಾಜಪದ ಮೇಲೆ ಕೆಂಡಕಾರಲು ಪ್ರಾರಂಭಿಸಿತು. ಸರದಾರ ಉಧಮಸಿಂಹ ಇವರ ಕ್ರಾಂತಿಕಾರ್ಯದ ಬಗ್ಗೆ ಅಕ್ಕರೆ ಮೂಡಿರುವ ಭಾಸವಾಗುವಂತೆ ಮಾಡುವ ಕಾಂಗ್ರೆಸ್ಸಿಗೆ ಉಧಮಸಿಂಹನ ಸಹೋದ್ಯೋಗಿ ಸ್ನೇಹಿತ ಭಗತಸಿಂಹ ಇವರಿಗೆ ‘ಭಯೋತ್ಪಾದಕ’ ಎಂದು ಹೇಳುತ್ತಲೇ ಬಂದಿದೆ. ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಆ ರೀತಿ ಸ್ಪಷ್ಟ ಉಲ್ಲೇಖವಿದೆ. ಇದನ್ನು ಇಲ್ಲಿಯವರೆಗೆ ಅನೇಕರು ವಿರೋಧಿಸಿದ್ದಾರೆ. ಆದರೆ ಕಾಂಗ್ರೆಸ್ಸಿಗೆ ಅವರ ಬಗ್ಗೆ ಯಾವತ್ತೂ ಏನೂ ಅನಿಸಿಲ್ಲ, ಅನೇಕರಿಗೆ ‘ಕ್ರಾಂತಿಕಾರಿಗಳು ಭಯೋತ್ಪಾದಕರು ಎಂದು ಅನಿಸುತ್ತದೆ’, ಇದೇ ಸತ್ಯವಾಗಿದೆ. ಈ ಅಂಶವನ್ನು ಸ್ಪಷ್ಟಪಡಿಸಲು ಸ್ವಾತಂತ್ರ್ಯವೀರ ಸಾವರಕರ ಇವರ ಉದಾಹರಣೆಯೊಂದೇ ಸಾಕಷ್ಟಾಗಿದೆ. ಸ್ವಾತಂತ್ರ್ಯವೀರರು ರಾಷ್ಟ್ರಕ್ಕಾಗಿ ಮಾಡಿದ ಅಪೂರ್ವ ತ್ಯಾಗದ ಬೆಲೆ ತಿಳಿಯದಿರುವ ಕಾಂಗ್ರೆಸ್ಸಿಗರು ‘ಕ್ಷಮಾವೀರ’ ಅಂದರೆ ‘ಎರಡು ಜೀವಾವಧಿ ಶಿಕ್ಷೆ ಕಡಿಮೆಯಾಗಲು ಬ್ರಿಟಿಷರಲ್ಲಿ ‘ಕ್ಷಮೆ’ ಕೋರಿದ ಸಾವರಕರ’ ಎಂದು ಮೇಲಿಂದ ಮೇಲೆ ಹೀಯಾಳಿಸುತ್ತಾರೆ. ಇತಿಹಾಸದ ಅಧ್ಯಯನ ಮಾಡಿರುವ ಪ್ರತಿಯೊಬ್ಬ ರಾಷ್ಟ್ರನಿಷ್ಠ ನಾಗರಿಕರಿಗೆ ಇದು ಕೇಳಿದಾಗ ಆಕ್ರೋಶ ನೆತ್ತಿಗೇರದೇ ಇರದು. ಇದರಿಂದ ಉಧಮಸಿಂಹರ ಚಲನಚಿತ್ರಕ್ಕೆ ಅನ್ಯಾಯವಾಗಿದೆ ಎಂದು ಕಿರುಚುವುದು ಕಾಂಗ್ರೆಸ್ಸಿನ ದ್ವಿಮುಖ ನೀತಿಯೇ ಆಗಿದೆ.

ಮೊದಲ ಮತ್ತು ಎರಡನೇಯ ಮಹಾಯುದ್ಧದಲ್ಲಿ ಬ್ರಿಟಿಷರಿಗಾಗಿ ಹೋರಾಡಿದ ೨೬ ಲಕ್ಷ ಭಾರತೀಯ ಸೈನಿಕರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಯಿತು. ೧೯೪೩ ನೇ ಇಸವಿಯಲ್ಲಿ ಬಂಗಾಳದ ಬರಗಾಲದಲ್ಲಿ ೪ ಲಕ್ಷ ಭಾರತೀಯರು ಬಲಿಯಾಗಿರುವುದರ ಹಿಂದೆ ಬ್ರಿಟನ್‌ನ ಆಗಿನ ಪ್ರಧಾನಮಂತ್ರಿ ವಿನ್ಸೆಂಟ ಚರ್ಚಿಲ್ ಇವರ ಎರಡನೇಯ ಮಹಾಯುದ್ಧದ ಕಾಲದ ನೀತಿಯು ಕಾರಣವಾಗಿತ್ತು ಎಂದು ಐ.ಐ.ಟಿ. ಗಾಂಧಿನಗರದ ತಂತ್ರಜ್ಞರು ಕೈಕೊಂಡ ಅಧ್ಯಯನದ ಬಳಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ೧೦೧ ವರ್ಷದ ಹಿಂದೆ ಜರುಗಿದ ಕೇವಲ ಜಲಿಯನ್‌ವಾಲಾಬಾಗ ಹತ್ಯಾಕಾಂಡದ ಬಗ್ಗೆ ವಿಚಾರವನ್ನು ಮಾಡಿದರೂ, ಬ್ರಿಟನ್ ಆ ಸಂದರ್ಭದಲ್ಲಿ ಇಲ್ಲಿಯವರೆಗೆ ಅಧಿಕೃತವಾಗಿ ಭಾರತದ ಕ್ಷಮೆಯಾಚನೆ ಮಾಡಿಲ್ಲ. ಸ್ವತಂತ್ರ ಭಾರತದಲ್ಲಿ ಎಲ್ಲಕ್ಕಿಂತ ಅಧಿಕ ಕಾಲ ಅಧಿಕಾರವನ್ನು ಅನುಭವಿಸಿರುವ ಕಾಂಗ್ರೆಸ್ ಇದಕ್ಕಾಗಿ ಯಾವತ್ತೂ ಪ್ರಯತ್ನಿಸಲೇ ಇಲ್ಲ. ಗ್ಲಾಸ್ಗೋದಲ್ಲಿ ವಿವಿಧ ಜಾಗತಿಕ ಕಾರ್ಯಕ್ರಮಗಳಿಗೆ ಇತ್ತೀಚೆಗೆ ಹೋಗಿ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಗ್ಲೆಂಡ್‌ನ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಇವರೊಂದಿಗೆ ಹೊಂದಿರುವ ಸಾಮೀಪ್ಯದ ಲಾಭವನ್ನು ಪಡೆದುಕೊಂಡು ಮುಂದಿನ ಭವಿಷ್ಯದಲ್ಲಿ ಈ ದಿಶೆಯಲ್ಲಿ ಕೂಟನೀತಿಯ ಸ್ತರದಲ್ಲಿ ಪ್ರಯತ್ನಿಸಬೇಕು, ಎನ್ನುವುದೇ ಪ್ರತಿಯೊಬ್ಬ ಸಂವೇದನಾಶೀಲ ನಾಗರಿಕರ ಅಪೇಕ್ಷೆಯಾಗಿದೆ.

ರಾಷ್ಟ್ರೀಯ ಅಸ್ಮಿತೆಯ ಅಭಾವ !

ಈಗ ‘ಫಿಲ್ಮ ಫೆಡರೇಶನ್ ಆಫ್ ಇಂಡಿಯಾ’ದ ಮೇಲೆ ಆಗಿರುವ ಆರೋಪಗಳ ವಿಚಾರ ಮಾಡೋಣ. ‘ಸರದಾರ ಉಧಮ’ ಚಲನಚಿತ್ರವು ‘ಆಸ್ಕರ್‌’ಗಾಗಿ ನಾಮಾಂಕನವಾಗದೇ ಇದ್ದುದರಿಂದ ಮೈಮೇಲೆ ಎಳೆದುಕೊಂಡಿರುವ ಅನೇಕ ಜನರ ಆಕ್ರೋಶಕ್ಕೆ ಈ ಸರಕಾರಿ ಸಂಸ್ಥೆಯು ಉತ್ತರ ನೀಡಿದೆ. ಅದು ತನ್ನ ಉತ್ತರದಲ್ಲಿ, ‘ಸರದಾರ ಉಧಮ’ ಚಲನಚಿತ್ರವು ಚೆನ್ನಾಗಿ ಮೂಡಿ ಬಂದಿದ್ದರೂ, ‘ಆಸ್ಕರ್’ ಪ್ರಶಸ್ತಿಗಾಗಿ ನಮಗೆ ನಿಲುವನ್ನು ನಿರ್ಧರಿಸಬೇಕಾಗುತ್ತದೆ. ಆಸ್ಕರ್ ನೀಡುವವರ ಮಾನಸಿಕತೆಯನ್ನು ಅಧ್ಯಯನ ಮಾಡ ಬೇಕಾಗುತ್ತದೆ. ಈ ನಾಮಾಂಕನ ರಾಷ್ಟ್ರೀಯ ಪ್ರಶಸ್ತಿಗಾಗಿ ಇಲ್ಲದೇ ೯೨ ದೇಶಗಳಿಂದ ಒಂದು ಚಲನಚಿತ್ರ ಆಯ್ಕೆ ಮಾಡುವ ಜಾಗತಿಕ ಸ್ಪರ್ಧೆಯ ಭಾಗವಾಗಿದೆ. ಇಲ್ಲಿಯವರೆಗೆ ನಾವು ಒಂದೇ ಒಂದು ‘ಆಸ್ಕರ್’ ಗೆದ್ದಿಲ್ಲ, ಎಂದಿದೆ.  ಆಸ್ಕರಗಾಗಿ ಭಾರತದಿಂದ ತಮಿಳು ಚಲನಚಿತ್ರ ‘ಕೂಳಾಂಗಲ್’ ನಾಮನಿರ್ದೇಶನಗೊಂಡಿದೆ. ಆಸ್ಕರ್ ಇತಿಹಾಸವನ್ನು ನೋಡಿದರೆ, ಬ್ರಿಟಿಷ ಸಾಮ್ರಾಜ್ಯವಾದ ಮತ್ತು ಭಾರತವಿರೋಧಿ ವೈಚಾರಿಕ ಭಯೋತ್ಪಾದಕತೆಯನ್ನು ಪ್ರೋತ್ಸಾಹಿಸಿರುವುದು ಕಂಡು ಬರುತ್ತದೆ. ೨೦೦೮ ನೇ ಇಸವಿಯಲ್ಲಿ ಭಾರತದ್ವೇಷವನ್ನು ತೋರ್ಪಡಿಸುವ ‘ಸ್ಲಮ್‌ಡಾಗ್ ಮಿಲೇಯನರ್’ ವಿದೇಶಿ ಚಲನಚಿತ್ರಕ್ಕೆ  ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪಾಶ್ಚಿಮಾತ್ಯರು ಯಾವಾಗಲೂ ಭಾರತವನ್ನು ದಮನಿಸಲು ನೋಡುತ್ತಿದ್ದಾರೆ. ಇದು ಅದರದ್ದೇ ಒಂದು ಉದಾಹರಣೆಯಾಗಿದೆ. ನಿಜಹೇಳಬೇಕೆಂದರೆ ಅವರಿಗೆ ಅವರ ಸ್ಥಾನವನ್ನು ತೋರಿಸಿ ಕೊಡಲು ‘ಸರದಾರ ಉಧಮ’ ಚಲನಚಿತ್ರವು ನಾಮನಿರ್ದೇಶನವಾಗುವುದು ಆವಶ್ಯಕವಾಗಿತ್ತು. ಆದರೆ ಅದನ್ನು ಹತ್ತಿಕ್ಕುವಲ್ಲಿ ನಮ್ಮವರೇ ಸ್ವಲ್ಪಮಟ್ಟಿಗೆ ಕಾರಣರಾಗಿದ್ದಾರೆ. ‘ಸರದಾರ ಉಧಮ’ ಚಲನಚಿತ್ರದ ಮಾಧ್ಯಮದಿಂದ ಭಾರತಕ್ಕೆ ಆಗಿರುವ ಅನ್ಯಾಯವನ್ನು ಜಾಗತಿಕ ವೇದಿಕೆಯಲ್ಲಿ ವ್ಯಕ್ತಪಡಿಸಲು ಸಿಕ್ಕಿದ್ದ ಸುವರ್ಣಾವಕಾಶವನ್ನು ಭಾರತವು ಕಳೆದುಕೊಂಡಿದೆ. ರಾಷ್ಟ್ರಪ್ರೇಮದ ಅಭಾವ ಎಲ್ಲೆಲ್ಲಿ ಕಂಡು ಬರುತ್ತದೆ ?, ಎಂದು ಹೇಳಲು ಈ ಉದಾಹರಣೆ ಸಾಕಷ್ಟು ಆಯಿತು. ಭಾರತೀಯರು ಅಂತರ್ಮುಖರಾಗುವುದು ಎಷ್ಟು ಆವಶ್ಯಕತೆಯಿದೆ ?, ಎನ್ನುವುದು ತೀವ್ರವಾಗಿ ಗಮನಕ್ಕೆ ಬರುತ್ತದೆ, ಎನ್ನುವುದು ಅಷ್ಟೇ ನಿಜ !