ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸ್ವಾಮೀಜಿ ಹಾಗೂ ಹಿಂದೂ ಸಂಘಟನೆಗಳ ನಿಯೋಗಕ್ಕೆ ಭರವಸೆಮುಖ್ಯಮಂತ್ರಿಗಳಿಗೆ ಸನಾತನದ ಕನ್ನಡ ಭಾಷೆಯ ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ’ ಈ ಗ್ರಂಥ ಉಡುಗೊರೆ |
ಕಾನೂನು ರೂಪಿಸಿದ ನಂತರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೂ ಪ್ರಯತ್ನಿಸಬೇಕು. ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಇರುವಾಗಲೂ ಅಲ್ಲಿ ಗೋಹತ್ಯೆಗಳಾಗುತ್ತಿವೆ, ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ- ಸಂಪಾದಕರು
ಬೆಂಗಳೂರು – ಬೇರೆಬೇರೆ ರಾಜ್ಯಗಳ ಮತಾಂತರ ನಿಷೇಧ ಕಾನೂನಿನ ಅಧ್ಯಯನ ಮಾಡಿ ರಾಜ್ಯದಲ್ಲಿ ಕೂಡಲೇ ಮತಾಂತರ ನಿಷೇಧ ಮಾಡುವ ಕಾನೂನು ತರಲಾಗುವುದು, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಭರವಸೆ ನೀಡಿದ್ದಾರೆ. 50 ಕ್ಕೂ ಅಧಿಕ ಸ್ವಾಮೀಜಿಗಳು ಮತ್ತು ಹಿಂದೂ ಸಂಘಟನೆಯ ಪ್ರಮುಖರಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿಯವರಿಗೆ ಮನವಿ ನೀಡಲಾಯಿತು. ಆಗ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಭರವಸೆ ನೀಡಿದ್ದಾರೆ. ಈ ಸಮಯದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಶ್ರೀ ಸಂತೋಷ ಗುರೂಜಿ, ಶ್ರೀ ಪ್ರಣವಾನಂದ ಸ್ವಾಮಿಗಳು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್, ಶ್ರೀ. ಚಂದ್ರಶೇಖರ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.
1. ಮುಖ್ಯಮಂತ್ರಿ ಬೊಮ್ಮಾಯಿಯವರು ಮಾತನಾಡುತ್ತಾ, “ಇಂದು ಸಮಾಜದಲ್ಲಿ ಮೋಸ, ಬಲವಂತ, ಆಮಿಷ ತೋರಿಸಿ ಮತಾಂತರ ಮಾಡುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ನ್ಯಾಯಾಲಯದಲ್ಲಿ ನಿಲ್ಲುವ ಉತ್ತಮ ಮತಾಂತರ ನಿಷೇಧ ಕಾನೂನನ್ನು ನಾವು ತರುತ್ತೇವೆ”, ಎಂದರು.
Karnataka CM Bommai commits to enact anti-conversion law amid demand from Hindu outfits https://t.co/m8wjyYyNId
— Republic (@republic) November 13, 2021
2. ಈ ಮೊದಲು ಮುಖ್ಯಮಂತ್ರಿ ಬೊಮ್ಮಾಯಿವರಿಗೆ ನಿವೇದನೆ ನೀಡಿದ ಶ್ರೀ, ಪ್ರಮೋದ ಮುತಾಲಿಕ್ ಅವರು, “ರಾಜ್ಯದಲ್ಲಿ ಬಲವಂತವಾಗಿ, ಆಮಿಷದಿಂದ, ಮೋಸದಿಂದ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿದೆ. ಮತಾಂತರವು ಆಸ್ಪತ್ರೆ, ಶಾಲೆಗಳ ಮೂಲಕ ನಡೆಯುತ್ತಿದೆ. ಹಿಂದುಳಿದ ವರ್ಗದವರ ಮತಾಂತರ ನಡೆಯುತ್ತಿದೆ. ಅನಧಿಕೃತ ಚರ್ಚ್‍ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು ಎಂದರು. ಮತಾಂತರ ಆದವರಿಗೆ ಸರಕಾರಿ ಸೌಲಭ್ಯ ರದ್ದು ಮಾಡಬೇಕು ಎಂದೂ ಅವರು ಆಗ್ರಹಿಸಿದರು.