ಮಾನವೀ ಬುದ್ಧಿ ಮತ್ತು ಅದಕ್ಕಿರುವ ಮಿತಿ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ, ಮುಂಬಯಿ’ಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನವನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಚಿಕೆ ೨೩/೦೫ ರಲ್ಲಿ ಪ್ರಕಟಿಸಿದ ಲೇಖನದಲ್ಲಿ ‘ಶಿಕ್ಷಣಪದ್ಧತಿ ಮತ್ತು ಅದರ ಧ್ಯೇಯದ ದೃಷ್ಟಿಯಿಂದ ಆವಶ್ಯಕವಿರುವ ವ್ಯಾಪಕ ದೃಷ್ಟಿಕೋನ’, ಇವುಗಳ ಕುರಿತು ಮಾಹಿತಿಯನ್ನು ಓದಿದೆವು. ಇಂದು ಮುಂದಿನ ಭಾಗವನ್ನು ನೋಡೋಣ. 

(ಭಾಗ ೮)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51633.html

೧೬. ಆಧುನಿಕ ಮನುಷ್ಯನು ಬುದ್ಧಿಯಿಂದ ಬಹಳಷ್ಟು ಕೆಲಸವನ್ನು ಮಾಡುತ್ತಿದ್ದರೂ ಅವನು ಬುದ್ಧಿಯ ಮಾಲಿನ್ಯವನ್ನು ದೂರಗೊಳಿಸಲು ಗಮನ ನೀಡದಿರುವುದು

ಬುದ್ಧಿಯಿಂದ ಗ್ರಹಿಸಿದ (ತಿಳಿದುಕೊಂಡ) ಜ್ಞಾನವನ್ನು ಶಿಕ್ಷಣದ ಮಾಧ್ಯಮದಿಂದ ಇತರ ಮನುಷ್ಯರಿಗೆ ಕೊಡಲಾಗುತ್ತದೆ. ಆಧುನಿಕ ಶಿಕ್ಷಣವನ್ನು ಸಂಕುಚಿತ ದೃಷ್ಟಿಕೋನದ ಆಧಾರದಲ್ಲಿ ರಚಿಸಲಾಗಿದೆ. ವ್ಯಾಪಕ ದೃಷ್ಟಿಕೋನದ ಅಭಾವದಿಂದ ಭಯಂಕರ ಪರಿಸ್ಥಿತಿಯು ಉದ್ಭವಿಸಿದೆ. ಆಧುನಿಕ ಶಿಕ್ಷಣದಲ್ಲಿ ವಿವಿಧ ದೋಷಗಳ ಸಂಗ್ರಹ ಯಾವುದರಿಂದಾಗಿದೆ ? (ಆಧುನಿಕ ಶಿಕ್ಷಣವು ಇಷ್ಟೊಂದು ದೋಷಪೂರ್ಣವಾಗಿರುವುದರ ಹಿಂದಿನ ಕಾರಣಗಳೇನು ?) ಈ ಪ್ರಶ್ನೆಗೆ ಯೋಗ್ಯ ಉತ್ತರ ಆಧುನಿಕ ಮನುಷ್ಯನಲ್ಲಿಲ್ಲ. ಆಧುನಿಕ ಮನುಷ್ಯನು ಬುದ್ಧಿಯಿಂದಲೇ ಹೆಚ್ಚು ಕೆಲಸವನ್ನು ಮಾಡುತ್ತಾನೆ; ಆದರೆ ಅವನು ಆ ಬುದ್ಧಿಯ ಮಾಲಿನ್ಯವನ್ನು ದೊರಗೊಳಿಸಲು ಅಥವಾ ಅದನ್ನು ಶುದ್ಧಗೊಳಿಸಲು ಗಮನ ಹರಿಸುವುದಿಲ್ಲ. ಬುದ್ಧಿಯಲ್ಲಿ ಯಾವ್ಯಾವ ಅಶುದ್ಧತೆಯಿದೆ ? ಬುದ್ಧಿಯ ಮಿತಿಗಳೇನು (Limitations) ? ಆಧುನಿಕ ಮನುಷ್ಯನ ಬುದ್ಧಿಗೆ ಇಂತಹ ಪ್ರಶ್ನೆಗಳೇ ಬರುವುದಿಲ್ಲ ಅಥವಾ ಬಂದರೂ ಅವನು ಇಂತಹ ಪ್ರಶ್ನೆಗಳನ್ನು ದುರ್ಲಕ್ಷಿಸುತ್ತಾನೆ.

೧೭. ಮನುಷ್ಯನ ಬುದ್ಧಿಯು ಎಲ್ಲ ರೀತಿಯ ಜ್ಞಾನವನ್ನು ಪ್ರಾಪ್ತಿ ಮಾಡುವಷ್ಟು ಸಮರ್ಥವಿದೆ ಎಂಬುದು ಸತ್ಯವಲ್ಲ

ಮನುಷ್ಯನ ಶರೀರದಲ್ಲಿ ಬುದ್ಧಿಯು ಎಲ್ಲಕ್ಕಿಂತ ಹೆಚ್ಚು ಮಹತ್ವದ ತತ್ತ್ವವಾಗಿದೆ. ಆಧುನಿಕ ಯುಗದಲ್ಲಿ ವಿವಿಧ ರೀತಿಯ ಭೌತಿಕ ಜ್ಞಾನ ಮತ್ತು ಸೌಲಭ್ಯಗಳನ್ನು ಪಡೆಯಲು ಅನೇಕ ವೈಜ್ಞಾನಿಕ ಸಿದ್ಧಾಂತಗಳನ್ನು ಮತ್ತು ಉಪಕರಣಗಳನ್ನು ಬುದ್ಧಿಯ ಮೂಲಕವೇ ಕಂಡು ಹಿಡಿಯಲಾಗಿದೆ. ಮನುಷ್ಯನ ಅಂತರ್ಮನಸ್ಸಿನಲ್ಲಿ ‘ಮನುಷ್ಯನ ಬುದ್ಧಿಯು ಎಲ್ಲ ರೀತಿಯ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವಷ್ಟು ಸಮರ್ಥವಿದೆ’, ಎಂಬ ವಿಚಾರ ಅಥವಾ ಸಂಸ್ಕಾರವಿದೆ; ಆದರೆ ಅದು ಸತ್ಯವಲ್ಲ.

೧೮. ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ ಬುದ್ಧಿಯ ಮಹತ್ವ

ಬುದ್ಧಿಯ ಮಹತ್ವವನ್ನು ಹೇಳುವಾಗ ಶ್ರೀಮದ್ಭಗವದ್ಗೀತೆಯಲ್ಲಿ, ಕಾಮವು (ಇಚ್ಛೆಯು) ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ಜ್ಞಾನದ ಮೇಲೆ ಆವರಣವನ್ನು ತಂದು (ಹೊದಿಕೆಯನ್ನು ಹಾಕಿ) ಮನುಷ್ಯನನ್ನು ಮೋಹಕ್ಕೊಳಪಡಿಸುತ್ತದೆ (ಭಗವದ್ಗೀತೆ ೩/೪೦). ಶುದ್ಧ ಬುದ್ಧಿಯಿಂದಲೇ ಮನುಷ್ಯನಿಗೆ ಕೊನೆಗೆ ಆನಂದವು ಪ್ರಾಪ್ತವಾಗುತ್ತದೆ (ಭಗವದ್ಗೀತೆ ೬/೨೧). ಬುದ್ಧಿಯು ನಾಶವಾದಾಗ ಅಂದರೆ ವಿವೇಕರಹಿತನಾದ ನಂತರವೇ ಮನುಷ್ಯನು ಸ್ವತಃ ನಾಶವಾಗುತ್ತಾನೆ ಎಂದು ಹೇಳಲಾಗಿದೆ. (ಭಗವದ್ಗೀತೆ ೨/೬೩).

೧೯. ಬುದ್ಧಿಯ ಮಿತಿಯನ್ನು ತಿಳಿದುಕೊಳ್ಳಿರಿ !

ಮನುಷ್ಯನ ಬುದ್ಧಿಗೆ ಅಪರಿಮಿತ (ಅಮರ್ಯಾದಿತ) ಕ್ಷಮತೆಯಿಲ್ಲ. (ಮನುಷ್ಯನ ಬುದ್ಧಿಯು ಸೀಮಿತವಾಗಿದೆ) ಸಾಂಸಾರಿಕ ಮನುಷ್ಯನ ಬುದ್ಧಿಗೆ ಮಿತಿಯಿರುತ್ತದೆ; ಏಕೆಂದರೆ ವಿಚಾರ ಮಾಡುವುದು, ನಿಶ್ಚಯ ಮಾಡುವುದು ಅಥವಾ ಮಾಡಲಾಗದಿರುವುದು ಇವೆಲ್ಲವು ಬುದ್ಧಿಗೆ ಸಾಧ್ಯವಾಗುವುದಿಲ್ಲ. ಬುದ್ಧಿಯ ಮಿತಿಯನ್ನು ತಿಳಿದು ಕೊಂಡ ಮೇಲೆಯೇ ನಮಗೆ ವೇದ ಅಥವಾ ವೈದಿಕ ಗ್ರಂಥಗಳ ಮಹತ್ವವು ತಿಳಿಯುತ್ತದೆ. ವೇದಗಳು ಬುದ್ಧಿಯ ಆಚೆಗಿನ ಜ್ಞಾನವನ್ನು ನೀಡುತ್ತವೆ. ಆ ಜ್ಞಾನವು ಅದ್ವಿತೀಯವಾಗಿದೆ.

೨೦. ಜ್ಞಾನೇಂದ್ರಿಯಗಳ ಶಕ್ತಿಯು ಸೀಮಿತವಾಗಿದೆ

೨೦ ಅ. ಮನುಷ್ಯನ ತುಲನೆಯಲ್ಲಿ ಕೆಲವು ಪಶು-ಪಕ್ಷಿಗಳ ಪಂಚಜ್ಞಾನೇಂದ್ರಿಯಗಳು ಹೆಚ್ಚು ತೀವ್ರವಾಗಿ ಕಾರ್ಯನಿರತವಾಗಿರುತ್ತವೆ, ಆದುದರಿಂದ ಮನುಷ್ಯನ ಬುದ್ಧಿಶಕ್ತಿಯನ್ನು ಅಪರಿಮಿತ (ಸೀಮಾತೀತ) ಶಕ್ತಿ ಎಂದು ತಿಳಿದುಕೊಳ್ಳುವುದು ಅಯೋಗ್ಯವಾಗಿದೆ ! : ಬುದ್ಧಿಯು ಸಹ ಒಂದು ಇಂದ್ರಿಯವೆಂದೇ ಪರಿಗಣಿಸಲ್ಪಟ್ಟಿದೆ. ಬುದ್ಧಿಗೆ ಜ್ಞಾನೇಂದ್ರಿಯಗಳ ಆಧಾರವಿರುತ್ತದೆ. ಪಂಚಜ್ಞಾನೇಂದ್ರಿಯಗಳ (ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ತ್ವಚೆ) ಶಕ್ತಿಯು ಅತ್ಯಂತ ಸೀಮಿತವಾಗಿರುತ್ತದೆ. ಮನುಷ್ಯನ ತುಲನೆಯಲ್ಲಿ ಕೆಲವು ಪಶು-ಪಕ್ಷಿಗಳಲ್ಲಿ ಈ ಇಂದ್ರಿಯಗಳು ತೀವ್ರ ಸ್ವರೂಪದಲ್ಲಿರುತ್ತವೆ, ಉದಾ. ನಾಯಿಗಳಲ್ಲಿ ವಾಸನೆ ತೆಗೆದುಕೊಳ್ಳುವ ಶಕ್ತಿಯು ಹೆಚ್ಚಿರುತ್ತದೆ, ಕೆಲವು ಪಕ್ಷಿಗಳ ದೃಷ್ಟಿಯ ಕ್ಷಮತೆ ಹೆಚ್ಚಿರುತ್ತದೆ. ಹೀಗಿರುವಾಗ ಮನುಷ್ಯನ ಬುದ್ಧಿಶಕ್ತಿಯನ್ನು ಅಪರಿಮಿತ ಬುದ್ಧಿಶಕ್ತಿ ಎಂದು ತಿಳಿಯುವುದು ಅಯೋಗ್ಯವಾಗಿದೆ.

೨೦ ಆ. ಬಾಲ್ಯದಲ್ಲಿ ಒಂದು ವೇಳೆ ಮೆದುಳಿನ ಬೆಳವಣಿಗೆ ಮಂದವಾದರೆ, ಬುದ್ಧಿಯು ಮಂದವಾಗಿಯೇ ಉಳಿಯುತ್ತದೆ, ವೃದ್ಧಾವಸ್ಥೆಯಲ್ಲಿ ಅಥವಾ ಕೆಲವು ಕಾಯಿಲೆಗಳಲ್ಲಿಯೂ ಬುದ್ಧಿಯು ತಾರುಣ್ಯದಲ್ಲಿನ ತುಲನೆಯಲ್ಲಿ ಮಂದವಾಗುತ್ತದೆ.

೨೧. ಬುದ್ಧಿಯ ವಿಭಜನೆ

ಬುದ್ಧಿಯ ವಿಭಜಿತವಾಗಿರುತ್ತದೆ; ಅಂದರೆ ವಿಭಕ್ತವಾಗಿದೆ, ವಿಭಜಿಸಲ್ಪಟ್ಟ, ಪರಿಮಿತ ಅಥವಾ ಸೀಮಿತವಾಗಿದೆ. ಇದರ ತಾತ್ಪರ್ಯವೆಂದರೆ ಬುದ್ಧಿಯು ಯಾವುದಾದರೊಂದು ವಿಷಯದಲ್ಲಿ ಕುಶಾಗ್ರವಾಗಿದ್ದರೆ ಅದು ಇತರ ಎಲ್ಲ ವಿಷಯಗಳಲ್ಲಿಯೂ ಅಷ್ಟೇ ಕುಶಾಗ್ರವಾಗಿರುತ್ತದೆ ಎಂದೇನಿರುವುದಿಲ್ಲ. ಒಂದು ವೇಳೆ ಅದು ವಿಶಿಷ್ಟ ಕಾಲದಲ್ಲಿ ಕುಶಾಗ್ರವಾಗಿದ್ದರೆ, ಅದು ಭವಿಷ್ಯದಲ್ಲಿಯೂ ಅದೇ ರೀತಿ ಅಷ್ಟೇ ಕುಶಾಗ್ರವಾಗಿಯೇ ಇರುವುದು, ಹೀಗೂ ಇರುವುದಿಲ್ಲ. ಕೆಲವೊಮ್ಮೆ ಮಂದ ಬುದ್ಧಿಯ ಕೆಲವು ಬಾಲಕರೂ ನಂತರ ಕುಶಾಗ್ರ ಬುದ್ಧಿಯುಳ್ಳವರಾಗುತ್ತಾರೆ.

೨೨. ಕೇವಲ ಮೆದುಳಿನ ಚಿಕ್ಕ ಭಾಗ ಕಾರ್ಯನಿರತವಾಗಿದ್ದು, ಮೆದುಳಿನ ದೊಡ್ಡ ಭಾಗವನ್ನು ಉಪಯೋಗಿಸದ ಕಾರಣ ಅದು ನಿರುಪಯುಕ್ತವಾಗಿರುವುದು ಮತ್ತು ಭಾರತೀಯ ಸಂಸ್ಕೃತಿಯು ಆ ಭಾಗದ ಉಪಯೋಗದ ಬಗ್ಗೆ ಹೇಳುವುದು

ಆಧುನಿಕ ವಿಜ್ಞಾನಿಗಳು, “ಮೆದುಳಿನ ಚಿಕ್ಕ ಭಾಗ ಮಾತ್ರ ಉಪಯೋಗಿಸಲ್ಪಡುತ್ತದೆ, ಉಳಿದ ದೊಡ್ಡ ಭಾಗವನ್ನು ಜೀವಮಾನವಿಡೀ ಯಾರೂ ಉಪಯೋಗಿಸುವುದೇ ಇಲ್ಲ, ಅದು ಹಾಗೆಯೇ ನಿರುಪಯುಕ್ತವಾಗಿರುತ್ತದೆ”, ಎಂದು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯು ಈ ದೊಡ್ಡ ಭಾಗವನ್ನು ಉಪಯೋಗಿಸಲು ಕಲಿಸುತ್ತದೆ.’

(ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)