ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು |
೧. ಪಾಕಿಸ್ತಾನವನ್ನು ನಿರ್ನಾಮ ಮಾಡಿದ ನಂತರವೇ ಈ ಘಟನೆಗಳು ನಿಲ್ಲುತ್ತವೆ !
ಪಾಕಿಸ್ತಾನವು ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ನಂತರ ದೇಶದಲ್ಲಿ ಕಾಶ್ಮೀರ, ದೆಹಲಿಯ ಸೀಮಾಪುರಿ, ಉತ್ತರಪ್ರದೇಶದ ಸಹಾರನಪೂರ ಮುಂತಾದ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು.
೨. ಚೀನಾದ ಸಂಸ್ಕೃತಿ ಪ್ರೀತಿಯನ್ನು ತಿಳಿಯಿರಿ !
ಚೀನಾದಲ್ಲಿ ಈಗ ಮಸೀದಿಗಳ ಗುಮ್ಮಟ ಮತ್ತು ಮಿನಾರ್‌ಗಳನ್ನು ತೆಗೆದುಹಾಕಲಾಗುತ್ತಿದ್ದು ಆ ಸ್ಥಳದಲ್ಲಿ ಚೀನಾ ಪದ್ಧತಿಯ ರಚನೆಯನ್ನು ಮಾಡಲಾಗುತ್ತಿದೆ. ‘ಈ ಸಂಕೇತಗಳು ಮಧ್ಯಪೂರ್ವ ಏಷ್ಯಾದಲ್ಲಿನ ಇಸ್ಲಾಮೀಕರಣದ ಒಂದು ಭಾಗ ಎಂದು ಪರಿಗಣಿಸಲ್ಪಡಬಾರದೆಂದು ಹೀಗೆ ಮಾಡಲಾಗುತ್ತಿದೆ ಎಂದು ಸರಕಾರವು ತಿಳಿಸಿದೆ.
೩. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರದ ಹಿಂದೂದ್ವೇಷವನ್ನು ತಿಳಿಯಿರಿ !
ರಾಜಸ್ಥಾನದಲ್ಲಿ ಪೊಲೀಸ್ ಠಾಣೆಗಳಲ್ಲಿ ಹಿಂದೂಗಳ ಪೂಜಾಸ್ಥಳದ ಮೇಲೆ ನಿರ್ಬಂಧ ಹೇರಲಾಗಿದೆ. ರಾಜ್ಯದ ಮುಖ್ಯ ಪೊಲೀಸ್ ಕಚೇರಿಯಿಂದ ಈ ಸಂದರ್ಭದಲ್ಲಿ ಆದೇಶ ನೀಡಲಾಗಿದೆ.
೪. ಇದು ಭಾರತವೋ ಅಥವಾ ಪಾಕಿಸ್ತಾನವೋ ?
ನವ ದೆಹಲಿಯಲ್ಲಿ ರೋಶನ್ ಪಾಠಕರವರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಗಂಟೆ ಮತ್ತು ಶಂಖವನ್ನು ಬಾರಿಸಿದ್ದರಿಂದ ನೆರೆಯಲ್ಲಿರುವ ದಾನೀಶನು ನಿದ್ದೆ ಗೆಡುತ್ತಿರುವುದಾಗಿ ಹೇಳಿ ವಿರೋಧ ಮಾಡಿದನು ಮತ್ತು ಪಾಠಕ ಇವರನ್ನು ಹತ್ಯೆಗೈಯ್ಯುವುದಾಗಿ ಬೆದರಿಕೆಯೊಡ್ಡಿದನು.
೫. ಬಾಂಗ್ಲಾದೇಶದ ಹಿಂದೂಗಳ ಕುರಿತು ರಾಹುಲ್ ಗಾಂಧಿಯವರು ಏಕೆ ಮೌನವಾಗಿದ್ದಾರೆ ?
ತ್ರಿಪುರಾದ ಹಿಂಸಾಚಾರದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ‘ತ್ರಿಪುರಾದಲ್ಲಿ ನಮ್ಮ ಮುಸಲ್ಮಾನ ಬಾಂಧವರೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಲಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
೬. ಭಾರತ ಸರಕಾರವು ಈ ಸಂಸ್ಥೆಗಳನ್ನು ನಿಷೇಧಿಸಬೇಕು !
‘ಮ್ಯಾಕಡೊನಾಲ್ಡಸ್’, ‘ಬರ್ಗರ ಕಿಂಗ್’, ‘ಡಾಮಿನೋಸ್’, ‘ಪಿಝ್ಝಾ ಹಟ್’, ‘ಟ್ಯಾಕೊ ಬೆಲ್’, ‘ಚಿಪೋಟಲ್’ ಮುಂತಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ’, ಎಂದು ಅಮೇರಿಕಾದ ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿದೆ, ಎಂದು ‘ಝೀ ನ್ಯೂಸ್’ ವಾರ್ತಾವಾಹಿನಿಯು ಮಾಹಿತಿ ನೀಡಿದೆ.
೭. ತಮ್ಮನ್ನು ‘ಹಿಂದೂ’ ಎಂದು ಹೇಳಿಕೊಳ್ಳುವ ರಾಹುಲ ಗಾಂಧಿ ಇವರಿಗೆ ಈ ಹಲ್ಲೆಗಳೇಕೆ ಕಾಣಿಸುವುದಿಲ್ಲ ?
ಮತಾಂಧರು ತ್ರಿಪುರಾದ ಕೈಲಾಶಹರ ಪ್ರದೇಶದಲ್ಲಿನ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ನಡೆಸಿ ವಿಗ್ರಹ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿದರು. ‘ಸಮೂಹವೊಂದು ಇಲ್ಲಿನ ಒಂದು ಮಸೀದಿಗೆ ಬೆಂಕಿ ಹಚ್ಚಿತು’ ಎಂಬ ಗಾಳಿಸುದ್ದಿಯ ನಂತರ ಮತಾಂಧರು ಈ ವಿಧ್ವಂಸಕ ಕೃತ್ಯವೆಸಗಿದರು.