‘ಹಿಂದೂಗಳ ಹಬ್ಬಗಳಲ್ಲಾಗುವ ಅಪಪ್ರಚಾರ ಹಾಗೂ ಹಬ್ಬಗಳ ವೈಜ್ಞಾನಿಕ ಮಹತ್ವ’ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !
ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು, ಉತ್ಸವಗಳು ಮತ್ತು ವ್ರತಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ ಆಗಿರುತ್ತದೆ; ಆದರೆ ಕಮ್ಯುನಿಸ್ಟರು (ಸಾಮ್ಯವಾದಿಗಳು), ಜಿಹಾದಿಗಳು, ಮಿಷನರಿಗಳು, ಸಿನಿಮಾ ನಟರು, ಜಾತ್ಯತೀತರು ಮತ್ತು ನಾಸ್ತಿಕರು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಚಳುವಳಿಗಳನ್ನು ನಡೆಸುತ್ತಿದ್ದಾರೆ. ‘ಪಿಕೆ’ ಚಲನಚಿತ್ರದಲ್ಲಿ ನಟ ಅಮೀರ್ ಖಾನ್, ‘ಕಲ್ಲು (ಶಿವಲಿಂಗ) ಹಾಲು ಕುಡಿಯುವುದಿಲ್ಲ, ಬಡವರಿಗೆ ಕೊಡಿ’, ಎನ್ನುತ್ತಾನೆ; ಆದರೆ ಆತ ‘ಸತ್ತವರಿಗೆ ಚಳಿ ಆಗುವುದಿಲ್ಲ, ಹಾಗಾದರೆ ಮಜಾರ್(ಗೋರಿಗಳ) ಮೇಲೆ ಚಾದರ ಏಕೆ ಹೊದಿಸಬೇಕು ? ಬಡವರಿಗೆ ನೀಡಿ’, ಎಂದು ಏಕೆ ಹೇಳುವುದಿಲ್ಲ ? ಹೋಳಿ ಬಂತೆಂದರೆ, ‘ನೀರನ್ನು ಉಳಿಸಿ’, ದೀಪಾವಳಿ ಬಂತೆಂದರೆ ‘ವಾಯು ಮಾಲಿನ್ಯ ತಡೆಗಟ್ಟಿ’, ಎಂದು ಪ್ರತಿ ಹಬ್ಬದಲ್ಲಿ ಪ್ರಸಾರವಾಗುತ್ತದೆ. ‘ಪೇಟಾ’ (Pಇಖಿಂ) ದವರು, ‘ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸಬೇಡಿ; ಏಕೆಂದರೆ ಗಾಳಿಪಟದಿಂದ ಪಕ್ಷಿಗಳು ಸಾಯುತ್ತವೆ’ ಎನ್ನುತ್ತಾರೆ. ಆದರೆ, ವರ್ಷವಿಡೀ ಮೊಬೈಲ್ ಫೋನ್ ಬಳಕೆಯಿಂದ ಅತಿ ಹೆಚ್ಚು ಪಕ್ಷಿಗಳು ಸಾಯುತ್ತವೆ. ಅವರು ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಹಿಂದೂಗಳು ಸಂಘಟಿತರಾಗಿ ಹಿಂದೂ ಧರ್ಮವಿರೋಧಕರ ಆಕ್ಷೇಪಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೈದ್ಧಾಂತಿಕವಾಗಿ ಖಂಡಿಸಬೇಕು. ಜಾಹೀರಾತುಗಳ ಮೂಲಕ ಅಪಪ್ರಚಾರ ಹರಡುವವರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಬೇಕು. ಹೀಗೆ ಮಾಡಿದರೆ ಹಿಂದೂ ಧರ್ಮವನ್ನು ಯಾರೂ ವಕ್ರದೃಷ್ಟಿಯಿಂದ ನೋಡುವುದಿಲ್ಲ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಸ್ಪಷ್ಟವಾಗಿ ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಹಿಂದೂ ಹಬ್ಬಗಳಲ್ಲಾಗುವ ಅಪಪ್ರಚಾರ ಮತ್ತು ಹಬ್ಬಗಳ ವೈಜ್ಞಾನಿಕ ಮಹತ್ವ’ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ‘ಆನ್‌ಲೈನ್’ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಜಯಪುರದ ‘ಜ್ಞಾನಂ ಫೌಂಡೇಶನ್’ನ ಸಂಸ್ಥಾಪಕರಾದ ಶ್ರೀ. ದೀಪಕ ಗೋಸ್ವಾಮಿ ಇವರು ಮಾತನಾಡುತ್ತಾ, ಚಲನಚಿತ್ರಗಳಲ್ಲಿಯೂ ಹಿಂದೂ ಧರ್ಮವನ್ನು ಗುರಿ ಮಾಡಲಾಗುತ್ತಿದೆ. ಅರ್ಚಕರನ್ನು ಅತ್ಯಾಚಾರಿಯಂತೆ ಬಿಂಬಿಸಲಾಗುತ್ತಿದ್ದು, ಕುಖ್ಯಾತ ಗೂಂಡಾನನ್ನು ‘ಜಯಭವಾನಿ’ ಎಂದು ಹೇಳಿಸಿ ಭಕ್ತನಂತೆ ಬಿಂಬಿಸಲಾಗುತ್ತದೆ. ಇದರಿಂದ ಹಿಂದೂಗಳು ಗೊಂದಲಕ್ಕೀಡಾಗಿ ಧರ್ಮದಿಂದ ದೂರ ಸರಿಯುತ್ತಾರೆ. ಹಿಂದೂಗಳಿಗೆ ಧರ್ಮದ ಬಗ್ಗೆ ಯೋಗ್ಯ ಶಿಕ್ಷಣವನ್ನು ನೀಡಿದರೆ, ಅವರು ಇಂತಹ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ. ಧರ್ಮದ ಮೇಲೆ ಆಘಾತ ಮಾಡುವ ಇಂತಹ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಬೇಕು. ನಮ್ಮ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಹಬ್ಬಗಳು ಜ್ಞಾನಾಧಾರಿತವಾಗಿರುವುದರಿಂದಲೇ ಪಾಶ್ಚಿಮಾತ್ಯರು ಅದನ್ನು ಸ್ವೀಕರಿಸುತ್ತಿದ್ದಾರೆ. ಇದು ಹಿಂದೂಗಳಿಗೆ ಗಮನಕ್ಕೆ ಬಂದರೆ ಅವರು ಇತರ ಪಂಥಗಳತ್ತ ಆಕರ್ಷಿತರಾಗುವುದಿಲ್ಲ ಎಂದು ಹೇಳಿದರು.
ಈ ಸಮಯದಲ್ಲಿ, ‘ಲಷ್ಕರೆ-ಎ-ಹಿಂದ್’ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಈಶ್ವರಪ್ರಸಾದ ಖಂಡೆಲವಾಲ ಇವರು ಮಾತನಾಡುತ್ತಾ, ಜಲ್ಲಿಕಟ್ಟು, ನಾಗರಪಂಚಮಿ ಮುಂತಾದ ಹಬ್ಬ ಹರಿದಿನಗಳಲ್ಲಿ ಪ್ರಾಣಿಗಳಿಗೆ ತೊಂದರೆ ಕೊಡಲಾಗುತ್ತದೆ ಎಂದು ಹೇಳುವವರಿಗೆ ಹಿಂದೂ ಧರ್ಮದ ನಿಜವಾದ ಜ್ಞಾನವಿಲ್ಲ. ಹಿಂದೂ ಧರ್ಮದಲ್ಲಿ ದೇವತೆಗಳನ್ನು ಮಾತ್ರವಲ್ಲ, ಪ್ರಾಣಿ, ಪಕ್ಷಿಗಳು, ಪ್ರಕೃತಿ ಇವೆಲ್ಲವುಗಳನ್ನು ಪೂಜಿಸಲಾಗುತ್ತದೆ. ಹೀಗಿರುವಾಗ ಪ್ರಾಣಿಗಳಿಗೆ ಹೇಗೆ ಹಾನಿಯಾಗುತ್ತದೆ ? ಹಿಂದೂ ಧರ್ಮದಿಂದಲೇ ಭಾರತದಲ್ಲಿ ಜಾತ್ಯತೀತತೆ ಮತ್ತು ನ್ಯಾಯ ವ್ಯವಸ್ಥೆ ಉಳಿದುಕೊಂಡಿದೆ. ಇತರ ಪಂಥಗಳ ಹಬ್ಬಗಳ ಸಮಯದಲ್ಲಾಗುವ ಹಾನಿಯ ಬಗ್ಗೆ ಇವರು ಏಕೆ ಮಾತನಾಡುವುದಿಲ್ಲ ? ದೀಪಾವಳಿಯಂದು ಪಟಾಕಿಯನ್ನು ನಿಷೇಧಿಸಲಾಗುತ್ತದೆ; ಆದರೆ ‘ಐಪಿಎಲ್’ ಕ್ರಿಕೆಟ್ ಪಂದ್ಯಗಳ ವೇಳೆ, ಆರ್ಯನ್ ಖಾನ್ ಬಿಡುಗಡೆ ಮಾಡಿದ ನಂತರ ಪಟಾಕಿಯನ್ನು ಸಿಡಿಸಿದಾಗ ಯಾರಾದರೂ ಆಪ್ಷೇಪ ವ್ಯಕ್ತಪಡಿಸುತ್ತಾರೆಯೇ ? ಕೇವಲ ಹಿಂದೂಗಳ ಮೊಸರು ಕುಡಿಕೆ ಹಾಗೂ ಶ್ರೀ ಶಬರಿಮಲಾ ದೇವಸ್ಥಾನಗಳ ಪರಂಪರೆಯನ್ನು ಆಕ್ಷೇಪಿಸಲಾಗುತ್ತದೆ. ಇದೆಲ್ಲವೂ ಆಯೋಜನಾಬದ್ದ ರೀತಿಯಲ್ಲಿ ನಡೆಯುತ್ತಿದೆ. ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸಬೇಕು ಎಂದು ಹೇಳಿದರು.