
ಕೊಲ್ಲಾಪುರ, 29 ಮೇ (ವಾರ್ತಾ.) – ಮಹಾರಾಷ್ಟ್ರದ ಹೆಮ್ಮೆಯಾಗಿರುವ ‘ಗೋಕುಲ್’ (ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ) ಹಾಲು ಸಂಘವು ಹಲಾಲ್ ಪ್ರಮಾಣಪತ್ರವನ್ನು ಪಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಹಲಾಲ್ ಪ್ರಮಾಣಪತ್ರವನ್ನು ತಕ್ಷಣವೇ ರದ್ದುಗೊಳಿಸದಿದ್ದರೆ ಉತ್ಪನ್ನಗಳನ್ನು ಬಹಿಷ್ಕರಿಸುವುದರ ಜೊತೆಗೆ ತೀವ್ರ ಜನಾಂದೋಲನವನ್ನು ಮಾಡಲಾಗುವುದು, ಹಾಗೆಯೇ ಸಮಯ ಬಂದರೆ ನೇರವಾಗಿ ‘ಗೋಕುಲ್’ ಮೇಲೆ ಬೃಹತ್ ಮೆರವಣಿಗೆಯನ್ನು ತೆಗೆಯಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಬೇಡಿಕೆಯ ವಿವರವಾದ ಮನವಿಯನ್ನು ಸಂಘಟನೆಗಳ ಪ್ರತಿನಿಧಿಗಳು ಕೊಲ್ಲಾಪುರದ ‘ಗೋಕುಲ್’ ನ ಆಡಳಿತ ಮಂಡಳಿ, ಕೊಲ್ಲಾಪುರದ ಜಿಲ್ಲಾಧಿಕಾರಿ ಡಾ. ವಿಜಯ ರಾಠೋಡ್ ಮತ್ತು ಜನಸುರಾಜ್ಯ ಶಕ್ತಿ ಪಕ್ಷದ ಶಾಸಕ ಅಶೋಕ ಮಾನೆ ಅವರಿಗೆ ನೀಡಿದರು.

ಜಾತ್ಯತೀತ ದೇಶದಲ್ಲಿ ಸರಕಾರಿ ಪ್ರಮಾಣಪತ್ರಗಳನ್ನು ಬದಿಗೊತ್ತಿ ತೆಗೆದುಕೊಂಡ ಈ ನಿರ್ಧಾರದಿಂದ ಬಹುಸಂಖ್ಯಾತ ಹಿಂದೂ ಗ್ರಾಹಕರ ಭಾವನೆಗಳಿಗೆ ಧಕ್ಕೆಯಾಗಿದೆ ಮತ್ತು ಆಡಳಿತವು ತಕ್ಷಣ ಇದನ್ನು ಗಮನಿಸಿ ಈ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಈ ಸಮಯದಲ್ಲಿ ಬಲವಾಗಿ ಒತ್ತಾಯಿಸಲಾಯಿತು. ಈ ವೇಳೆ ಕಾರ್ಯಕರ್ತರು ‘ಗೋಕುಲ್’ ನ ಹಲಾಲ್ ಪ್ರಮಾಣಪತ್ರದ ಪ್ರತಿಯನ್ನು ಸುಟ್ಟುಹಾಕಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!