‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಭಾರತೀಯ ಆರ್ಥಿಕತೆಯನ್ನು ಜರ್ಜರಿತಗೊಳಿಸುತ್ತಿರುವ 'ಹಲಾಲ್ ಆರ್ಥಿಕತೆ' ನಷ್ಟಗೊಳಿಸುವುದು ಅತ್ಯಗತ್ಯ!

ಪತ್ರಿಕಾಗೋಷ್ಠಿಯಲ್ಲಿ ಎಡಗಡೆಯಿಂದ ಶ್ರೀ. ಯೋಗೇಶ ಕೇರಕರ, ಶ್ರೀ. ನಿರಂಜನ ಶಿಂದೆ, ಶ್ರೀ. ರಮೇಶ ಶಿಂದೆ, ಶ್ರೀ. ಶಿವಾನಂದ ಸ್ವಾಮಿ, ಶ್ರೀ. ಸಂಭಾಜಿರಾವ ಭೋಕರೆ, ಶ್ರೀ. ಗಜಾನನ ಗುರವ. ಹಿಂದಿನ ಸಾಲಿನಲ್ಲಿ ಎಡಗಡೆಯಿಂದ ಶ್ರೀ. ಅಶೋಕ ಗುರವ ಮತ್ತು ಶ್ರೀ. ಕಿಶೋರ ಘಾಟಗೆ.

ಕೊಲ್ಲಾಪುರ, ಜೂನ್ 8 (ಸುದ್ದಿ) – ‘ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ’ ಅಂದರೆ ‘ಗೋಕುಲ್’ ಸಂಸ್ಥೆಯು ‘ಹಲಾಲ್’ ಪ್ರಮಾಣಪತ್ರ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ‘ಹಲಾಲ್’ ಪ್ರಮಾಣಪತ್ರ ನೀಡುವ ‘ಜಮಿಯತ್ ಉಲೇಮಾ ಹಿಂದ್’ ಎಂಬ ಸಂಘಟನೆಯು 700 ಕ್ಕೂ ಹೆಚ್ಚು ಭಯೋತ್ಪಾದಕರ ಪರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ನಡೆಸುತ್ತಿದೆ ಮತ್ತು ಯಾರು ಪ್ರಮಾಣಪತ್ರ ಪಡೆಯುತ್ತಾರೋ ಅವರ ಮೂಲಕ ಈ ಹಣವನ್ನು ಸಂಗ್ರಹಿಸಲಾಗುತ್ತಿದೆ. ಸಾಮಾನ್ಯ ರೈತರನ್ನು ಕತ್ತಲಲ್ಲಿಟ್ಟು ‘ಗೋಕುಲ್’ನ ಹಣವನ್ನು ‘ಹಲಾಲ್’ಗಾಗಿ ಬಳಸುವುದು ಲಕ್ಷಾಂತರ ರೈತರಿಗೆ ಮಾಡುತ್ತಿರುವ ವಂಚನೆಯೇ ಆಗಿದೆ. 2013 ರಲ್ಲಿ ಪ್ರಾರಂಭವಾದ ಹಲಾಲ್ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ 2.1 ಅಮೆರಿಕನ್ ಟ್ರಿಲಿಯನ್ ಡಾಲರ್‌ಗಳವರೆಗೆ (179.6 ಲಕ್ಷ ಕೋಟಿ ರೂಪಾಯಿಗಳವರೆಗೆ) ತಲುಪಿದೆ. ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಹಲಾಲ್ ಟ್ಯಾಕ್ಸ್’ ವಾಸ್ತವವಾಗಿ ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ. ಭಾರತೀಯ ಆರ್ಥಿಕತೆಯನ್ನು ಜರ್ಜರಿತಗೊಳಿಸುತ್ತಿರುವ ‘ಹಲಾಲ್ ಆರ್ಥಿಕತೆ’ಯನ್ನು ಮುರಿಯುವುದು ಅತ್ಯಗತ್ಯವಾಗಿದ್ದು, ಇದಕ್ಕಾಗಿ ಭಾರತ ದೇಶ ‘ಹಲಾಲ್’ ಮುಕ್ತವಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಕೊಲ್ಲಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೃಢವಾಗಿ ಮಂಡಿಸಿದರು.

ಈ ಸಂದರ್ಭದಲ್ಲಿ ‘ಹಿಂದೂ ಏಕತಾ ಆಂದೋಲನ’ದ ಶ್ರೀ. ಗಜಾನನ ಗುರವ, ‘ಮಹಾರಾಜ ಪ್ರತಿಷ್ಠಾನ’ದ ಸಂಸ್ಥಾಪಕರಾದ ಶ್ರೀ. ನಿರಂಜನ ಶಿಂದೆ, ‘ಮರಾಠಾ ತಿತುಕಾ ಮೇಳವಾವಾ’ದ ಶ್ರೀ. ಯೋಗೇಶ ಕೇರಕರ, ಉದ್ಧವ ಬಾಳಾಸಾಹೇಬ ಠಾಕ್ರೆ ಪಕ್ಷದ ಉಪ ಜಿಲ್ಲಾ ಪ್ರಮುಖರಾದ ಶ್ರೀ. ಸಂಭಾಜಿರಾವ ಭೋಕರೆ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವಾನಂದ ಸ್ವಾಮಿ, ಶಿವಸೇನೆಯ ಉಪ ಜಿಲ್ಲಾ ಪ್ರಮುಖರಾದ ಶ್ರೀ. ಕಿಶೋರ ಘಾಟಗೆ, ಮಂದಿರ ಮಹಾಸಂಘದ ಶ್ರೀ. ಅಶೋಕ ಗುರವ ಮುಂತಾದವರು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಶ್ರೀ. ರಮೇಶ ಶಿಂದೆ ಅವರು ಮಾತನಾಡಿ, ಮಹಾರಾಷ್ಟ್ರ ರಾಜ್ಯವು ದೇಶದಲ್ಲಿಯೇ 5 ನೇ ಕ್ರಮಾಂಕದ ಹಾಲು ಉತ್ಪಾದಕ ರಾಜ್ಯವಾಗಿದೆ. ರಾಜ್ಯ ಒಟ್ಟು ಉತ್ಪಾದನೆಯಲ್ಲಿ 2.5 ದಶಲಕ್ಷ ಲೀಟರ್ ಹಾಲಿನ ಕೊರತೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ಹಾಲು ರಫ್ತು ಮಾಡುವ ಅವಶ್ಯಕತೆಯಾದರೂ ನಮಗೆ ಏನಿದೆ? ವಿಶ್ವದ 192 ದೇಶಗಳು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ವನ್ನು (‘ಎಫ್.ಎಸ್.ಎಸ್.ಎ.ಐ’ ಅನ್ನು) ಮಾನ್ಯ ಮಾಡಿರುವಾಗ, ನಾವು ಭಾರತದಲ್ಲಿ ಮಾತ್ರ ಧರ್ಮ ಆಧಾರಿತ ‘ಹಲಾಲ್’ ಪ್ರಮಾಣಪತ್ರಕ್ಕೆ ಯಾಕೆ ಮಾನ್ಯತೆ ನೀಡುತ್ತೇವೆ? ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ವು ಆಹಾರದ ಎಲ್ಲಾ ಪರೀಕ್ಷೆಗಳನ್ನು ನಡೆಸಿ ‘ಅದರಲ್ಲಿ ಮಾಂಸಕ್ಕೆ ಸಂಬಂಧಿಸಿದ ಯಾವುದೇ ಪದಾರ್ಥವಿಲ್ಲ’ ಎಂದು ತಿಳಿಸಿದಾಗ, ಅವರ ಮೇಲೆ ವಿಶ್ವಾಸ ಇಡದೆ ಇನ್ನೊಂದು ‘ಹಲಾಲ್’ ಪ್ರಮಾಣಪತ್ರದ ಅವಶ್ಯಕತೆಯಾದರೂ ಏನಿದೆ?

ಆರಂಭದಲ್ಲಿ ಕೇವಲ ‘ಮಾಂಸಕ್ಕೆ’ ಮಾತ್ರ ಸೀಮಿತವಾಗಿದ್ದ ಈ ‘ಹಲಾಲ್ ಪ್ರಮಾಣಪತ್ರ’ವು ಇಂದು ಹಾಲು, ತುಳಸಿ ಅರ್ಕ, ಸಕ್ಕರೆ, ‘ಡೇಟಿಂಗ್ ಆ್ಯಪ್’, ವಸತಿ ಸಂಕೀರ್ಣ, ಶೇರು ಮಾರುಕಟ್ಟೆಯಿಂದ ಹಿಡಿದು ಬಹುತೇಕ ಪ್ರತಿಯೊಂದು ಜೀವನೋಪಯೋಗಿ ಉತ್ಪಾದನೆಗಳಿಗೂ ‘ಹಲಾಲ್ ಪ್ರಮಾಣೀಕೃತ’ ಮಾಡಲಾಗುತ್ತಿದೆ. ಹಿಂದೂಗಳು ಖರೀದಿಸುತ್ತಿರುವ ಬಹುತೇಕ ಪ್ರತಿಯೊಂದು ವಸ್ತುವೂ ‘ಹಲಾಲ್’ ಆಗಿದ್ದು, ಹಿಂದೂಗಳ ಜೇಬಿನಿಂದ ಹೋಗುವ ಹಣವನ್ನು ‘ಹಲಾಲ್’ಗಾಗಿ ಖರ್ಚು ಮಾಡಲಾಗುತ್ತಿದೆ. ‘ಹಲಾಲ್’ನಲ್ಲಿ ಕೇವಲ ಮುಸಲ್ಮಾನರ ಧಾರ್ಮಿಕತೆಯನ್ನು ಮಾತ್ರ ಪರಿಗಣಿಸಲಾಗಿದ್ದು, ಇದರಲ್ಲಿ ಹಿಂದೂಗಳಿಗೆ ಪವಿತ್ರವಾಗಿರುವ ಗೋಮಾತೆಗೆ ಸಂಬಂಧಿಸಿದ ಯಾವುದೇ ಉತ್ಪಾದನೆಯನ್ನು ಬಳಸಲಾಗುವುದಿಲ್ಲ ಎಂಬುದಕ್ಕೆ ಯಾವುದೇ ಭರವಸೆ ನೀಡುವುದಿಲ್ಲ ಎಂದೂ ಶ್ರೀ. ಶಿಂದೆ ಅವರು ಈ ಸಮಯದಲ್ಲಿ ಹೇಳಿದರು.