
ಕೊಲ್ಲಾಪುರ – ಪಶ್ಚಿಮ ಮಹಾರಾಷ್ಟ್ರದ ಪ್ರಸಿದ್ಧ ‘ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ’ ಅಂದರೆ ‘ಗೋಕುಲ್’ನ ಕೆಲವು ಉತ್ಪನ್ನಗಳು ‘ಹಲಾಲ್’ ಪ್ರಮಾಣಪತ್ರವನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಗೋಕುಲ್ ನ ತುಪ್ಪ, ಬೆಣ್ಣೆ ಮತ್ತು ಹಾಲಿನ ಪುಡಿ ಉತ್ಪನ್ನಗಳಿಗಾಗಿ ಈ ಪ್ರಮಾಣಪತ್ರವನ್ನು ಪಡೆಯಲಾಗಿದೆ.
‘Gokul’ Milk Producers’ Union receives Halal certification for various products!
It would not be suprising if Hindus boycotted the products of milk producers’ unions that take such decisions and actions to appease Muslims!#GokulMilk #BoycottHalalProducts
Film 🎥 Courtesy:… pic.twitter.com/qNjDMX9DHr— Sanatan Prabhat (@SanatanPrabhat) May 27, 2026
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮಾಣಪತ್ರದ ಪ್ರತಿಯೊಂದು ವೈರಲ್ ಆಗುತ್ತಿದ್ದು, ಮಾರ್ಚ್ 19, 2025 ರಂದು ಈ ಪ್ರಮಾಣಪತ್ರ ನೀಡಿರುವ ದಿನಾಂಕ ಕಂಡುಬರುತ್ತಿದೆ ಮತ್ತು ಇದು ಮಾರ್ಚ್18, 2028 ರವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿದುಬಂದಿದೆ. ಈ ವಿಷಯವಾಗಿ ಸಾಮಾನ್ಯ ಹಿಂದೂ ಗ್ರಾಹಕರು ಮತ್ತು ಹಿಂದುತ್ವವಾದಿ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

‘ಶುದ್ಧ ಶಾಖಾಹಾರಿಯಾಗಿರುವ ಹಾಲಿನ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರದ ಅಗತ್ಯವೇನಿದೆ?’ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್ ಅವರ ಪುತ್ರ ನಾವೇದ್ ಮುಶ್ರಿಫ್ ಅವರು ‘ಗೋಕುಲ್’ನ ಅಧ್ಯಕ್ಷರಾಗಿದ್ದಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. (ಮೂಲತಃ ಭಾರತ ಸರಕಾರದ ಅಧಿಕೃತ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ ಮತ್ತು ‘ಆಹಾರ ಮತ್ತು ಔಷಧ ಆಡಳಿತ’ ಸಂಸ್ಥೆಗಳು ಉತ್ಪನ್ನಗಳ ಪ್ರಮಾಣೀಕರಣವನ್ನು ಮಾಡುತ್ತಿರುವಾಗ, ಪ್ರತ್ಯೇಕ ‘ಹಲಾಲ್ ಪ್ರಮಾಣೀಕರಣ’ದ ಅಗತ್ಯವೇನಿದೆ? ಇದರಿಂದ ಬರುವ ಹಣವನ್ನು ಭಯೋತ್ಪಾದಕರಿಗೆ ಕಾನೂನು ನೆರವು ನೀಡಲು ಬಳಸಲಾಗುತ್ತಿದೆ. ಹಾಗೆಯೇ ವಿವಿಧೆಡೆ ಖರ್ಚಾಗುವ ಹಣವು ಕೇವಲ ಮುಸ್ಲಿಂ ಅಥವಾ ಇಸ್ಲಾಮಿಕ್ ದೇಶಗಳಿಗೆ ಸಿಗಬೇಕೆಂಬುದು ಇದರ ಹಿಂದಿನ ಒಂದು ಉದ್ದೇಶವಾಗಿದೆ. ಆದ್ದರಿಂದ ‘ಗೋಕುಲ್’ ನಂತಹ ಬಹುಸಂಖ್ಯಾತ ಹಿಂದೂಗಳ ಹಾಲು ಉತ್ಪಾದಕ ರೈತರ ಒಕ್ಕೂಟವು ಈ ಪ್ರಮಾಣಪತ್ರವನ್ನು ಪಡೆಯಬಾರದೆಂದು ಹಿಂದೂಗಳು ಭಾವಿಸುತ್ತಾರೆ! – ಸಂಪಾದಕರು)
ಕೊಲ್ಲಿರಾಷ್ಟ್ರಗಳಿಗೆ ರಫ್ತು ಮಾಡಲು ಪ್ರಮಾಣಪತ್ರ! – ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್, ಈ ಪ್ರಮಾಣಪತ್ರವನ್ನು ೨೦೨೨ ರಲ್ಲೇ ಪಡೆಯಲಾಗಿದೆ. ಇದು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅಗತ್ಯವಿರುವ ಒಂದು ತಾಂತ್ರಿಕ ಮತ್ತು ಗುಣಮಟ್ಟದ ಮಾನದಂಡವಾಗಿದೆ. ಗೋಕುಲ್ ನ ತುಪ್ಪ, ಬೆಣ್ಣೆ, ಹಾಲಿನ ಪುಡಿ ದೊಡ್ಡ ಪ್ರಮಾಣದಲ್ಲಿ ಸೌದಿ ಅರೇಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್, ಕತಾರ್, ಟರ್ಕಿ, ಜೋರ್ಡಾನ್, ಸಿರಿಯಾದಂತಹ ಅರಬ್ ದೇಶಗಳಲ್ಲಿ ಮಾರಾಟವಾಗುತ್ತದೆ. ಈ ದೇಶಗಳ ವ್ಯಾಪಾರ ನಿಯಮಗಳ ಪ್ರಕಾರ ‘ಹಲಾಲ್ ಪ್ರಮಾಣಪತ್ರ’ ಇಲ್ಲದೆ ಅಲ್ಲಿ ಆಹಾರ ಪದಾರ್ಥಗಳ ಮಾರಾಟಕ್ಕೆ ಅನುಮತಿ ಸಿಗುವುದಿಲ್ಲ, ಆದ್ದರಿಂದ ಈ ಪ್ರಮಾಣಪತ್ರವನ್ನು ಪಡೆಯಲಾಗಿದೆ ಎಂದರು. (ಅರಬ್ ದೇಶಗಳಲ್ಲಿ ಮಾರಾಟ ಮಾಡಲಾಗುವ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಭಾರತದಲ್ಲಿ ಏಕೆ ಮಾರಾಟ ಮಾಡಲಾಗುತ್ತಿದೆ? ಇದಕ್ಕೆ ಮುಶ್ರಿಫ್ ಅವರು ಉತ್ತರಿಸಬೇಕು!) |
‘ಹಲಾಲ್’ ಪ್ರಮಾಣಪತ್ರ ಎಂದರೇನು?
ಇಸ್ಲಾಂ ಪ್ರಕಾರ ‘ಹಲಾಲ್’ ಎಂದರೆ ಧರ್ಮಸಮ್ಮತವಾಗಿರುವ ವಸ್ತು. ಹಿಂದೆ ‘ಹಲಾಲ್’ ಎಂಬುದು ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಈಗ ಮತಾಂಧರು ತಮ್ಮದೇ ಆದ ಸ್ವತಂತ್ರ ಆರ್ಥಿಕತೆಯನ್ನು ಸ್ಥಾಪಿಸಲು ಬಯಸುತ್ತಿರುವುದರಿಂದ ಗೃಹನಿರ್ಮಾಣ ಸಂಸ್ಥೆಗಳು, ಔಷಧಗಳು, ಸೌಂದರ್ಯವರ್ಧಕಗಳು ಸೇರಿದಂತೆ ವಿವಿಧ ವಸ್ತುಗಳಿಗೆ ‘ಹಲಾಲ್’ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಬಗ್ಗೆ ಕಾರ್ಯನಿರ್ವಹಿಸುತ್ತಿವೆ. ಅವುಗಳು ಅನುಮೋದಿಸಿದ ಪ್ರಮಾಣಪತ್ರವನ್ನು ‘ಹಲಾಲ್’ ಪ್ರಮಾಣಪತ್ರ ಎಂದು ಕರೆಯಲಾಗುತ್ತದೆ. ದೇಶಕ್ಕೆ ಪರ್ಯಾಯವಾಗಿ ಇಸ್ಲಾಮಿಕ್ ಆರ್ಥಿಕತೆಯನ್ನು ನಿರ್ಮಿಸಿ ಚಾಲ್ತಿಯಲ್ಲಿರುವ ಆರ್ಥಿಕತೆಯನ್ನು ದುರ್ಬಲಗೊಳಿಸಲು ಮತಾಂಧರು ಈ ‘ಹಲಾಲ್’ ಪ್ರಮಾಣಪತ್ರದ ಮೂಲಕ ಪಿತೂರಿ ನಡೆಸುತ್ತಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”