ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!

ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇಶದ ಆರ್ಥಿಕ ರಾಜಧಾನಿಯಲ್ಲಿ ಮೊಳಗಿದ ವೇದಮಂತ್ರಗಳ ಘೋಷ!

ಮುಂಬಯಿ, ಮೇ 17 (ವಾರ್ತೆ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಯಾವ ನಗರದಿಂದ ಧರ್ಮಕಾರ್ಯಕ್ಕೆ ಶ್ರೀಕಾರ ಬರೆದರೋ, ಆ ಮುಂಬಯಿ ನಗರಿಯು ಅಧಿಕ ಜ್ಯೇಷ್ಠ ಶುಕ್ಲ ಪ್ರತಿಪದೆಯಂದು ವೇದಮಂತ್ರಗಳ ಘೋಷದಿಂದ ಮೊಳಗಿತು! ಮುಂಬಯಿ ನ ಆರಾಧ್ಯ ದೈವವಾಗಿರುವ ಶ್ರೀ ಸಿದ್ಧಿವಿನಾಯಕನ ಕೃಪಾಛಾಯೆಯಲ್ಲಿ ಸನಾತನ ಸಂಸ್ಥೆಯ ಇತಿಹಾಸದಲ್ಲಿ ಒಂದು ಸುವರ್ಣ ಪುಟ ಸೇರ್ಪಡೆಯಾಯಿತು! ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಅತ್ಯಂತ ಭಾವಪೂರ್ಣ ಮತ್ತು ಮಂಗಳಕರ ವಾತಾವರಣದಲ್ಲಿ ದಿವ್ಯ ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ನೆರವೇರಿಸಲಾಯಿತು. ಪ್ರಸ್ತುತ ಯುದ್ಧಕಾಲದಲ್ಲಿ ತಪೋಭೂಮಿ ಭಾರತಕ್ಕೆ ರಕ್ಷಣಾ ಕವಚ ಲಭಿಸಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯು ಆಯೋಜಿಸಿದ್ದ ‘ಶ್ರೀ ರಾಜಮಾತಂಗಿ ಮಹಾಯಜ್ಞ’ದಿಂದಾಗಿ ಮುಂಬಯಿನ ಆಕಾಶವು ವೇದಮಂತ್ರಗಳ ಜಯಘೋಷದಿಂದ ಹಾಗೂ ಸದ್ಗುರುಗಳು ಮತ್ತು ಸಂತರ ವಂದನೀಯ ಉಪಸ್ಥಿತಿಯಿಂದ ಕಂಗೊಳಿಸಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ್ ಅವರ ಚೈತನ್ಯದಾಯಕ ಉಪಸ್ಥಿತಿಯಿಂದ ವಾತಾವರಣವು ತೇಜೋಮಯವಾಗಿತ್ತು. ಯಜ್ಞೋತ್ಸವದಲ್ಲಿ ಉಪಸ್ಥಿತರಿದ್ದ ಗಣ್ಯರು, ಸಾಧಕರು ಮತ್ತು ಭಕ್ತರು ಶ್ರೀ ರಾಜಮಾತಂಗಿ ದೇವಿಯ ಕೃಪಾವೃಷ್ಟಿಯಲ್ಲಿ ಮಿಂದೆದ್ದರು. ಮಹಾಯಜ್ಞಕ್ಕೆ ಜೀವನಾಡಿಪಟ್ಟಿಯ ವಾಚಕರಾದ ಪೂ. ಡಾ. ಓಂ ಉಲಗನಾಥನ ಇವರ ವಂದನೀಯ ಉಪಸ್ಥಿತಿ ಲಭಿಸಿತು.

… ಹೀಗೆ ನಡೆಯಿತು ಯಜ್ಞೋತ್ಸವ!

ಶ್ರೀ ರಾಜಮಾತಂಗಿ ಮಹಾಯಜ್ಞ ಉತ್ಸವವು ಮೇ 17 ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ಪ್ರಾರಂಭವಾಯಿತು. ಆ ಬಳಿಕ ಪುಣ್ಯಾಹವಾಚನ ಮತ್ತು ಮಹಾಯಜ್ಞದ ಸಂಕಲ್ಪವನ್ನು ಮಾಡಲಾಯಿತು. ಉಪಸ್ಥಿತರಿದ್ದ ಎಲ್ಲಾ ಶ್ರದ್ಧಾಳುಗಳೂ ಈ ಸಮಯದಲ್ಲಿ ‘ಸಾಮೂಹಿಕ ಸಂಕಲ್ಪ’ ಮಾಡಿದರು. ನಂತರ ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ಲಲಿತಾ ತ್ರಿಶತಿ ಕುಂಕುಮಾರ್ಚನೆಯ ಮೂಲಕ ದೇವಿಯನ್ನು ಆವಾಹನೆ ಮಾಡಲಾಯಿತು. ತದನಂತರ ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳೊಂದಿಗೆ ಯಜ್ಞಕ್ಕೆ ಆಹುತಿಗಳನ್ನು ಸಮರ್ಪಿಸಲಾಯಿತು. ಮಾಲಾ ಮಂತ್ರ, ಗಾಯತ್ರಿ ಮಂತ್ರ ಪಠಣ, ಹೋಮ ಮತ್ತು ಪಾರಾಯಣದ ನಂತರ ಶ್ರೀ ಗಣಪತಿ ಹೋಮದ ಮೂಲಕ ಗಣೇಶನನ್ನು ಆರಾಧಿಸಲಾಯಿತು. ಶ್ರೀ ರಾಜಮಾತಂಗಿ ಮತ್ತು ಪರಿವಾರ ದೇವತೆಗಳ ಹೋಮದ ನಂತರ ದೇವಿ ಸಪ್ತಶತಿಯ ಏಳನೇ ಅಧ್ಯಾಯವನ್ನು ಪಠಿಸುತ್ತಾ ಹೋಮ ಮಾಡಲಾಯಿತು. ತದನಂತರ ವಿಧಿವಿಧಾನಗಳಂತೆ ಪೂರ್ಣಾಹುತಿ ನೆರವೇರಿತು!

… ಮಹಾಪೂರ್ಣಾಹುತಿಯ ದಿವ್ಯ ಅನುಭವ ಪಡೆದರು!

ಇರೋಡ್, ತಮಿಳುನಾಡಿನ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಶ್ರೀ. ಅರುಣ್‌ಕುಮಾರ್ ಗುರುಮೂರ್ತಿ ಮತ್ತು ಯಜ್ಞದ ಮುಖ್ಯ ಆಚಾರ್ಯ ಶ್ರೀ. ಗುರುಮೂರ್ತಿ ಶಿವಾಚಾರ್ಯ ಅವರು ಭಾವಪೂರ್ಣವಾಗಿ ನಡೆಸಿಕೊಟ್ಟ ಪೌರೋಹಿತ್ಯ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ್ ಅವರಿಂದಾಗಿ ಈಶ್ವರೀಯ ಚೈತನ್ಯದಿಂದ ತುಂಬಿದ್ದ ವಾತಾವರಣದಲ್ಲಿ ಉಪಸ್ಥಿತರಿದ್ದ ಶ್ರದ್ಧಾಳುಗಳು ಲೀನರಾಗಿದ್ದಾಗ ಮಹಾಪೂರ್ಣಾಹುತಿಯ ಕ್ಷಣ ಬಂದಿತು! ಶ್ರೀ ರಾಜಮಾತಂಗಿ ದೇವಿಗೆ ವಸ್ತ್ರಸಮರ್ಪಣೆ, ಸೌಭಾಗ್ಯ ದ್ರವ್ಯ ಸಮರ್ಪಣೆ, ಹಾಗೂ ವಸೋರ್ಧಾರಾ ಸಮರ್ಪಣೆಯ ನಂತರ ಆ ಚೈತನ್ಯಮಯ ವಾತಾವರಣದಲ್ಲಿ ಮಹಾಪೂರ್ಣಾಹುತಿಯ ದಿವ್ಯ ಅನುಭವ ಪಡೆದರು! ‘ದೇವಿಯೇ ಪ್ರತ್ಯಕ್ಷಳಾಗಿ ಅವತರಿಸಿದ್ದಾಳೆ’ ಎನ್ನುವಂತಹ ವಾತಾವರಣವನ್ನು ಎಲ್ಲಾ ಶ್ರದ್ಧಾಳುಗಳು ಅನುಭವಿಸುತ್ತಿದ್ದರು!

ದೇವಿತತ್ತ್ವದ ಆ ದಿವ್ಯ ಉಪಸ್ಥಿತಿಯಲ್ಲಿಯೇ ಮಹಾದೀಪ ಆರಾಧನೆ ಮತ್ತು ಉಪಚಾರ ಪೂಜೆಗಳು ನೆರವೇರಿದವು. ಮಹಿಷಾಸುರಮರ್ದಿನಿ ಸಾಮೂಹಿಕ ಪಠಣದೊಂದಿಗೆ ಈ ವಿಧಿ ವಿಧಾನಗಳು ಮುಕ್ತಾಯಗೊಂಡವು. ಯಜ್ಞದ ಚೈತನ್ಯಮಯ ಪ್ರಸಾದ ಮತ್ತು ದೇವಿತತ್ತ್ವದ ದಿವ್ಯ ಅನುಭೂತಿಯನ್ನು ಹೃದಯದಲ್ಲಿ ತುಂಬಿಕೊಂಡು ಶ್ರದ್ಧಾಳುಗಳು ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದರು!

ಸದ್ಗುರು-ಸಂತರ ಸಮ್ಮುಖದಲ್ಲಿ ಮಹಾಯಜ್ಞದ ಆಧ್ಯಾತ್ಮಿಕ ಲಾಭ ಪಡೆದ ಸಾವಿರಾರು ಹಿಂದೂಗಳು !

7 ಸಾವಿರ ಜನರ ಪ್ರತ್ಯಕ್ಷ, ಹಾಗೂ 40 ದೇಶಗಳ ಸಾವಿರಾರು ಜನರ ಆನ್‌ಲೈನ್ ಉಪಸ್ಥಿತಿ!

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಸದ್ಗುರು ನೀಲೇಶ್ ಸಿಂಗಬಾಳ್, ಹಾಗೆಯೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ್ ಮತ್ತು ಸದ್ಗುರು (ಡಾ.) ಮುಕುಲ್ ಗಾಡಗೀಳ್ ಅವರು ಮುಖ್ಯ ಯಜಮಾನರಾಗಿ ಯಜ್ಞಸ್ಥಳದಲ್ಲಿ ಉಪಸ್ಥಿತರಿದ್ದರು. ಮುಂಬಯಿ ಮತ್ತು ಸುತ್ತಮುತ್ತಲಿನ … ದಂಪತಿಗಳು ಯಜ್ಞದ ಸಹ-ಯಜಮಾನರಾಗಿ ಭಾಗವಹಿಸಿದ್ದರು.

ಈ ಮಂಗಳಕರ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ನಂದಕುಮಾರ್ ಜಾಧವ್, ಸದ್ಗುರು ಸತ್ಯವಾನ್ ಕದಮ್, ಸದ್ಗುರು ಅನುರಾಧಾ ವಾಡೇಕರ್, ಸದ್ಗುರು ಸ್ವಾತಿ ಖಾಡ್ಯೆ, ಹಾಗೂ ಸನಾತನ ಸಂಸ್ಥೆಯ ಪೂ. ಅಶೋಕ್ ಪಾತ್ರಿಕರ್ ಮತ್ತು ಪೂ. (ಸೌ.) ಸಂಗೀತಾ ಜಾಧವ್ ಅವರದ್ದೂ ಸಹ ವಂದನೀಯ ಉಪಸ್ಥಿತಿ ಲಭಿಸಿತು.

ಹಿಂದುತ್ವನಿಷ್ಠರು, ಧರ್ಮಪ್ರೇಮಿಗಳು, ವಿವಿಧ ಸಂಪ್ರದಾಯಗಳ ಭಕ್ತರು, ಗಣ್ಯರು, ಹಿತೈಷಿಗಳು, ಜಾಹೀರಾತುದಾರರು, ಪತ್ರಕರ್ತರು ಮತ್ತು ಸನಾತನ ಸಂಸ್ಥೆಯ ಸಾಧಕರು ಸೇರಿದಂತೆ 7 ಸಾವಿರ ಭಕ್ತರು ಪ್ರತ್ಯಕ್ಷವಾಗಿ ಹಾಗೂ ಆನ್‌ಲೈನ್ ಮೂಲಕ 40 ದೇಶಗಳಲ್ಲಿ ಈ ಚೈತನ್ಯದಾಯಕ ಮಹಾಯಜ್ಞ ಕಾರ್ಯಕ್ರಮದ ಆಧ್ಯಾತ್ಮಿಕ ಲಾಭವನ್ನು ಪಡೆದರು.

ದೇಶದ ರಕ್ಷಣೆಗಾಗಿ ಮಾಡಲಾಯಿತು ಶ್ರೀ ರಾಜಮಾತಂಗಿ ದೇವಿಯ ಆವಾಹನೆ!

ಆದಿಶಕ್ತಿ ದೇವಿ ಸತಿಯ ಕ್ರೋಧದಿಂದ ಪ್ರಕಟವಾದ ‘ದಶಮಹಾವಿದ್ಯೆ’ಗಳಲ್ಲಿ ಮಾತಂಗಿ ದೇವಿಗೆ ಅನನ್ಯ ಸ್ಥಾನವಿದೆ. ಮಾತಂಗಿ ದೇವಿಯನ್ನು ಆದಿಶಕ್ತಿಯ ‘ಪ್ರಧಾನಮಂತ್ರಿ’ ಅಂದರೆ ಮುಖ್ಯ ಸಲಹೆಗಾರ್ತಿ ಎಂದು ಪರಿಗಣಿಸಲಾಗುತ್ತದೆ. ಶತ್ರುಗಳ ಮೇಲೆ ವಿಜಯ ಸಾಧಿಸಲು ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ನಿಯಂತ್ರಿಸಲು ಈ ದೇವಿಯ ಆರಾಧನೆಯು ಫಲಪ್ರದವಾಗಿದೆ. ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನ ಅವತಾರದ ಸಮಯದಲ್ಲಿಯೂ ರಾಜಮಾತಂಗಿ ದೇವಿಯ ತತ್ತ್ವವು ಕಾರ್ಯನಿರ್ವಹಿಸುತ್ತಿತ್ತು, ಇದರಿಂದಾಗಿ ಆದರ್ಶ ರಾಮರಾಜ್ಯವನ್ನು ಸ್ಥಾಪಿಸಲು ಸಾಧ್ಯವಾಯಿತು. ಇಂದಿನ ಕಾಲದಲ್ಲೂ ಅಂತಹದೇ ದೈವಿಕ ಶಕ್ತಿಯ ಆಶೀರ್ವಾದದಿಂದ ಭಾರತಕ್ಕೆ ರಕ್ಷಣೆಯಾಗಲಿ ಎಂಬುದೇ ಈ ಮಹಾಯಜ್ಞದ ಮುಖ್ಯ ಉದ್ದೇಶವಾಗಿತ್ತು.

ಮಹಾಯಜ್ಞದ ಸಮಯದಲ್ಲಿ ಶ್ರೀ ರಾಜಮಾತಂಗಿ ದೇವಿಯನ್ನು ಸ್ತುತಿಸಿ, ಭಾರತದ ಸರ್ವಾಂಗೀಣ ವಿಕಾಸ ಮತ್ತು ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು.

 

ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ!

ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶ!

1 ಸಾವಿರ ವರ್ಷಗಳ ಹಿಂದೆ ಆಕ್ರಮಣಕಾರ ಮಹಮ್ಮದ್ ಗಜ್ನಿಯು ಸೋಮನಾಥ ಜ್ಯೋತಿರ್ಲಿಂಗವನ್ನು ಭಗ್ನಗೊಳಿಸಿದ್ದನು. ಕಳೆದ 1 ಸಾವಿರ ವರ್ಷಗಳಿಂದ ಕೆಲವು ಭಕ್ತರು ಈ ಜ್ಯೋತಿರ್ಲಿಂಗದ ಅಂಶಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಮಹಾಯಜ್ಞದಲ್ಲಿ ಉಪಸ್ಥಿತರಿದ್ದ ಹಿಂದೂ ಜನಸಮುದಾಯಕ್ಕೆ ಈ ದಿವ್ಯ ಅಂಶಗಳ ದರ್ಶನ ಲಭಿಸಿತು. ಮಧ್ಯಾಹ್ನ 3.15ಕ್ಕೆ ಮುಖ್ಯ ಆಚಾರ್ಯ ಶ್ರೀ. ಅರುಣಕುಮಾರ್ ಗುರುಮೂರ್ತಿ ಅವರ ಹಸ್ತದಿಂದ ಮತ್ತು ಇತರ ಪುರೋಹಿತರ ಉಪಸ್ಥಿತಿಯಲ್ಲಿ ಈ ದಿವ್ಯ ಅಂಶಗಳು ನಾದಸ್ವರದಲ್ಲಿ (ಸಾಂಪ್ರದಾಯಿಕ ವಾದ್ಯಗಳ ನಾದದಲ್ಲಿ) ಯಜ್ಞಸ್ಥಳಕ್ಕೆ ಆಗಮಿಸಿದವು. ಭಕ್ತರು ಅತ್ಯಂತ ಭಕ್ತಿಭಾವದಿಂದ ಈ ದಿವ್ಯ ಅಂಶಗಳ ದರ್ಶನ ಪಡೆದರು. ಶ್ರೀ ರಾಜಮಾತಂಗಿ ಮಹಾಯಜ್ಞದ ನಿಮಿತ್ತ ಶಕ್ತಿಯ ಉಪಾಸನೆ ನಡೆಯುತ್ತಿರುವಾಗ ಅಲ್ಲಿ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ರೂಪದಲ್ಲಿ ಭಗವಾನ್ ಶಿವನ ಪ್ರತ್ಯಕ್ಷ ಉಪಸ್ಥಿತಿಯೂ ಲಭಿಸಿದ್ದರಿಂದ ಭಕ್ತರು ಶಿವಶಕ್ತಿ ಸಂಗಮದಲ್ಲಿ ಸ್ನಾನ ಮಾಡಿದಂತಹ ಭಾವವನ್ನು ಅನುಭವಿಸಿದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್‌ ಅವರು ಈ ದಿವ್ಯಾಂಶಗಳಿಗೆ ಆರತಿ ಮಾಡಿದರು.

ಕ್ಷಣ ಚಿತ್ರಗಳು

೧. ಸಾವಿರಾರು ವರ್ಷಗಳಿಂದ ಜತನವಾಗಿ ಕಾಯ್ದಿರಿಸಲ್ಪಟ್ಟ ಮತ್ತು ಈಗ ಪ್ರದರ್ಶಿಸಲಾಗುತ್ತಿರುವ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ವೇದಿಕೆಗೆ ಆಗಮಿಸುತ್ತಿದ್ದಂತೆ ನೂರಾರು ಭಕ್ತರಲ್ಲಿ ರೋಮಾಂಚನ ಉಂಟಾಯಿತು.

೨. ಯಜ್ಞೋತ್ಸವದ ಸ್ಥಳದಲ್ಲಿ ಹಾಕಲಾಗಿದ್ದ ವಿವಿಧ ಕಕ್ಷೆಗಳಿಗೆ ಭಕ್ತರು ನೀಡಿದ ಅಭೂತಪೂರ್ವ ಪ್ರತಿಕ್ರಿಯೆಯಿಂದ ಅವರಲ್ಲಿದ್ದ ಜಿಜ್ಞಾಸು ವೃತ್ತಿಯು ಕಂಡುಬಂದಿತು.

೩. ಯಜ್ಞ ಮಂಟಪದ ಮಧ್ಯಭಾಗದ ಮೇಲ್ಭಾಗದಲ್ಲಿ ನೇರವಾಗಿ ಅಳವಡಿಸಲಾಗಿದ್ದ ಜಾಗೃತಿ ಮೂಡಿಸುವ ವಾಕ್ಯಗಳ ಫಲಕಗಳು ಭಕ್ತರ ಗಮನ ಸೆಳೆದವು.

೪. ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.

೫. ಮುಂಬಯಿನಲ್ಲಿ ಯಜ್ಞ ಮುಕ್ತಾಯವಾದ ಕೂಡಲೇ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದಲ್ಲಿ ಗುಡುಗು ಮಿಂಚುಗಳೊಂದಿಗೆ ಮಳೆ ಸುರಿಯಿತು, ವರುಣರಾಜ ಮತ್ತು ದೇವತೆಗಳು ಈ ರೂಪದಲ್ಲಿ ಸನಾತನಕ್ಕೆ ಆಶೀರ್ವಾದ ನೀಡಿದರೋ ಎಂಬಂತಿತ್ತು.

ಮಹಾಯಜ್ಞದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು

  • ಭಾಜಪ ಶಾಸಕರಾದ ಜ್ಞಾನೇಶ್ವರ್ ಮ್ಹಾತ್ರೆ
  • ಶಿವಸೇನೆಯ ವಿಧಾನ ಪರಿಷತ್ ಶಾಸಕರಾದ ಡಾ. ಮನೀಷಾ ಕಾಯಂದೆ
  • ಭಾಜಪದ ಹಿರಿಯ ನಗರಸೇವಕರಾದ ಶ್ರೀ. ಪ್ರಕಾಶ್ ಗಂಗಾಧರೆ
  • ಮನಸೆಯ ನಗರಸೇವಕರಾದ ಶ್ರೀ. ಯಶವಂತ್ ಕಿಲ್ಲೇದಾರ್

ಸಹ-ಯಜಮಾನರಾಗಿ ಸಪತ್ನೀಕರಾಗಿ (ಪತ್ನಿ ಸಮೇತರಾಗಿ) ಭಾಗವಹಿಸಿದ ಕೆಲವು ಗಣ್ಯರು!

  • ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಅಡ್ವೊಕೇಟ್ ಸಂಜೀವ್ ಪುನಾಳೇಕರ್
  • ಹಿರಿಯ ಹಿಂದುತ್ವನಿಷ್ಠ ಅಡ್ವೊಕೇಟ್ ನಿತಿನ್ ಪ್ರಧಾನ್
  • ಸ್ವಾತಂತ್ರ್ಯವೀರ ಸಾವರ್ಕರ್ ಸ್ಮಾರಕದ ಕಾರ್ಯಾಧ್ಯಕ್ಷರಾದ ಶ್ರೀ. ರಣಜಿತ್ ಸಾವರ್ಕರ್
  • ಪಿತಾಂಬರಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರವೀಂದ್ರ ಪ್ರಭುದೇಸಾಯಿ
  • ಉದ್ಯಮಿ ಶ್ರೀ. ಧನರಾಜ್ ವಿಸಪುತೆ