ಉದ್ಯಮಿಗಳಿಗೆ ಸವಿನಯ ವಿನಂತಿ
ಅನೇಕ ವ್ಯಾಪಾರಿಗಳು ತಮ್ಮ ಸಂಸ್ಥೆಯನ್ನು (ಕಂಪನಿಯನ್ನು) ಪ್ರಸಿದ್ಧಗೊಳಿಸಲು ತಮ್ಮ ಜಾಹೀರಾತು ಇರುವ ದಿನದರ್ಶಿಕೆಯನ್ನು (ಕ್ಯಾಲೆಂಡರ್) ಪ್ರಕಾಶಿಸಿ ಅದನ್ನು ಗ್ರಾಹಕರಿಗೆ, ನೌಕರರಿಗೆ, ಬಂಧುಬಳಗದವರು ಮೊದಲಾದವರಿಗೆ ಉಡುಗೊರೆಯಾಗಿ ನೀಡುತ್ತಾರೆ. ವ್ಯಾವಹಾರಿಕ ವ್ಯಸ್ತತೆಯಿಂದ ಅನೇಕ ಉದ್ಯಮಿಗಳಿಗೆ ಪ್ರತ್ಯಕ್ಷ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಮೇಲಿನ ಎರಡೂ ಉದ್ದೇಶಗಳನ್ನು ಸಾಧ್ಯಗೊಳಿಸಲು ಉದ್ಯಮಿಗಳು ಸನಾತನ ಪಂಚಾಂಗದ ಜಾಹೀರಾತುಗಳಿಗಾಗಿ ಇರುವ ಜಾಗದಲ್ಲಿ ಕೇವಲ ತಮ್ಮದೇ ಜಾಹೀರಾತು ನೀಡಿ ದಿನದರ್ಶಿಕೆಯನ್ನು ವಿತರಿಸಬಹುದು. ಇದರಿಂದ ವಾಚಕರಿಗೆ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ವಿಷಯಗಳ ಲಾಭವಾಗಿ ಉದ್ಯಮಿಗಳೂ ಧರ್ಮಕಾರ್ಯದಲ್ಲಿ ಪಾಲ್ಗೊಂಡಂತೆ ಆಗುವುದು. ಹಾಗೆಯೇ ಅವರ ಉದ್ಯಮದ ಪ್ರಸಿದ್ಧಿಯೂ ಆಗುವುದು.
ಸನಾತನದ ನಿಸ್ವಾರ್ಥ ಕಾರ್ಯವನ್ನು ನೋಡಿ ಇಂದಿನ ತನಕ ಸಿರಗುಪ್ಪದ ‘ಶ್ರೀ ಗೋಪಾಲರೆಡ್ಡಿ ಪ್ರೈಮರಿ ಆಗ್ರಿಕಲ್ಚರಲ್ ಕೊ-ಆಪರೇಟಿವ್ ಸೊಸೈಟಿ, ಪುಣೆಯ ‘ಭಾಫ್ನಾ ಜ್ಯುವೆಲರ‍್ಸ್, ಗುಜರಾತಿನ ‘ಇಲೆಕ್ಟ್ರೋಥರ್ಮ, ದೆಹಲಿಯ ‘ಮೆಟ್ರೋ ಬಿಲ್ಡ್‌ಟೆಕ್ ಮತ್ತು ಚೆನ್ನೈಯ ‘ಕುಮಾರನ್ ಸಿಲ್ಕ್ಸ್ ಮೊದಲಾದ ಸಂಸ್ಥೆಗಳು ಕೇವಲ ತಮ್ಮದೇ ಜಾಹೀರಾತು ಇರುವ ‘ಸನಾತನ ಪಂಚಾಂಗವನ್ನು ಮುದ್ರಿಸಿಕೊಂಡಿವೆ.
‘ಸನಾತನ ಪಂಚಾಂಗ ದ ವೈಶಿಷ್ಟ್ಯಗಳು
೧. ಆಕರ್ಷಕ ಬಣ್ಣ ಸಂಯೋಜನೆ, ಸಾತ್ತ್ವಿಕ ಅಂಕೆಗಳು ಮತ್ತು ಅಕ್ಷರಗಳಿರುವ ಬರವಣಿಗೆ !
೨. ದೇವತೆಗಳ ಸಾತ್ತ್ವಿಕ ಚಿತ್ರಗಳು, ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಪ್ರಬೋಧನೆ ಹಾಗೂ ಆಪತ್ಕಾಲವನ್ನು ಎದುರಿಸಲು ಅವಶ್ಯಕ ಪೂರ್ವಸಿದ್ಧತೆ ಮತ್ತು ಮನೋಬಲ ಹೆಚ್ಚಿಸುವ ಪರಿಹಾರೋಪಾಯಗಳ ಸಮಾವೇಶ
೩. ಮರಾಠಿ, ಹಿಂದಿ, ಕನ್ನಡ, ತಮಿಳು, ತೆಲುಗು, ಗುಜರಾತಿ ಭಾಷೆಗಳಲ್ಲಿ ಲಭ್ಯ !
ಉದ್ಯಮಿಗಳೇ, ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಧರ್ಮರಕ್ಷಣೆಗಾಗಿ ಉದ್ಯುಕ್ತಗೊಳಿಸುವ ‘ಸನಾತನ ಪಂಚಾಂಗದಲ್ಲಿ ನಿಮ್ಮ ಸಂಸ್ಥೆಯ ಜಾಹೀರಾತನ್ನು ಮುದ್ರಿಸಿಕೊಂಡು ಅವುಗಳ ವಿತರಣೆಯ ಮೂಲಕ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ !
ಈ ಪಂಚಾಂಗವನ್ನು ಮುದ್ರಿಸಿಕೊಳ್ಳಲು ಇಚ್ಛಿಸುವ ಉದ್ಯಮಿಗಳು ಪಂಚಾಂಗ ಮುದ್ರಣದ ೩-೪ ವಾರದೊಳಗೆ ತಮ್ಮ ಮಾಹಿತಿಯನ್ನು [email protected] ಈ ವಿ-ಅಂಚೆ ವಿಳಾಸಕ್ಕೆ ಕಳಿಸಬೇಕು. ಈ ಬಗ್ಗೆ ಸಂದೇಹಗಳಿದ್ದಲ್ಲಿ ಸೌ. ಭಾಗ್ಯಶ್ರೀ ಸಾವಂತ ಇವರನ್ನು ೭೦೫೮೮೮೫೬೧೦ ಈ ಸಂಖ್ಯೆಯಲ್ಲಿ ಸಂಪರ್ಕಿಸಬೇಕೆಂದು ವಿನಂತಿ. ಟಿಪ್ಪಣಿ : ಪಂಚಾಂಗದಲ್ಲಿ ಮುದ್ರಿಸಬೇಕಾಗಿರುವ ಜಾಹೀರಾತಿನ ಕಲಾಕೃತಿ ಉದ್ಯಮಿಗಳೇ ಮಾಡಿಕೊಟ್ಟರೆ ತುಂಬಾ ಅನುಕೂಲವಾಗುವುದು