೧. ಭಾರತವು ಹಾಗೆ ಏಕೆ ಮಾಡುವುದಿಲ್ಲ ?
‘ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ನಿಲ್ಲದಿದ್ದರೆ, ಭಾರತವು ಬಾಂಗ್ಲಾದೇಶದ ಮೇಲೆ ದಾಳಿ ಮಾಡಿ ಅಲ್ಲಿಯ ಪ್ರದೇಶವನ್ನು ವಶಪಡಿಸಿಕೊಳ್ಳಬೇಕು’, ಎಂದು ಭಾಜಪದ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿಯವರು ಪುನರುಚ್ಚರಿಸಿದ್ದಾರೆ.
೨. ಭಾರತದಲ್ಲಿ ಹೀಗೆ ಯಾವಾಗ ಸಂಭವಿಸುತ್ತದೆ ?
ವಿಶ್ವದ ಅತಿದೊಡ್ಡ ಮುಸಲ್ಮಾನ ಜನಸಂಖ್ಯೆ ಅಂದರೆ ೨೧ ಕೋಟಿ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾದಲ್ಲಿ ೭೦ ಸಾವಿರ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸಲಾಗಿದೆ. ಏರು ಧ್ವನಿಯಿಂದ ಜನರು ತೊಂದರೆಗೀಡಾಗಿದ್ದರಿಂದ ‘ಇಂಡೋನೇಷ್ಯಾ ಮಸೀದಿ ಪರಿಷತ್ತು’ ಈ ನಿರ್ಧಾರವನ್ನು ತೆಗೆದುಕೊಂಡಿದೆ.
೩. ಹಿಂದೂಗಳೇ, ಮತಾಂಧರ ಷಡ್ಯಂತ್ರವನ್ನು ಗುರುತಿಸಿ !
ಬಾಂಗ್ಲಾದೇಶದಲ್ಲಿ ಕುರಾನನ್ನು ಅವಮಾನಿಸಿದ ಆರೋಪದ ಮೇರೆಗೆ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಿದ್ದರಿಂದ ಹಿಂದೂಗಳು ಸಾವನ್ನಪ್ಪಿದರು. ಇಕ್ಬಾಲ್ ಹುಸೇನ ಇವನು ಶ್ರೀದುರ್ಗಾದೇವಿ ಪೂಜಾ ಮಂಟಪದಲ್ಲಿನ ಶ್ರೀ ಆಂಜನೇಯನ ವಿಗ್ರಹದ ಕಾಲಿನ ಹತ್ತಿರ ಕುರಾನ್ ಇಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
೪. ಈ ಬಗ್ಗೆ ಜಾತ್ಯತೀತರು ಏಕೆ ಮೌನವಾಗಿದ್ದಾರೆ ?
ಪ್ರತಿದಿನ ಸರಾಸರಿ ೬೩೨ ಹಿಂದೂಗಳು ಬಾಂಗ್ಲಾದೇಶವನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದ್ದರಿಂದ ೨೦೫೦ ರ ವೇಳೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳೇ ಇರುವುದಿಲ್ಲ, ಎಂದು ಢಾಕಾ ವಿಶ್ವವಿದ್ಯಾಲಯದ ಪ್ರೊ. ಡಾ. ಅಬುಲ್ ಬರಕತ್ ಇವರು ತಮ್ಮ ಪುಸ್ತಕದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
೫. ಭಯೋತ್ಪಾದಕರಿಗೆ ಧರ್ಮ ಇರುತ್ತದೆ, ಎಂದು ಜಾತ್ಯತೀತರು ಯಾವಾಗ ಹೇಳುತ್ತಾರೆ ?
ಅಫಗಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಬಂದ ನಂತರ ಈಗ ಅಲ್ಲಿ ಉಳಿದಿರುವ ಸಿಕ್ಖ್‌ರಿಗೆ ಅಫಗಾನಿಸ್ತಾನ ತೊರೆಯಿರಿ ಇಲ್ಲ ಇಸ್ಲಾಮ್‌ಗೆ ಅಂಗೀಕರಿಸಿ ಎಂದು ಬೆದರಿಕೆಯೊಡ್ಡಲಾಗಿದೆ ಎಂಬ ವರದಿಯು ಬೆಳಕಿಗೆ ಬಂದಿದೆ.
೬. ಅನ್ಯಮತೀಯರು ತಮ್ಮ ಮತಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಎಂಬುದನ್ನು ಅರಿತುಕೊಳ್ಳುವರೇ?
‘ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ೩೦ ತಿಂಗಳವರೆಗೂ ಮುಸಲ್ಮಾನ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ’, ಎಂದು ಪಕ್ಷವು ಘೋಷಿಸಲಿ’ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎಮ್. ಇಬ್ರಾಹಿಮ್ ಇವರು ಹೇಳಿದ್ದಾರೆ.
೭. ಹಿಂದೂದ್ರೋಹಿ ಸಂಸ್ಥೆಗಳನ್ನು ಬಹಿಷ್ಕರಿಸಬೇಕು !
ಡಾಬರ್ ಸಂಸ್ಥೆಯು ತನ್ನ ಉತ್ಪಾದನೆ ‘ಗೋಲ್ಡ್ ಬ್ಲೀಚ್’ (ಮುಖ ಕಾಂತಿಯನ್ನು ಬೆಳಗಿಸುವುದಕ್ಕಾಗಿನ ಪೌಡರ) ಈ ಉತ್ಪಾದನೆಗಾಗಿ ಪ್ರಸಾರ ಮಾಡಿದ ಜಾಹೀರಾತಿನಲ್ಲಿ ಓರ್ವ ಸಲಿಂಗಕಾಮಿ ದಂಪತಿಗಳು ತಮ್ಮ ಮೊದಲ ‘ಕರ್ವಾ ಚೌತ’ ವ್ರತವನ್ನು ಆಚರಿಸುವುದನ್ನು ತೋರಿಸಿದೆ.