ಈ ವರ್ಷದ ದೀಪಾವಳಿಯನ್ನು ‘ಹಲಾಲ್ ಮುಕ್ತ ದೀಪಾವಳಿ’ ಎಂದು ಆಚರಿಸಿ ! – ಶ್ರೀ. ರಮೇಶ ಶಿಂದೆ

‘ಹಲಾಲ್ ಮುಕ್ತ ದೀಪಾವಳಿ !’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ‘ಆನ್‌ಲೈನ್’ ವಿಶೇಷ ಸಂವಾದದ ಮೂಲಕ ಕರೆ !

‘ಸಿಎಟ್ ಟೈಯರ್ಸ್’ನ ಜಾಹೀರಾತಿನಲ್ಲಿ ನಟ ಆಮೀರ ಖಾನ ಇವರು ‘ರಸ್ತೆಗಳಿರುವುದು ಪಟಾಕಿಗಳನ್ನು ಸಿಡಿಸಲಿಕ್ಕಲ್ಲ’ ಎಂದು ಹಿಂದೂಗಳಿಗೆ ಸಲಹೆಯನ್ನು ನೀಡುತ್ತಾರೆ; ಆದರೆ ‘ರಸ್ತೆಗಳಲ್ಲಿ ನಮಾಜು ಪಠಣ ಸಹ ಮಾಡಲಿಕ್ಕಿರುವುದಿಲ್ಲ’ ಎಂಬ ಬಗ್ಗೆ ಅವರು ಏನೂ ಹೇಳುವುದಿಲ್ಲ. ‘ಫ್ಯಾಬ್ ಇಂಡಿಯಾ’ದ ಜಾಹೀರಾತಿನಲ್ಲಿ ದೀಪಾವಳಿಯನ್ನು ‘ಜಶ್ನ-ಎ-ರಿವಾಜ್’ ಎಂದು ಸಂಬೋಧಿಸಲಾಗಿದೆ. ಹಿಂದೂಗಳ ಪರಂಪರೆಗಳನ್ನು ‘ಇಸ್ಲಾಮ್’ ಕಡೆಗೆ ಹೊರಳಿಸುವುದು, ಹಾಗೆಯೇ ಅನಂತರ ಅಲ್ಲಿ ‘ಹಲಾಲ್’ನ ವ್ಯವಸ್ಥೆಯನ್ನು ಮಾಡುವುದು ಮತ್ತು ‘ಹಲಾಲ್ ಅರ್ಥವ್ಯವಸ್ಥೆ’ಯ ಆಧಾರದಲ್ಲಿ ಇಸ್ಲಾಮಿ ಬ್ಯಾಂಕುಗಳಿಗೆ ಪ್ರೋತ್ಸಾಹ ನೀಡಿ ಗಟ್ಟಿ ಮಾಡುವುದು ನಡೆದಿದೆ. ಈ ಬಗ್ಗೆ ಹಿಂದೂಗಳು ಎಚ್ಚರಿಕೆಯಿಂದ ನೋಡಬೇಕು. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ‘ಆನ್‌ಲೈನ್’ ವ್ಯಾಪಾರದಿಂದ ಕೋಟಿಗಟ್ಟಲೆ ರೂ.ಗಳ ವ್ಯಾಪಾರವಾಗುತ್ತದೆ. ಇದರಲ್ಲಿ ದೀಪಾವಳಿಯಂತಹ ಹಬ್ಬಗಳಲ್ಲಿ ಹಿಂದೂ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದುದರಿಂದ ನಾವು ‘ಹಲಾಲ್ ಮುಕ್ತ ದೀಪಾವಳಿ’ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು ಈ ಅಭಿಯಾನದಲ್ಲಿ ಇಡೀ ಹಿಂದೂ ಸಮಾಜವು ಪಾಲ್ಗೊಳ್ಳಬೇಕು. ಹಿಂದೂಗಳು ಈ ದೀಪಾವಳಿಯಂದು ‘ಹಲಾಲ್’ ಅಧಿಕೃತ ಉತ್ಪಾದನೆಗಳನ್ನು ಮತ್ತು ಹಿಂದೂ ಪರಂಪರೆಂಗಳ ಇಸ್ಲಾಮೀಕರಣವನ್ನು ಮಾಡುವ ಕಂಪನಿಗಳ ಉತ್ಪಾದನೆಗಳನ್ನು ಖರೀದಿಸದೇ ಈ ವರ್ಷದ ದೀಪಾವಳಿಯನ್ನು ‘ಹಲಾಲ್ ಮುಕ್ತ ದೀಪಾವಳಿ’ಯನ್ನಾಗಿ ಆಚರಿಸಿರಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆ ಇವರು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಈ ವರ್ಷ ಆಚರಿಸಿರಿ : ಹಲಾಲ್ ಮುಕ್ತ ದೀಪಾವಳಿ !’ ಎಂಬ ಆನ್‌ಲೈನ್’ ವಿಶೇಷ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಶ್ರೀ. ರಮೇಶ ಶಿಂದೆ ಇವರು ಮುಂದೆ ಮಾತನಾಡುತ್ತಾ, ‘ಹಿಂದೂ ಸಮಾಜದಲ್ಲಿ ‘ಹಲಾಲ್’ ವಿಷಯದಲ್ಲಿ ಇಂದಿಗೂ ಅಜ್ಞಾನವಿದೆ. ಭಾರತದಲ್ಲಿ ಭಾರತ ಸರಕಾರದ ಅಧಿಕೃತ FSSAI ಮತ್ತು FDI ಈ ಪ್ರಮಾಣಪತ್ರವನ್ನು ನೀಡುವ ಸಂಸ್ಥೆ ಇರುವಾಗ ಇಸ್ಸಾಮಿ ಸಂಸ್ಥೆಗಳಿಂದ ‘ಹಲಾಲ್’ನ ಪ್ರಮಾಣಪತ್ರವನ್ನೇಕೆ ಕಡ್ಡಾಯ ಮಾಡಲಾಗುತ್ತದೆ ? ‘ಹಲಾಲ್’ ಈಗ ಕೇವಲ ಮಾಂಸಾಹಾರಿ ಪದಾರ್ಥಗಳಿಗಷ್ಟೇ ಸೀಮಿತವಾಗಿರದೇ ಜೀವನಾವಶ್ಯಕ ವಸ್ತುಗಳು, ಖಾದ್ಯಪದಾರ್ಥಗಳು, ಮಿಠಾಯಿಗಳು, ತಂಪು ಪಾನೀಯಗಳು, ಆಸ್ಪತ್ರೆಗಳು, ನಿವಾಸಿ ವಸಾಹತುಗಳು ಇಲ್ಲಿಯವರೆಗೆ ಹಬ್ಬಿದೆ. ‘ಹಲಾಲ್’ನ ಈ ಎಲ್ಲ ಹಣವು ಇಸ್ಲಾಮಿಕ್ ಬ್ಯಾಂಕುಗಳಲ್ಲಿ ಜಮೆಯಾಗುತ್ತಿದೆ. ‘ಹಲಾಲ್ ವ್ಯವಸ್ಥೆ’ಯು ಅಲ್ಪಸಂಖ್ಯಾತರ ಹುಕುಮಶಾಹಿಯಾಗಿದೆ. ಎಲ್ಲಿ ಹುಕುಮಶಾಹಿ ಇದೆಯೋ, ಅಲ್ಲಿ ಭಯೋತ್ಪಾದನೆ ಇದೆ, ಎಂದು ಗಮನದಲ್ಲಿಡಬೇಕು’, ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ಶ್ರೀ ವಿನೋದ ಬನ್ಸಲ್ ಇವರು ಮಾತನಾಡುತ್ತಾ, “ಜಮಾತ್-ಎ-ಇಸ್ಲಾಮಿ’ನೊಂದಿಗೆ ಸಾಮಾನ್ಯವಾಗಿ ೮ ರಿಂದ ೧೦ ಕಟ್ಟಾವಾದಿ ಇಸ್ಲಾಮಿ ಸಂಘಟನೆಗಳಿಗೆ ‘ಹಲಾಲ್’ ಪ್ರಮಾಣಪತ್ರವನ್ನು ನೀಡುವ ಅಧಿಕಾರವನ್ನು ನೀಡಲಾಗಿದೆ. ‘ಹಲಾಲ್’ನ ಹಣವನ್ನು ಭಯೋತ್ಪಾದಕ ಕೃತ್ಯಗಳಿಗಾಗಿ ಬಳಸಲಾಗುತ್ತದೆ. ಇದು ಭಾರತದಲ್ಲಷ್ಟೇ ಅಲ್ಲ, ಆದರೆ ಜಗತ್ತಿನಾದ್ಯಂತದ ಘಟನೆಗಳಿಂದ ಬೆಳಕಿಗೆ ಬಂದಿದೆ. ‘ಹಲಾಲ್ ಸರ್ಟಿಫಿಕೇಟ್’ ನೀಡುವ ಎಲ್ಲ ಕಂಪನಿಗಳ ಮೇಲೆ ಹಿಂದೂ ಬಾಂಧವರು ಬಹಿಷ್ಕಾರ ಹಾಕಬೇಕು ಮತ್ತು ಇಂತಹ ಕಂಪನಿಗಳ, ಸಂಸ್ಥೆಗಳ ನಿಜಸ್ವರೂಪವನ್ನು ಬಹಿರಂಗಪಡಿಸಬೇಕು. ಹಿಂದೂಗಳು ತಾವಾಗಿಯೇ ಮುಂದೆ ಬಂದು ಇದಕ್ಕಾಗಿ ನೇತೃತ್ವ ವಹಿಸಬೇಕು’ ಎಂದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಗೌರವ ಗೋಯಲ ಇವರು ಮಾತನಾಡುತ್ತಾ, ‘ಹಲಾಲ್’ ಕಡೆಗೆ ಹೋಗುವ ಹಣವು ಯಾವ ಕಾರಣಗಳಿಗಾಗಿ ಉಪಯೋಗಿಸಲಾಗುತ್ತದೆ, ಎಂಬ ಬಗ್ಗೆ ಗೊಂದಲದ ಸ್ಥಿತಿ ಇದೆ. ಪ್ರಾಯಶಃ, ಅಯೋಗ್ಯ ವಿಷಯಗಳಿಗಾಗಿ ಇದರ ಬಳಕೆಯಾಗುತ್ತಿರುವ ಬಗ್ಗೆ ಲೇಖನಗಳು ಪ್ರಸಾರಮಾಧ್ಯಮಗಳಲ್ಲಿ ಓದಲು ಸಿಕ್ಕಿದೆ. ‘ಹಲಾಲ್’ನ ಸಮಾಂತರ ಅರ್ಥವ್ಯವಸ್ಥೆಯಿಂದ ಭಾರತದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮವಾಗಲಿದೆ. ಆದುದರಿಂದ ಹಿಂದೂಗಳು ಕೇವಲ ದೀಪಾವಳಿಯಲ್ಲಷ್ಟೇ ಅಲ್ಲ ಆದರೆ ಸಂಪೂರ್ಣ ವರ್ಷದಾದ್ಯಂತ ‘ಹಲಾಲ್’ನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಆವಶ್ಯಕವಾಗಿದೆ. ನಾವು ನ್ಯಾಯವಾದಿಗಳೆಂದು ‘ಹಲಾಲ್’ ವಿರುದ್ಧ ನ್ಯಾಯಾಂಗ ಮಾರ್ಗದಿಂದ ಹೋರಾಟ ಮಾಡುವೆವು, ಎಂದು ಸಹ ನ್ಯಾಯವಾದಿ ಗೋಯಲ ಇವರು ಹೇಳಿದರು.