ರೈತ ಆಂದೋಲನದಲ್ಲಿ ದೇಶವಿರೋಧಿ ಶಕ್ತಿಗಳು

ಸಂಪಾದಕೀಯ

ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಮತ್ತು ಕೇಂದ್ರೀಯ ರಾಜ್ಯ ಗೃಹಸಚಿವ ಅಜಯ ಮಿಶ್ರಾ ಇವರು ಉತ್ತರಪ್ರದೇಶದ ಲಖೀಂಪೂರ ಖೇರಿ ಜಿಲ್ಲೆಯಲ್ಲಿ ಅಕ್ಟೋಬರ ೩ ರ ರಾತ್ರಿ  ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿರುವಾಗ ರೈತರು ಅವರ ವಾಹನದ ಮೇಲೆ ಹಲ್ಲೆ ಮಾಡಿದರು. ಈ ಸಂದರ್ಭದಲ್ಲಾದ ಹಿಂಸಾತ್ಮಕ ಘಟನೆಯಲ್ಲಿ ಭಾಜಪದ ೪ ಕಾರ್ಯಕರ್ತರೂ ಸೇರಿದಂತೆ ೯ ಜನರು ಸಾವನ್ನಪ್ಪಿದರು. ಮಂತ್ರಿಗಳ ವಾಹನದ ಮೇಲೆ ಕಲ್ಲು ಎಸೆದಾಗ ವಾಹನ ಚಾಲಕನಿಗೆ ಕಲ್ಲು ತಗುಲಿ ವಾಹನದ ಮೇಲಿನ ನಿಯಂತ್ರಣ ತಪ್ಪಿತು. ‘ಇದು ಬೇಕಂತಲೆ ಮಾಡಿರುವ ಅಪಘಾತವಾಗಿದೆ ಎಂದು ಯಾರಿಗಾದರೂ ಅನಿಸಿದಲ್ಲಿ ತಪ್ಪೇನಿದೆ ?’ ಈ ವಾಹನದಡಿ ಸಿಲುಕಿ ೪ ಜನ ರೈತರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ; ಆದರೆ ತದನಂತರ ಆಂದೋಲನ ಕಾರರು ಭಾಜಪದ ೪ ಕಾರ್ಯಕರ್ತರನ್ನು ಸಾಯುವವರೆಗೆ ಅಮಾನವೀಯವಾಗಿ ಥಳಿಸಿದರು; ಇದೂ ಅಷ್ಟೇ ಹೃದಯ ವಿದ್ರಾವಕವಲ್ಲವೇ? ‘ಭಾರತದಲ್ಲಿರುವ ರೈತರು ನಿಜವಾಗಿಯೂ ಇಷ್ಟು ಕ್ರೂರರಾಗಿದ್ದಾರೆಯೇ?’ ಇದನ್ನು ಯಾರು ನಂಬುವರು ?’ ಇಲ್ಲಿಯವರೆಗೆ ‘ಮಾಬ್ ಲಿಂಚಿಂಗ್’ ಹೆಸರಿನಿಂದ ಹಿಂದುತ್ವನಿಷ್ಠರ ಮೇಲೆ ಮನಸೋಕ್ತ ಮಾತನಾಡುವ ತಥಾಕಥಿತ ಬುದ್ಧಿಜೀವಿ ಗುಂಪಿನವರು ಈಗ ಒಮ್ಮೆಲೇ ಶಾಂತರಾಗಿದ್ದಾರೆ. ಬಹುಶಃ ಅವರಿಗೆ ಈ ಕೃತ್ಯವು ಅಪಘಾತದಲ್ಲಿ ಮರಣವನ್ನಪ್ಪಿದ ರೈತರ ವಿರುದ್ಧದ ‘ಸೇಡು’ ಎಂದು ಅನಿಸುತ್ತಿರಬಹುದು. ನ್ಯಾಯಾಲಯವು, ‘ಪ್ರಕರಣ ನ್ಯಾಯಾಲಯದಲ್ಲಿರುವಾಗಲೂ ರೈತರು ಏಕೆ ಆಂದೋಲನವನ್ನು ಮಾಡುತ್ತಿದ್ದಾರೆ?’ ಎಂದು ನಿರಂತರವಾಗಿ ಪ್ರಶ್ನಿಸುತ್ತಿದೆ. ಸರಕಾರವು ಕಾನೂನನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಈಗ ರೈತರಿಗೆ ‘ನ್ಯಾಯಾಲಯಕ್ಕೆ ಹೋಗುವುದು ಒಂದೇ ಪರ್ಯಾಯ ಮಾರ್ಗವಾಗಿದೆ’. ‘ನ್ಯಾಯಾಲಯದಲ್ಲಿ ದೂರು ದಾಖಲಿಸಿರುವಾಗ ಈ ರೀತಿ ಜನರನ್ನು ಹಿಡಿತದಲ್ಲಿಟ್ಟು ಆಂದೋಲನಗಳನ್ನು ಮಾಡುವುದು ಸರಿಯಲ್ಲ’ ಎನ್ನುವುದು ನ್ಯಾಯಾಲಯದ ಹೇಳಿಕೆಯಾಗಿದೆ; ಆದರೆ ಸದ್ಯಕ್ಕಂತೂ ಆಡಳಿತ ವರ್ಗ ರೈತರ ಮುಂದೆ ಹತಾಶರಾಗಿರುವಂತೆ ಕಂಡು ಬರುತ್ತಿದೆ.

ದೇಶವಿರೋಧಿ ಶಕ್ತಿಗಳ ನುಸುಳುವಿಕೆ

ಮೇಲಿನ ಎಲ್ಲ ಘಟನಾವಳಿಗಳಿಂದ ಒಂದು ವಿಷಯ ಮಾತ್ರ ಪುನಃ ಸ್ಪಷ್ಟವಾಗುತ್ತಿದೆ. ಅದೆಂದರೆ, ರೈತರ ಆಂದೋಲನದಲ್ಲಿ ದೇಶವಿರೋಧಿ, ಹಾಗೆಯೇ ಸರಕಾರವಿರೋಧಿ ಶಕ್ತಿಗಳ ಬಹು ದೊಡ್ಡ ಪ್ರಮಾಣದಲ್ಲಿ ಹಸ್ತಕ್ಷೇಪವಿದೆ. ಲಖೀಂಪುರ ಖೀರಿ, ಹಾಗೆಯೇ ಕರನಾಳಗಳಲ್ಲಿ ನಡೆದ ರೈತ ಆಂದೋಲನದಲ್ಲಿ ರೈತರು ಖಲಿಸ್ತಾನಿ ಭಯೋತ್ಪಾದಕ ಜರ್ನೇಲಸಿಂಗ ಭಿಂದ್ರನವಾಲೆ ಇವರ ಛಾಯಾಚಿತ್ರವಿರುವ ‘ಟೀಶರ್ಟ’ ಧರಿಸಿದ್ದರು. ಭಿಂದ್ರನ್‌ವಾಲೆ ರೈತ ಮುಖಂಡನಾಗಿರಲಿಲ್ಲ ಅಥವಾ ಅವನು ಜೀವನದಲ್ಲಿ ಎಂದಿಗೂ ರೈತರಿಗಾಗಿ ಆಂದೋಲನವನ್ನೂ ಮಾಡಿರಲಿಲ್ಲ. ಭಿಂದ್ರನ್ ವಾಲೆಯು ಇಂದಿರಾ ಗಾಂಧಿಯವರು ಅಮೃತಸರದಲ್ಲಿ ೧೯೮೪ ನೆಯ ಇಸವಿಯಲ್ಲಿ ನಡೆಸಿದ ‘ಆಪರೇಶನ ಬ್ಲ್ಯೂ ಸ್ಟಾರ್’ ನಲ್ಲಿ ಅಂದರೆ ಸುವರ್ಣಮಂದಿರದಲ್ಲಿ ಸೈನ್ಯವನ್ನು ಒಳ ನುಗ್ಗಿಸಿ ಅಡಗಿ ಕುಳಿತಿದ್ದ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ನಡೆಸಿದ ಚಳುವಳಿಯಲ್ಲಿ ಹತನಾಗಿದ್ದನು. ಈ ‘ಆಪರೇಶನ ಬಳಿಕ ಖಲಿಸ್ತಾನ ಚಳುವಳಿ ನಿರ್ನಾಮವಾಯಿತು ಎಂದು ಎಲ್ಲರೂ ತಿಳಿಯುತ್ತಿದ್ದರು; ಆದರೆ ದೆಹಲಿಯ ರೈತರ ಆಂದೋಲನ ಪ್ರಾರಂಭವಾದ ಬಳಿಕ ಅದು ವಿದೇಶದಲ್ಲಿ ಚೆನ್ನಾಗಿ ಹಬ್ಬಿರುವುದು ಎಲ್ಲರ ಗಮನಕ್ಕೆ ಬಂದಿತು. ಇಲ್ಲಿಯವರೆಗೆ ಸರಕಾರ ಮತ್ತು ರೈತರ ನಡುವೆ ಅನೇಕ ಸುತ್ತು ಚರ್ಚೆಗಳು ನಡೆದಿವೆ. ಸರಕಾರ ಪ್ರತಿಬಾರಿಯೂ ರೈತರ ಪ್ರತಿನಿಧಿಗಳನ್ನು ಊಟಕ್ಕೆ ಆಮಂತ್ರಿಸುತ್ತದೆ; ಆದರೆ ಈ ರೈತ ಮುಖಂಡರು ಸರಕಾರಿ ಪ್ರತಿನಿಧಿಗಳೊಂದಿಗೆ ಭೋಜನವನ್ನು ಮಾಡುವುದಿಲ್ಲ; ಆದರೆ ಅಲ್ಲಿಯೂ ಅವರಿಗೆ ಲಂಗರದಿಂದ ಊಟ ಬರುತ್ತದೆ. ಈ ಲಂಗರ (ಸಿಕ್ಖ್ ಸಂಪ್ರದಾಯದಲ್ಲಿ ಗುರುದ್ವಾರದಲ್ಲಿ ಅಥವಾ ಇತರೆಡೆ ಅವರು ಜನರಿಗೆ ನೀಡುವ ಉಚಿತ ಭೋಜನ) ನಡೆಸಲು ಹೊರದೇಶದಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬರುತ್ತಿರುವ ಆರೋಪವಿದೆ. ರೈತರು ಬಡವರಾಗಿದ್ದಾರೆ; ಎಂದು ಆಂದೋಲನ ಮಾಡುತ್ತಿದ್ದಾರೆ. ಹೀಗಿರುವಾಗ ನೂರಾರು ರೈತರಿಗೆ ಊಟವನ್ನು ನೀಡಲು ಇಷ್ಟು ದೊಡ್ಡ ‘ಲಂಗರ’ ಇಷ್ಟು ತಿಂಗಳುಗಳ ವರೆಗೆ ಹೇಗೆ ನಡೆಸಲಾಗುತ್ತಿದೆ ? ಮೋದಿ ಸರಕಾರದ ವಿರುದ್ಧ ಆಂದೋಲನ ಮುಂದುವರಿಸಲು ಕೆನಡಾದಂತಹ ದೇಶದಿಂದ ಖಲಿಸ್ತಾನ ಚಳುವಳಿಯನ್ನು ಪೋಷಿಸುವ ದೇಶದಿಂದ ಹಣ ಹರಿದು ಬರುತ್ತಿದೆ. ಈಗ ಮೋದಿ ಸರಕಾರವು ತಮ್ಮ ವಿದೇಶಿ ನೀತಿಯಿಂದ ಈ ಖಲಿಸ್ತಾನವಾದಿಗಳನ್ನು ಪೋಷಿಸುವ ದೇಶಗಳಿಗೆ ಗಾಳ ಹಾಕುವುದೇ ? ಎನ್ನುವುದು ಒಂದು ಗಮನಿಸಬೇಕಾದ ವಿಷಯವಾಗಿದೆ. ‘ಇಂದಿರಾ ಕೊ ಠೋಕ ದಿಯಾ, ಮೋದಿಕಿ ಛಾತಿಪರ ಭೀ ಠೋಕ ದೇಂಗೆ !’ ಎಂದು ಆಂದೋಲನಕಾರಿಗಳು ಘೋಷಣೆಯನ್ನು ಕೂಗುತ್ತಿದ್ದಾರೆ. ಇದರರ್ಥ ಖಲಿಸ್ತಾನ ಸಮರ್ಥಕರು ಈ ಆಂದೋಲನದಲ್ಲಿದ್ದಾರೆ ಎನ್ನುವುದು ದೃಢಪಟ್ಟಿದೆ. ಒಬ್ಬ ಪ್ರಧಾನಮಂತ್ರಿಯ ಹತ್ಯೆಯನ್ನು ಮಾಡಿರುವ ಮತ್ತು ಇನ್ನೊಬ್ಬ ಪ್ರಧಾನಮಂತ್ರಿಗೆ ಹತ್ಯೆ ಬೆದರಿಕೆಯೊಡ್ಡುವ ಈ ಘೋಷಣೆಯನ್ನು ಕೂಗುವವರು ಖಂಡಿತವಾಗಿಯೂ ರೈತರಾಗಿದ್ದಾರೆಯೇ ಅಥವಾ ರಾಷ್ಟ್ರದ್ರೋಹಿ ಶಕ್ತಿಯಾಗಿದೆ? ಈ ರೈತ ಆಂದೋಲನಕ್ಕೆ ಬೆಂಬಲ ನೀಡಿರುವ ‘ಸಿಖ್ಸ್ ಫಾರ ಜಸ್ಟೀಸ್’ ಈ ಸಂಸ್ಥೆ ಖಲಿಸ್ತಾನ ಸಮರ್ಥಕ ಸಂಸ್ಥೆಯಾಗಿದೆ ಎನ್ನುವುದು ಈಗ ಬಹಿರಂಗವಾಗಿದೆ.

ಈ ಪ್ರಶ್ನೆಗಳಿಗೆ ಉತ್ತರಗಳನ್ನು ರೈತ ಸಮರ್ಥಕರು ನೀಡಬೇಕು !

ಪ್ರತಿಯೊಂದು ವಿಷಯದಲ್ಲಿ ಸ್ವಾತಂತ್ರ್ಯ ಬೇಡುವವರು ಮಾರುಕಟ್ಟೆಯನ್ನು ನಿರ್ಧರಿಸುವ ರೈತರ ಸ್ವಾತಂತ್ರ್ಯದ ವಿರುದ್ಧ ಏಕೆ ಹೋಗುತ್ತಿದ್ದಾರೆ, ಅದು ಈ ಕಾನೂನಿನಿಂದ ಅವರಿಗೆ ದೊರೆಯುತ್ತಿರುವಾಗ? ರೈತ ಮುಖಂಡರು ಸರಕಾರದೊಂದಿಗೆ ಚರ್ಚಿಸಲು ಪಟ್ಟುಹಿಡಿದು ಕುಳಿತಿದ್ದಾರೆ ಮತ್ತು ಸರಕಾರದೊಂದಿಗೆ ಅವರ ೧೦ ಕ್ಕಿಂತ ಅಧಿಕ ಚರ್ಚೆಗಳು ವಿಫಲವಾಗಿದೆ; ಆದರೆ ಉಚ್ಚ ನ್ಯಾಯಾಲಯವು ರೈತರಿಗೆ ಚರ್ಚೆ ನಡೆಸಲು ಯಾವ ಸಮಿತಿಯನ್ನು ರಚಿಸಿದೆಯೋ, ಆ ಸಮಿತಿಯೊಂದಿಗೆ ಮಾತ್ರ ಚರ್ಚೆ ಮಾಡಲು ರೈತಮುಖಂಡರು ಸಿದ್ಧರಿಲ್ಲ. ರೈತ ಸಮರ್ಥಕರು ಸಂವಿಧಾನ, ಪ್ರಜಾಪ್ರಭುತ್ವ ಇವುಗಳ ರಕ್ಷಣೆಯ ಬಗ್ಗೆ ಮೇಲಿಂದ ಮೇಲೆ ಚರ್ಚೆ ಮಾಡುತ್ತಾರೆ; ಹೀಗಿರುವಾಗ ಅದರದ್ದೇ ಒಂದು ಭಾಗವಾಗಿರುವ ನ್ಯಾಯಾಲಯದ ಮೇಲೆ ಅವರಿಗೆ ನಂಬಿಕೆ ಇಲ್ಲವೇ ? ನ್ಯಾಯಾಲಯವು ರಚನೆ ಮಾಡಿರುವ ಸಮಿತಿಯೊಂದಿಗೆ ಚರ್ಚೆ ಮಾಡಲು ರೈತ ಮುಖಂಡರು ಏಕೆ ಸಿದ್ಧರಿಲ್ಲ? ೨೦೧೯ ನೇ ಇಸವಿಯಲ್ಲಿ ಕಾಂಗ್ರೆಸ್ಸಿನ ಘೋಷಣಾ ಪತ್ರದಲ್ಲಿ ಈ ಕಾನೂನಿನ ಉಲ್ಲೇಖವಿತ್ತು; ಈಗ ಈ ಕಾನೂನು ಕಾಂಗ್ರ್ರೆಸ್ಸಿಗೆ ಒಮ್ಮೆಲೆ ರೈತವಿರೋಧಿ ಎಂದು ಏಕೆ ಅನಿಸುತ್ತಿದೆ?

ಈ ರೈತ ಆಂದೋಲನದಲ್ಲಿ ನುಸುಳಿರುವ ದೇಶವಿರೋಧಿ ಶಕ್ತಿಗಳನ್ನು ಕಲ್ಲುಗಳಂತೆ ಎತ್ತಿ ಪಕ್ಕಕ್ಕೆ ಸರಿಸುವುದು ಸರಕಾರದ ಎದುರಿಗಿರುವ ಸವಾಲಾಗಿದೆ. ಸಾಮಾನ್ಯ ರೈತರಿಗೆ ಮತ್ತು ಜನತೆಗೆ ಇದರಲ್ಲಿ ರಾಷ್ಟ್ರದ್ರೋಹಿ ಶಕ್ತಿಗಳ ಸಹಭಾಗದ ವಿಷಯದ ಬಗ್ಗೆ ತಿಳಿಸಿ ಹೇಳುವಲ್ಲಿ ಒಂದು ವೇಳೆ ಸರಕಾರ ಯಶಸ್ವಿಯಾದರೆ ರೈತ ಮುಖಂಡರಿಗೆ ಜೊತೆ ನೀಡುವ ರೈತರು ಮತ್ತು ಜನತೆ ಅವರಿಂದ ದೂರವಾಗುವರು ಮತ್ತು ಈ ಆಂದೋಲನವು ಹಿಂದಕ್ಕೆ ಸರಿಯಲು ತನ್ನಿಂತಾನೇ ಪ್ರಾರಂಭವಾಗುವುದು. ವೃದ್ಧರು, ಸ್ತ್ರೀಯರು ಮತ್ತು ಮಕ್ಕಳು ಚಳಿಯಲ್ಲಿ, ಬಿಸಿಲಿನಲ್ಲಿ ಮತ್ತು ಕೊರೊನಾ ನಿಯಮಗಳನ್ನು ಪಾಲಿಸದೇ ರಸ್ತೆಯ ಮೇಲೆ ಅನೇಕ ತಿಂಗಳುಗಳಿಂದ ಕುಳಿತಿದ್ದಾರೆ, ಅಂದರೆ ‘ಅವರ ಮುಖಂಡರು ಅವರನ್ನು ಗಾಳಿಗೆ ತೂರಿದ್ದಾರೆ’ ಎನ್ನುವುದನ್ನು ಅವರಿಗೆ ಅರಿವು ಮೂಡಿಸಿ ಕೊಡಬೇಕಾಗಿದೆ. ಮೋದಿ ಅಥವಾ ಯೋಗಿ ಸರಕಾರ ಪುನಃ ಅಧಿಕಾರಕ್ಕೆ ಬರಬಾರದು ಎನ್ನುವ ಅನೇಕ ಪ್ರಯತ್ನಗಳು ವಿದೇಶಿ ಶಕ್ತಿಗಳ ಸಹಾಯವನ್ನು ಪಡೆದುಕೊಂಡು ಭಾರತದಲ್ಲಿ ಆಗುತ್ತಿದೆಯೋ, ಅವುಗಳಲ್ಲಿಯೇ ಒಂದು ಈ ಸ್ಥಗಿತಗೊಳ್ಳಲು ಸಿದ್ಧರಿಲ್ಲದ ರೈತರ ಆಂದೋಲನವಾಗಿದೆ. ಈಗ ಭಾರತದಲ್ಲಿರುವ ದೇಶಪ್ರೇಮಿ ರೈತರೇ ಮುಂದಾಳತ್ವ ವಹಿಸಿ ಆಂದೋಲನದಲ್ಲಿ ನುಸುಳಿರುವ ದೇಶದ್ರೋಹಿಗಳನ್ನು ಒಂಟಿಯಾಗಿಸಿ ಪಾಠ ಕಲಿಸಬೇಕಾಗಿದೆ !