ಭೋಜನದಲ್ಲಿನ ಹಾನಿಕಾರಿ ಸಂಯೋಗ (ಮಿಶ್ರಣ)

ಸಾತ್ವಿಕ ಆಹಾರ

೧. ಹಾಲಿನೊಂದಿಗೆ ಮೊಸರು, ಉಪ್ಪು, ಹುಳಿ ವಸ್ತುಗಳು, ಉಪ್ಪುಳ್ಳ, ಎಣ್ಣೆಯುಕ್ತ, ಖಾರ ಪದಾರ್ಥಗಳನ್ನು ತಿನ್ನುವುದರಿಂದ ಅನೇಕ ರೋಗಗಳಾಗುತ್ತವೆ. ಹಾಗೆಯೇ ಹಾಲಿನೊಂದಿಗೆ ಹುಣಿಸೆಹಣ್ಣು, ಕುಂಬಳಕಾಯಿ, ಮೂಲಂಗಿ, ಮೂಲಂಗಿಯ ಎಲೆಗಳು, ಬಿಲ್ವಪತ್ರೆ, ಹೀರೆಕಾಯಿ, ಹುಳಿ ಹಣ್ಣುಗಳು, ಹಲಸಿನ ಹಣ್ಣು, ಜವೆಗೋಧಿ, ಕರಿದ ಪದಾರ್ಥಗಳನ್ನು ತಿನ್ನುವುದು ಅಪಾಯಕಾರಿಯಾಗಿದೆ. ಹಾಲಿನಲ್ಲಿ ಬೆಲ್ಲ ಸೇರಿಸಿ ಸೇವಿಸಬಾರದು. ಹಾಲಿನೊಂದಿಗೆ ಆದಷ್ಟು ಇತರ ಪದಾರ್ಥಗಳನ್ನು ತಿನ್ನಬಾರದು.

೨. ತುಪ್ಪದೊಂದಿಗೆ ತಣ್ಣಗಿನ ಹಾಲು, ತಣ್ಣಗಿನ ನೀರು ಮತ್ತು ಸರಾಯಿ ಅಪಾಯಕಾರಿಯಾಗಿರುತ್ತದೆ. ವನಸ್ಪತಿ ತುಪ್ಪದಲ್ಲಿ ಅಥವಾ ಆ ತುಪ್ಪದಿಂದ ತಯಾರಿಸಲಾದ ಪದಾರ್ಥಗಳೊಂದಿಗೆ ಶುದ್ಧ ತುಪ್ಪ ಮತ್ತು ಸಕ್ಕರೆ ಇರುವ ಪದಾರ್ಥಗಳನ್ನು ತಿನ್ನಬಾರದು.

೩. ಮೊಸರಿನೊಂದಿಗೆ ಬಾಳೆಹಣ್ಣು, ಕುಂಬಳಕಾಯಿ, ಕರ್ಬೂಜದ ಹಣ್ಣು, ಹಾಗೆಯೇ ಮೂಲಂಗಿಯನ್ನು ತಿನ್ನಬಾರದು. ಮೊಸರಿನೊಂದಿಗೆ ಪಾಯಸ, ಹಾಲು, ಗಿಣ್ಣ ಮತ್ತು ಬಿಸಿ ಭೋಜನವನ್ನು ಸೇವಿಸಬಾರದು.

. ಎಣ್ಣೆಯುಕ್ತ ಪದಾರ್ಥಗಳೊಂದಿಗೆ ಜೇನು ಅಥವಾ ಸಕ್ಕರೆ ಹಾಕಿದ ಪದಾರ್ಥವನ್ನು ತಿನ್ನಬಾರದು, ಹಾಗೆಯೇ ಎಣ್ಣೆ ಅಥವಾ ಎಣ್ಣೆಯುಕ್ತ ಪದಾರ್ಥಗಳೊಂದಿಗೆ ತುಪ್ಪ ಮತ್ತು ಸಕ್ಕರೆ ಹಾಕಿದ ಪದಾರ್ಥಗಳನ್ನು ತಿನ್ನಬಾರದು. ಇದರೊಂದಿಗೆ ಸಾಸಿವೆ ಎಣ್ಣೆಯುಕ್ತ ಪದಾರ್ಥಗಳೊಂದಿಗೆ ಗಜ್ಜರಿ ಮತ್ತು ಮೊಸರು ತಿನ್ನಬಾರದು.

. ಯಾವುದೇ ಪ್ರಕಾರದ ಮಾಂಸಾಹಾರಿ ಪದಾರ್ಥದೊಂದಿಗೆ ಹೆಸರು, ಬೆಲ್ಲ, ಕಮಲದ ಹಣ್ಣು, ಉದ್ದು, ಜೇನು, ಹಾಲು ಮತ್ತು ಅಳಲೇಕಾಯಿ ಇವುಗಳ ಪೈಕಿ ಯಾವುದೇ ಪದಾರ್ಥವನ್ನು ತಿನ್ನಬಾರದು. ಮಾಂಸಾಹಾರಿ ಪದಾರ್ಥದೊಂದಿಗೆ ಜೇನು ಅಥವಾ ಗಿಣ್ಣವನ್ನು ಸೇವಿಸಿದರೆ ಹೊಟ್ಟೆಯು ಕೆಡುತ್ತದೆ.

೬. ಮೀನಿನೊಂದಿಗೆ ಹಾಲು, ಹಾಲಿನಿಂದ ಉತ್ಪತ್ತಿಯಾದ ಪದಾರ್ಥ, ಕಬ್ಬಿನ ಹಾಲು ಮತ್ತು ಜೇನುತುಪ್ಪವನ್ನು ತಿನ್ನಬಾರದು.

. ಜೇನುತುಪ್ಪದೊಂದಿಗೆ ಮೂಲಂಗಿ, ಕರ್ಬೂಜ ಹಣ್ಣು, ತುಪ್ಪ, ದ್ರಾಕ್ಷಿಗಳು, ಬಿಸಿ ನೀರು ಮತ್ತು ಮಳೆಯ ನೀರು ಅಪಾಯಕಾರಿಯಾಗಿರುತ್ತದೆ.

. ಎಳನೀರು ಮತ್ತು ಕರ್ಪೂರ ಒಟ್ಟಿಗೆ ಸೇವಿಸಬಾರದು.

. ತಂಪು ನೀರಿನೊಂದಿಗೆ ಶೇಂಗಾಬೀಜಗಳು, ಕರ್ಬೂಜ ಹಣ್ಣು, ಪೇರಳೆ, ನೇರಳೆ, ಸೌತೆಕಾಯಿ, ತುಪ್ಪ, ಎಣ್ಣೆ, ಬಿಸಿ ಹಾಲು, ಅಥವಾ ಬಿಸಿ ಭೋಜನವನ್ನು ಸೇವಿಸಬಾರದು.

೧೦. ಚಹಾದೊಂದಿಗೆ ತಂಪು ಹಣ್ಣುಗಳು, ಸೌತೆಕಾಯಿ ಮತ್ತು ತಂಪು ನೀರು ಕುಡಿಯಬಾರದು.

೧೧. ಪಾಯಸದೊಂದಿಗೆ ಖಿಚಡಿ (ಅಕ್ಕಿ, ಬೇಳೆ ಸೇರಿಸಿ ಮಾಡಿದ ಅನ್ನ), ಹುಳಿ ಪದಾರ್ಥಗಳು, ಹಲಸಿನ ಹಣ್ಣು ಮತ್ತು ಜವೆಗೋಧಿಯನ್ನು ತಿನ್ನಬಾರದು.

೧೨. ಬಿಸಿ ಭೋಜನದೊಂದಿಗೆ ತಂಪು ಪಾನೀಯ ಅಪಾಯಕಾರಿಯಾಗಿರುತ್ತದೆ.

೧೩. ಹುರುಳಿಯೊಂದಿಗೆ ಸಾಸಿವೆಯ  ಪದಾರ್ಥವನ್ನು ತಿನ್ನಬಾರದು.

೧೪. ಉದ್ದಿನಬೇಳೆಯ ಪದಾರ್ಥದೊಂದಿಗೆ ಮೊಸರು, ಹಾಲು, ಮಾವಿನಕಾಯಿ, ಹುಣಸೆ ಹಣ್ಣು, ಬೆಲ್ಲ ಮತ್ತು ಮಜ್ಜಿಗೆಯನ್ನು ತಿನ್ನುವುದು ಅಥವಾ ಕುಡಿಯುವುದು ಮಾಡಬಾರದು.

೧೫. ಹಲಸಿನ ಹಣ್ಣು ತಿಂದ ನಂತರ ವೀಳ್ಯೆದೆಲೆಯನ್ನು ತಿನ್ನುವುದು ಅಪಾಯಕಾರಿ ಆಗಿರುತ್ತದೆ.

೧೬. ಕಲ್ಲಂಗಡಿಯೊಂದಿಗೆ ಪುದಿನಾ ಅಥವಾ ತಂಪು ನೀರು ಕುಡಿಯಬಾರದು.

೧೭. ಕರ್ಬೂಜದೊಂದಿಗೆ ಬೆಳ್ಳುಳ್ಳಿ, ಮೂಲಂಗಿ, ಮೂಲಂಗಿಯ ಎಲೆಗಳು, ಮೊಸರು ಮತ್ತು ಹಾಲು ತಿನ್ನುವುದು ಅಪಾಯಕಾರಿಯಾಗಿರುತ್ತದೆ.

೧೮. ಹಿಪ್ಪಲಿ, ಬೆಲ್ಲ, ಬೇಲದ ಹಣ್ಣು ಮತ್ತು ಜೇನುತುಪ್ಪ ಇವುಗಳ ಪೈಕಿ ಯಾವುದೇ ಪದಾರ್ಥವನ್ನು ಒಟ್ಟು ಸೇರಿಸಿ ತಿನ್ನುವುದು ಅಪಾಯಕಾರಿಯಾಗಿದೆ.

– ವೈದ್ಯ ದತ್ತಕುಮಾರ ಪಾಠಕ, ನಾಶಿಕ

(ಆಧಾರ : ಜಾಲತಾಣ)