೧. ಹಾಗಿದ್ದರೆ ರಸ್ತೆಯಲ್ಲಿ ನಮಾಜು ಪಠಣ ಮಾಡುವುದು ಏಕೆ ?
ನಟ ಅಮೀರ ಖಾನ ಇವರು ಎಂದು ‘ಸೀಯಟ್ ಟೈರ್’ ನ ಜಾಹೀರಾತಿನಲ್ಲಿ ಒಬ್ಬ ಹುಡುಗನಿಗೆ ಪಟಾಕಿಗಳನ್ನು ಸಿಡಿಸುವ ಬಗ್ಗೆ ಹೇಳುತ್ತಾ ‘ರಸ್ತೆಗಳು ಪಟಾಕಿಗಳನ್ನು ಸಿಡಿಸುವುದ್ದಕ್ಕಲ್ಲ, ವಾಹನ ನಡೆಸಲಿಕ್ಕಾಗಿರುತ್ತವೆ’ ಎಂದು ಹೇಳಿದ್ದಾರೆ.
೨. ಹಿಂದೂಗಳನ್ನು ಕಡೆಗಣಿಸುವ ಬಂಗಾಲ ಸರಕಾರವನ್ನು ವಿಸರ್ಜಿಸಿರಿ !
ಬಂಗಾಲದ ವಿಧಾನಸಭೆ ಚುನಾವಣೋತ್ತರ ಹಿಂಸಾಚಾರದ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರಕಾರವು ಸಂತ್ರಸ್ತ ಹಿಂದೂಗಳಿಗೆ ಇದುವರೆಗೂ ನಷ್ಟಪರಿಹಾರ ನೀಡಿಲ್ಲ. ಇದರಿಂದ ಕೋಲ್ಕತಾ ಉಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದ್ದು ಬಂಗಾಲ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
೩. ಇಂತಹ ಅತಿಕ್ರಮಣಗಳು ಹೇಗಾಗುತ್ತವೆ ?
ಪ್ರಯಾಗರಾಜದಲ್ಲಿ ಹುತಾತ್ಮಾ ಚಂದ್ರಶೇಖರ ಆಝಾದ್ ಉದ್ಯಾನದಲ್ಲಿರುವ ಎಲ್ಲ ಅತಿಕ್ರಮಣಗಳನ್ನು ತೆಗೆದುಹಾಕುವಂತೆ ಅಲಹಾಬಾದ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ. ಇದರಲ್ಲಿ ಒಂದು ಮಸೀದಿ ಮತ್ತು ಮಜಾರಗಳು (ಇಸ್ಲಾಮಿ ಪೀರ ಅಥವಾ ಫಕೀರ ಇವರ ಸಮಾಧಿ) ಒಳಗೊಂಡಿದೆ.
೪. ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಕೊನೆಗಾಣಿಸಲು ಪಾಕಿಸ್ತಾನವನ್ನು ನಾಶಗೊಳಿಸಿರಿ !
ಜಿಹಾದಿ ಭಯೋತ್ಪಾದಕರು ಜಮ್ಮೂ-ಕಾಶ್ಮೀರದ ರಾಜಧಾನಿಯಾದ ಶ್ರೀನಗರದ ಒಂದು ಶಾಲೆಗೆ ನುಗ್ಗಿ ಶಿಕ್ಷಕಿ ಸತಿಂದರ ಕೌರ ಮತ್ತು ಶಿಕ್ಷಕ ದೀಪಕ ಚಂದ ಇವರನ್ನು ಗುಂಡಿಕ್ಕಿ ಹತ್ಯೆಗೈದರು. ಅದರ ಎರಡು ದಿನಗಳ ಹಿಂದೆ ಭಯೋತ್ಪಾದಕರು ಶ್ರೀನಗರದಲ್ಲಿ ಇಬ್ಬರು ಹಿಂದೂಗಳ ಹತ್ಯೆ ಮಾಡಿದ್ದರು.
೫. ರಾಹುಲ ಗಾಂಧಿಯ ನಂತರ ಈಗ ಪ್ರಿಯಾಂಕಾ ವಾದ್ರಾ ಇವರ ನಾಟಕವನ್ನು ತಿಳಿಯಿರಿ !
ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಈ ವರ್ಷ ನವರಾತ್ರಿಯ ವ್ರತ ಮಾಡಲಿದ್ದಾರೆ, ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಕಾಂಗ್ರೆಸ್ ಮಾಹಿತಿ ನೀಡಿತು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಾದ್ರಾ ಇವರನ್ನು ಅಪಹಾಸ್ಯ ಮಾಡುತ್ತಾ ಟೀಕಿಸಲಾಗುತ್ತಿದೆ.
೬. ವೀರ ಹಿಂದೂ ರಾಜರಿಂದಾಗಿ ಭಾರತದಲ್ಲಿ ಇಂದು ಹಿಂದೂಗಳು ಉಳಿದಿದ್ದಾರೆ ಎಂಬುದನ್ನು ಅರಿತುಕೊಳ್ಳಿ
ಭಾರತದಲ್ಲಿ ಖಡ್ಗದ ಬಲದಿಂದ ಇಸ್ಲಾಮ್ ಪಸರಿಸಿದ್ದರೆ ಇಂದು ದೇಶದಲ್ಲಿ ಒಬ್ಬ ಹಿಂದೂವೂ ಉಳಿಯುತ್ತಿರಲಿಲ್ಲ, ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಮತ್ತು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ ಕುಮಾರ ಹೇಳಿದ್ದಾರೆ.
೭. ‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ’ ಎಂಬುದನ್ನು ಗಮನದಲ್ಲಿಡಿ
ರಾಜಧಾನಿ ನವ ದೆಹಲಿಯಲ್ಲಿ ಹಿಂದೂಗಳ ಹಬ್ಬಗಳಂದು ಜಿಹಾದಿ ಉಗ್ರರು ರಕ್ತಪಾತ ನಡೆಸುವ ಮಾಹಿತಿಯು ಗುಪ್ತಚರ ಇಲಾಖೆಗೆ ದೊರಕಿದೆ. ಅದಕ್ಕಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.