೧. ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !
ಬಾಂಗ್ಲಾದೇಶದ ನುಸುಳುಕೋರರು ಆಸ್ಸಾಂನ ೬ ಸಾವಿರದ ೬೫೨ ಚದರ ಕಿಲೋಮೀಟರ್ ಭೂಮಿಯನ್ನು ಅತಿಕ್ರಮಿಸಿದ್ದಾರೆ. ಈ ಕ್ಷೇತ್ರಫಲವು ಗೋವಾದಂತಹ ೨ ರಾಜ್ಯಗಳಿಗೆ ಸಮವಾಗಿದೆ.
೨. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ನೇಪಾಳಕ್ಕೆ ಅಂಟಿಕೊಂಡಿರುವ ಭಾರತದ ಗಡಿಯ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಎರಡೂವರೆ ಪಟ್ಟಿನಷ್ಟು ಹೆಚ್ಚಳವಾಗಿದೆ. ಕೇವಲ ೨ ವರ್ಷಗಳಲ್ಲಿ ೪೦೦ ಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ಕಟ್ಟಲಾಗಿದೆ ಎಂದು ಒಂದು ವರದಿಯಲ್ಲಿ ತಿಳಿಸಲಾಗಿದೆ.
೩. ಗಾಂಧಿವಾದಿ ಕಾಂಗ್ರೆಸ್ಸಿಗರ ಹಿಂಸಾಚಾರವನ್ನು ತಿಳಿಯಿರಿ !
ಕಾಂಗ್ರೆಸ್ ನಾಯಕ ಕಪಿಲ್ ಸಿಬ್ಬಲ್ ಇವರು ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ನೀಡಿದ ಹೇಳಿಕೆಯ ನಂತರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅವರ ದೆಹಲಿಯಲ್ಲಿನ ಮನೆಯ ಮೇಲೆ ಹಲ್ಲೆ ಮಾಡಿದರು.
೪. ಕೊರೊನಾದ ಅವಧಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜು ಪಠಣ ಮಾಡಲು ಹೇಗೆ ಅನುಮತಿ ಸಿಗುತ್ತದೆ ?
ಗುರುಗ್ರಾಮ (ಹರ್ಯಾಣ) ದಲ್ಲಿ ಕೆಲವು ದಿನಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನಮಾಜು ಪಠಣ ಮಾಡಲಾಗುತ್ತಿತ್ತು. ಅದಕ್ಕೆ ಹಿಂದೂಗಳು ವಿರೋಧಿಸಿದ ನಂತರ ಹಿಂದೂ ಮತ್ತು ಮುಸಲ್ಮಾನರಲ್ಲಿ ಹೊಂದಾಣಿಕೆ ಮಾಡಿಸಿ ನಮಾಜು ಪಠಣ ಮಾಡಲು ಅನುಮತಿಯನ್ನು ನೀಡಲಾಯಿತು.
೫. ಇಂತಹ ನಿರ್ಣಯವು ಇಡೀ ದೇಶದಾದ್ಯಂತದ ದೇವಾಲಯಗಳಲ್ಲಿ ಜಾರಿಯಾಗಬೇಕು !
ಹಿಮಾಚಲ ಪ್ರದೇಶದ ದೇವಾಲಯಗಳು, ಶಕ್ತಿಪೀಠಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಅರ್ಪಣೆ ರೂಪದಲ್ಲಿ ದೊರಕುವ ಹಣ, ಬಂಗಾರ, ಬೆಳ್ಳಿ ಇವುಗಳನ್ನೆಲ್ಲ ಹಿಂದೂಯೇತರರಿಗಾಗಿ ಖರ್ಚು ಮಾಡಲು ನಿರ್ಬಂಧವನ್ನು ಹೇರಲಾಗಿದೆ. ಅಲ್ಲದೇ ದೇವಾಲಯಗಳಲ್ಲಿ ಕೇವಲ ಹಿಂದೂ ಸಿಬ್ಬಂದಿ ಮತ್ತು ಅಧಿಕಾರಿಗಳನ್ನೇ ನೇಮಿಸಲಾಗುವುದು.
೬. ಹಿಂದೂಗಳನ್ನು ಮತಾಂತರಿಸಲು ಜಾಗತಿಕ ಮಟ್ಟದಲ್ಲಾಗುತ್ತಿರುವ ಸಂಚನ್ನು ತಿಳಿಯಿರಿ !
ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಮತಾಂತರದ ಪ್ರಕರಣದಲ್ಲಿ ಡಾ. ಆತಿಫ್ ಎಂಬವನನ್ನು ಬಂಧಿಸಿದೆ. ಆತಿಫ್ ಈತನು ‘ಕುಣಾಲ್ ಚೌಧರಿ’ ಎಂಬ ಹೆಸರಿನಿಂದ ನಾಶಿಕದಲ್ಲಿ ನೆಲೆಸಿದ್ದನು. ಅವನ ಖಾತೆಯಲ್ಲಿ ವಿವಿಧ ದೇಶಗಳಿಂದ ಸುಮಾರು ೨೦ ಕೋಟಿ ರೂಪಾಯಿಗಳು ಜಮೆಯಾಗಿದೆ.
೭. ಇಂತಹ ಘಟನೆಗಳನ್ನು ತಡೆಗಟ್ಟಲು ಹಿಂದೂ ರಾಷ್ಟ್ರವೇ ಬೇಕಾಗಿದೆ
ಅನಂತನಾಗ (ಜಮ್ಮೂ-ಕಾಶ್ಮೀರ) ಎಂಬಲ್ಲಿ ಮಟ್ಟನ್ ಪ್ರದೇಶದಲ್ಲಿ ಇರುವ ಪ್ರಸಿದ್ಧ ಬರಘಶಿಖಾ ಭವಾನಿ ದೇವಸ್ಥಾನದ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಧ್ವಂಸಗೈದ ಘಟನೆಯು ಅಕ್ಟೋಬರ್ ೨ ರಂದು ಘಟಿಸಿದೆ.