ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ‘ಐ.ಐ.ಟಿ, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ನಲ್ಲಿ ಪಿ.ಎಚ್.ಡಿ. ಗಳಿಸಿರುವ ಪ್ರಾಧ್ಯಾಪಕರೆಂದು ಕಾರ್ಯನಿರತರಾಗಿದ್ದರು. ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಇತ್ಯಾದಿ ವಿಷಯಗಳಲ್ಲಿ ೧೧ ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ?’ ಈ ಹಿಂದಿ ಭಾಷೆಯ ಗ್ರಂಥದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ‘ಭಾರತೀಯ ಸಂಸ್ಕೃತಿಯು ಸರ್ವೋತ್ತಮ ಶಿಕ್ಷಣದ ಬಹುದೊಡ್ಡ ಆಧಾರವಾಗಿದೆ’ ಭಾರತೀಯ ಸಂಸ್ಕೃತಿಯು ಮನುಷ್ಯನ ಜೀವನದ ವಾಸ್ತವದ ಮೇಲೆ ಪ್ರಕಾಶವನ್ನು ಬೀರುತ್ತದೆ ಮತ್ತು ಮನುಷ್ಯ ಜೀವನದ ಬಂಧನಗಳಿಂದ ಮುಕ್ತಿಯನ್ನು ಪಡೆಯಲು ಶಿಕ್ಷಣದ ಆವಶ್ಯಕತೆಯಿದೆ ಇವುಗಳ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡೆವು. ಇಂದು ಅದರ ಮುಂದಿನ ವಿಷಯವನ್ನು ನೋಡೋಣ.               

(ಭಾಗ ೫)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/49980.html

೨. ಆಧುನಿಕ ಸಮಾಜ, ಸಭ್ಯತೆಯ ಸಂಕಲ್ಪನೆ ಮತ್ತು ದೋಷ

೨ ಇ. ವೈಶಿಷ್ಟ್ಯಪೂರ್ಣ ಅಂಶಗಳು

೨ ಇ ೧. ಈ ಗ್ರಂಥದಲ್ಲಿ ಪ್ರಸ್ತುತ ಪಡಿಸಿದ ವಿವಿಧ ವಿಚಾರಗಳ ಸಂದರ್ಭದಲ್ಲಿನ ದೋಷಗಳು ವರ್ತಮಾನದಲ್ಲಿನ ವಾಸ್ತವವಾಗಿದೆ : ‘ಅಂಶ ೨ ಆ.’ರಲ್ಲಿ ವಿವಿಧ ವಿಚಾರಗಳ ಸಂದರ್ಭದಲ್ಲಿ ವಿಚಾರ ಮಾಡಲಾಗಿರುವ ವಿಭಿನ್ನ ದೋಷಗಳೆಲ್ಲ ಕಾಲ್ಪನಿಕವಲ್ಲ, ಅವು ವರ್ತಮಾನದಲ್ಲಿನ ವಾಸ್ತವವಾಗಿವೆ. ಅವುಗಳನ್ನು ಬಹಿರಂಗವಾಗಿ ಎಲ್ಲ ಪ್ರಚಲಿತ ಪ್ರಸಾರಮಾಧ್ಯಗಳ ಮೂಲಕ ತೋರಿಸಲಾಗುತ್ತದೆ ಅಥವಾ ಹೇಳಲಾಗುತ್ತದೆ. ಬಹಳಷ್ಟು ಜನರು ಅದನ್ನು ಸ್ವತಃ ಪರೋಕ್ಷವಾಗಿ ಅನುಭವಿಸಿದ್ದಾರೆ ಮತ್ತು ಅದರ ಸತ್ಯತೆಯನ್ನು ಖಚಿತ ಪಡಿಸಿಕೊಂಡಿದ್ದಾರೆ. ಕೆಲವು ಆಧುನಿಕ ಘಟನೆಗಳು ಎಷ್ಟು ಅನೈತಿಕ ಮತ್ತು ನಿಕೃಷ್ಟವಾಗುತ್ತಾ ಹೋಗುತ್ತಿವೆ ಎಂದರೆ, ಅವುಗಳ ಕಲ್ಪನೆಯನ್ನು ಮಾಡುವುದೂ ಕಠಿಣವಾಗುತ್ತಿದೆ.

೨ ಇ ೨. ಭೌತಿಕ ಸಾಧನಸೌಲಭ್ಯಗಳು ಅಖಂಡ ಸುಖವನ್ನಲ್ಲ ಕೇವಲ ಕ್ಷಣಿಕ ಸುಖವನ್ನು ನೀಡುತ್ತವೆ; ಆದರೆ ನಮ್ಮಲ್ಲಿ ಸ್ವಾಭಾವಿಕವಾಗಿಯೇ ‘ಅಖಂಡ ಸುಖ (ಆನಂದ) ದೊರಕಬೇಕು’ ಎಂಬ ಬಯಕೆಯಿರುವುದರಿಂದ ಭಾರತೀಯ ಸಂಸ್ಕೃತಿಯ ದೃಷ್ಟಿಕೋನದಿಂದ ಪದೇಪದೇ ಬರುವ ಸುಖವೂ ಕೊನೆಗೆ ದುಃಖವೇ ಆಗಿದೆ : ‘ಅಂಶ ೨ ಆ.’ದ ಶೀರ್ಷಿಕೆಯಲ್ಲಿ ನಾವು ‘ದೋಷ’ ಶಬ್ದವನ್ನು ಉಪಯೋಗಿಸಿದ್ದೇವೆ. ಅಲ್ಲಿ ‘ಗುಣ-ದೋಷ’ ಎಂಬ ಶಬ್ದವನ್ನು ಬಳಸಿಲ್ಲ. ಆದುದರಿಂದ ಆಧುನಿಕ ವ್ಯಕ್ತಿಯ ಮನಸ್ಸಿನಲ್ಲಿ, ಭೋಗವಾದಿ ವಿಚಾರಗಳಿಂದ ಪ್ರೇರಣೆ ಪಡೆದ ಆಧುನಿಕ ಜೀವನಪದ್ಧತಿಯಲ್ಲಿ ಕೆಲವು ಗುಣಗಳೂ ಇರಬಲ್ಲದು, ಉದಾ. ಭೌತಿಕ ಉಪಕರಣಗಳ ಶೋಧ ಮತ್ತು ಅವುಗಳಿಂದ ದೈನಂದಿನ ಜೀವನವನ್ನು ಸುಲಭ ಮತ್ತು ಸುಖಿ ಮಾಡುವುದು ಮತ್ತು ಭೌತಿಕ ಸಮೃದ್ಧಿಯನ್ನು ಪ್ರದಾನಿಸುವುದು, ಎಂಬಂತಹ ವಿಚಾರಗಳೂ ಬರಬಹುದು. ಈ ವಿಷಯವು ಭೌತಿಕ ದೃಷ್ಟಿಕೋನದಿಂದ ಅಥವಾ ಸ್ಥೂಲ ರೂಪದಲ್ಲಿ ಸತ್ಯವಾಗಿವೆ; ಆದರೆ ನಾವು ಈ ಗ್ರಂಥದಲ್ಲಿ ವಿಚಾರಗಳನ್ನು ಸಹ ಭಾರತೀಯ ಸಂಸ್ಕೃತಿಯ ದೃಷ್ಟಿಕೋನವನ್ನಿಟ್ಟು ಪ್ರಸ್ತುತ ಪಡಿಸಿದ್ದೇವೆ. ಈ ದೃಷ್ಟಿಕೋನವು ವಿಶಾಲವಾಗಿದ್ದು ಜೊತೆಗೆ ಸೂಕ್ಷ್ಮ ಮತ್ತು ಗೂಢವಾಗಿದೆ. ಭೌತಿಕ ಸಾಧನಸೌಲಭ್ಯಗಳು ಕ್ಷಣಿಕ ಸುಖವನ್ನು ನೀಡುತ್ತವೆ, ಹಾಗೆಯೇ ಪದೇ ಪದೇ ಬಂದು-ಹೋಗುವ ಸುಖ-ದುಃಖಗಳನ್ನು ನೀಡುತ್ತಿರುತ್ತವೆ ಅವುಗಳಿಂದ ಅಖಂಡ ಸುಖವು ಎಂದಿಗೂ ಸಿಗುವುದಿಲ್ಲ. ಭೌತಿಕ ಸಾಧನಸೌಲಭ್ಯಗಳು ನಮ್ಮನ್ನು ಮೋಹಿಸಿ ಭ್ರಾಂತಿಗೀಡುಮಾಡಿ ಆಕರ್ಷಿಸಿ ನಮ್ಮ ಆಸಕ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಆಸಕ್ತಿ ಎಷ್ಟು ಹೆಚ್ಚಾಗುತ್ತದೆ, ಎಂದರೆ, ಅದರಿಂದ ನಮಗೆ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಆ ಸುಖ-ದುಃಖಗಳನ್ನು ನಾವು ಮನುಷ್ಯ ಜೀವನದ ಅವಿಭಾಜ್ಯ ಅಂಗವೆಂದು ತಿಳಿಯತೊಡಗುತ್ತೇವೆ. ವಿಚಾರ ಮಾಡಿ ನೋಡಿದರೆ, ‘ನಿರಂತರ ಸುಖ (ಆನಂದ) ದೊರಕಬೇಕು’ ಎಂಬುದು ನಮ್ಮ ಸ್ವಾಭಾವಿಕ ಇಚ್ಛೆಯಾಗಿರುತ್ತದೆ; ಆದುದರಿಂದ ಭಾರತೀಯ ಸಂಸ್ಕೃತಿಯ ದೃಷ್ಟಿಕೋನದಿಂದ ಪದೇ ಪದೇ ಬರುವ ಸುಖವೂ ಕೊನೆಗೆ ದುಃಖವೇ ಆಗಿದೆ. ಅದರಲ್ಲಿ ತಮೋಗುಣವಿರುತ್ತದೆ. ಆದುದರಿಂದ ನಾವು ‘ಅಂಶ ೨ ಆ.’ರ ಶೀರ್ಷಿಕೆಯಲ್ಲಿ ‘ಗುಣ-ದೋಷ’ ಈ ಶಬ್ದವನ್ನು ಉಪಯೋಗಿಸದೇ ಕೇವಲ ‘ದೋಷ’ ಎಂಬ ಶಬ್ದವನ್ನೇ ಉಪಯೋಗಿಸಿದ್ದೇವೆ.

೨ ಇ ೩. ಭೌತಿಕ ಶಿಕ್ಷಣದಲ್ಲಿ ಸುಧಾರಣೆಯಾಗುವುದು ಆವಶ್ಯಕವಾಗಿದೆ : ಆಧುನಿಕ ಕಾಲದಲ್ಲಿ ಭೌತಿಕ ವಿಷಯಗಳನ್ನು ಉಪಭೋಗಿಸುವ ಮನುಷ್ಯನ ಆಸಕ್ತಿಯು ಎಷ್ಟು ಹೆಚ್ಚಾಗಿದೆ ಎಂದರೆ, ಆಧುನಿಕ ವಿದ್ವಾನರ ವಿಚಾರಸರಣಿಯೂ ಇದರಿಂದ ಹೊರಗೆ ಬರಲಾರದು. ಇದು ಭಯಂಕರ ಸ್ಥಿತಿಯನ್ನು ಉತ್ಪನ್ನ ಮಾಡುತ್ತಿದೆ. ನಾವೆಲ್ಲರೂ, ಮನುಷ್ಯನ ಜೀವನ ದುರಾಚಾರದ ಕಡೆಗೆ ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಭಯಾನಕ ಸ್ಥಿತಿಯಾಗಿದೆ; ಆದರೆ ‘ಇದನ್ನು ತಡೆಗಟ್ಟಲು ಇಂದಿನ ಭೌತಿಕ ಶಿಕ್ಷಣದಲ್ಲಿ ಯಾವ ಸುಧಾರಣೆಯನ್ನು ಮಾಡಬೇಕು ?’, ಎಂಬುದರ ಬಗ್ಗೆ ನಿಜವಾದ (ಯೋಗ್ಯ) ಅರ್ಥದಲ್ಲಿ ವಿಚಾರವನ್ನೂ ಸಹ ಯಾರೂ ಮಾಡುತ್ತಿಲ್ಲ. ಆಧುನಿಕ ಭೌತಿಕ ಶಿಕ್ಷಣದ ಮುಖ್ಯಸ್ಥ (ಕ್ಯಾಪ್ಟನ್/ಸೂತ್ರಧಾರರು) ಮತ್ತು ಆಧುನಿಕ ಪಂಡಿತರು ಅಥವಾ ವಿಜ್ಞಾನಿಗಳು ಸಹ ಇದರೆದುರು ಅಸಮರ್ಥರಾಗಿದ್ದಾರೆ. ಆದರೆ ಯಾವಾಗ ನಾವು ಭಾರತೀಯ ಸಂಸ್ಕೃತಿಯ ಮೂಲಕ ಮಂಡಿಸಿದ ವಿಚಾರಗಳ ಮೇಲೆ ಶ್ರದ್ಧೆಯನ್ನಿಟ್ಟು ಮತ್ತು ಅವುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಕಾರ್ಯರೂಪಕ್ಕೆ ತರುತ್ತೇವೋ ಆಗಲೇ ನಮಗೆ ಈ ಪರಿಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗುವುದು.’

 (ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)