ಜಿಹಾದಿ ಉಗ್ರವಾದಿ ಸಂಘಟನೆ ತಾಲಿಬಾನಿನ ಇತಿಹಾಸ

ಸದ್ಯ ತಾಲಿಬಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ ಸಹಿತ ಸಂಪೂರ್ಣ ಭೂಪ್ರದೇಶದ ಮೇಲೆ ನಿಯಂತ್ರಣವನ್ನು ಸಾಧಿಸಿದೆ. ಈಗ ಅಲ್ಲಿ ಶರಿಯಾ ಕಾನೂನಿನಂತೆ ಕಾರ್ಯ ಪ್ರಾರಂಭವಾಗಿದೆ. ಸಂಪೂರ್ಣ ದೇಶವು ಉಗ್ರವಾದಿ ಸಂಘಟನೆಯ ವಶಕ್ಕೆ ಒಳಪಡುವುದು, ಇದು ಎರಡನೇಯ ಬಾರಿಯಾಗಿದೆ. ಈ ಮೊದಲೂ ಅಫ್ಘಾನಿಸ್ತಾನದ ಮೇಲೆ ತಾಲಿಬಾನಿಗಳ ನಿಯಂತ್ರಣವಿತ್ತು. ಈಗ ನಾವು ಈ ಉಗ್ರವಾದಿ ಸಂಘಟನೆಯ ಇತಿಹಾಸವನ್ನು ತಿಳಿದುಕೊಳ್ಳೋಣ.

. ತಾಲಿಬಾನವು ಒಂದು ಸುನ್ನಿ ಮುಸ್ಲಿಂ ಜನರ ಆಂದೋಲನವಾಗಿತ್ತು. ೧೯೯೪ ನೇ ಇಸವಿಯಲ್ಲಿ ದಕ್ಷಿಣ ಅಘ್ಘಾನಿಸ್ತಾನದಲ್ಲಿ ಅದು ಪ್ರಾರಂಭವಾಗಿತ್ತು. ‘ತಾಲಿಬಾನ ಇದು ಮೂಲ ಅರಬಿ ಶಬ್ದ ‘ತಾಲಿಬ’ದಿಂದ ಬಂದಿದೆ. ‘ತಾಲಿಬನ ಅರ್ಥ ‘ಜ್ಞಾನವನ್ನು ಪಡೆಯುವ ಅಪೇಕ್ಷೆಯನ್ನು ಮಾಡುವವರು ಮತ್ತು ಇಸ್ಲಾಂ ಧರ್ಮದ ಮೇಲೆ ದೃಢ ನಿಷ್ಠೆಯುಳ್ಳ ವಿದ್ಯಾರ್ಥಿಗಳು, ಎಂದಾಗಿದೆ. ‘ತಾಲಿಬನ ಬಹುವಚನ ‘ತಾಲಿಬಾನ. ‘ತಾಲಿಬಾನನ ಅರ್ಥ ‘ಬೇಡುವವರು ಎಂದು ಆಗುತ್ತದೆ. ‘ತಾಲಿಬಾನ ಒಂದು ರಾಜಕೀಯ ಆಂದೋಲನವಾಗಿದೆ, ಎಂದು ಹೇಳಲಾಗುತ್ತದೆ. ಆದುದರಿಂದ ಅದರ ಸದಸ್ಯತ್ವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮದರಸಾಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಿಗುತ್ತದೆ. ತಾಲಿಬಾನ ಈ ಉಗ್ರವಾದಿ ಸಂಘಟನೆಯು ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗಳಿಂದ ಮತ್ತು ಮದರಸಾಗಳ ಮೂಲಕ ದೃಢವಾಗುತ್ತಾ ಹೋಯಿತು. ಅದಕ್ಕೆ ಸೌದಿ ಅರೇಬಿಯಾದಿಂದ ಅತ್ಯಧಿಕ ಪ್ರಮಾಣದಲ್ಲಿ ಧನಸಹಾಯ ಸಿಗುತ್ತಿತ್ತು. ೧೯೯೬ ರಿಂದ ೨೦೦೧ ನೇ ಇಸವಿಯವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ ಆಡಳಿತವಿದ್ದಾಗ ಮುಲ್ಲಾ ಉಮರ ತಾಲಿಬಾನಿನ ಮುಖಂಡನಾಗಿದ್ದನು. ಅವನು ತನ್ನನ್ನು ‘ಹೆಡ್ ಆಫ್ ಸುಪ್ರೀಮ್ ಕೌನ್ಸಿಲ್ (ಸರ್ವೋಚ್ಚ ಪರಿಷತ್ತಿನ ಅಧ್ಯಕ್ಷ) ಎಂದು ಘೋಷಿಸಿಕೊಂಡಿದ್ದನು. ತಾಲಿಬಾನ ಆಂದೋಲನಕ್ಕೆ ಸೌದಿ ಅರೇಬಿಯಾ, ಸಂಯುಕ್ತ ಅರಬ ಅಮಿರಾತ್ ಮತ್ತು ಪಾಕಿಸ್ತಾನ ಈ ಮುಸ್ಲಿಂ ದೇಶಗಳು ಮಾನ್ಯತೆಯನ್ನು ನೀಡಿವೆ.

೨. ೧೯೯೦ ರ ದಶಕದಲ್ಲಿ ಉತ್ತರ ಪಾಕಿಸ್ತಾನದಲ್ಲಿ ತಾಲಿಬಾನ ಅಧಿಕ ಶಕ್ತಿಶಾಲಿ ಆಯಿತು. ಆ ಸಮಯದಲ್ಲಿ ಅಫ್ಘಾನಿಸ್ತಾನದಿಂದ ಸೋವಿಯತ್ ಸಂಘದ ಸೈನ್ಯ ಹಿಂದೆ ಸರಿಯಲು ಪ್ರಾರಂಭಿಸಿತ್ತು. ಆಗ ಅಲ್ಲಿ ಅನೇಕ ಗುಂಪುಗಳ ನಡುವೆ ಸಂಘರ್ಷ ಪ್ರಾರಂಭವಾಯಿತು. ಇಂತಹ ಸಮಯದಲ್ಲಿ ಅಲ್ಲಿ ತಾಲಿಬಾನಿಗಳು ಪ್ರವೇಶಿಸಿದಾಗ ಅಫ್ಘಾನಿ ಜನರು ಅವರನ್ನು ಸ್ವಾಗತಿಸಿದರು. ತಾಲಿಬಾನರು ಮೊದಲು ಅಫ್ಘಾನಿಸ್ತಾನದಲ್ಲಿದ್ದ ಭ್ರಷ್ಟಾಚಾರವನ್ನು ನಿಯಂತ್ರಣದಲ್ಲಿ ತಂದರು. ಹಾಗೆಯೇ ಅವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಸಾಧಿಸಿದರು. ತಾಲಿಬಾನಿಗಳ ನಿಯಂತ್ರಣದಲ್ಲಿದ್ದ ಪ್ರದೇಶವು ಜನರಿಗೆ ಸುರಕ್ಷಿತವಾಗಿದ್ದರಿಂದ ಅಲ್ಲಿ  ಉದ್ಯೋಗ, ವ್ಯವಸಾಯಗಳು ಪ್ರಾರಂಭವಾದವು.

೩. ಸಪ್ಟೆಂಬರ್ ೧೯೯೫ ರಲ್ಲಿ ತಾಲಿಬಾನವು ಇರಾನ ಗಡಿಯಲ್ಲಿರುವ ಹೇರಾತ್ ಪ್ರಾಂತವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ತದನಂತರ ಅಫ್ಘಾನಿಸ್ತಾನದ ಬುರಹಾನುದ್ದೀನ ರಬ್ಬಾನಿ ಸರಕಾರವನ್ನು ಅಧಿಕಾರದಿಂದ ಪದಚ್ಯುತಗೊಳಿಸಿ ರಾಜಧಾನಿ ಕಾಬೂಲ ಮೇಲೆ ನಿಯಂತ್ರಣ ಸಾಧಿಸಿತು. ೧೯೯೮ ನೇ ಇಸವಿಯ ವರೆಗೆ ತಾಲಿಬಾನ ಅಫ್ಘಾನಿಸ್ತಾನದ ಶೇ. ೯೦ ರಷ್ಟು ಭೂ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿತ್ತು.

. ಅಫ್ಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ಬಳಿಕ ಅಲ್ಲಿ ಶರಿಯಾ ಕಾನೂನು ಜಾರಿಗೊಳಿಸಲಾಯಿತು. ಈ ಕಾನೂನಿಗನುಸಾರ ಅಪರಾಧಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸುವುದು, ಕಳ್ಳತನ ಮಾಡಿದವರ ಕೈಕಾಲುಗಳನ್ನು ಕತ್ತರಿಸುವುದು ಇತ್ಯಾದಿ ಶಿಕ್ಷೆಗಳನ್ನು ವಿಧಿಸಲು ಪ್ರಾರಂಭವಾಯಿತು.

. ಪುರುಷರಿಗೆ ಗಡ್ಡ ಬಿಡಲು ಮತ್ತು ಮಹಿಳೆಯರಿಗೆ ಬುರ್ಖಾ ಹಾಕಿಕೊಳ್ಳುವ ಆದೇಶವನ್ನು ನೀಡಲಾಯಿತು. ೧೦ ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಶಾಲೆಯನ್ನು ನಿಷೇಧಿಸಲಾಯಿತು. ದೂರದರ್ಶನವಾಹಿನಿಗಳು, ಚಲನಚಿತ್ರಗಳು ಮತ್ತು ಸಂಗೀತದ ಮೇಲೆಯೂ ನಿಷೇಧವನ್ನು ಹೇರಲಾಯಿತು.

. ಅಫ್ಘಾನಿಸ್ತಾನದ ಬಾಮಿಯಾನನಲ್ಲಿದ್ದ ಬುದ್ಧನ ಮೂರ್ತಿಗಳನ್ನು ಸಿಡಿಮದ್ದು ಸಿಡಿಸಿ ನಾಶ ಮಾಡಲಾಯಿತು.

೭. ೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.

. ಅಲ್ ಕಾಯದಾ ಭಯೋತ್ಪಾದಕರು ೨೦೦೧ ನೇ ಇಸವಿಯಲ್ಲಿ ಅಮೇರಿಕಾದ ಮೇಲೆ ವಿಮಾನಗಳ ಮೂಲಕ ಆಕ್ರಮಣ ಮಾಡಿದ ನಂತರ ಅಮೇರಿಕಾವು ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು. ಅಲ್ ಕಾಯದಾ ಮುಖಂಡ ಒಸಾಮಾ ಬಿನ್ ಲಾಡೆನ್‌ಗೆ ತಾಲಿಬಾನ ಆಶ್ರಯ ನೀಡಿದೆಯೆಂದು ಆರೋಪಿಸಿ ಅಮೇರಿಕಾ ಆಕ್ರಮಣ ಮಾಡಿತು ಮತ್ತು ಅಫ್ಘಾನಿಸ್ತಾನದಲ್ಲಿನ ತಾಲಿಬಾನ ಆಡಳಿತವನ್ನು ಅಂತ್ಯಗೊಳಿಸಿತು.

. ಕಳೆದ ೨೦ ವರ್ಷ ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಸೈನ್ಯವಿತ್ತು. ಈ ಕಾಲದಲ್ಲಿ ಅಫ್ಘಾನಿ ನಾಗರಿಕರ ಸರಕಾರವನ್ನು ಸ್ಥಾಪಿಸಲಾಗಿತ್ತು. ಆದರೆ ಅಮೇರಿಕಾಗೆ ಅಫ್ಘಾನಿಸ್ತಾನದಿಂದ ತಾಲಿಬಾನವನ್ನು ಸಂಪೂರ್ಣ ನಾಶ ಮಾಡಲು ಸಾಧ್ಯವಾಗಲಿಲ್ಲ.

೧೦. ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್‌ರ ಸರಕಾರ ಇರುವಾಗ ಅವರು ಅಫ್ಘಾನಿಸ್ತಾನದಿಂದ ಅಮೇರಿಕಾದ ಸೈನ್ಯವನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದರು. ಅದಕ್ಕನುಸಾರ ಅಮೇರಿಕಾ ತನ್ನ ಸೈನ್ಯವನ್ನು ಹಿಂಪಡೆಯುತ್ತಿರುವಾಗ ತಾಲಿಬಾನ ಪುನಃ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ.

(ಆಧಾರ : ಸಾಮಾಜಿಕ ಮಾಧ್ಯಮ)