ಗಣೇಶ ಚತುರ್ಥಿ ನಿಮಿತ್ತ ಗಣೇಶಭಕ್ತರಿಗಾಗಿ ವಿಶೇಷ ನಾಮಜಪ ಯಜ್ಞದ ಆಯೋಜನೆ !

ಆನ್‌ಲೈನ್ ಶ್ರೀ ಗಣೇಶ ನಾಮಜಪ ಯಜ್ಞದಲ್ಲಿ ರಾಜ್ಯಾದ್ಯಂತ 1400 ಕ್ಕೂ ಅಧಿಕ ಗಣೇಶಭಕ್ತರ ಸಹಭಾಗ !

ಭಾದ್ರಪದ ಶುಕ್ಲ ಚತುರ್ಥಿ ಅಂದರೆ ಗಣೇಶ ಚತುರ್ಥಿ, ಹಿಂದೂಗಳ ಪಾಲಿಗೆ ಪವಿತ್ರವಾದ ದಿನ, ಎಲ್ಲಾ ಹಿಂದೂಗಳು ಈ ಶುಭದಿನದಂದು ಗಣೇಶನ ಸ್ಮರಣೆ ಮತ್ತು ಪೂಜೆ ಉಪಾಸನೆಯನ್ನು ಮಾಡಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ. ಸದ್ಯ ಕೊರೋನಾ ಮಹಾಮಾರಿಯ ಕಾರಣದಿಂದಾಗಿ ಪ್ರತಿ ವರ್ಷದಂತೆ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಲು ಸರಕಾರದ ನಿಯಮ ನಿರ್ಬಂಧಗಳಿವೆ. ಹಾಗಾಗಿ ಶಾಸ್ತ್ರದಲ್ಲಿ ಹೇಳಿರುವಂತೆ ಆಪದ್ಧರ್ಮವನ್ನು ಪಾಲನೆ ಮಾಡಬೇಕು. ಈ ದಿನದಂದು ಶ್ರೀ ಗಣೇಶನ ತತ್ತ್ವವು ಇತರ ದಿನಗಳ ತುಲನೆಯಲ್ಲಿ 1000 ಪಟ್ಟು ಅಧಿಕ ಕಾರ್ಯನಿರತವಾಗಿರುತ್ತದೆ, ಇಂತಹ ಸಮಯದಲ್ಲಿ ಶ್ರೀ ಗಣೇಶನ ಉಪಾಸನೆ ಮಾಡುವುದರಿಂದ ಆಧ್ಯಾತ್ಮಿಕವಾಗಿ ಶ್ರೀ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಮೂಲಕ ಶ್ರೀ ಗಣೇಶ ನಾಮಜಪಯಜ್ಞದ ಆಯೋಜನೆ ಮಾಡಲಾಗಿತ್ತು.

ಶ್ರೀ ಗಣೇಶನಿಗೆ ವಿಶೇಷ ಪ್ರಾರ್ಥನೆ ಮತ್ತು ಶ್ಲೋಕಾರ್ಚನೆಯೊಂದಿಗೆ ಈ ಜಪಯಜ್ಞವು ಪ್ರಾರಂಭವಾಯಿತು. ಯೂಟ್ಯೂಬ್ ಮಾಧ್ಯಮದಿಂದ ನಡೆದ ಈ ಜಪಯಜ್ಞದಲ್ಲಿ ನೇರಪ್ರಸಾರದ ಮೂಲಕ ಸುಮಾರು 300 ಮತ್ತು ನಂತರ 1000 ಕ್ಕೂ ಅಧಿಕ ಗಣೇಶ ಭಕ್ತರು ಭಾಗವಹಿಸಿ ಇದರ ಲಾಭ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸದ್ಯ ಕರ್ನಾಟಕ ರಾಜ್ಯದ್ಯಂತ ನಡೆಯುತ್ತಿರುವ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನದ ಲಾಭವನ್ನೂ ಕೂಡ ಗಣೇಶ ಭಕ್ತರು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಸನಾತನ ಸಂಸ್ಥೆ ನಿರ್ಮಿತ ‘ಶ್ರೀ ಗಣಪತಿ ಗ್ರಂಥವನ್ನು ತೋರಿಸಲಾಯಿತು. ಈ ಗ್ರಂಥವು ಗಣೇಶನ ಉಪಾಸನೆಯ ಶಾಸ್ತ್ರವನ್ನು ತಿಳಿಸಿ ಗಣೇಶನ ಮೇಲಿನ ಭಕ್ತಿಯನ್ನು ಹೆಚ್ಚಿಸುವಂತಹದ್ದಾಗಿದೆ. ಸನಾತನ ನಿರ್ಮಿತ ಇಂತಹ ಅನೇಕ ವಿಷಯಗಳ ಮಾಹಿತಿಯುಳ್ಳ ವಿವಿಧ ಗ್ರಂಥಗಳು ಬೇಕಿದ್ದಲ್ಲಿ ೯೩೭೯೭೭೧೭೭೧ ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕೆಂದು ಕರೆ ನೀಡಲಾಯಿತು.

ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಶನಿವಾರದಿಂದ ವಿಶೇಷ ಸತ್ಸಂಗ

ಇದರೊಂದಿಗೆ ಗಣೇಶನ ವಿವಿಧ ವೈಶಿಷ್ಟ್ಯಗಳ ಬಗ್ಗೆ ತಿಳಿಸುವುದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ದಿನಾಂಕ 11 ಸೆಪ್ಟೆಂಬರ್ ನಿಂದ ಪ್ರತಿದಿನ ಸಾಯಂಕಾಲ 6.30 ಕ್ಕೆ ವಿಶೇಷ ಸತ್ಸಂಗದ ಆಯೋಜನೆ ಮಾಡಲಾಗಿದೆ. ಈ ವಿಶೇಷ ಸತ್ಸಂಗದಲ್ಲಿಯೂ ಎಲ್ಲಾ ಗಣೇಶ ಭಕ್ತರು ಸಹಭಾಗಿಗಳಾಗಿ ಅದರ ಲಾಭ ಪಡೆಯಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಕರೆ ನೀಡಿದರು.

ಸನಾತನ ಸಂಸ್ಥೆಯ ವತಿಯಿಂದ ಗಣೇಶ ಚತುರ್ಥಿ ನಿಮಿತ್ತ ಆಯೋಜಿಸಲಾಗಿರುವ ವಿಶೇಷ ಆನ್‌ಲೈನ್ ಕಾರ್ಯಕ್ರಮಗಳ ವಿವರ : 11 ಸೆಪ್ಟೆಂಬರ್ ನಿಂದ, ಪ್ರತಿದಿನ ಸಾಯಂಕಾಲ 6.30ಕ್ಕೆ

Youtube.com/SSKarnataka ಮತ್ತು Youtube.com/HJSKarnataka

ಈ ಯೂಟ್ಯೂಬ್ ಚಾನೆಲ್ ಗಳ ಮೂಲಕ ನೇರಪ್ರಸಾರವಾಗಲಿದೆ.

ಇತಿ ತಮ್ಮ ವಿಶ್ವಾಸಿ,

ಶ್ರೀ. ಗುರುಪ್ರಸಾದ ಗೌಡ,
ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ : 9343017001