‘ಗುರುಗಳು ಗುರುಮಂತ್ರವನ್ನು ನೀಡಲು ಅರ್ಹತೆಯುಳ್ಳ ಶಿಷ್ಯನಿಗೆ ಮಾತ್ರ ಆ ಮಂತ್ರವನ್ನು ನೀಡುತ್ತಾರೆ. ಗುರುಗಳು ಗುರುಮಂತ್ರವನ್ನು ನೀಡುವಾಗ ಆ ಶಿಷ್ಯನ ಆಧ್ಯಾತ್ಮಿಕ ಮಟ್ಟ, ಅವನ ಸಾಧನೆಯ ತಳಮಳ, ಅವನಲ್ಲಿರುವ ಭಾವ, ಪ್ರಾರಬ್ಧ ಮುಂತಾದ ವಿವಿಧ ಘಟಕಗಳ ಆಧಾರದಲ್ಲಿ ಅವನ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುವಂತಹ ಮಂತ್ರವನ್ನು ಕೊಡುತ್ತಾರೆ. ಆ ಪ್ರಕಾರ ಗುರುಗಳ ಸಂಕಲ್ಪಶಕ್ತಿ ಆ ಮಂತ್ರದೊಂದಿಗೆ ಕಾರ್ಯನಿರತವಾಗಿರುತ್ತದೆ. ಆದುದರಿಂದ ಗುರುಗಳು ನೀಡಿದ ಮಂತ್ರ ಆ ಶಿಷ್ಯನಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಮಂತ್ರವನ್ನು ಇತರರು ಜಪಿಸಿದರೆ ಅದರಿಂದ ಅವರಿಗೆ ಲಾಭವಾಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ