ದೇಶದಲ್ಲಿ ಜಿಹಾದಿಗಳ ಅಪಾಯವನ್ನು ತಿಳಿಯಿರಿ!

೧. ತುರ್ಕಸ್ತಾನದ ಢೋಂಗಿ ಮುಸಲ್ಮಾನಪ್ರೇಮ ತಿಳಿಯಿರಿ !

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿದ್ದರಿಂದ ಲಕ್ಷಾಂತರ ಅಫ್ಘನ್ನರು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಡೆಯಲು, ತುರ್ಕಸ್ತಾನ ೨೯೫ ಕಿಲೋಮೀಟರ್ ಉದ್ದ ಮತ್ತು ೩ ಮೀಟರ್ ಎತ್ತರದ ಗೋಡೆಯನ್ನು ಇರಾನಿನ ಗಡಿಯಲ್ಲಿ ನಿರ್ಮಿಸುತ್ತಿದೆ.

೨. ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಹೀಗೆ ಪ್ರಯತ್ನಿಸಬೇಕು

ರಾಜಸ್ಥಾನ ಸರಕಾರವು ದೇವಸ್ಥಾನ ಸರಕಾರಿಕರಣದ ವಿಚಾರವನ್ನು ಬಿಟ್ಟುಬಿಡಬೇಕು. ರಾಜ್ಯದಲ್ಲಿ ದೇವಸ್ಥಾನಗಳ ಸರಕಾರಿಕರಣ ಮಾಡಲು ನಾವು ಬಿಡುವುದಿಲ್ಲ. ನಾವು ಆಂದೋಲನ ಮಾಡುತ್ತೇವೆ ಎಂದು ಶ್ರೀ ರಜಪೂತ್ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್‌ಸಿಂಗ್ ಮಕರಾನಾ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

೩. ಅಭಿವ್ಯಕ್ತಿಸ್ವಾತಂತ್ರ್ಯದವರು, ಜಾತ್ಯತೀತರು ಈಗೆಲ್ಲಿದ್ದಾರೆ ?

ಕೇರಳದ ಚಲನಚಿತ್ರ ನಿರ್ದೇಶಕ ನಾದಿರ್ ಶಾಹ ಇವರು ‘ಯೇಸು : ನಾಟ್ ಫ್ರಮ್ ದ ಬೈಬಲ್’ (ಯೇಸು : ಬೈಬಲ್‌ನಲ್ಲಿ ಇಲ್ಲದಿರುವ) ಚಲನಚಿತ್ರವನ್ನು ನಿರ್ಮಿಸಲು ಆರಂಭಿಸಿದ್ದಾರೆ. ಆದ್ದರಿಂದ, ಆಕ್ರೋಶಗೊಂಡ ಕ್ರೈಸ್ತರು ‘ಮೊಹಮ್ಮದ್ : ದಿ ಪೊಕ್ಸೊ ಕ್ರಿಮಿನಲ್’ ಕಿರುಚಿತ್ರವನ್ನು ನಿರ್ಮಿಸಲಿದ್ದಾರೆ.

೪. ಮೊಘಲರ ವಂಶಜರನ್ನು ಗುರುತಿಸಿ !

‘ಮೊಘಲರೇ ನಿಜವಾದ ರಾಷ್ಟ್ರವನ್ನು ಕಟ್ಟಿದವರಾಗಿದ್ದಾರೆ; ಆದರೆ ಅವರು ಜನರನ್ನು ಕೊಂದರು ಎಂದು ನೀವು ಹೇಳಿದರೆ, ನೀವು ಅದನ್ನು ಯಾವ ಆಧಾರದಲ್ಲಿ ಹೇಳುತ್ತಿದ್ದೀರಿ ? ಇದನ್ನು ಹೇಳಬೇಕು’, ಎಂದು ಚಲನಚಿತ್ರ ನಿರ್ದೇಶಕ ಕಬೀರ್ ಖಾನ್ ಇವರ ನುಡಿಮುತ್ತು ಉದುರಿಸಿದ್ದಾರೆ.

೫. ಇಂತಹ ವೆಬ್ ಸಿರೀಸ್‌ಗಳನ್ನು ನ್ಯಾಯಬದ್ಧ ರೀತಿಯಲ್ಲಿ ವಿರೋಧಿಸಿ !

ಅಮಾನವೀಯ ಮತ್ತು ಕ್ರೂರ ಮೊಘಲ್ ಆಕ್ರಮಣಕಾರ ಬಾಬರ್ ನ ಮೇಲಾಧಾರಿತ ‘ಎಂಪೈರ್ ಎಂಬ ವೆಬ್ ಸಿರೀಸ್ ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಎಂಬ ‘ಓಟಿಟಿ ಆಪ್ ನಲ್ಲಿ ಪ್ರಸಾರವಾಗುತ್ತಿದೆ. ವಿ-ಅಂಚೆ : [email protected]

೬. ಮತಾಂತರಗೊಂಡ ಹಿಂದೂಗಳನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರಲು ಹಿಂದೂ ರಾಷ್ಟ್ರವೇ ಅಗತ್ಯವಿದೆ !

ಕಳೆದ ೩ ವರ್ಷಗಳಲ್ಲಿ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಸ್ತ ಮಿಶನರಿಗಳು ೧೦ ಸಾವಿರ ಹಿಂದೂಗಳನ್ನು ಮತಾಂತರಿಸಿದ್ದಾರೆ. ಭೈರವಗಂಜ, ಬಾಬುಮಹಲ್, ಬೆಲಹರಿಯಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಚರ್ಚ್‌ಗಳು ಮತಾಂತರದಕೇಂದ್ರಗಳಾಗಿ ಮಾರ್ಪಟ್ಟಿವೆ.

೭. ದೇಶದಲ್ಲಿ ಜಿಹಾದಿಗಳ ಅಪಾಯವನ್ನು ತಿಳಿಯಿರಿ !

‘ಇಸ್ಲಾಮಿಕ್ ಸ್ಟೇಟ್ ಆಫ್ ಖುರಾಸನ್ ಎಂಬ ಉಗ್ರ ಸಂಘಟನೆಯ ಕಮಾಂಡರ್ ಒಬ್ಬನು ತನ್ನ ಸಂಘಟನೆಯಲ್ಲಿ ಭಾರತದ ಪ್ರಜೆಗಳು ಸಹ ಇದ್ದಾರೆ ಎಂದಿದ್ದಾನೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ಬಾಂಬ್‌ಸ್ಫೋಟದಲ್ಲಿ ೧೪ ಭಾರತೀಯರ ಕೈವಾಡವಿದೆ ಎಂದು ಈಗಾಗಲೇ ಬಹಿರಂಗವಾಗಿದೆ.