ಅಪರಾಧಿಗಳೇ ತುಂಬಿದ ಮಾರ್ಕ್ಸವಾದಿ ಕಮ್ಯೂನಿಸ್ಟ ಪಕ್ಷವನ್ನು ನಿಷೇಧಿಸಿ ! 

೧. ‘ಮಜಾರ್‌ ಜಿಹಾದ್‌’ನ್ನು ನಾಶ ಮಾಡಿ !

ಕನ್ನೌಜ್‌ (ಉತ್ತರ ಪ್ರದೇಶ) ನಲ್ಲಿ ದೇವಸ್ಥಾನದ ಭೂಮಿಯಲ್ಲಿ ಗೋರಿ (ಮಜಾರ್) ನಿರ್ಮಿಸುವುದರ ವಿರುದ್ಧದÀ ಪ್ರತಿಭಟನೆಯಲ್ಲಿ ಪರಸ್ಪರ ಕಲ್ಲು ತೂರಾಟ ನಡೆಸಲಾಯಿತು. ಈ ಪ್ರಕರಣದಲ್ಲಿ ಕಾಮಿಲ್, ನೂರ್‌ ಹಸನ್‌ ಮತ್ತು ಇಬಲ್‌ ಹಸನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

೨. ಅಪರಾಧಿಗಳೇ ತುಂಬಿದ ಮಾರ್ಕ್ಸವಾದಿ ಕಮ್ಯೂನಿಸ್ಟ ಪಕ್ಷವನ್ನು ನಿಷೇಧಿಸಿ ! 

ಕೇರಳದ ತಲಚೇರಿಯಲ್ಲಿ ೨೦೦೨ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಬ್ಬರು ಸ್ವಯಂಸೇವಕರ ಹತ್ಯೆ ಪ್ರಕರಣದಲ್ಲಿ ೫ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಜೀವಾವಧಿ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

೩. ಇದು ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ಲಜ್ಜಾಸ್ಪದ ಸಂಗತಿ !

ಬಾಂಗ್ಲಾದೇಶದಲ್ಲಿ ಸುದೇವ ಹಲದಾರ್‌ ಎಂಬ ೨೮ ವರ್ಷದ ಹಿಂದೂ ಯುವಕನನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ.  ಆತನ ಶವ ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಸುದೇವ್‌ ಹಿಂದೂ ಆಗಿದ್ದನೆಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ.

೪. ಹಿಂದೂಗಳ ಧಾರ್ಮಿಕ ಉತ್ಸವಗಳ ಆರ್ಥಿಕ ಮಹತ್ವ ತಿಳಿಯಿರಿ !

ಮಹಾಕುಂಭಕ್ಕೆ ೪೦ ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ.  ಇದರಿಂದ ಆದಾಯ ೨ ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹೇಳಿದ್ದಾರೆ.

೫. ಕೋಟೆಗಳಲ್ಲಾಗುವ ಉರುಸ್‌ ನಿಲ್ಲಿಸಲು ಸರಕಾರ ಮುಂದಾಗಬೇಕು !

ಕೆಲವರು ಮಹಾರಾಷ್ಟ್ರದ ವಿಶಾಲಗಡದಲ್ಲಿ ಉರುಸ್‌ (ಮುಸ್ಲಿಮರ ಧಾರ್ಮಿಕ ಉತ್ಸವ) ಆಯೋಜಿಸಲು ಹೊರಟಿದ್ದಾರೆ. ರಾಜ್ಯದಲ್ಲಿನ ಪ್ರಸ್ತುತ ಸರಕಾರವು ಹಿಂದೂ ವಿಚಾರದ್ದಾಗಿರುವುದರಿಂದ ಯಾವುದೇ ಸಂದರ್ಭ ದಲ್ಲೂ ವಿಶಾಲಗಢದಲ್ಲಿ ಉರುಸ್‌ ನಡೆಯಲು ಬಿಡುವುದಿಲ್ಲ ಎಂದು ಬಂದರು ಅಭಿವೃದ್ಧಿ ಸಚಿವ ನಿತೇಶ ರಾಣೆ ಎಚ್ಚರಿಕೆ ನೀಡಿದ್ದಾರೆ.

೬. ಮೂಲದಲ್ಲಿ ಮದರಸಾಗಳನ್ನೇ ನಿಷೇಧಿಸಬೇಕು !

ಹಾತ್‌ಕಣಂಗಲೆ ತಾಲೂಕಿನ (ಕೊಲ್ಹಾಪುರ) ಸರಕಾರಿ ಜಾಗದಲ್ಲಿ ‘ಸುನ್ನತ್‌ ಜಮೀಯತ್’ ಅಕ್ರಮವಾಗಿ ಮದರಸಾ ನಿರ್ಮಿಸಿತ್ತು.  ಹಲವು ಗಡುವು ನೀಡಿದರೂ ಜಮಿಯತ್‌ ಈ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಕೊನೆಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆ ಈ ಮದರಸಾವನ್ನು ಕೆಡವಿತು.

೭. ಇಂತಹ ಮಾನಸಿಕತೆಯುಳ್ಳವರಿಗೆ ಶೀಘ್ರದಲ್ಲಿ ಶಿಕ್ಷೆಯಾಗುವುದೇ ?

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೆಲವು ದುರಳರು ಗೋವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಘಟನೆ ಜನವರಿ ೧೨ ರಂದು ಘಟಿಸಿದೆ. ಪೊಲೀಸರು ಇದರ ತನಿಖೆಯನ್ನು ನಡೆಸುತ್ತಿದ್ದಾರೆ