ಧಾರವಾಡ (ಕರ್ನಾಟಕ) ಇಲ್ಲಿ ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ

ಕೊರೊನಾದ ನಿಯಮಗಳ ಹೆಸರಿನಡಿಯಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ದ ಮೇಲಿನ ನಿರ್ಬಂಧಗಳಿಗೆ ವಿರೋಧ !

ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಆಂದೋಲನ ಮಾಡುತ್ತಿರುವಾಗ (1) ಶ್ರೀ. ಪ್ರಮೋದ ಮುತಾಲಿಕ ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರು

ಧಾರವಾಡ (ಕರ್ನಾಟಕ) – ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲು ಆಡಳಿತವು ನಿರಾಕರಿಸಿರುವುದರಿಂದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಶ್ರೀ ಗಣೇಶ ಮೂರ್ತಿಯನ್ನಿಟ್ಟು ಅದನ್ನು ಪೂಜಿಸಿ ಆಂದೋಲನವನ್ನು ನಡೆಸಲಾಯಿತು. ‘ರಾಜ್ಯ ಸರಕಾರವು ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಕೊರೊನಾದ ಹೆಸರಿನಡಿಯಲ್ಲಿ ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ಸರಕಾರವು ಸಾರ್ವಜನಿಕವಾಗಿ ಶ್ರೀಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ನೀಡಲಿ. ಇಲ್ಲದಿದ್ದರೆ ನಾವು ಶ್ರೀ ಗಣೇಶಮೂರ್ತಿಯ ಪ್ರತಿಷ್ಠಾಪನೆ ಮಾಡುವೆವು, ಎಂದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳ ಮಾಧ್ಯಮದಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರಕಾರವು ಮುಂಬರುವ ಗಣೇಶೋತ್ಸವಕ್ಕಾಗಿ ಕೊರೊನಾದ ಹಿನ್ನೆಲೆಯಲ್ಲಿ ನಿಯಮಾವಳಿಯನ್ನು ಘೋಷಿಸಿದೆ. ಅದನ್ನು ವಿವಿಧ ಹಿಂದೂತ್ವನಿಷ್ಠ ಸಂಘಟನೆಗಳು ವಿರೋಧಿಸುತ್ತಿದೆ. ಅದೇ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯು ಈ ಆಂದೋಲನ ನಡೆಸಿತು.

(ಸೌಜನ್ಯ : KNN City News Kan)

1. ಶ್ರೀ. ಪ್ರಮೋದ ಮುತಾಲಿಕರವರು ಆ ಸಮಯದಲ್ಲಿ ಮಾತನಾಡುವಾಗ, ಉಪಹಾರಗೃಹ, ಮಾಲ್, ಚಿತ್ರೀಕರಣ, ಚಲನಚಿತ್ರ ಮಂದಿರ ಇತ್ಯಾದಿಗಳಿಗೆ ಕೊರೊನಾದ ಕಾಲದಲ್ಲಿ ರಿಯಾಯತಿ ನೀಡಿರುವಾಗ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ಈ ನಿರ್ಬಂಧವನ್ನು ಶಿಥಿಲಗೊಳಿಸದಿದ್ದರೆ ವ್ಯಾಪಾರವಿಲ್ಲದ ಕಾರಣ ಹಾಗೂ ಅದರ ಮೇಲೆ ಅವಲಂಬಿಸಿರುವ ಕುಟುಂಬಗಳು ಹಾಗೂ ಸರಕಾರೀ ಆದಾಯದ ಮೇಲೆ ಕೂಡ ಪರಿಣಾಮವಾಗುವುದು. ಕೌಟುಂಬಿಕ ಸಮಾಧಾನ, ಅದೇ ರೀತಿ ಸ್ಥೈರ್ಯ ಪ್ರದಾನ ಮಾಡಲು ಸಾರ್ವಜನಿಕ ಗಣೇಶೋತ್ಸವವು ಮಹತ್ವವಾದ ಭೂಮಿಕೆಯನ್ನು ನಿರ್ವಹಿಸುತ್ತದೆ. ಅದರ ಜೊತೆಗೆ ಸಮಾಜದಲ್ಲಿನ ಎಲ್ಲಾ ಕಾರ್ಯಗಳಿಗೂ ಚೈತನ್ಯವನ್ನು ತುಂಬುತ್ತದೆ. ಕಾರ್ಮಿಕ ವರ್ಗಕ್ಕೆ ಅನುಕೂಲತೆ ಸಿಗುತ್ತದೆ ಹಾಗೂ ಹಣದ ಸ್ವರೂಪದಲ್ಲಿ ಸರಕಾರದ ಖಜಾನೆ ಕೂಡ ತುಂಬುತ್ತದೆ. ಎಂದು ಹೇಳಿದರು.

2. ವಿಶ್ವ ಹಿಂದೂ ಪರಿಷತ್ತಿನ ಶ್ರೀ. ಕೇಶವ ಹೆಗಡೆಯವರು ಹೀಗೆಂದರು, ಕೊರೊನಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವವರಿಗೆ ಕಳೆದ ವರ್ಷ ಅನುಮತಿ ನೀಡಲಾಗಿತ್ತು. ಅದೇ ರೀತಿ ಈ ವರ್ಷ ಕೂಡ ಭಾವನೆಗಳನ್ನು ನೋಯಿಸದೆ ಪರಂಪರಾಗತ ಸಾರ್ವಜನಿಕ ಗಣೇಶೋತ್ಸವವನ್ನು ನಿಯಮಬದ್ಧ ರೀತಿಯಲ್ಲಿ ಆಚರಿಸಲು ಅವಕಾಶವನ್ನು ನೀಡಬೇಕು.