ತಾಲಿಬಾನ್ ಪಾಕಿಸ್ತಾನವನ್ನು ವಶಪಡಿಸಿ ಅದರ ಅಣ್ವಸ್ತ್ರಗಳನ್ನು ಕೈಗೆತ್ತಿಕೊಳ್ಳಬಹುದು ! – ಜೋ-ಬೈಡನ್

ನವದೆಹಲಿ – ಅಮೆರಿಕದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರು ‘ಅಫಘಾನಿಸ್ತಾನದ ಮೇಲೆ ನಿಯಂತ್ರಣವನ್ನು ಹೊಂದಿರುವ ತಾಲಿಬಾನಿಗಳಿಂದ ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಾಗಬಹುದು ಮತ್ತು ಇದರಿಂದ ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈಗೆಟುಕುವ ಭಯವಿದೆ. ಈ ಬಗ್ಗೆ ಪಾಕಿಸ್ತಾನವು ಯೋಗ್ಯ ಕಾಳಜಿಯನ್ನು ವಹಿಸಬೇಕು’ ಎಂದು ಹೇಳಿದ್ದಾರೆ.